• Home
  • »
  • News
  • »
  • career
  • »
  • Office Environment: ಆಫೀಸ್​​ನಲ್ಲಿ ಪಾಸಿಟಿವ್ ವಾತಾವರಣ ಇರಬೇಕೆಂದರೆ ಈ 6 ಟಿಪ್ಸ್ ಫಾಲೋ ಮಾಡಿ

Office Environment: ಆಫೀಸ್​​ನಲ್ಲಿ ಪಾಸಿಟಿವ್ ವಾತಾವರಣ ಇರಬೇಕೆಂದರೆ ಈ 6 ಟಿಪ್ಸ್ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಉದ್ಯೋಗಿಗಳನ್ನು ನಿಮ್ಮ ವ್ಯಾಪಾರದ ಸಾಧನಗಳ ಬದಲಿಗೆ ಮನುಷ್ಯರಂತೆ ನೋಡುವುದು ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಕಚೇರಿಯಲ್ಲಿನ ಕೆಲಸದ ವಾತಾವರಣವನ್ನು ಸುಧಾರಿಸಲು ಇಲ್ಲಿದೆ ನೋಡಿ 6 ಮಾರ್ಗಗಳು.

  • Share this:

    ನಾವು ಕೆಲಸ ಮಾಡುವ ಕಚೇರಿಯಲ್ಲಿ ಅಥವಾ ಆಫೀಸ್ ನಲ್ಲಿ ಒಂದು ರೀತಿಯ ಸಕಾರಾತ್ಮಕವಾದ ಕೆಲಸದ ವಾತಾವರಣವನ್ನು (Office Environment) ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಏಕೆಂದರೆ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳ (Employee) ನೈತಿಕ ಸ್ಥೈರ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಕೆಲಸದಲ್ಲಿನ ಸಕಾರಾತ್ಮಕ ವಾತಾವರಣವು ತುಂಬಾನೇ ಸಹಾಯ ಮಾಡುತ್ತದೆ. ಹೀಗೆ ಕಚೇರಿಯ ಕೆಲಸದ ವಾತಾವರಣವನ್ನು ಸುಧಾರಿಸುವುದು ಉದ್ಯೋಗಿಗಳಿಗೆ ತಮ್ಮ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಮಾಡಲು ಮತ್ತು ಗೌಪ್ಯತೆಯನ್ನು ನೀಡುವುದು. ಇದರ ಜೊತೆಗೆ ಕಚೇರಿಯನ್ನು ಹೆಚ್ಚು ಆರಾಮದಾಯಕವಾಗಿಸುವುದು ಅಲ್ಲಿನ ಸಂವಹನವನ್ನು ಸಹ ಸುಧಾರಿಸುತ್ತದೆ.


    ಆಗಾಗ್ಗೆ ಕಂಪನಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ಉದ್ಯೋಗಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಅವರ ವಿಶ್ವಾಸವನ್ನು ಮತ್ತು ಉತ್ಸಾಹವನ್ನು ಹೆಚ್ಚು ಮಾಡುತ್ತದೆ. ಉತ್ಪಾದಕತೆ ಮತ್ತು ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು, ಸಹಾಯ ಮಾಡಲು, ಉದ್ಯೋಗಿಗಳಿಗೆ ಕಡಿಮೆ ಹಣ ನೀಡಬೇಡಿ ಅಥವಾ ಅವರ ವಿರಾಮದ ಸಮಯದಲ್ಲಿ ಕೆಲಸ ಮಾಡಲು ಅವರನ್ನು ಕೇಳಬೇಡಿ.


    ನಿಮ್ಮ ಕೆಲಸದ ವಾತಾವರಣವು ನಿಮ್ಮ ಮನಸ್ಥಿತಿ, ಚಾಲನೆ, ಮಾನಸಿಕ ಆರೋಗ್ಯ ಮತ್ತು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಉದ್ಯೋಗಿಗಳು ಸ್ನೇಹಪರವಲ್ಲದ ಕೆಲಸಗಾರರೊಂದಿಗೆ ನೀರಸವಾದ ಕಚೇರಿ ವಾತಾವರಣದಲ್ಲಿ ಕುಳಿತುಕೊಂಡು ಕೆಲಸ ಮಾಡಿದರೆ, ಅವರು ಮಾತನಾಡಲು ಸಾಕಷ್ಟು ವಿಶ್ವಾಸ ಅಥವಾ ಕೆಲಸದ ಬಗ್ಗೆ ತೃಪ್ತಿಯನ್ನು ಹೊಂದಿರುವುದಿಲ್ಲ. ಅದಕ್ಕಾಗಿಯೇ ನಿಮ್ಮ ಕಂಪನಿಯ ಯಶಸ್ಸಿಗೆ ಸಕಾರಾತ್ಮಕ ಕೆಲಸದ ವಾತಾವರಣವನ್ನು ಸೃಷ್ಟಿಸುವುದು ನಿರ್ಣಾಯಕವಾಗಿದೆ. ಉದ್ಯೋಗಿಗಳನ್ನು ಸಂತೋಷವಾಗಿ ಮತ್ತು ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉತ್ತಮ ಕೆಲಸದ ವಾತಾವರಣವನ್ನು ಬೆಳೆಸುವ ಮಾರ್ಗಗಳನ್ನು ಇಲ್ಲಿವೆ ನೋಡಿ.


    ಉತ್ತಮವಾದ ಕೆಲಸದ ವಾತಾವರಣವನ್ನು ನೀವು ಹೇಗೆ ಸೃಷ್ಟಿಸಬಹುದು?


    ಉತ್ತಮವಾದ ಕೆಲಸದ ಸ್ಥಳವನ್ನು ರಚಿಸುವುದು ಸಾಮಾನ್ಯವಾಗಿ ಸಾಮಾನ್ಯ ಜ್ಞಾನ, ಜಾಣ್ಮೆ ಮತ್ತು ಸಹಾನುಭೂತಿಯನ್ನು ಒಳಗೊಂಡಿರುತ್ತದೆ. ನಿಮ್ಮ ಉದ್ಯೋಗಿಗಳನ್ನು ನಿಮ್ಮ ವ್ಯಾಪಾರದ ಸಾಧನಗಳ ಬದಲಿಗೆ ಮನುಷ್ಯರಂತೆ ನೋಡುವುದು ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಕಚೇರಿಯಲ್ಲಿನ ಕೆಲಸದ ವಾತಾವರಣವನ್ನು ಸುಧಾರಿಸಲು ಇಲ್ಲಿದೆ ನೋಡಿ 6 ಮಾರ್ಗಗಳು.




    1. ತಂಡಕ್ಕೆ ಒಳ್ಳೆಯ ಸದಸ್ಯರನ್ನು ನೇಮಿಸಿಕೊಳ್ಳಿ ಮತ್ತು ಪರಿಣಾಮಕಾರಿಯಲ್ಲದವರು ಕೆಲಸ ಬಿಟ್ಟರೆ ಹೆದರಬೇಡಿ


    ನಿಮ್ಮ ಕಚೇರಿಯ ಕೆಲಸದ ವಾತಾವರಣಕ್ಕೆ ಸರಿಹೊಂದುವ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದರಿಂದ ಕಚೇರಿಯಲ್ಲಿ ಸಕಾರಾತ್ಮಕ ವಾತಾವರಣವು ಪ್ರಾರಂಭವಾಗುತ್ತದೆ. ನಿಮ್ಮ ಉದ್ಯೋಗಿಗಳು ವೃತ್ತಿಪರರು ಮತ್ತು ತಂಡದ ಭಾಗ ಎಂಬುದನ್ನು ನೆನಪಿಡಿ. ನಕಾರಾತ್ಮಕ ಯೋಚನೆಗಳಿಂದ ತುಂಬಿರುವ ಜನರೊಂದಿಗೆ ಕೆಲಸ ಮಾಡುವ ಉದ್ಯೋಗಿಗಳು ಸಹ ಹಾಗೆ ಆಗುವ ಸಾಧ್ಯತೆಗಳಿದ್ದು, ಇದು ನಿಮ್ಮ ಕಂಪನಿಯ ಕೆಲಸದ ವಾತಾವರಣವನ್ನು ಹದೆಗೆಡಿಸುತ್ತದೆ.


    "ಒಬ್ಬ ಉದ್ಯೋಗಿಯ ಕೆಟ್ಟ ವರ್ತನೆಯು ಪ್ರತಿಯೊಬ್ಬರ ದೈನಂದಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ಹ್ಯಾಟಿ ಜೇನ್ಸ್ ಕ್ರೀಮರಿಯ ಸ್ಥಾಪಕ ಮತ್ತು ಸಿಇಒ ಕ್ಲೇರ್ ಮಾರ್ಷಲ್ ಕ್ರೋವೆಲ್ ಹೇಳುತ್ತಾರೆ. ನಕಾರಾತ್ಮಕ ನಡುವಳಿಕೆಯಿರುವ ಉದ್ಯೋಗಿಗಳನ್ನು ಕಂಪನಿಯಿಂದ ಹೋಗಲು ಬಿಟ್ಟ ನಂತರ ನನಗೆ ಎಷ್ಟು ಬಾರಿ ಬೇರೆ ಉದ್ಯೋಗಿಗಳು ಧನ್ಯವಾದಗಳನ್ನು ಹೇಳಿದ್ದಾರೆ ಎಂದು ಅವರು ಹೇಳಿದರು.


    ಕೆಲವೊಮ್ಮೆ ಉದ್ಯೋಗಿಗಳು ಕಂಪನಿಯನ್ನು ಬಿಟ್ಟು ಹೋಗುವುದನ್ನು ನೋಡುವುದು ಸ್ವಲ್ಪ ಕಷ್ಟಕರ ಅಂತ ಅನ್ನಿಸಿದರೂ ಸಹ ಇದು ಅಂತಿಮವಾಗಿ ಕೆಲಸದ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ.


    ಇದನ್ನೂ ಓದಿ: LinkedIn Report: ಭಾರತದಲ್ಲಿ ಉದ್ಯೋಗಿಗಳಿಗೆ ಜಾಸ್ತಿ ಸಂಬಳಕ್ಕಿಂತ ಇದೇ ಮುಖ್ಯವಂತೆ: ಏನದು?


    2. ನಿಮ್ಮ ಕೆಲಸದ ಸ್ಥಳದಲ್ಲಿ ಲೈಟಿಂಗ್ ವ್ಯವಸ್ಥೆಯನ್ನು ಸುಧಾರಿಸಿ


    ಕಾರ್ಮಿಕರ ಕಾರ್ಯಕ್ಷಮತೆ ಮತ್ತು ವರ್ತನೆಯಲ್ಲಿ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ. ಲಂಡನ್ ನ ಇಂಪೀರಿಯಲ್ ಕಾಲೇಜಿನ ಸಂಶೋಧಕರ 2021 ರ ವರದಿಯು ನೈಸರ್ಗಿಕ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮನಸ್ಥಿತಿ, ಶಕ್ತಿ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಿದೆ. ಕಿಟಕಿಗಳ ಮೂಲಕ ನೈಸರ್ಗಿಕ ಬೆಳಕು ಕಚೇರಿಯೊಳಗೆ ಬಾರದೇ ಇದ್ದರೂ ಸಹ ಲೈಟಿಂಗ್ ವ್ಯವಸ್ಥೆಯನ್ನು ಸುಧಾರಿಸಬಹುದಾಗಿದೆ.


    • ನೀಲಿ ಸಮೃದ್ಧ ಬೆಳಕಿನ ಬಲ್ಬ್ ಗಳು: ನೀಲಿ ಸಮೃದ್ಧ ಬೆಳಕಿನ ಬಲ್ಬ್ ಗಳು ಉದ್ಯೋಗಿಗಳ ಆಯಾಸವನ್ನು ಕಡಿಮೆ ಮಾಡಬಹುದು ಮತ್ತು ಸಂತೋಷ ಮತ್ತು ಕೆಲಸದ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು. ಮೀಟಿಂಗ್ ರೂಮ್ ಗಳಲ್ಲಿ ಈ ರೀತಿಯ ಲೈಟಿಂಗ್ ಅನ್ನು ಬಳಸುವುದು ಒಳ್ಳೆಯದು.

    • ವಾರ್ಮರ್-ಟೋನ್ ಬಲ್ಬ್ ಗಳು: ಮೀಟಿಂಗ್ ಅಥವಾ ಬ್ರೇಕ್ ರೂಮ್ ಗಳಲ್ಲಿ, ಶಾಂತತೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ಈ ಬಲ್ಬ್ ಗಳನ್ನು ಬಳಸಿ.

    • ಮಿಡ್ಲ್-ಟೋನ್ ಬಲ್ಬ್ ಗಳು: ಕಾನ್ಫರೆನ್ಸ್ ಕೋಣೆಗಳಲ್ಲಿ, ಕಾರ್ಮಿಕರನ್ನು ಜಾಗರೂಕರಾಗಿರಿಸುವಂತಹ ಮಿಡ್ಲ್ ಟೋನ್ ಬಲ್ಬ್ ಬಳಸಿ.


    3. ಕಚೇರಿಯನ್ನು ಆರಾಮದಾಯಕವಾಗಿರಿಸಿ


    ಸ್ವಚ್ಛವಾದ ಮತ್ತು ಆರಾಮದಾಯಕವಾದ ಕಚೇರಿ ಸ್ಥಳವು ಸಹೋದ್ಯೋಗಿಗಳು ಮತ್ತು ವ್ಯವಸ್ಥಾಪಕರ ನಡುವಿನ ಸಂಬಂಧಗಳ ಮೇಲೆ ಅದ್ಭುತ ಪರಿಣಾಮಗಳನ್ನು ಬೀರುತ್ತದೆ ಎಂದು ಡಬ್ಲ್ಯುಟಿಎಂ ಡಿಜಿಟಲ್ ನ ಸಹ-ಸಂಸ್ಥಾಪಕ ಮೈಕ್ ಕೆನರೆಲ್ಲಿ ಹೇಳುತ್ತಾರೆ. "ನೀವಿರುವ ಕಟ್ಟಡದಲ್ಲಿ ಸೂರ್ಯನ ಬೆಳಕು ಬಾರದೇ ಇದ್ದರೂ ಸಹ, ನಿಮ್ಮ ಕೆಲಸದ ಸ್ಥಳದಲ್ಲಿ ಒಳ್ಳೆಯ ಲೈಟಿಂಗ್ ವ್ಯವಸ್ಥೆ, ಆರಾಮದಾಯಕವಾದ ಪೀಠೋಪಕರಣಗಳು, ಕೆಲಸದ ಸಲಕರಣೆಗಳು ಮತ್ತು ಕೆಲವು ಹೆಚ್ಚುವರಿ ಸೌಲಭ್ಯಗಳೊಂದಿಗೆ ಆರಾಮದಾಯಕ ವಾತಾವರಣವನ್ನು ಒದಗಿಸಲು ಪ್ರಯತ್ನಿಸಿ" ಎಂದು ಅವರು ಹೇಳುತ್ತಾರೆ.




    ಉದಾಹರಣೆಗೆ, ನಿಮ್ಮ ಉದ್ಯೋಗಿಗಳಿಗೆ ಅವರು ಆರಾಮದಾಯಕವಾಗಿರುವಲ್ಲಿ ಕೆಲಸ ಮಾಡಲು ನಮ್ಯತೆಯನ್ನು ನೀಡಿ. ನೀವು ಆರಾಮದಾಯಕ ಕುರ್ಚಿಗಳನ್ನು ಕಚೇರಿಯಲ್ಲಿ ಹಾಕಿಡಿ ಮತ್ತು ಅವರ ಡೆಸ್ಕ್ ಗಳಲ್ಲಿ ಆರಾಮಾಗಿ ಕುಳಿತುಕೊಳ್ಳಲು ಅಥವಾ ಅಲ್ಲಿಯೇ ಓಡಾಡಲು ಆಯ್ಕೆ ನೀಡಿ.


     4. ಉದ್ಯೋಗಿಗಳೊಂದಿಗೆ ಸಂವಹನವನ್ನು ಸುಧಾರಿಸಿಕೊಳ್ಳಿರಿ


    ನಿಮ್ಮ ಕಂಪನಿಯಲ್ಲಿನ ಉದ್ಯೋಗಿಗಳೊಂದಿಗೆ ನೀವು ಹೇಗೆ ಸಂವಹನ ನಡೆಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ. ತಂಡದ ಸದಸ್ಯರು ಮತ್ತು ಉನ್ನತ ಮ್ಯಾನೇಜ್ಮೆಂಟ್ ತಮ್ಮ ಸಂವಹನ ವಿಧಾನಗಳ ಮೇಲೆ ಗಮನ ಹರಿಸಬೇಕು. "ಉದ್ಯೋಗಿಗಳು ಪ್ರೇರೇಪಿತರಾಗುತ್ತಾರೆ ಮತ್ತು ಅವರಿಗೆ ಸಕಾರಾತ್ಮಕ ಬಲವರ್ಧನೆಯನ್ನು ನೀಡಿದಾಗ ಮತ್ತು ಅವರ ಕೆಲಸವು ವ್ಯವಹಾರದ ಯಶಸ್ಸಿಗೆ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ತೋರಿಸಿದಾಗ ಅವರು ಮೌಲ್ಯಯುತವಾಗಿರುತ್ತಾರೆ" ಎಂದು ಬಸ್ಪಾಟ್ರೋಲ್ ನ ಅಧಿಕಾರಿ ಡೊಮಿನಿಕ್ ಸಿ. ಜೋನ್ಸ್ ಹೇಳುತ್ತಾರೆ.


    ಇದರರ್ಥ ಉದ್ಯೋಗಿಗಳ ಕಾರ್ಯಕ್ಷಮತೆಯ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅವರ ಕೆಲಸವು ಸಂಸ್ಥೆಯ ವಿಶಾಲ ವ್ಯಾಪ್ತಿಗೆ ಹೇಗೆ ಕೊಡುಗೆ ನೀಡುತ್ತದೆ ಎಂಬುದರ ಬಗ್ಗೆ ನಿರ್ದಿಷ್ಟ ಪ್ರತಿಕ್ರಿಯೆಯನ್ನು ಅವರಿಗೆ ನೀಡುವುದು.


    ಉತ್ತಮ ಕೆಲಸದ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ನೀವು ನಿಮ್ಮ ಸಿಬ್ಬಂದಿಯನ್ನು ತೊಡಗಿಸಿಕೊಂಡಾಗ, ಅವರು ಮೌಲ್ಯಯುತವೆಂದು ಭಾವಿಸುತ್ತಾರೆ. ನೀಡಲಾದ ಹೊಸ ಪ್ರಯೋಜನದ ಬಗ್ಗೆ ಅಥವಾ ಹೊಸ ಗ್ರಾಹಕರ ಯೋಜನೆಯ ಬಗ್ಗೆ ಅವರ ಅಭಿಪ್ರಾಯ ಏನು ಎಂದು ಉದ್ಯೋಗಿಗಳನ್ನು ಕೇಳಲು ಹೆದರಬೇಡಿ.


    5. ಉದ್ಯೋಗಿಗಳನ್ನು ಪ್ರೇರಿಪಿಸಲು ಕಂಪನಿಯು ಕಾರ್ಯಕ್ರಮಗಳನ್ನು ಆಯೋಜಿಸುವುದು


    ಕಂಪನಿಯು ಆಗಾಗ್ಗೆ ತಮ್ಮ ಉದ್ಯೋಗಿಗಳನ್ನು ಪ್ರೇರಿಪಿಸಲು ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದು. ಉದ್ಯೋಗಿಗಳು ಹೆಚ್ಚು ಜನರೊಂದಿಗೆ ಬೆರೆಯುತ್ತಾ ಹೋದಂತೆ, ಅವರು ಪರಸ್ಪರ ಮತ್ತು ಅವರ ವ್ಯವಸ್ಥಾಪಕರೊಂದಿಗೆ ಇರುವ ಸಂಬಂಧವನ್ನು ಇನ್ನಷ್ಟು ಬಲಪಡಿಸಿಕೊಳ್ಳಬಹುದು.




    ಕಂಪನಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಉದ್ಯೋಗಿಗಳಿಗೆ ಅವರು ಸಮಯಕ್ಕೆ ಸರಿಯಾಗಿ ನಿಯೋಜನೆಗಳನ್ನು ಪೂರ್ಣಗೊಳಿಸುವುದಕ್ಕಿಂತ ಹೆಚ್ಚಿನ ಮೌಲ್ಯವನ್ನು ನೀಡುವ ಕೆಲಸದ ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಲು ಸಹಾಯ ಮಾಡುತ್ತದೆ. ಇದು ಅವರಿಗೆ ತಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸಲು ಅವಕಾಶಗಳ ಜೊತೆಗೆ ಸೇರಿದ ಒಳ್ಳೆಯ ಭಾವನೆಯನ್ನು ಸಹ ನೀಡುತ್ತದೆ. ಆಗಾಗ್ಗೆ ಆಯೋಜಿಸುವ ಈ ರೀತಿಯ ಕಾರ್ಯಕ್ರಮಗಳು ಉದ್ಯೋಗಿಗಳ ನೈತಿಕ ಸ್ಥೈರ್ಯವು ಉದ್ಯೋಗಿಗಳಿಗೆ ಪ್ರತಿ ದಿನ ಕೆಲಸದಲ್ಲಿ ತಮ್ಮೊಂದಿಗೆ ಕೊಂಡೊಯ್ಯಲು ಹೆಚ್ಚಿನ ಸಕಾರಾತ್ಮಕತೆಯನ್ನು ನೀಡುತ್ತದೆ.


    6. ನಿಮ್ಮ ತಂಡದ ಸದಸ್ಯರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ


    ನೀವು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ, ನಿಮ್ಮ ತಂಡದಲ್ಲಿರುವ ಸದಸ್ಯರ ಕಠಿಣ ಪರಿಶ್ರಮಕ್ಕೆ ಕೃತಜ್ಞತೆಯನ್ನು ತೋರಿಸಲು ಮರೆಯಬೇಡಿ. ಒ.ಸಿ. ಟ್ಯಾನರ್ ಕಂಪನಿಯ ಮಾರ್ಕೆಟಿಂಗ್ ಮತ್ತು ವ್ಯವಹಾರ ಅಭಿವೃದ್ಧಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡೇವಿಡ್ ಸ್ಟರ್ಟ್ ಅವರ ಪ್ರಕಾರ, ಪರಿಣಾಮಕಾರಿ ಉದ್ಯೋಗಿಯನ್ನು ಗುರುತಿಸುವಿಕೆಯು ಒಂದು ಸಂಸ್ಥೆಯನ್ನು ಪರಿವರ್ತಿಸುತ್ತದೆ ಮತ್ತು ಉನ್ನತೀಕರಿಸುತ್ತದೆ.


    "ಇದು ಉದ್ಯೋಗಿಯ ಉತ್ಸಾಹವನ್ನು ಪ್ರಚೋದಿಸುತ್ತದೆ, ನಾವೀನ್ಯತೆಯನ್ನು ಹೆಚ್ಚಿಸುತ್ತದೆ, ವಿಶ್ವಾಸವನ್ನು ಬೆಳೆಸುತ್ತದೆ ಮತ್ತು ತಳಮಟ್ಟದ ಫಲಿತಾಂಶಗಳನ್ನು ನೀಡುತ್ತದೆ" ಎಂದು ಅವರು ಹೇಳಿದರು. "ಒಬ್ಬ ಉದ್ಯೋಗಿಯು ಒಂದು ಯೋಜನೆಯ ಮೇಲೆ ಕೆಲಸ ಮಾಡುತ್ತಾ ತಡರಾತ್ರಿಯವರೆಗೂ ಕಚೇರಿಯಲ್ಲಿದ್ದಾಗ ಅವರಿಗೆ ಒಂದು 'ಥ್ಯಾಂಕ್ಯೂ' ಅಂತ ಹೇಳಿದರೂ ಸಹ ತುಂಬಾ ಪ್ರೇರಣೆ ಸಿಕ್ಕಂತಾಗುತ್ತದೆ” ಎಂದು ಹೇಳಿದರು.

    Published by:Kavya V
    First published: