• Home
  • »
  • News
  • »
  • career
  • »
  • Ola Workers: ಈ ಕಾರಣಕ್ಕೆ ಓಲಾ ಕಂಪನಿ ಸೇರೋದಿಲ್ವಂತೆ ಉದ್ಯೋಗಿಗಳು!

Ola Workers: ಈ ಕಾರಣಕ್ಕೆ ಓಲಾ ಕಂಪನಿ ಸೇರೋದಿಲ್ವಂತೆ ಉದ್ಯೋಗಿಗಳು!

ಓಲಾ

ಓಲಾ

ಇತ್ತೀಚೆಗೆ ಕೆಲವು ಕಂಪನಿಗಳು ಉದ್ಯೋಗಿಗಳನ್ನು ತುಂಬಾನೇ ದುಡಿಸಿಕೊಳ್ಳುತ್ತವೆ. ಆದರೆ ಸಂಬಳ ಮಾತ್ರ ಹೆಚ್ಚಿಗೆ ಮಾಡುವುದಿಲ್ಲ.

  • Share this:

ಸಾಮಾನ್ಯವಾಗಿ ಕೆಲವೊಂದು ಕಂಪನಿಗಳು (Campany) ತಮ್ಮ ಯಶಸ್ಸಿಗೆ ಕಾರಣ ಕಠಿಣ ಪರಿಶ್ರಮ ಮತ್ತು ಕೆಲಸದ ಬಗ್ಗೆ ಅವರಿಗಿರುವ ಶ್ರದ್ದೆ ಮತ್ತು ಆಸಕ್ತಿ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಅದೇ ಇನ್ನೂ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅವರದ್ದೇ ಆದ ಸಮಯದಲ್ಲಿ (Time) ಕೆಲಸ ಮಾಡಲು ಅವಕಾಶ (Opportunity) ಮಾಡಿಕೊಟ್ಟರೆ ಅವರು ಸಾಮಾನ್ಯಕ್ಕಿಂತಲೂ ಇನ್ನೂ ಚೆನ್ನಾಗಿ  ಕೆಲಸ (Work) ಮಾಡುತ್ತಾರೆ. ಕಂಪನಿಗೆ ಅದರಿಂದ ಒಳ್ಳೆಯ ಯಶಸ್ಸು ಸಹ ಲಭಿಸುತ್ತದೆ ಅಂತ ಹೇಳುವುದನ್ನೂ ಸಹ ನಾವು ಕೇಳಿರುತ್ತೇವೆ. ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಕಂಪನಿಗಳ ಯಶಸ್ಸಿನ (Sucsess) ಸೂತ್ರವನ್ನು ಬೇರೆ ಬೇರೆ ಅಂಶಗಳಿಂದ ನಿರ್ಧರಿಸುತ್ತಾರೆ.


ಇತ್ತೀಚೆಗೆ ಕೆಲವು ಕಂಪನಿಗಳು ಉದ್ಯೋಗಿಗಳನ್ನು ತುಂಬಾನೇ ದುಡಿಸಿಕೊಳ್ಳುತ್ತವೆ. ಆದರೆ ಸಂಬಳ ಮಾತ್ರ ಹೆಚ್ಚಿಗೆ ಮಾಡುವುದಿಲ್ಲ. ಇನ್ನೂ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡುವ ಒಳ್ಳೆಯ ಸಂಬಳಕ್ಕೆ ತಕ್ಕ ಕೆಲಸಗಳನ್ನು ಪಡೆದುಕೊಳ್ಳುತ್ತದೆ. ಹೀಗೆ ಅನೇಕ ಉದ್ಯೋಗಿಗಳು ಸಹ ಸಂಬಳ ಕಡಿಮೆ ಇದ್ದು, ಕೆಲಸ ಜಾಸ್ತಿ ಇದ್ದರೆ, ಅದನ್ನು ಬಿಟ್ಟು ಬೇರೆ ಕಂಪನಿಗೆ ಕೆಲಸ ಹುಡುಕಿಕೊಂಡು ಹೋಗುತ್ತಾರೆ.


ತಮ್ಮ ಕಂಪನಿಯಲ್ಲಿನ ಕೆಲಸದ ಬಗ್ಗೆ ಓಲಾ ಸಿಇಒ ಏನ್ ಹೇಳಿದ್ದಾರೆ?


ಹೀಗೆ ದೊಡ್ಡ ದೊಡ್ಡ ಐಟಿ ಮತ್ತು ಇನ್ನಿತರೆ ಕಂಪನಿಗಳಲ್ಲಿ 'ಪ್ರತಿಕೂಲ' ಕೆಲಸದ ಸಂಸ್ಕೃತಿಯ ಬಗ್ಗೆ ವರದಿಗಳನ್ನು ದಿನನಿತ್ಯ ನಾವು ನೋಡುತ್ತಲೇ ಇರುತ್ತೇವೆ. ಇದೆಲ್ಲದರ ನಡುವೆ ಓಲಾ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭವಿಶ್ ಅಗರ್ವಾಲ್ ಅವರು ಉದ್ಯೋಗಿಗಳಿಗೆ 'ಒಳ್ಳೆಯ ಮತ್ತು ಸುಲಭವಾದ ಸಮಯ' ಕಳೆಯಲು ಓಲಾ ಇಲ್ಲಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.


"ನಮ್ಮದು ಬಹಳ ಶ್ರಮಜೀವಿಗಳ ಕಂಪನಿ ಅಂತ ಹೇಳಬಹುದು. ನಾವು ಇಲ್ಲಿ ಆರಾಮಾಗಿರಲು ಮತ್ತು ಒಳ್ಳೆಯ ಸಮಯ ಕಳೆಯಲು ಬಂದಿಲ್ಲ. ನಾವು ನಮ್ಮ ಕನಸುಗಳನ್ನು ಮತ್ತು ನಮ್ಮ ಧ್ಯೇಯವನ್ನು ಅನುಸರಿಸುತ್ತೇವೆ" ಎಂದು ಅಗರ್ವಾಲ್ ಅವರು ತಿಳಿಸಿದ್ದಾರೆ. ಓಲಾ ಕೇಂದ್ರ ಕಚೇರಿ ಹೊಂದಿರುವ ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸಿಇಒ ಮಾತನಾಡುತ್ತಿದ್ದರು.


ಇದನ್ನೂ ಓದಿ: ಪದವೀಧರರಿಗೆ ಕೇಂದ್ರ ಸರ್ಕಾರದ ಉದ್ಯೋಗ, ಮಾಸಿಕ ವೇತನ ₹ 67,000


ಓಲಾ ಕಂಪನಿಯ ಕೆಲಸ ಕಠಿಣ ಪರಿಶ್ರಮಿಗಳಿಗೆ ಮತ್ತು ಮಹತ್ವಾಕಾಂಕ್ಷೆಯುಳ್ಳ ಜನರಿಗಾಗಿ ಉತ್ತಮ ಕಂಪನಿ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯ ಭಾಗವಾಗುವ ಮೂಲಕ ಪರಂಪರೆಯ ಜೊತೆಗೆ ಹೋಗಲು ಬಯಸುವವರಿಗೆ ಹೇಳಿ ಮಾಡಿಸಿದ ಕಂಪನಿ ಎಂದು ಅಗರ್ವಾಲ್ ಹೇಳಿದರು.


ಓಲಾದಲ್ಲಿ ಕೆಲಸದ ಸಂಸ್ಕೃತಿ ಹೇಗಿದೆ?


ಇತ್ತೀಚೆಗೆ, ಬ್ಲೂಮ್ಬರ್ಗ್ ಹಲವಾರು ಹಾಲಿ ಮತ್ತು ಮಾಜಿ ಓಲಾ ಉದ್ಯೋಗಿಗಳನ್ನು ಉಲ್ಲೇಖಿಸಿ ವರದಿ ಮಾಡಿದ ಹಾಗೆ ಕಂಪನಿ ಸಿಇಒ ಅಗರ್ವಾಲ್ ಅವರು ಕೆಲವೊಮ್ಮೆ ಪುಟಗಳಲ್ಲಿ ಸಂಖ್ಯೆಯನ್ನು ನಮೂದಿಸಿಲ್ಲ ಎಂದು ಉದ್ಯೋಗಿಗಳು ಮಾಡಿದಂತಹ ಇಡೀ ಪ್ರಸ್ತುತಿಗಳನ್ನೇ ಹರಿದು ಹಾಕಿದ್ದಾರೆ. ಸಿಬ್ಬಂದಿಗಳನ್ನು ಪಂಜಾಬಿ ಭಾಷೆಯಲ್ಲಿ ನಿರ್ದೇಶಿಸುವುದು ಮತ್ತು ತಂಡವು ಕೆಲಸ ಮಾಡಿದರೂ ಸಹ ಅವರನ್ನು ಯಾವುದೋ ಕಾರಣಕ್ಕೆ 'ನಿಷ್ಪ್ರಯೋಜಕರು' ಅಂತೆಲ್ಲಾ ಬಯ್ಯುತ್ತಾರೆ ಅಂತ ಹೇಳಲಾಗಿದೆ.


ಇದನ್ನೂ ಓದಿ: ತಿಂಗಳಿಗೆ 2 ಲಕ್ಷ ಸಂಬಳ! ಗಾಂಧಿನಗರದಲ್ಲಿದೆ ಉದ್ಯೋಗ


ಅವರ ನಿರ್ವಹಣಾ ಶೈಲಿಯ ಬಗ್ಗೆ ಪ್ರಶ್ನಿಸಿದಾಗ, ಸಿಇಒ ಅವರು ಕಂಪನಿಯ ಕೆಲಸದ ಸಂಸ್ಕೃತಿಗೆ ಎಲ್ಲರೂ ಸರಿ ಹೊಂದುವುದಿಲ್ಲ ಎಂದು ಹೇಳಿದರು.


ಆದ್ದರಿಂದ ಇಂತಹ  ಕೆಲಸದ ಪರಿಸ್ಥಿತಿಗೆ ಹೆದರಿ ಹಲವಾರು ಕಾರ್ಯನಿರ್ವಾಹಕರು ಔಪಚಾರಿಕವಾಗಿ ಉದ್ಯೋಗ ಪ್ರಸ್ತಾಪಗಳನ್ನು ಸ್ವೀಕರಿಸಿದರೂ ಸಹ ಓಲಾ ಕಂಪನಿಯ ಕೆಲಸಕ್ಕೆ ಸೇರದಿರಲು ನಿರ್ಧರಿಸಿದ್ದೇವೆ ಎಂದು ಆರೋಪ ಮಾಡಿದ ಉದ್ಯೋಗಿಗಳು ತಿಳಿಸಿದರು.

First published: