Professional Cuddler Career: 1 ಗಂಟೆ ಕಾಲ ತಬ್ಬಿಕೊಂಡರೆ 7,000 ರೂ.: ತಬ್ಬಿ ಎದೆಗೆ ಒರಗಿಸಿಕೊಳ್ಳುವುದು ಈಗ ಒಂದು ವೃತ್ತಿ

ಕೇವಲ ಒಂದು ಗಂಟೆ ಯಾರನ್ನಾದರೂ ಅಪ್ಪಿಕೊಂಡು ಸಾಂತ್ವನ ಹೇಳಿದರೆ 7,000 ರೂಪಾಯಿ ಗಳಿಸಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಫೇಮಸ್​ ಚಲನಚಿತ್ರ ಹಿಂದಿಯ (Bollywood Movie) ಮುನ್ನಬಾಯ್​​ MBBS ಎಲ್ಲರಿಗೂ ತಿಳಿದಿದೆ. ಈ ಸಿನಿಮಾದಲ್ಲಿ ಜಾದು ಕಿ ಜಪ್ಪಿ (jadu ki jhappi) ಅನ್ನೋ ಕಾನ್ಸೆಪ್ಟ್​​ ಇದೆ. ಅಂದರೆ ನೋವಿನಲ್ಲಿದ್ದವರನ್ನು ಅರೆ ಕ್ಷಣ ತಬ್ಬಿಕೊಂಡರೆ ಎಲ್ಲಾ ನೋವು, ದುಃಖ ಮಾಯವಾಗುತ್ತೆ ಅನ್ನೋದು. ಇನ್ನು ತ್ರಿ ಇಡಿಯಟ್ಸ್​​ (3 idiots)  ಸಿನಿಮಾದಲ್ಲೂ ಆಲ್​ ಇಸ್​ ವೆಲ್​ (All is Well) ಅನ್ನೋ ಕಾನ್ಸೆಪ್ಟ್​ ಇತ್ತು. ಕಷ್ಟ ಬಂದಾಗ ಏನೂ ಆಗಲ್ಲ, ಎಲ್ಲವೂ ಸರಿ ಹೋಗುತ್ತೆ ಎಂದು ಎದೆಯ ಮೇಲೆ ಕೈ ಇರಿಸಿ ಹೇಳಿದರೆ ಅರ್ಧ ಕಷ್ಟ ಕರಗಿದಂತೆ ಎಂಬರ್ಥದಲ್ಲಿ ಈ ಸಿನಿಮಾದ ಸನ್ನಿವೇಶಗಳನ್ನು ಚಿತ್ರಿಸಿದ್ದಾರೆ. ಹೌದು ನೊಂದು ಹೃದಯಕ್ಕೆ ಹಿಡಿಯಷ್ಟು ಸಾಂತ್ವನ, ಕಣ್ಣೀರಿಡುತ್ತಿರುವವರನ್ನು ಒಂದು 5 ನಿಮಿಷ ಎದೆಗೆ ಒರಿಸಿಕೊಂಡು ತಲೆ ಸವರಿ ನೀಡವ ಸಾಂತ್ವನ ನಿಜಕ್ಕೂ ಮಾಂತ್ರಿಕತೆಯನ್ನು ಹೊಂದಿದೆ. ಮಾನವಿಯತೆಯಲ್ಲಿ ಸಾಂತ್ವನಕ್ಕೆ ಅಗ್ರ ಸ್ಥಾನವಿದೆ.

ಪ್ರೀತಿಯಿಂದ ಅಪ್ಪಿಕೊಳ್ಳುವುದರ ಮೂಲಕ ಒಬ್ಬರ ತೊಂದರೆಗಳನ್ನು ಕಡಿಮೆ ಮಾಡುವುದು ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ. ಇದು ವೃತ್ತಿಯೂ ಆಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆದರೆ ಇದು ನಿಜ ಜೀವನದಲ್ಲಿ ನಡೆಯುತ್ತಿದೆ. ಅಪ್ಪುಗೆಯ ಮೂಲಕ ಇನ್ನೊಬ್ಬರ ದುಃಖವನ್ನು ಕಡಿಮೆ ಮಾಡುವ ಕೆಲಸವನ್ನು ಪ್ರೊಫೆಷನಲ್​​ ಕಡ್ಲರ್ಸ್​​ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಯುವಕರ ಬೇಡಿಕೆ ಹೆಚ್ಚುತ್ತಿದೆ. ಇಂದಿನ ಒತ್ತಡದ ಜೀವನದಲ್ಲಿ, ಈ ವೃತ್ತಿಯು ಸ್ವತಃ ವಿಭಿನ್ನವಾಗಿದೆ. ಈ ಸೇವೆ ಏನು ಮತ್ತು ಅದರ ಶುಲ್ಕ ಏನು ಎಂದು ನಾವು ನಿಮಗೆ ಇಲ್ಲಿ ತಿಳಿಸಿದ್ದೇವೆ.

ಇದನ್ನೂ ಓದಿ: Boss and Employee Relationship: ಬಾಸ್ ಜೊತೆ ಕಿರಿಕ್ ಮಾಡಿಕೊಂಡಿದ್ದರೆ, ಮುಂದೆ ಇಷ್ಟು ಮಾಡಿ ಸಾಕು

ವೃತ್ತಿಪರ ಕಡ್ಲರ್ ಎಂದರೇನು?

ವೃತ್ತಿಪರ ಕಡ್ಲರ್‌ಗಳು ಮಾನವ ಹಿತಾಸಕ್ತಿಯಲ್ಲಿ ಒಂದು ರೀತಿಯಲ್ಲಿ ಕೆಲಸ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಸ್ವಂತ ಕುಟುಂಬದಿಂದ ದೂರವಾಗುತ್ತಿದ್ದಾರೆ. ಇವರು ಕಡ್ಲರ್​​ಗಳನ್ನು ಅಪ್ಪಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅನುಭವಿಸುತ್ತಾರೆ. ಈ ಚಿಕಿತ್ಸೆಯ ಮೂಲಕ, ಕೆಲವು ರೀತಿಯ ದುಃಖದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಅನೇಕ ರೀತಿಯ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದಾರೆ. ಯಾರಿಗಾದರೂ ಕೆಲಸ ಮತ್ತು ಕೆಲಸದ ಒತ್ತಡ ಇದ್ದರೆ, ಸಂಬಂಧದ ಏರಿಳಿತಗಳಿಂದ   ಖಿನ್ನತೆಗೆ ಒಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕ್ಯಾಡ್ಲರ್ ಚಿಕಿತ್ಸೆಯು ಜನರನ್ನು ಸಮಾಧಾನಪಡಿಸಲು ಕೆಲಸ ಮಾಡುತ್ತದೆ.

In a healthy relationship you never compromise on these things stg asp
ಸಾಂಕೇತಿಕ ಚಿತ್ರ


ಇದು ಹೇಗೆ ಕೆಲಸ ಮಾಡುತ್ತದೆ?

ಜೀವನದಲ್ಲಿ ಏರಿಳಿತದ ನಂತರ ಸ್ವಲ್ಪ ಬೆಂಬಲದ ಅಗತ್ಯವಿರುವ ಜನರಿಗೆ ಇದು ಚಿಕಿತ್ಸೆಯಾಗಿದೆ. ಕೆಲವರಿಗೆ ತುಂಬಾ ದುಃಖವಿರುತ್ತದೆ ಆದರೆ ದುಃಖವನ್ನು ಹಂಚಿಕೊಳ್ಳಲು ಯಾರೂ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ಭುಜದ ಹುಡುಕಾಟದಲ್ಲಿದ್ದಾರೆ. ಅಂತವರು ಈ ಕಡ್ಲರ್​ಗಳನ್ನು ಅಪ್ಪಿಕೊಳ್ಳಬಹುದು ಮತ್ತು ತಮ್ಮ ಮನಸ್ಸಿನಲ್ಲಿ ಶಾಂತಿಯನ್ನು ಅನುಭವಿಸಬಹುದು. ವೃತ್ತಿಪರ ಕಡ್ಲರ್​​ಗಳು ಅಂತಹವರನ್ನು ತಬ್ಬಿ ಸಾಂತ್ವನ ಹೇಳಿ ಅವರಲ್ಲಿ ಸಂತಸ ಮೂಡಿಸುತ್ತಾರೆ.

these are the 9 tips to gain respect in a relationship stg asp
ಸಾಂಕೇತಿಕ ಚಿತ್ರ


ಸಂಬಳ ಎಷ್ಟು?

ಕೇವಲ ಒಂದು ಗಂಟೆ ಯಾರನ್ನಾದರೂ ಅಪ್ಪಿಕೊಂಡು ಸಾಂತ್ವನ ಹೇಳಿದರೆ 7,000 ರೂಪಾಯಿ ಗಳಿಸಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ದುಃಖಿತ ವ್ಯಕ್ತಿಯನ್ನು ತಬ್ಬಿಕೊಳ್ಳುವುದಕ್ಕೂ ಭಾರೀ ಮೊತ್ತವನ್ನು ವಸೂಲಿ ಮಾಡುವ ದಂಧೆಯಂತಾಗಿದೆ. ಭಾರತದ ಬಗ್ಗೆ ಹೇಳುವುದಾದರೆ, ಇದು ಇಲ್ಲಿ ಅಷ್ಟೊಂದು ಚಾಲ್ತಿಯಲ್ಲಿಲ್ಲ, ಆದರೆ ಈ ಚಿಕಿತ್ಸೆಯು ವಿಶ್ವ ಮಟ್ಟದಲ್ಲಿ ಹೆಚ್ಚುತ್ತಿದೆ.
Published by:Kavya V
First published: