• Home
 • »
 • News
 • »
 • career
 • »
 • Work from Home ಜಾಬ್ ಬೇಕೆಂದರೆ ನಿಮ್ಮ ರೆಸ್ಯೂಮ್ ಅನ್ನು ಈ ರೀತಿ ಬದಲಾಯಿಸಿ ಅಷ್ಟೇ

Work from Home ಜಾಬ್ ಬೇಕೆಂದರೆ ನಿಮ್ಮ ರೆಸ್ಯೂಮ್ ಅನ್ನು ಈ ರೀತಿ ಬದಲಾಯಿಸಿ ಅಷ್ಟೇ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Resume Updates for Remote Job: ನೀವು ಶಾಶ್ವತವಾಗಿ ವರ್ಕ್ ಫ್ರಮ್​ ಹೋಮ್​ ಎಂದರೆ ರಿಮೋಟ್ ಕೆಲಸದ ಹುಡುಕಾಟದಲ್ಲಿದ್ದರೆ, ಮೊದಲಿಗೆ ನೀವು ಹೊಂದಿರುವ ಕೌಶಲ್ಯಗಳು ಮತ್ತು ಪ್ರತಿಭೆಗಳನ್ನು ನಿಮ್ಮ ರೆಸ್ಯೂಮ್ ನಲ್ಲಿ ಸೇರಿಸಿ ಅದನ್ನು ಅಪ್ಡೇಟ್ ಮಾಡಿಕೊಳ್ಳಿರಿ.

 • Share this:

  ಕೋವಿಡ್-19 ಸಾಂಕ್ರಾಮಿಕ ರೋಗದ (Pandemic) ಹಾವಳಿ ಶುರುವಾದಾಗಿಂದ ಈ ಉದ್ಯೋಗಗಳ ರೀತಿ-ನೀತಿಗಳೇ ಸಂಪೂರ್ಣವಾಗಿ ಬದಲಾದವು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅನೇಕ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸುಮಾರು ಎರಡು ವರ್ಷಗಳ ಕಾಲ ಮನೆಯಲ್ಲಿಯೇ ಕೂತು ಕೆಲಸ (Work from Home) ಮಾಡಿದ ನಂತರ ಒಂದು ಕೆಲಸದ ಮಾದರಿಗೆ ಹೊಂದಿಕೊಂಡಿದ್ದಾರೆ ಅಂತ ಹೇಳಬಹುದು. ಹೌದು.. ಈಗ ಬರೀ ಉದ್ಯೋಗಿಗಳಲ್ಲದೆ, ಕಂಪನಿಗಳು ಸಹ ಈ ರಿಮೋಟ್ ಉದ್ಯೋಗಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಅನೇಕ ಜನ ಉದ್ಯೋಗಿಗಳು ಸಹ ಈ ರೀತಿಯ ರಿಮೋಟ್ ಉದ್ಯೋಗಗಳನ್ನು( Remote Job)  ಹುಡುಕುತ್ತಿದ್ದಾರೆ ಅಂತ ಹೇಳಬಹುದು.


  ಕಂಪನಿಗಳ ವರ್ಚುವಲ್ ತಂಡದಲ್ಲಿ ಒಳ್ಳೆಯ ಉದ್ಯೋಗಿಗಳನ್ನು ತುಂಬಲು ರಿಮೋಟ್ ಕೆಲಸದ ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುವವರನ್ನೆ ಈ ಕಂಪನಿಗಳು ಹುಡುಕುತ್ತಿವೆ ಅಂತ ಹೇಳಬಹುದು. ನೀವು ಶಾಶ್ವತವಾಗಿ ವರ್ಕ್-ಫ್ರಮ್-ಹೋಮ್ ಎಂದರೆ ರಿಮೋಟ್ ಕೆಲಸದ ಹುಡುಕಾಟದಲ್ಲಿದ್ದರೆ, ಮೊದಲಿಗೆ ನೀವು ಹೊಂದಿರುವ ಕೌಶಲ್ಯಗಳು ಮತ್ತು ಪ್ರತಿಭೆಗಳನ್ನು ನಿಮ್ಮ ರೆಸ್ಯೂಮ್ ನಲ್ಲಿ ಸೇರಿಸಿ ಅದನ್ನು ಅಪ್ಡೇಟ್ ಮಾಡಿಕೊಳ್ಳಿರಿ.


  ರಿಮೋಟ್ ಕೆಲಸಕ್ಕೆ ನಿಮ್ಮ ರೆಸ್ಯೂಮ್ ನಲ್ಲಿ ಈ 7 ಅಪ್ಡೇಟ್ ಗಳನ್ನು ಮಾಡಿಕೊಳ್ಳಿರಿ


  1. ಸರಿಯಾದ ಫಾರ್ಮೆಟ್ ನಲ್ಲಿರಲಿ ನಿಮ್ಮ ರೆಸ್ಯೂಮ್


  ನೀವು ರಿಮೋಟ್ ಕೆಲಸಗಳನ್ನ ಹುಡುಕುತ್ತಾ ಇದ್ದಲ್ಲಿ, ನಿಮ್ಮ ರೆಸ್ಯೂಮ್ ನ ಫಾರ್ಮೆಟ್ ಎಂದರೆ ಸ್ವರೂಪವನ್ನು ಆಯ್ಕೆ ಮಾಡುವುದರೊಂದಿಗೆ ಪ್ರಾರಂಭಿಸಿ. ನಿಮ್ಮ ಕೆಲಸದ ಅನುಭವ ಕಾಲಾನುಕ್ರಮದ ಇತಿಹಾಸ, ಎಂದರೆ ಅತ್ಯಂತ ಇತ್ತೀಚಿನ ಕೆಲಸವನ್ನು ಮೊದಲು ಬರೆದು ಪ್ರಾರಂಭಿಸುವುದು. ನಿಮ್ಮ ಕೆಲಸದ ಇತಿಹಾಸದ ಜೊತೆಗೆ ನೇಮಕಾತಿದಾರರ ಗಮನವನ್ನು ಸೆಳೆಯಲು ನಿಮ್ಮ ಕೌಶಲ್ಯಗಳನ್ನು ಸಹ ಅಲ್ಲಿ ಬರೆಯಿರಿ.
  2. ರೆಸ್ಯೂಮ್ ಅನ್ನು ಸ್ಪಷ್ಟವಾಗಿ ಮತ್ತು ವ್ಯವಸ್ಥಿತವಾಗಿರಿಸಿಕೊಳ್ಳಿ


  ನೀವು ಸಂಕೀರ್ಣ ಸ್ವರೂಪಗಳಿಂದ ದೂರ ಉಳಿದಾಗ ಮಾತ್ರವೇ ರೆಸ್ಯೂಮ್ ಅನ್ನು ಚೆನ್ನಾಗಿ ಅಪ್ಡೇಟ್ ಮಾಡಬಹುದು. ಓದಲು ಸುಲಭವಾದ ಮತ್ತು ಸರಳವಾದುದನ್ನು ಆರಿಸಿಕೊಳ್ಳಿ. ಫ್ಯಾನ್ಸಿ ಫಾಂಟ್ ಗಳು, ಕಾಲಮ್ ಗಳು, ಗ್ರಾಫ್ ಗಳು ಮತ್ತು ಬಣ್ಣದ ಹಿನ್ನೆಲೆಗಳನ್ನು ಬಳಸಬೇಡಿ. ಬಿಳಿ ಹಿನ್ನೆಲೆಯಲ್ಲಿ ಕಪ್ಪು ಪಠ್ಯವಿರಲಿ ಮತ್ತು ಬುಲೆಟ್ ಪಾಯಿಂಟ್ ಗಳನ್ನು ಬಳಸಿರಿ.


  3. ರೆಸ್ಯೂಮ್ ಚಿಕ್ಕದಾಗಿ ಮತ್ತು ಚೊಕ್ಕದಾಗಿರಲಿ


  ಸಾಮಾನ್ಯ ನಿಯಮದಂತೆ, ನಿಮ್ಮ ಸ್ವವಿವರವು ಎರಡು ಪುಟಗಳಿಗಿಂತ ಹೆಚ್ಚಿರಬಾರದು. ನೀವು ಸಾಕಷ್ಟು ಕೆಲಸದ ಇತಿಹಾಸವನ್ನು ಹೊಂದಿಲ್ಲದಿದ್ದರೆ ಒಂದು ಪುಟವು ಸಹ ಸಾಕಾಗುತ್ತದೆ. ನಿಮ್ಮ ರೆಸ್ಯೂಮ್ ಎರಡು ಪುಟಗಳಿಗಿಂತ ಉದ್ದವಾಗಿದ್ದರೆ, ಆರಂಭಿಕ ಕೆಲಸಗಳನ್ನು ಕಡಿತಗೊಳಿಸಿ ಮತ್ತು ಅನಗತ್ಯ ಅಥವಾ ಅಪ್ರಸ್ತುತ ಕೆಲಸದ ಕರ್ತವ್ಯಗಳನ್ನು ತೆಗೆದು ಹಾಕಿ. ರಿಮೋಟ್ ಕೆಲಸಕ್ಕೆ ಯಾವುದು ಸೂಕ್ತವೋ, ಅದನ್ನು ಹಾಗೆಯೇ ಇರಿಸಿಕೊಳ್ಳಿರಿ. ಇದು ನಿಮ್ಮ ರೆಸ್ಯೂಮ್ ಅನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿರಿಸಲು ಸಹಾಯ ಮಾಡುತ್ತದೆ.
  4. ಇನ್ನೂ ಹೆಚ್ಚಿನ ಅರ್ಹತೆಯನ್ನು ಬೆಳೆಸಿಕೊಳ್ಳಿ


  ಅರ್ಹತೆಗಳ ಸಾರಾಂಶದೊಂದಿಗೆ ನಿಮ್ಮ ರೆಸ್ಯೂಮ್ ಅಪ್ಡೇಟ್ ಗಳನ್ನು ಪ್ರಾರಂಭಿಸಿ. ಈ ಸಂಕ್ಷಿಪ್ತ ಸಾರಾಂಶವು ನಿಮ್ಮ ಅತ್ಯಂತ ಪ್ರಸ್ತುತ ಮತ್ತು ಅಗತ್ಯ ಕೌಶಲ್ಯಗಳು ಮತ್ತು ಅನುಭವಗಳನ್ನು ಎತ್ತಿ ತೋರಿಸುತ್ತದೆ. ಇದು ನಿಮ್ಮ ರೆಸ್ಯೂಮ್ ನ ಮೇಲ್ಭಾಗದಲ್ಲಿರುವುದರಿಂದ, ನೇಮಕಾತಿದಾರರು ಗಮನಿಸುವ ಮೊದಲ ವಿಷಯವಾಗಿರಬಹುದು, ಆದ್ದರಿಂದ ಸೂಕ್ತವಾದಾಗ ನಿಮ್ಮ ರಿಮೋಟ್ ಕೆಲಸದ ಅನುಭವದ ಸಂಕ್ಷಿಪ್ತ ಉಲ್ಲೇಖಗಳನ್ನು ಅದರಲ್ಲಿ ಸೇರಿಸಿ.


  5. ಸಂವಹನ ಮತ್ತು ಸಹಯೋಗ ಕೌಶಲ್ಯಗಳಿಗೆ ಒತ್ತು ನೀಡಿ


  ಇದನ್ನು ಮಾಡಲು ಮೊದಲ ಮಾರ್ಗವೆಂದರೆ ಕೆಲವು ವಿಭಿನ್ನ ಜನರಿಗೆ ನಿಮ್ಮ ರೆಸ್ಯೂಮ್ ಅನ್ನು ಪರಿಶೀಲಿಸಲು ಕೊಡುವುದು ಮತ್ತು ಬರಹವು ಸ್ಪಷ್ಟವಾಗಿದೆ ಮತ್ತು ತಪ್ಪುಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವುದು. ನಂತರ, ನೀವು ನಿರ್ವಹಿಸಿದ ಹಿಂದಿನ ಪ್ರತಿಯೊಂದು ಕೆಲಸಕ್ಕೆ, ಮೌಖಿಕವಾಗಿ ಮತ್ತು ಲಿಖಿತವಾಗಿ ಪರಿಣಾಮಕಾರಿಯಾಗಿ ಸಂವಹನ ನಡೆಸುವ ನಿಮ್ಮ ಸಾಮರ್ಥ್ಯವನ್ನು ಸ್ಪಷ್ಟಪಡಿಸಲು ಮತ್ತು ಹಿಂದಿನ ತಂಡದೊಂದಿಗೆ ಕೆಲಸ ಮಾಡಿದ ವಿಷಯವನ್ನು ಸೇರಿಸಿ. ಒಬ್ಬ ರಿಮೋಟ್ ವರ್ಕರ್ ಅತ್ಯುತ್ತಮ ಸಂವಹನಕಾರನಾಗಿರಬೇಕು.


  do you Know how and why a strong resume is important for job seekers stg-asp


  6. ನೀವು ಸಮಸ್ಯೆಯನ್ನು ಪರಿಹರಿಸುವವರು ಎಂದು ತೋರಿಸಿ


  ನೀವು ನಿಮ್ಮ ಕೆಲಸದ ಅನುಭವವನ್ನು ಪಟ್ಟಿ ಮಾಡುವಾಗ, ಸಮಸ್ಯೆಗಳನ್ನು ಪರಿಹರಿಸಲು ನೀವು ಉಪಕ್ರಮವನ್ನು ತೆಗೆದುಕೊಂಡ ಸಮಯದ ಉದಾಹರಣೆಗಳನ್ನು ನೀಡಿ. ರಿಮೋಟ್ ಆಗಿ ಕೆಲಸ ಮಾಡುವಾಗ ಮತ್ತು ತಂಡದ ಇತರ ಸದಸ್ಯರನ್ನು ಒಂದು ಕಾರ್ಯವನ್ನು ಪೂರ್ಣಗೊಳಿಸಲು ಮುನ್ನಡೆಸುವಾಗ ನೀವು ಮಾಡಿದ ಅಂತಹ ಕೆಲಸಗಳನ್ನು ಸೂಚಿಸುವುದು ಒಳ್ಳೆಯದು.


  7. ರಿಮೋಟ್ ಕೆಲಸವನ್ನೇ ಮಾಡುವುದು ಅಂತ ನಿರ್ದಿಷ್ಟವಾಗಿರಿ


  ಒಬ್ಬ ನೇಮಕಾತಿದಾರನು ನಿಮ್ಮ ರಿಮೋಟ್ ಕೆಲಸದ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿರಬಹುದು ಮತ್ತು ನಿಮ್ಮ ಸ್ವಂತ ಕೆಲಸವನ್ನು ಮಾಡಲು ನಿಮಗೆ ಪ್ರೇರಣೆ ಮತ್ತು ಸ್ವಯಂ-ಶಿಸ್ತು ಇದೆಯೇ ಎಂಬ ಅಂಶಗಳನ್ನು ನಿಮ್ಮಲ್ಲಿ ಹುಡುಕುತ್ತಿರುತ್ತಾರೆ. ನೀವು ಕೆಲಸವನ್ನು ಮಾಡಬಹುದು ಅಂತ ಮಾತ್ರ ಹೇಳಬೇಡಿ, ನೀವು ಆ ಕೆಲಸವನ್ನು ಮಾಡಿ ತೋರಿಸಿ. ಅದನ್ನು ಮಾಡಲು ಉತ್ತಮ ಮಾರ್ಗವೆಂದರೆ ನಿಮ್ಮ ರೆಸ್ಯೂಮ್ ನಲ್ಲಿ ಸ್ಟಾರ್ ವಿಧಾನವನ್ನು ಬಳಸುವುದು. ಕೆಲಸದಲ್ಲಿ ನೀವು ಎದುರಿಸಿದ ಸವಾಲುಗಳು, ಆ ಸವಾಲುಗಳನ್ನು ನೀವು ಹೇಗೆ ನಿಭಾಯಿಸಿದ್ದೀರಿ ಮತ್ತು ನಿಮ್ಮ ಪರಿಹಾರಗಳು ಕಂಪನಿಗೆ ಹೇಗೆ ಪ್ರಯೋಜನವನ್ನು ನೀಡಿದವು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿ.

  Published by:Kavya V
  First published: