• Home
  • »
  • News
  • »
  • career
  • »
  • Receptionist Career: ವೃತ್ತಿಪರ ರಿಸೆಪ್ಷನಿಸ್ಟ್ ಆಗುವುದು ಹೇಗೆ? ಬೇಕಿರುವ ಕೌಶಲ್ಯಗಳ ಮಾಹಿತಿ ಇಲ್ಲಿದೆ

Receptionist Career: ವೃತ್ತಿಪರ ರಿಸೆಪ್ಷನಿಸ್ಟ್ ಆಗುವುದು ಹೇಗೆ? ಬೇಕಿರುವ ಕೌಶಲ್ಯಗಳ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಿಸೆಪ್ಷನಿಸ್ಟ್‌ಗೆ ಸ್ವಚ್ಛ ಕನ್ನಡ ಭಾಷೆಯಲ್ಲಿ ಸ್ವಾಗತಕಾರಿಣಿ ಅಂತ ಕರೆಯುತ್ತಾರೆ. ಕಂಪನಿಗೆ ಸ್ವಾಗತಿಸುವುದರ ಜೊತೆಗೆ ಉತ್ತಮ ಗ್ರಾಹಕ ಸೇವೆಯನ್ನು ನೀಡುವುದೇ ಇವರ ಕೆಲಸ ಆಗಿರುತ್ತೆ. ಕರೆಗಳಿಗೆ ಉತ್ತರಿಸುವುದು ಹಾಗೂ ಸರಿಯಾದ ಮಾಹಿತಿಯನ್ನು ನೀಡುವ ಕೆಲಸ ಮಾಡಬೇಕು.

  • Share this:

    ಪ್ರತಿ ಕಂಪನಿಯು (Company) ಯಶಸ್ವಿಯಾಗಿ ಮುನ್ನಡೆಯಬೇಕೆಂದ್ರೆ ಅದ್ಕೆ ಪ್ರತಿಯೊಬ್ಬ ಉದ್ಯೋಗಿಯು (Employee) ಮುಖ್ಯನೇ. ನೀವು ಯಾವುದೇ ಕಂಪನಿ ಅಥವಾ ಸಂಸ್ಥೆಗೆ ಹೋಗಿ ಅಲ್ಲಿ ಮೊದಲು ನಿಮ್ಮ ಕಣ್ಣಿಗೆ ಬೀಳುವವರೇ ರಿಸೆಪ್ಷನಿಸ್ಟ್‌. ಈ ರಿಸೆಪ್ಷನಿಸ್ಟ್‌ಗಳ  (Receptionist) ಕೆಲಸ ನಿಮಗೆಲ್ಲ ಗೊತ್ತೇ ಇದೆ. ಆ ಕಂಪನಿಗೆ ಭೇಟಿ ನೀಡಿದ ಸಂದರ್ಶಕರು ಅಥವಾ ಗ್ರಾಹಕರಿಗೆ ಉತ್ತಮವಾದ ಗ್ರಾಹಕ ಸೇವೆ ನೀಡುವುದೇ ಇವರ ಪ್ರಮುಖ ಕೆಲಸವಾಗಿರುತ್ತೆ. ಹಾಗಿದ್ರೆ ಈ ರಿಸೆಪ್ಷನಿಸ್ಟ್‌ ಕೆಲಸದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.


    ರಿಸೆಪ್ಷನಿಸ್ಟ್ ಕೆಲಸ ಅಂದ್ರೇನು?


    ರಿಸೆಪ್ಷನಿಸ್ಟ್‌ಗೆ ಸ್ವಚ್ಛ ಕನ್ನಡ ಭಾಷೆಯಲ್ಲಿ ಸ್ವಾಗತಕಾರಿಣಿ ಅಂತ ಕರೆಯುತ್ತಾರೆ. ರಿಸೆಪ್ಷನಿಸ್ಟ್‌ ಅಂದ್ರೆ ಗೊತ್ತಾಗಿರಬೇಕಲ್ವಾ. ನಿಮ್ಮನ್ನು ಕಂಪನಿಗೆ ಸ್ವಾಗತಿಸುವುದರ ಜೊತೆ ನಿಮಗೆ ಉತ್ತಮ ಗ್ರಾಹಕ ಸೇವೆಯನ್ನು ನೀಡುವುದೇ ಇವರ ಕೆಲಸ ಆಗಿರುತ್ತೆ. ಕರೆಗಳಿಗೆ ಉತ್ತರಿಸುವುದು ಮತ್ತು ಅವುಗಳನ್ನು ಸೂಕ್ತವಾಗಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ.


    ಸಂದರ್ಶಕರು ಮತ್ತು ಗ್ರಾಹಕರ ವಿನಂತಿಗಳಿಗೆ ಉತ್ತರಿಸುವುದು ಮತ್ತು ಸ್ವಾಗತಾರ್ಹ ವಾತಾವರಣವನ್ನು ಬೆಳೆಸುವುದು ಮುಂತಾದ ಕೆಲಸಗಳನ್ನು ಒಳಗೊಂಡಿರುತ್ತದೆ. ಆಗಾಗ ಈ ಕೆಲಸವು ಬೇಡಿಕೆಯ ಆಧಾರದ ಮೇಲೆ ಎಮರ್ಜೆನ್ಸಿ ಆಡಳಿತಾತ್ಮಕ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಸಹ ಒಳಗೊಂಡಿರುತ್ತದೆ. ಫ್ರಂಟ್ ಆಫೀಸ್ ರಿಸೆಪ್ಷನಿಸ್ಟ್‌ಗಳು ಪ್ರತಿಯೊಂದು ಉದ್ಯಮದಲ್ಲಿ ಕೆಲಸ ಮಾಡುತ್ತಾರೆ.


    ಸಾಂದರ್ಭಿಕ ಚಿತ್ರ


    ಸಾಮಾನ್ಯವಾಗಿ ಹೈಸ್ಕೂಲ್ ಡಿಪ್ಲೋಮಾಗಳು ಮತ್ತು ಅದಕ್ಕೆ ಸಮಾನವಾದ ಶೈಕ್ಷಣಿಕ ಹಿನ್ನೆಲೆಗಳು ಸಾಮಾನ್ಯವಾಗಿ ರಿಸೆಪ್ಷನಿಸ್ಟ್‌ ಉದ್ಯೋಗಗಳಿಗೆ ಅಗತ್ಯವಿರುತ್ತದೆ. ರಿಸೆಪ್ಷನಿಸ್ಟ್‌ ಸಾಮಾನ್ಯವಾಗಿ ಕೆಲಸಕ್ಕೆ ಬೇಕಾದ ಪೂರ್ವ ತರಬೇತಿಯನ್ನು ಪಡೆಯುತ್ತಾರೆ. ಕೆಲವರು ಈ ಹುದ್ದೆಯಿಂದ ಆಡಳಿತ ಸಹಾಯಕ ಹುದ್ದೆಗೆ ಬಡ್ತಿ ಪಡೆಯುತ್ತಾರೆ.


    ಇಷ್ಟೊಂದು ಕೆಲಸ ಮಾಡ್ತಾರಲ್ಲ, ಇವರಿಗೆ ಯಾವುದೇ ಸಮಸ್ಯೆ ಆಗೋದಿಲ್ವಾ ಅಂತ ನೀವ್‌ ಯೋಚ್ನೆ ಮಾಡ್ತಿದ್ದರೆ, ಅದು ತಪ್ಪು ಯಾಕ್‌ ಅಂದ್ರೆ ಬಹು ಕೆಲಸಗಳು ಉತ್ತಮ ಸ್ವಾಗತಕಾರರಿಗೆ ಯಾವುದೇ ಸಮಸ್ಯೆಯನ್ನುಂಟು ಮಾಡುವುದಿಲ್ಲ. ಏಕೆಂದರೆ ಅವರು ಸ್ನೇಹಪರರಾಗಿದ್ದು, ಅತ್ಯಂತ ಸಂಘಟಿತ ಕೆಲಸಗಾರರು ಆಗಿರುತ್ತಾರೆ.


    ಇದನ್ನೂ ಓದಿ: Internship Tips: ಓದಿನ ಜೊತೆ ಇಂಟರ್ನ್​​ಶಿಪ್​​ ಮಾಡೋದು ಕಷ್ಟನಾ? ಸಿಂಪಲ್ ಟ್ರಿಕ್ಸ್ ಇಲ್ಲಿದೆ


    ರಿಸೆಪ್ಷನಿಸ್ಟ್‌ಗಳು ಏನೆಲ್ಲ ಕೆಲಸ ಮಾಡ್ತಾರೆ?


    ಸ್ವಾಗತಕಾರರ ಉದ್ಯೋಗಗಳು ಅವರು ಕೆಲಸ ಮಾಡುವ ಸಂಸ್ಥೆಯ ಆಧಾರದ ಮೇಲೆ ಭಿನ್ನವಾಗಿರುತ್ತವೆ. ಆಸ್ಪತ್ರೆಯಲ್ಲಿ ರಿಸೆಪ್ಷನಿಸ್ಟ್‌ ಆಗಿದ್ರೆ, ಅಲ್ಲಿಗೆ ಬರುವ ರೋಗಿಗಳಿಗೆ ವೈದ್ಯರ ಭೇಟಿಯನ್ನು ನಿಯೋಜಿಸುವುದು, ರೋಗಿಗಳ ದಾಖಲೆಗಳನ್ನು ದಾಖಲಿಸುವುದು ಆಗಿರುತ್ತೆ. ಇನ್ನು ಕಾರ್ಪೋರೆಟ್‌ ಕಂಪನಿಗಳಲ್ಲಿ ರಿಸೆಪ್ಷನಿಸ್ಟ್‌ ಆದ್ರೆ, ಕಾರ್ಪೊರೇಟ್ ಪ್ರಧಾನ ಕಚೇರಿಗೆ ಭೇಟಿ ನೀಡುವವರನ್ನು ಸ್ವಾಗತಿಸಬಹುದು ಮತ್ತು ಕಾನ್ಫರೆನ್ಸ್ ಕೊಠಡಿಗಳು ಮತ್ತು ಕಾನ್ಫರೆನ್ಸ್‌ಗೆ ಸೂಕ್ತ ಸ್ಥಳವನ್ನು ನಿಗದಿಪಡಿಸುವ ಕೆಲಸ ಇರುತ್ತೆ.


    ಬ್ಯೂಟಿ ಅಥವಾ ಹೇರ್ ಸಲೂನ್‌ನ ರಿಸೆಪ್ಷನಿಸ್ಟ್‌ ಕ್ಲೈಂಟ್‌ಗಳಿಗೆ ಅಪಾಯಿಂಟ್‌ಮೆಂಟ್‌ಗಳನ್ನು ನೀಡಿ, ಅವರನ್ನು ಸ್ಟೈಲಿಸ್ಟ್‌ ಕಡೆಗೆ ಕಳುಹಿಸುತ್ತಾರೆ. ಕೆಲವು ಕಡೆ ಕ್ಯಾಷಿಯರ್ ಆಗಿಯೂ ಸೇವೆ ಸಲ್ಲಿಸಬಹುದು.


    ರಿಸೆಪ್ಷನಿಸ್ಟ್‌ ಕಂಪ್ಯೂಟರ್‌ಗಳು, ದೂರವಾಣಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುತ್ತಾರೆ. ಅನೇಕ ವ್ಯವಹಾರಗಳಲ್ಲಿ ಇತರ ಸ್ವಯಂಚಾಲಿತ ವ್ಯವಸ್ಥೆಗಳನ್ನು ಬಳಸುತ್ತಿರುವಾಗ, ಕೆಲವು ಕಡೆ ರಿಸೆಪ್ಷನಿಸ್ಟ್‌ ಇನ್ನೂ ಸಾರ್ವಜನಿಕ ಮತ್ತು ಗ್ರಾಹಕರ ಆಗಮನದ ಅಧಿಸೂಚನೆಗಳನ್ನು ಸಹ ನೀಡುತ್ತಾರೆ. ಇತರ ಆಡಳಿತಾತ್ಮಕ ಉದ್ಯೋಗಿಗಳಿಗೆ ಸಹಾಯ ಮಾಡಲು ಕಾರ್ಯನಿರತವಾಗಿಲ್ಲದಿರುವಾಗ ಅವರು ವಿವಿಧ ಕಚೇರಿ ಕಾರ್ಯಗಳನ್ನು ನಿರ್ವಹಿಸುತ್ತಾರೆ.


    ರಿಸೆಪ್ಷನಿಸ್ಟ್ ಕೆಲಸದ ಕರ್ತವ್ಯಗಳಲ್ಲಿ ಇವು ಸಹ ಸೇರಿವೆ:


    ಕಂಪನಿಗೆ ಅನುಗುಣವಾಗಿ ಸ್ವಾಗತಕಾರರ ಜವಾಬ್ದಾರಿಗಳು ಬದಲಾಗುತ್ತವೆ. ಅವುಗಳಲ್ಲಿ ಪ್ರಮುಖವಾದ ಜವಬ್ದಾರಿಗಳು ಇಲ್ಲಿವೆ…


    • ಸಂದರ್ಶಕರು ಮತ್ತು ಗ್ರಾಹಕರನ್ನು ಸಕಾರಾತ್ಮಕ ಮನೋಭಾವದಿಂದ ಸ್ವಾಗತಿಸುವುದು.

    • ಗ್ರಾಹಕರಿಗೆ ಮನೆಯಲ್ಲಿರುವಂತೆ ಭಾಸವಾಗುವಂತೆ ನಡೆಸಿಕೊಂಡು ಅವರ ಗ್ರಾಹಕ ಸೇವೆಯನ್ನು ಉತ್ತಮವಾಗಿ ನಿರ್ವಹಿಸುವುದು.

    • ಅತಿ ಅಗತ್ಯವಿರುವ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವುದು.

    • ಬ್ಯಾಡ್ಜ್‌ಗಳನ್ನು ನಿರ್ವಹಿಸುವುದು, ಅವುಗಳನ್ನು ಸಂಗ್ರಹಿಸುವುದು ಮತ್ತು ಅಗತ್ಯವಿರುವಂತೆ ಪರಿಶೀಲಿಸುವ ಮೂಲಕ ಕೆಲಸದ ಸ್ಥಳದ ಭದ್ರತೆಯನ್ನು ಸಹ ನಿರ್ವಹಿಸಲಾಗುತ್ತದೆ.

    • ಫ್ಯಾಕ್ಸ್ ಮಾಡುವುದು, ಕಾಪಿ ಮಾಡುವುದು, ಪ್ರಯಾಣದ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಟಿಪ್ಪಣಿಗಳನ್ನು ಬರೆಯುವುದು ಸೇರಿದಂತೆ ವಿವಿಧ ಆಡಳಿತಾತ್ಮಕ ಕರ್ತವ್ಯಗಳಲ್ಲಿ ಸಹ ಕಾರ್ಯನಿರ್ವಹಿಸುವುದು.

    • ಸಭೆಗಳು, ನೇಮಕಾತಿಗಳು ಮತ್ತು ತರಬೇತಿಗಾಗಿ ಕೊಠಡಿ ತಯಾರಿ.

    • ಕರೆಗಳ ರೂಟಿಂಗ್‌ಗೆ ಸಹಾಯ ಮಾಡುವುದು ಮತ್ತು ಫೋನ್‌ಗಳಿಗೆ ವೃತ್ತಿಪರವಾಗಿ ಉತ್ತರಿಸುವುದು.

    • ಸಹೋದ್ಯೋಗಿಗಳಿಗೆ ಸಹಾಯ ಮಾಡುವುದು.

    • ತಾತ್ಕಾಲಿಕ ಆಡಳಿತಾತ್ಮಕ ಕಾರ್ಯಗಳಿಗೆ ಸಹಾಯ ಮಾಡುವುದು.

    • ಫೋನ್ ಕರೆಗಳಿಗೆ ಉತ್ತರಿಸಲಾಗುತ್ತದೆ, ಫಾರ್ವರ್ಡ್ ಮಾಡಲಾಗುತ್ತದೆ.

    • ಜೂನಿಯರ್ ಆಡಳಿತ ಸಿಬ್ಬಂದಿಯ ನಿರ್ವಹಣೆ, ಅಭಿವೃದ್ಧಿ ಮತ್ತು ನೇಮಕಾತಿಯನ್ನು ಕೈಗೊಳ್ಳುವುದು.

    • ಅತ್ಯುತ್ತಮ ಗ್ರಾಹಕ ಸೇವೆಯನ್ನು ಒದಗಿಸುವುದು.


    ರಿಸೆಪ್ಷನಿಸ್ಟ್‌ಗೆ ಕೆಲಸಕ್ಕೆ ಬೇಕಾದ ಸಂಕ್ಷಿಪ್ತ ವಿವರ ಇಲ್ಲಿದೆ:


    ಯಾವುದೇ ಕಂಪನಿ ಇರಲಿ ಗ್ರಾಹಕರ ಮನ ಗೆಲ್ಲಲು ಮೊದಲು ಮಾಡುವ ಕೆಲಸವೆಂದ್ರೆ ಉತ್ತಮ ರಿಸೆಪ್ಷನಿಸ್ಟ್‌ಗಳನ್ನು ನೇಮಕಾತಿ ಮಾಡಿಕೊಳ್ಳುವುದು ಅವರ ಪ್ರಮುಖ ಕೆಲಸ ಆಗಿರುತ್ತೆ. ಮೊದಲ ಪ್ರಭಾವ ಬೀರುವಲ್ಲಿ ರಿಸೆಪ್ಷನಿಸ್ಟ್‌ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಈ ಅನಿಸಿಕೆ ಕಂಪನಿಯ ಯಶಸ್ಸಿನ ಮೇಲೆ ಪ್ರಭಾವ ಬೀರಬಹುದು. ಕಂಪನಿಗಳು ಈ ಕೆಳಗಿನ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಸ್ವಾಗತಿಸಿ ಅವರಿಗೆ ಉದ್ಯೋಗವನ್ನು ಅದರ ಜೊತೆಗೆ ಉತ್ತಮ ಸಂಬಳವನ್ನು ನೀಡುತ್ತವೆ.




    • ಮೈಕ್ರೋಸಾಫ್ಟ್ ಆಫೀಸ್‌ ಕೌಶಲ್ಯದಲ್ಲಿ ಪ್ರಾವೀಣ್ಯತೆ ಇರಬೇಕು.

    • ಕಚೇರಿ ಉಪಕರಣಗಳ ಬಗ್ಗೆ ಜ್ಞಾನವಿರಬೇಕು. (ಫ್ಯಾಕ್ಸ್ ಯಂತ್ರಗಳು ಮತ್ತು ಮುದ್ರಕಗಳು)

    • ವೃತ್ತಿಪರತೆ ಅಗತ್ಯವಾಗಿ ಇರಬೇಕು.

    • ಮೌಖಿಕವಾಗಿ ಮತ್ತು ಬರವಣಿಗೆಯಲ್ಲಿ ಪರಿಣಾಮಕಾರಿಯಾಗಿ ಸಂವಹನ ಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು.

    • ಕಂಪನಿಯಲ್ಲಿ ಸಮಸ್ಯೆಗಳು ಉದ್ಭವಿಸಿದಾಗ, ಪೂರ್ವಭಾವಿಯಾಗಿ ಪರಿಹಾರ ಮಾಡುವ ಸಾಮರ್ಥ್ಯ ಇರಬೇಕು.

    • ಸಮಯ ನಿರ್ವಹಣೆ ಮತ್ತು ಬಹು ಕೆಲಸ ಮಾಡುವ ಕೌಶಲ್ಯಗಳು, ಆದ್ಯತೆಗಳ ಮೇಲೆ ಕೇಂದ್ರೀಕರಿಸುವ ಸಾಮರ್ಥ್ಯ ಇರಬೇಕು.

    • ಗ್ರಾಹಕ ಸೇವೆಯ ಕಡೆಗೆ ಉತ್ತಮ ದೃಷ್ಟಿಕೋನ ಇರಬೇಕು.

    • ಪ್ರೌಢಶಾಲಾ ಡಿಪ್ಲೊಮಾ: ಆಫೀಸ್‌ ಮ್ಯಾನೆಜ್‌ಮೆಂಟ್‌ ಸರ್ಟಿಫಿಕೆಟ್‌ ಇದಕ್ಕೆ ಬೇಕಾದ ಶೈಕ್ಷಣಿಕ ಸರ್ಟಿಫೀಕೆಟ್‌ ಆಗಿದೆ.


    ರಿಸೆಪ್ಷನಿಸ್ಟ್ ಜವಾಬ್ದಾರಿಗಳು ಇಂತಿವೆ:

    • ಸಂದರ್ಶಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮತ್ತು ಅವರನ್ನು ಸೌಹಾರ್ದಯುತವಾಗಿ ಸ್ವಾಗತಿಸುವುದು.

    • ಕಂಪನಿಯ ಮುಖ್ಯ ಸ್ಥಳ ಅಂದ್ರೆ ರಿಸೆಪ್ಷನಿಸ್ಟ್‌ ಸ್ಥಳ ಸೇರಿದಂತೆ ಕಂಪನಿಯ ಎಲ್ಲ ಸ್ಥಳಗಳನ್ನು ಎಲ್ಲಾ ಸಮಯದಲ್ಲೂ ವ್ಯವಸ್ಥಿತವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸುವುದು.

    • ಸಂದರ್ಶಕರ ವಿನಂತಿಗಳು ಮತ್ತು ಫೋನ್ ಕರೆಗಳನ್ನು ವಿವರವಾದ ಮತ್ತು ನಿಖರವಾದ ರೀತಿಯಲ್ಲಿ ರೆಕಾರ್ಡ್ ಮಾಡುವುದು.

    • ವಿತರಣೆಗಳನ್ನು ಸ್ವೀಕರಿಸುವುದು. ಕಂಪನಿಗೆ ಬರುವ ಮೇಲ್ ಅನ್ನು ವಿಂಗಡಿಸುವುದು ಮತ್ತು ವಿತರಿಸುವುದು.

    • ಸಾಮಾನ್ಯ ಕಛೇರಿಗಾಗಿ ಫೈಲಿಂಗ್ ವ್ಯವಸ್ಥೆಯನ್ನು ನವೀಕೃತವಾಗಿರಿಸಿಕೊಳ್ಳುವುದು.


    ರಿಸೆಪ್ಷನಿಸ್ಟ್ ಆಗಲು ಇರಬೇಕಾದ ಅಗತ್ಯತೆಗಳು :

    • ರಿಸೆಪ್ಷನಿಸ್ಟ್‌ ಆಗಲು ವಿಶ್ವವಿದ್ಯಾನಿಲಯ ಅಥವಾ ಕಾಲೇಜಿನಿಂದ ಪಡೆದ ರಿಸೆಪ್ಷನಿಸ್ಟ್‌ ಅಥವಾ ಅದಕ್ಕೆ ಸಂಬಂಧಪಟ್ಟ ಪದವಿ ಸರ್ಟಿಪೀಕೆಟ್‌ ಇರಬೇಕು.

    • ಸ್ವಾಗತಕಾರ ಕೆಲಸ ಅಥವಾ ಸಂಬಂಧಿತ ಕ್ಷೇತ್ರದ ಕಾರ್ಯಗಳ ತಿಳುವಳಿಕೆ.

    • ಬರವಣಿಗೆ ಮತ್ತು ಮೌಖಿಕ ಸಂವಹನ ಕೌಶಲ್ಯಗಳು ಅತ್ಯುತ್ತಮವಾಗಿರಬೇಕು.

    • Excel, Word, ಮತ್ತು Outlook ನಂತಹ Microsoft ಉತ್ಪನ್ನಗಳಲ್ಲಿನ ಕೌಶಲ್ಯಗಳು ಬೆಸ್ಟ್‌ ಆಗಿರಬೇಕು.

    • ಸಮಯವನ್ನು ಉತ್ತಮವಾಗಿ ನಿರ್ವಹಿಸುವ ಸಾಮರ್ಥ್ಯ ಇರಬೇಕು.

    • ಆಡಳಿತ ಮತ್ತು ಕ್ಲೆರಿಕಲ್ ಕೌಶಲ್ಯಗಳು ಇರಲೇಬೇಕು.

    • ಕಂಪನಿಯ ಅಗತ್ಯವಿರುವ ವಿವಿಧ ಕಾರ್ಯಗಳಲ್ಲಿ ಭಾಗವಹಿಸುವ ಸಾಮರ್ಥ್ಯ ಇರಬೇಕು.


    ರಿಸೆಪ್ಷನಿಸ್ಟ್ ಗೆ ಇರುವ ಸಂಬಳದ ವಿವರ


    ಭಾರತದಲ್ಲಿ, ರಿಸೆಪ್ಷನಿಸ್ಟ್ ಉದ್ಯೋಗದ ಸರಾಸರಿ ಮಾಸಿಕ ವೇತನವು ಸುಮಾರು ರೂ. 13,903. ವೇತನಗಳು 8,060 ರೂ. ಯಿಂದ 23,100 ರೂ.ವರೆಗಿನ ನಡುವೆ ಇರುತ್ತದೆ. ಸ್ವಾಗತಕಾರರ ಸಂಬಳವು ಅವರ ಅನುಭವ, ಕೌಶಲ್ಯ, ಸ್ಥಳವನ್ನು ಅವಲಂಬಿಸಿ ವ್ಯಾಪಕವಾಗಿ ಬದಲಾಗುತ್ತದೆ.


    ಸಾಂದರ್ಭಿಕ ಚಿತ್ರ


    ಪ್ರಮುಖ ಕೌಶಲ್ಯಗಳು ಇಂತಿವೆ:


    ಕೆಲವು ಕಂಪನಿಗಳು ಕ್ಲೆರಿಕಲ್, ಅಡ್ಮಿನ್ ಅಥವಾ ರಿಸೆಪ್ಷನಿಸ್ಟ್ ಹುದ್ದೆಗಳಲ್ಲಿ ಹಿಂದಿನ ಅನುಭವ ಹೊಂದಿರುವ ಅರ್ಜಿದಾರರನ್ನು ನೇಮಿಸಿಕೊಳ್ಳುತ್ತಾರೆ. ಸ್ವಾಗತಕಾರರಾಗಲು ಉನ್ನತ ಶಿಕ್ಷಣ ಪದವಿಯನ್ನು ಹೊಂದುವ ಅಗತ್ಯವಿಲ್ಲ. ಸ್ವಾಗತಕಾರರಿಗೆ ಇರಬೇಕಾದ ಪ್ರಮುಖ ಕೌಶಲ್ಯಗಳು ಇಂತಿವೆ.


    • ಸಂಸ್ಥೆಗೆ ಸಂಬಂಧಿಸಿದ ಕೌಶಲ್ಯಗಳು ಉತ್ತಮವಾಗಿರಬೇಕು.

    • ಕಂಪನಿಯ ಬಗ್ಗೆ ಹೆಚ್ಚಿನ ವಿವರ ತಿಳಿದಿರುವುದು.

    • ಅಸಾಧಾರಣ ಸಾಮರ್ಥ್ಯಗಳ ಬಹು ಕೆಲಸ ಮಾಡುವ ವ್ಯಕ್ತಿಯಾಗಿರಬೇಕು.

    • ಹೆಚ್ಚು ಪರಿಣಾಮಕಾರಿ ಸಂವಹನಕಾರ ಆಗಿರಬೇಕು.

    • ಸಾಕಷ್ಟು ವಿನಯಶೀಲರಾಗಿರಬೇಕು.

    • ಅತ್ಯುತ್ತಮ ಗ್ರಾಹಕ ಸೇವೆಯನ್ನು ಒದಗಿಸುವ ಸಾಮರ್ಥ್ಯ ಇರಬೇಕು.


    ರಿಸೆಪ್ಷನಿಸ್ಟ್ ಆಗಿ ವೃತ್ತಿಯನ್ನು ಏಕೆ ಮುಂದುವರಿಸಬೇಕು?


    ರಿಸೆಪ್ಷನಿಸ್ಟ್‌ಗಳು ತಮ್ಮ ಕಂಪನಿಯ ವ್ಯವಹಾರದ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಯುತ್ತಾರೆ. ಇದಲ್ಲದೆ, ತಮ್ಮ ಕೆಲಸದಲ್ಲಿ ಉತ್ಕೃಷ್ಟರಾಗಿರುವ ರಿಸೆಪ್ಷನಿಸ್ಟ್‌ ತಮ್ಮ ನಿರ್ವಹಣೆಯಿಂದ ಕಂಪನಿಯ ಮುಖ್ಯ ಅಧಿಕಾರಿಗಳ ಗಮನಕ್ಕೆ ಬರುವ ಸಾಧ್ಯತೆಯಿದೆ.


    ರಿಸೆಪ್ಷನಿಸ್ಟ್‌ ಸಾಮಾನ್ಯವಾಗಿ ಕಾರ್ಯದರ್ಶಿಯ ಪಾತ್ರವನ್ನು ನಿರ್ವಹಿಸುತ್ತಾರೆ. ಇತರರ ಕರ್ತವ್ಯಗಳನ್ನು ಸಹ ನಿರ್ವಹಿಸುತ್ತಾರೆ. ವರದಿ ಒಂದರ ಪ್ರಕಾರ, 2014 ಎಲ್ಲಾ ಉದ್ಯೋಗಗಳಿಗಿಂತ ಸ್ವಾಗತಕಾರರ ಉದ್ಯೋಗದ ಬೆಳವಣಿಗೆಯ ವರ್ಷ ಎಂದು ಹೇಳಲಾಗಿತ್ತು. ಸ್ವಾಗತಕಾರರ ಉದ್ಯೋಗಗಳ ನಡುವಿನ ವಹಿವಾಟಿನ ಹೆಚ್ಚಳವು ಹಲವಾರು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.


    ರಿಸೆಪ್ಷನಿಸ್ಟ್ ಆಗುವುದು ಹೇಗೆ?


    ಸ್ವಾಗತಕಾರರ ಉದ್ಯೋಗ ಪ್ರೊಫೈಲ್‌ಗೆ ಹೈಸ್ಕೂಲ್ ಡಿಪ್ಲೊಮಾ ಅಗತ್ಯವಿದೆ. ಇದರ ಹೊರತಾಗಿಯೂ, ಉದ್ಯೋಗದಾತರು ಆಡಳಿತಾತ್ಮಕ ಹಿನ್ನೆಲೆ ಮತ್ತು ಅನುಭವವನ್ನು ಹೊಂದಿರುವ ಸ್ವಾಗತಕಾರರನ್ನು ನೇಮಿಸಿಕೊಳ್ಳಲು ಬಯಸುತ್ತಾರೆ.


    ಆಡಳಿತಾತ್ಮಕ ಕೌಶಲ್ಯಗಳನ್ನು ಕಲಿಯಲು, ನೀವು ಕ್ಲೆರಿಕಲ್ ಅಧ್ಯಯನಗಳು ಅಥವಾ ಕಚೇರಿ ಸಹಾಯದಲ್ಲಿ ಪ್ರಮಾಣಪತ್ರವನ್ನು ಗಳಿಸಬಹುದು, ಇದು ಡೇಟಾ ಎಂಟ್ರಿ, ವೇತನದಾರರ ಲೆಕ್ಕಪತ್ರ ನಿರ್ವಹಣೆ, ಪದ ಸಂಸ್ಕರಣೆ, ಹಣಕಾಸು ಲೆಕ್ಕಪತ್ರ ನಿರ್ವಹಣೆ, ಗ್ರಾಹಕ ಸೇವೆ ಮತ್ತು ಕಚೇರಿ ನಿರ್ವಹಣೆಯಂತಹ ವಿಷಯಗಳನ್ನು ಒಳಗೊಂಡಿದೆ.


    ಹೊಸದಾಗಿ ಕೆಲಸ ಕಲಿಯಲು ಇಷ್ಟ ಪಡುವವರು, ವಿಮಾ ಕಂಪನಿಗಳು, ಧಾರ್ಮಿಕ ಸಂಸ್ಥೆಗಳು, ಪ್ರಕಾಶನ ಕಂಪನಿಗಳು, ವಿನ್ಯಾಸ ಸಂಸ್ಥೆಗಳು, ಮಾರುಕಟ್ಟೆ ಸಂಶೋಧನಾ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ವೈಜ್ಞಾನಿಕ ಸಂಸ್ಥೆಗಳು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಬಹುದು.

    Published by:Kavya V
    First published: