• Home
 • »
 • News
 • »
 • career
 • »
 • Career Growth: ಬ್ಯುಸಿನೆಸ್ ಫೀಲ್ಡ್​​ನಲ್ಲಿ ಯಶಸ್ವಿ ಕರಿಯರ್​​ಗಾಗಿ PIE ಸೂತ್ರವನ್ನು ಬಳಸಿ

Career Growth: ಬ್ಯುಸಿನೆಸ್ ಫೀಲ್ಡ್​​ನಲ್ಲಿ ಯಶಸ್ವಿ ಕರಿಯರ್​​ಗಾಗಿ PIE ಸೂತ್ರವನ್ನು ಬಳಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

PIE ಪರಿಕಲ್ಪನೆಯಲ್ಲಿ ಪಿ (P) ಎಂದರೆ ಪರ್ಫಾರ್ಮೆನ್ಸ್, ಐ (I) ಎಂದರೆ ಇಂಪ್ರೆಶನ್ ಹಾಗೂ ಇ (E) ಎಂದರೆ ಎಕ್ಸ್‌ಪೋಶರ್ ಎಂದರ್ಥ.

 • Share this:

  ಉದ್ಯೋಗ ಸೃಷ್ಟಿ (Job Creation) ಮತ್ತು ದೇಶದ ಆರ್ಥಿಕಾಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುವಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (Small and Medium Enterprises- SME ) ಪಾತ್ರ ದೊಡ್ಡದು. ಈ ಕ್ಷೇತ್ರದಲ್ಲಿ ನಿಮ್ಮ ಬಜೆಟ್‌ ಗೆ ಅನುಗುಣವಾಗಿ ನೀವಿಲ್ಲಿ ಉದ್ಯಮಗಳನ್ನು ಆರಂಭಿಸಬಹುದು. ಸರಿಯಾದ ಉದ್ದೇಶ, ವ್ಯಾಪಾರ ತಂತ್ರ, ಉತ್ಪನ್ನದ ಪ್ರಚಾರ ಹೀಗೆ ಸರಿಯಾದ ಕಲೆಗಳನ್ನು ಬಳಸಿಕೊಂಡು ಆಕಾಂಕ್ಷಿಗಳು ಸಣ್ಣ ಉದ್ಯಮದಲ್ಲಿಯೇ ಉತ್ತಮ ಭವಿಷ್ಯ ಕಾಣಬಹುದು. ಹಾಗೆಯೇ ಇಲ್ಲಿ ವೃತ್ತಿ ಜೀವನ ಕಟ್ಟಿಕೊಳ್ಳಲು ಸಹ ಸಾಕಷ್ಟು ದಾರಿಗಳಿವೆ.


  ಹಲವರಿಗೆ ಈ ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಹೆಚ್ಚಿನ ವೃತ್ತಿ ಭವಿಷ್ಯದ ಅಭದ್ರತೆ ಇದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಸ್ಥಾಪಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಮನಸ್ಥಿತಿಯಾಗಿದೆ. ಆದರೆ ಕೆಲವು ಉತ್ತಮ ನಿರ್ಧಾರಗಳು, ಕ್ಷೇತ್ರದಲ್ಲಿನ ನಿಮ್ಮ ಜ್ಞಾನ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಬಹುದು.


  ಹಾಗಾದರೆ ಇಲ್ಲಿ SME ಕ್ಷೇತ್ರದಲ್ಲಿ ವೃತ್ತಿಯನ್ನು ಬೆಳೆಸುವುದು ಹೇಗೆ ಎಂಬುದರ ಬಗ್ಗೆ ತಿಳಿಯೋಣ.


  PIE ಪರಿಕಲ್ಪನೆ


  ಹಾರ್ವೆ ಕೋಲ್ಮನ್, ತನ್ನ ಪುಸ್ತಕ ಎಂಪವರಿಂಗ್ ಯುವರ್‌ಸೆಲ್ಫ್‌ನಲ್ಲಿ, ದಿ ಆರ್ಗನೈಸೇಶನಲ್ ಗೇಮ್ ರಿವೀಲ್ಡ್ PIE ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. SMEಗಳಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಲು ಇದು ಉತ್ತಮ ಮಾರ್ಗಸೂಚಿಯಾಗಿದೆ. PIE ಪರಿಕಲ್ಪನೆಯಲ್ಲಿ ಪಿ (P) ಎಂದರೆ ಪರ್ಫಾರ್ಮೆನ್ಸ್, ಇದು ದಿನನಿತ್ಯದ ಕೆಲಸ ಮತ್ತು ಒಬ್ಬರು ನೀಡುವ ಫಲಿತಾಂಶಗಳ ಗುಣಮಟ್ಟವನ್ನು ಹೊಂದಿರುತ್ತದೆ. ಐ (I) ಎಂದರೆ ಇಂಪ್ರೆಶನ್, ಇದು ಒಬ್ಬರ ಬ್ರ್ಯಾಂಡ್ ಮತ್ತು ಇತರ ಜನರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ತಿಳಿಸುತ್ತದೆ. ಹಾಗೆ ಇ (E) ಎಂದರೆ ಎಕ್ಸ್‌ಪೋಶರ್ ನಿಮ್ಮ ಸಂಸ್ಥೆಯಲ್ಲಿ ನಿಮ್ಮನ್ನು ಯಾರು ತಿಳಿದಿದ್ದಾರೆ ಎಂಬುದರ ಸೂಚಕವಾಗಿದೆ.
  ಈ PIE ಪರಿಕಲ್ಪನೆಯಲ್ಲಿ ಎಕ್ಸ್‌ಪೋಶರ್ ತುಂಬಾ ಮುಖ್ಯವಾಗಿದೆ. ನಿಮ್ಮ ಉದ್ಯಮದ ಬಗ್ಗೆ ಪ್ರಚಾರ ಅಥವಾ ಜನರಲ್ಲಿ ಇದರ ಉಪಸ್ಥಿತಿಯ ಗೊತ್ತಾಗುವಿಕೆಯಾಗಬೇಕೆಂದರೆ ಸಹಾಯ ಮಾಡುವ ಇತರ ಅಂಶಗಳೆಂದರೆ ಸಭೆಗಳು, ವಿವಿಧ ಮಧ್ಯಸ್ಥಗಾರರ ಜೊತೆ ಸಂಪರ್ಕದಲ್ಲಿರುವುದು, ಸಹಾಯವನ್ನು ನೀಡಲು ಅಥವಾ ಸಹಾಯಕ್ಕಾಗಿ ಕೇಳಲು ಮತ್ತು ಸಂಸ್ಥೆಯು ನಿಗದಿಪಡಿಸಿದ ಗಡಿಗಳನ್ನು ಮೀರಿ ಬೆಳವಣಿಗೆ ಹೊಂದುವುದು ಆಗಿದೆ.


  ಇದರಾಚೆಗೆ SMEಗಳಲ್ಲಿ ವೃತ್ತಿಯನ್ನು ಬೆಳೆಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಕೆಳಕಂಡಂತಿದೆ.


  1. ನೆಟ್‌ವರ್ಕಿಂಗ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಅಳವಡಿಸಿಕೊಳ್ಳಿ:


  ಈಗಿನ ವಿದ್ಯಾಮಾನದಲ್ಲಿ ನೆಟ್‌ವರ್ಕಿಂಗ್‌ ಎಂಬುವುದು ತಂಬಾ ಮುಖ್ಯ. ಕಂಪನಿ, ಉತ್ಪನ್ನದ ಬಗ್ಗೆ ಪ್ರಚಾರ ಅಗತ್ಯವಾಗಿದೆ. ಪ್ರಚಾರಕ್ಕೆ ಹೇಳಿ ಮಾಡಿಸಿದ್ದು ಎಂದರೆ ಸಾಮಾಜಿಕ ಮಾಧ್ಯಮಗಳು.


  ಹೌದು, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹೆಚ್ಚಾಗಿ ಈ ಸಾಮಾಜಿಕ ಮಾಧ್ಯಮಗಳಿಂದಲೇ ಹೆಚ್ಚು ಜನಪ್ರಿಯವಾಗಿವೆ. ಇನ್‌ಸ್ಟಾಗ್ರಾಮ್‌ ಅಥವಾ ಇನ್ಯಾವುದಾದರೂ ಸೋಶಿಯಲ್‌ ಮೀಡಿಯಾದಲ್ಲಿ ಆಯ್ದ ಪ್ರಭಾವಿಗಳನ್ನು ಅನುಸರಿಸಿ ಅವರ ಮೂಲಕ ನಿಮ್ಮ ಉತ್ಪನ್ನವನ್ನು ಪ್ರಚಾರ ಮಾಡಿಸುವುದು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತದೆ. ಇಲ್ಲಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಬಯಸುವವರು ಸೋಶಿಯಲ್‌ ಮೀಡಿಯಾಗಳ ಬಗ್ಗೆ ಗಮನಹರಿಸಬೇಕು.


  2. ಸ್ವ-ಪ್ರಚಾರ : ಈ ವಿಧಾನ ಕೆಲವರಿಗೆ ಸಂಕೋಚ ತರಿಸಬಹುದು. ನಮ್ಮ ಬಗ್ಗೆ ಅಥವಾ ಉತ್ಪನ್ನ, ಪರಿಕಲ್ಪನೆ ಬಗ್ಗೆ ತಾವೇ ಹೇಳಿಕೊಳ್ಳುವುದು ಇರಿಸುಮುರಿಸು ಎನಿಸಬಹುದು. ಆದರೆ ಉದ್ಯಮದಲ್ಲಿ ಈ ಸ್ವಭಾವ ಬಿಟ್ಟು ನಿಮ್ಮ ಕಲ್ಪನೆಯನ್ನು ವ್ಯಕ್ತಪಡಿಸಿ. ಒಂದು ಸಣ್ಣ ಉದ್ಯಮ ಎಂದರೆ ಕನಿಷ್ಠ ನಿಮ್ಮ ಸ್ಥಳೀಯರಿಗಾದರೂ ಉತ್ಪನ್ನದ ಬಗ್ಗೆ ತಿಳಿಸುವ ಕೆಲಸ ಮಾಡಬೇಕು.


  ಹೀಗಾಗಿ ನಿಮ್ಮ ಪಾಲುದಾರರ ಗಮನ ಸೆಳೆಯಲು ನೀವು ಸ್ವಪ್ರಚಾರ ಮಾಡಿಕೊಳ್ಳಬೇಕು. ನಿಮ್ಮ ಜ್ಞಾನ, ಅರಿವಿನ ಬಗ್ಗೆ ಹೆಚ್ಚು ಆತ್ಮವಿಶ್ವಾಸವನ್ನು ನೀವು ಹೊಂದಿರಬೇಕು. ಈ ವಿಶ್ವಾಸ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.


  Career Growth Tips: ನಿಮ್ಮ ವೃತ್ತಿಯಲ್ಲಿ ಬೇಗ ಯಶಸ್ಸು ಸಿಗಬೇಕೆಂದರೆ ಈ 5 ಟಿಪ್ಸ್ ಪಾಲಿಸಿ ಸಾಕು
  ಸಾಂಕೇತಿಕ ಚಿತ್ರ


  3. ನಿಮ್ಮ ಆಸಕ್ತಿ ಮತ್ತು ಉದ್ಯಮದ ವೃತ್ತಿಪರ ಸಂಸ್ಥೆಗಳಲ್ಲಿ ಸಕ್ರಿಯರಾಗಿರಿ: ಈ ಸ್ವಭಾವ ನಿಮ್ಮ ವೃತ್ತಿ ಬದುಕಿಗೆ ಮಾನ್ಯತೆ ತರಬಹುದು. ಇದನ್ನು ಸದಸ್ಯರಾಗಿ ನೋಂದಾಯಿಸುವ ಮೂಲಕ ಮಾತ್ರವಲ್ಲದೆ ಸಕ್ರಿಯ ಭಾಗವಹಿಸುವಿಕೆಯ ಮೂಲಕವೂ ಪಡೆಯಬಹುದು. ನಿಮ್ಮ ಆಸಕ್ತಿ ಕ್ಷೇತ್ರಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಲ್ಲಿ ಇಲ್ಲಿ ಗಟ್ಟಿಯಾಗಿ ನೆಲೆಯೂರಬಹುದು.


  4 ಸಂಬಂಧಿತ ವ್ಯಾಪಾರ ಪ್ರಕಟಣೆಗಳಲ್ಲಿ ಬ್ಲಾಗ್ ಅಥವಾ ಲೇಖನವನ್ನು ಬರೆಯಲು ಪ್ರಯತ್ನಿಸಿ: ಈ ಉದ್ಯಮಕ್ಕೆ ಸಂಬಂಧಿಸಿದಂತೆ ನೀವು ಲೇಖನಗಳನ್ನು ಬರೆಯಬಹುದು. ಇದು ಉದ್ಯಮದಲ್ಲಿನ ನಿಮ್ಮ ಆಸಕ್ತಿ ಬಗ್ಗೆ ಇತರರಿಗೆ ಪರಿಚಯಿಸುತ್ತದೆ. ನೀವು ಇದನ್ನು ಪೇಪರ್‌, ಜರ್ನಲ್‌ನಲ್ಲಿಯೇ ಬರೆಯಬೇಕಂತಿಲ್ಲ. ಟ್ವಿಟರ್‌, ಲಿಂಕ್ಡ್‌ಇನ್‌, ಫೇಸ್‌ಬುಕ್‌ನಂತಹ ಮುಕ್ತ ವೇದಿಕೆಯಲ್ಲೂ ಬರೆಯಬಹುದು.
  ಇಲ್ಲಿ ನಿಮ್ಮ ಜ್ಞಾನದ ಬಗ್ಗೆ ಸಂಕ್ಷಿಪ್ತವಾಗಿ ಪೋಸ್ಟ್ ಮಾಡಬಹುದು ಮತ್ತು ಪ್ರತಿಕ್ರಿಯೆಯನ್ನು ಪಡೆಯಬಹುದು.


  ಸಣ್ಣ ಮತ್ತು ಮಧ್ಯಮ ಕೈಗಾರಿಕೆಯ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ಈ ಎಲ್ಲಾ ಮೇಲಿನ ಅಂಶಗಳ ಜೊತೆಗೆ ಉತ್ತಮ ಸಾರ್ವಜನಿಕ ಪ್ರೊಫೈಲ್ ಅನ್ನು ಹೊಂದುವುದು ನಿಮ್ಮ ವ್ಯಾಪಾರ ಮತ್ತು ನಿಮ್ಮ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಇತರರಿಗೂ ಒಳಿತು ಮಾಡುತ್ತದೆ.

  Published by:Kavya V
  First published: