• Home
 • »
 • News
 • »
 • career
 • »
 • Work from Home ಕೇಳಂಗಿಲ್ಲ, ಆಫೀಸ್​​ಗೆ ಬಂದು ಶಿಫ್ಟ್ ಅಲ್ಲಿ ಕೆಲಸ ಮಾಡಿ: HRಗಳ ಖಡಕ್ ವಾರ್ನಿಂಗ್

Work from Home ಕೇಳಂಗಿಲ್ಲ, ಆಫೀಸ್​​ಗೆ ಬಂದು ಶಿಫ್ಟ್ ಅಲ್ಲಿ ಕೆಲಸ ಮಾಡಿ: HRಗಳ ಖಡಕ್ ವಾರ್ನಿಂಗ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳು ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆತರುವುದರ ಕುರಿತು ಯೋಚಿಸುತ್ತಿದ್ದರೆ,  ಉದ್ಯೋಗಿಗಳ ವರ್ಕ್ ಫ್ರಮ್ ಹೋಮ್ ನೀತಿಯು ಉದ್ಯೋಗ ವಜಾ, ರಾಜೀನಾಮೆಗಳಿಗೆ ಕಾರಣವಾಗುತ್ತಿದೆ.

 • Share this:

  ಕೋವಿಡ್ (Covid) ನಂತರ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು (Employees)  ಕಚೇರಿಗೆ ಮರಳಿ ಕರೆತರುವ ಪ್ರಯತ್ನವಾಗಿ ಹೈಬ್ರೀಡ್ (Hybrid ) ಕೆಲಸದ ವಿಧಾನವನ್ನು ಪ್ರಯೋಗಿಸುತ್ತಿದ್ದು, ಇದರಿಂದ ಉದ್ಯೋಗಿಗಳಿಗೆ ಕಚೇರಿಯಿಂದ ಕೆಲಸ ಮಾಡುವ ವಿಶಿಷ್ಟ ಮೌಲ್ಯವನ್ನು ಅರಿತುಕೊಳ್ಳಲು ನಿಖರವಾದ ಕಾರಣವನ್ನು ಒದಗಿಸುತ್ತದೆ. ಕೋವಿಡ್ ನಿರ್ಬಂಧಗಳಿಂದ ಮುಕ್ತವಾಗಿರುವ ಜನರು ಸ್ವತಂತ್ರವಾಗಿ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ರೆಸ್ಟೋರೆಂಟ್, ಜಿಮ್, ಕನ್ಸರ್ಟ್‌ಗಳಿಗೆ ಮರಳುತ್ತಿರುವ ಜನ ಕಚೇರಿ ವಿಷಯಕ್ಕೆ ಬರುವಾಗ ಮಾತ್ರವೇ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಗೆ ಆದ್ಯತೆ ನೀಡುತ್ತಿದ್ದಾರೆ.


  ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳು ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆತರುವುದರ ಕುರಿತು ಯೋಚಿಸುತ್ತಿದ್ದರೆ,  ಉದ್ಯೋಗಿಗಳ ವರ್ಕ್ ಫ್ರಮ್ ಹೋಮ್ ನೀತಿಯು ಉದ್ಯೋಗ ವಜಾ, ರಾಜೀನಾಮೆಗಳಿಗೆ ಕಾರಣವಾಗುತ್ತಿದೆ. ಕಚೇರಿ ತೆರೆಯಲು ಹಂಬಲಿಸುತ್ತಿದ್ದ ಬೇಡಿಕೆ ಇಡಲು ಹಾಗೂ ಕಾಯುತ್ತಿದ್ದ ಅನೇಕ ವ್ಯಾಪಾರ ನಾಯಕರು ತಮ್ಮ ದಿನಚರಿಗೆ ಮರಳುವಲ್ಲಿ ನಿರಾಶೆಗೊಂಡಿದ್ದಾರೆ.


  These companies have given permanent work from home to their employees stg asp
  ಸಾಂಕೇತಿಕ ಚಿತ್ರ


  ಹೈಬ್ರೀಡ್ ಕೆಲಸದ ನೀತಿ


  ಹೈಬ್ರೀಡ್ ನೀತಿಯನ್ನು ಅನುಸರಿಸುತ್ತಿರುವ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಪ್ರಪಂಚದ ಯಾವ ಭಾಗದಿಂದ ಕೂಡ ಕೆಲಸಮಾಡುವ ಅವಕಾಶವನ್ನೊದಗಿಸಿದೆ. ಉದ್ಯೋಗ ಹಾಗೂ ವೈಯಕ್ತಿಕ ಜೀವನವನ್ನು ಸಮತೋಲನವಾಗಿ ನಡೆಸಿಕೊಂಡು ಹೋಗುವ ಇರಾದೆ ಹೊಂದಿರುವ ಉದ್ಯೋಗಿಗಳಿಗೆ ಈ ವಿಧಾನ ವರದಾಯಕವಾಗಿವೆ. ಅನೇಕ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಮರಳಿ ಕರೆತರುವ ಪ್ರಯತ್ನದಲ್ಲಿ ಹೈಬ್ರೀಡ್ ಕೆಲಸದ ವಿಧವನ್ನು ಪ್ರಯೋಗಿಸುತ್ತಿವೆ.


  ಎರಡು ವರ್ಷಗಳ ಶೂನ್ಯ ಪ್ರಯಾಣ ಸಮಯ ಹಾಗೂ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನವಾಗಿ ನಿರ್ವಹಿಸುವ ಸಾಮರ್ಥ್ಯದೊಂದಿಗೆ ಉದ್ಯೋಗಿಗಳು ಕಚೇರಿಗೆ ಮರಳಲು ಕಾರಣವನ್ನು ಹುಡುಕುತ್ತಿದ್ದಾರೆ. ಮತ್ತೊಂದೆಡೆ, ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಸೇರಿಸುವ ಕಾಳಜಿಯನ್ನು ಪರಿಗಣಿಸಿ ವ್ಯಾಪಾರ ಮುಖಂಡರು ಯೋಚಿಸುತ್ತಿದ್ದಾರೆ. ಪರಿಣಾಮವಾಗಿ, ಉತ್ಪಾದಕತೆಯನ್ನು ಹೆಚ್ಚಿಸುವ ಪ್ರಚೋದನೆಯನ್ನು ಬಿಟ್ಟು, ನಾಯಕರು ಉದ್ದೇಶ-ಚಾಲಿತ ಸಂಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸಿದ್ದಾರೆ.


  The central government has implemented new work from home rules stg asp
  ಸಾಂಕೇತಿಕ ಚಿತ್ರ


  ಉದ್ಯೋಗಿಗಳಿಗೆ ವ್ಯವಹಾರದ ಉದ್ದೇಶವನ್ನು ನೆನಪಿಸಿಕೊಳ್ಳುವಂತೆ ಮಾಡುತ್ತಿರುವ ನಾಯಕರು ಉದ್ಯೋಗಿಗಳ ಕೌಶಲ್ಯಗಳು ಸಂಸ್ಥೆಗೆ ಏಕೆ ಮೌಲ್ಯಯುತವಾಗಿವೆ ಎಂಬುದನ್ನು ಅರಿತುಕೊಳ್ಳುವಲ್ಲಿ ನೆರವು ನೀಡಿದ್ದಾರೆ. ಇದರಿಂದ ಅಂತಹ ಗುರಿಗಳನ್ನು ಸಾಧಿಸಲು, ಕಚೇರಿಯಿಂದ ಕೆಲಸ ಮಾಡುವುದು ತಂಡಗಳಿಗೆ ಕೆಲಸವನ್ನು ಉತ್ತಮವಾಗಿ ನಿರ್ಧರಿಸಲು ಸಹಾಯ ಮಾಡುತ್ತದೆ.


  ಮಾನವ ಸಂಪನ್ಮೂಲ ಅಧಿಕಾರಿಗಳ ಕಾರ್ಯವೇನು?


  ಒಗ್ಗಟ್ಟಾಗಿ ಕೆಲಸ ಮಾಡುವುದರಿಂದ ಕಾರ್ಯಾಚರಣೆಯನ್ನು ತ್ವರಿತಗೊಳಿಸಬಹುದು ಮತ್ತು ಉದ್ಯೋಗಿ ತೊಡಗಿಸಿಕೊಳ್ಳುವಿಕೆ, ಗುರುತಿಸುವಿಕೆ ಮತ್ತು ನೆಟ್‌ವರ್ಕಿಂಗ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


  ಸಂಸ್ಥೆಯ ಉದ್ದೇಶವನ್ನು ಪೂರೈಸಲು ಉದ್ಯೋಗಿಗಳನ್ನು ಸಕ್ರಿಯಗೊಳಿಸಲು ಸೃಜನಶೀಲತೆಯನ್ನು ಉತ್ತೇಜಿಸಲು ಮತ್ತು ಟೀಮ್‌ವರ್ಕ್ ಮನೋಭಾವವನ್ನು ಹೆಚ್ಚಿಸಲು ಜನರ ನಡುವೆ ಸಂಪರ್ಕವನ್ನು ನಿರ್ಮಿಸಲು ಎಚ್‌ಆರ್‌ಗಳು ಆದ್ಯತೆ ನೀಡಬೇಕಾಗುತ್ತದೆ.


  ಇದನ್ನೂ ಓದಿ: Work From Home ಬೇಕು ಅನ್ನೋರು ಇಲ್ಲಿ ಅರ್ಜಿ ಸಲ್ಲಿಸಿ, Flipkart ನೀಡ್ತಿದೆ ಬಂಪರ್ ಉದ್ಯೋಗ


  ಕೋವಿಡ್ ಮೊದಲು ಲ್ಯಾಪ್‌ಟಾಪ್‌ನಲ್ಲಿ ದಿನಗಳೆಯಲು, ಕರೆಗಳನ್ನು ಸ್ವೀಕರಿಸಲು, ಇಮೇಲ್‌ಗಳಿಗೆ ಉತ್ತರಿಸಲು ಹಾಗೂ ಮೇಲಾಧಿಕಾರಿಗಳಿಗೆ ವರದಿ ಮಾಡಲು ಉದ್ಯೋಗಿಗಳು ಕಚೇರಿಗೆ ಬರಲು ಬಯಸುವುದಿಲ್ಲ ಎಂಬುದನ್ನು ಮಾನವ ಸಂಪನ್ಮೂಲ ಅಧಿಕಾರಿಗಳು ಮನವರಿಕೆ ಮಾಡಿಕೊಳ್ಳಬೇಕು ಎಂದು ತಜ್ಞರು ತಿಳಿಸುತ್ತಾರೆ.


  ಈಗ ಕಾಲ ಬದಲಾಗಿದೆ ಅದಕ್ಕಾಗಿ ಮಾನವ ಸಂಪನ್ಮೂಲ ಅಧಿಕಾರಿಗಳು ಕಚೇರಿಯಲ್ಲಿ ಉದ್ಯೋಗಿಗಳು ಬೆರೆಯುವಂತೆ ಮಾಡಬೇಕು ಅಂತೆಯೇ ಅವರನ್ನು ಪ್ರೋತ್ಸಾಹಿಸಬೇಕು, ಇದರಿಂದ ತಂಡದ ನಡುವೆ ವೃತ್ತಿಪರ ಬಾಂಧವ್ಯ ಒಡಮೂಡುತ್ತದೆ ಹಾಗೂ ಜೊತೆಯಾಗಿ ಕೆಲಸ ಮಾಡುವುದರಿಂದ ಕೆಲಸದ ಗಡುವನ್ನು ಸಾಧಿಸಬಹುದಾಗಿದೆ.
  ಹೊಸ ಯುಗದ ತಂಡದ ನಾಯಕರು ಹೆಚ್ಚು ಗಮನಾರ್ಹವಾದ ಕೆಲಸವನ್ನು ಪೂರೈಸಲು ತಂಡದ ಮೀಟಿಂಗ್ ರಹಿತ ಸಮಯವನ್ನು ವಿನಿಯೋಗಿಸಿಕೊಳ್ಳುತ್ತಿದ್ದು ಇದರಿಂದ ಉದ್ಯೋಗಿಗಳಿಗೆ ತಮ್ಮ ಕ್ಯಾಲೆಂಡರ್‌ಗಳನ್ನು ನಿರ್ಬಂಧಿಸುವ ಮೂಲಕ ಕೆಲಸದ ಮೇಲೆ ಕೇಂದ್ರೀಕರಿಸಲು ಸಹಾಯವಾಗುತ್ತದೆ.


  ಹೊಸ ವಿಧಾನದ ಉದ್ಯೋಗದ ಭವಿಷ್ಯ


  ಉದ್ಯೋಗಿಗಳ ಅಗತ್ಯಗಳನ್ನು ಪೂರೈಸುವುದರಿಂದ ಹಿಡಿದು ಉದ್ಯೋಗದಾತ-ಉದ್ಯೋಗಿಗಳ ಒಪ್ಪಂದದ ಷರತ್ತುಗಳನ್ನು ಪೂರೈಸುವವರೆಗೆ, HRಗಳು ನೇಮಕಾತಿ ಒಪ್ಪಂದಗಳಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ಪರಿಚಯಿಸುತ್ತಿವೆ. ಅದೂ ಅಲ್ಲದೆ ಉದ್ಯೋಗಿಗಳನ್ನು ಈ ಹಿಂದಿಗಿಂತಲೂ ಹೆಚ್ಚು ಪ್ರೇರೇಪಿಸುವ, ತೊಡಗಿಸಿಕೊಳ್ಳುವ ಹಾಗೂ ಅವರ ಅಗತ್ಯಗಳನ್ನು ಪೂರೈಸುವತ್ತ ಗಮನಹರಿಸುತ್ತಿದ್ದಾರೆ.


  ಇದಕ್ಕೆ ವಿರುದ್ಧವಾಗಿ ವ್ಯವಹಾರ ಲೀಡರ್‌ಗಳು ಉತ್ತಮ ಫಲಿತಾಂಶಗಳನ್ನು ಸಾಧಿಸಲು ಮತ್ತು ವೃತ್ತಿಜೀವನದ ಬೆಳವಣಿಗೆಗೆ ಸಹಾಯ ಮಾಡಲು ಉದ್ಯೋಗಿಗಳ ಸಾಮರ್ಥ್ಯಗಳಲ್ಲಿ ತಮ್ಮ ನಂಬಿಕೆಯನ್ನು ಇರಿಸುತ್ತಿದ್ದಾರೆ.

  Published by:Kavya V
  First published: