Dream Job: ನಿಮ್ಮ ಕನಸಿನ ಉದ್ಯೋಗ ಹುಡುಕುವಾಗ ಈ ವಿಷಯಗಳನ್ನು ಮಾತ್ರ ಎಂದಿಗೂ ಮರೆಯಬೇಡಿ

ನೀವು ನಿಮ್ಮ ಕನಸಿನ ಉದ್ಯೋಗವನ್ನು ಹುಡುಕುತ್ತಿದ್ದರೆ ಮತ್ತು ನಿಮ್ಮ ವೃತ್ತಿಯನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಮೂರು ಟಿಪ್ಸ್ ಗಳನ್ನು ನೀವು ಒಮ್ಮೆ ನೋಡಿಕೊಳ್ಳಿರಿ. ಇದು ನಿಮಗೆ ಸರಿ ಹೊಂದುವ ಕೆಲಸವನ್ನು ಹುಡುಕಲು ಸಹಾಯ ಮಾಡುತ್ತದೆ ಎಂದು ಹೈಟ್ಮನ್ ಹೇಳುತ್ತಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಕೆಲವೊಬ್ಬರು ತಾವು ಅಂದುಕೊಂಡ ಕ್ಷೇತ್ರದಲ್ಲಿ ಉದ್ಯೋಗವನ್ನು (Job) ಆರಿಸಿಕೊಂಡು ಖುಷಿಯಾಗಿ ಕೆಲಸ ಮಾಡಿಕೊಂಡಿದ್ದರೆ, ಇನ್ನೂ ಕೆಲವರು ಅದೇನೋ ಓದಿಕೊಂಡು, ಹೊಟ್ಟೆಪಾಡಿಗಾಗಿ ಓದಿದ್ದಕ್ಕೂ ಮತ್ತು ಮಾಡುತ್ತಿರುವ ಕೆಲಸಕ್ಕೂ ಯಾವುದೇ ರೀತಿಯ ಸಂಬಂಧ ಇರದೇ ತುಂಬಾನೇ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಬದುಕು (Life) ಸಾಗಿಸುತ್ತಾ ಇರುತ್ತಾರೆ. ಜೀವನದಲ್ಲಿ ನಾನು ಏನು ಮಾಡಲು ಬಯಸುತ್ತೇನೆ? ಏನು ಮಾಡಿದರೆ ನನಗೆ ಖುಷಿ ಆಗುತ್ತದೆ ಅಂತ ಅನೇಕರಿಗೆ ಗೊತ್ತೇ ಆಗುವುದಿಲ್ಲ. ನಮ್ಮಲ್ಲಿ ಹೆಚ್ಚಿನವರು ಗಗನಯಾತ್ರಿ, ವೈದ್ಯ, ಎಂಜಿನಿಯರ್ ಅಥವಾ ವೃತ್ತಿಪರ ಕ್ರೀಡಾಪಟುಗಳಾಗಿ ರೋಮಾಂಚಕ ವೃತ್ತಿಜೀವನದ (Career) ಕನಸು ಕಾಣುತ್ತಾರೆ. ಆದರೆ ನಮಗೆ ವಯಸ್ಸಾದಂತೆ, ಆ ಕನಸುಗಳು ಮತ್ತು ಉದ್ಯೋಗದಲ್ಲಿ ನಾವು ಹುಡುಕುವ ಗುಣಗಳು (Qualities) ಬದಲಾಗಬಹುದು.

  ನಮಗೆ ಸರಿ ಹೊಂದುವ ಕೆಲಸ ಹುಡುಕುವುದು ಹೇಗೆ
  ನೀವು ನಿಮ್ಮ ಬಾಲ್ಯದ ಕಲ್ಪನೆಗಳನ್ನು ಜೀವಿಸದಿದ್ದರೂ ಸಹ, ನಮ್ಮ ಜೀವನದಲ್ಲಿ ಉದ್ದೇಶವನ್ನು ಕಂಡುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ನಮ್ಮ ಆಸಕ್ತಿಗಳಿಗೆ ಮತ್ತು ನಮಗೆ ಖುಷಿ ನೀಡುವ ಕೆಲಸವನ್ನು ಹುಡುಕುವುದು ತುಂಬಾ ಮುಖ್ಯವಾಗುತ್ತದೆ.

  "ನಿಮ್ಮ ವೃತ್ತಿಜೀವನದ ವಿಷಯಕ್ಕೆ ಬಂದಾಗ, ನೀವು ಒಂದೇ ಕಂಪನಿಯಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ. ನೀವು ನಿರಂತರವಾಗಿ ಕಲಿಯಲು, ಯೋಚಿಸಲು ಮತ್ತು ಬೆಳೆಯಲು ಬಯಸುತ್ತೀರಿ" ಎಂದು ಲಿಂಕ್ಡ್ಇನ್ ವೃತ್ತಿ ತಜ್ಞ ಬ್ಲೇರ್ ಹೈಟ್ಮನ್ ಹೇಳುತ್ತಾರೆ. "ನಿಮಗೆ ನಿಜವಾಗಿಯೂ ಸಂತೋಷವನ್ನುಂಟು ಮಾಡುವ ಕೆಲಸವನ್ನು ಹುಡುಕಲು ಇದು ಅತ್ಯುತ್ತಮ ಮಾರ್ಗವಾಗಿದೆ" ಎಂದು ಹೇಳುತ್ತಾರೆ.

  ಇದನ್ನೂ ಓದಿ:  Wellness Centers: ಇದೇ ನೋಡಿ ಭಾರತದ 9 ಅತ್ಯುತ್ತಮ ವೆಲ್ನೆಸ್ ಕೇಂದ್ರಗಳು

  “ನೀವು ನಿಮ್ಮ ಕನಸಿನ ಉದ್ಯೋಗವನ್ನು ಹುಡುಕುತ್ತಿದ್ದರೆ ಮತ್ತು ನಿಮ್ಮ ವೃತ್ತಿಯನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಮೂರು ಟಿಪ್ಸ್ ಗಳನ್ನು ನೀವು ಒಮ್ಮೆ ನೋಡಿಕೊಳ್ಳಿರಿ. ಇದು ನಿಮಗೆ ಸರಿ ಹೊಂದುವ ಕೆಲಸವನ್ನು ಹುಡುಕಲು ಸಹಾಯ ಮಾಡುತ್ತದೆ” ಎಂದು ಹೈಟ್ಮನ್ ಹೇಳುತ್ತಾರೆ.

  1. ಇಷ್ಟಪಡುವ ವೃತ್ತಿಜೀವನದ ಒಂದು ಪಟ್ಟಿ ತಯಾರು ಮಾಡಿಕೊಳ್ಳಿ
  ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಮಾಡಲು ಅಥವಾ ಸಾಧಿಸಲು ಬಯಸುವ ಎಲ್ಲದರ ಪಟ್ಟಿಯನ್ನು ಮಾಡುವ ಮೂಲಕ ಪ್ರಾರಂಭಿಸಿ. ಉದಾಹರಣೆಗೆ: ನಾನು ಬೇರೆ ದೇಶದಲ್ಲಿ ಕೆಲಸ ಮಾಡಲು ಬಯಸುತ್ತೇನೆ ಅಥವಾ ನಾನು ತುಂಬಾ ಹಣ ಗಳಿಸಲು ಇಷ್ಟ ಪಡುತ್ತೇನೆ. ನಿಮ್ಮ ಗುರಿಗಳನ್ನು ಬರೆಯುವುದು "ಅತ್ಯಂತ ಪ್ರೇರಣೆದಾಯಕ" ಎಂದು ಹೀಟ್ಮನ್ ಹೇಳುತ್ತಾರೆ. ಈ ಪಟ್ಟಿಯಲ್ಲಿನ ವಿಷಯಗಳನ್ನು ಮಾತ್ರ ಪರಿಶೀಲಿಸುವ ಉದ್ಯೋಗಗಳನ್ನು ನೀವು ಹುಡುಕುವುದಕ್ಕೆ ಸಹಾಯ ಮಾಡುತ್ತದೆ.

  ಇದು ನಿಮ್ಮ ವೃತ್ತಿಪರ ಜೀವನದಲ್ಲಿ ನಿಖರವಾಗಿ ಎಲ್ಲಿದ್ದೀರಿ ಎಂದು ಮೌಲ್ಯಮಾಪನ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ನಿಮ್ಮ ಕೆಲಸದಿಂದ ಖುಷಿಯಾಗಿದ್ದರೆ, ನೀವು ನಿಮ್ಮ ಕನಸಿನ ಉದ್ಯೋಗ ಮಾಡುತ್ತಿದ್ದೀರಿ ಅಂತ ಅರ್ಥ.

  2. ನಿಮ್ಮ ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ತಿಳಿದುಕೊಳ್ಳಿ
  ಸರಿಯಾದ ಕೆಲಸವು ನಿಮ್ಮ ಆಸಕ್ತಿಗಳು ಮತ್ತು ನಿಮ್ಮ ಕೌಶಲ್ಯಗಳನ್ನು ಪೂರೈಸಬೇಕು. ನಿಮ್ಮ ಕನಸಿನ ಉದ್ಯೋಗದಲ್ಲಿ ನೀವು ಹುಡುಕುತ್ತಿರುವ ಗುಣಲಕ್ಷಣಗಳನ್ನು ನೀವು ಗುರುತಿಸಿದ ನಂತರ, ನಿಮ್ಮ ಕೌಶಲ್ಯಗಳು ಮತ್ತು ಸಾಮರ್ಥ್ಯಗಳ ಪ್ರತ್ಯೇಕ ಪಟ್ಟಿಯನ್ನು ಮಾಡಲು ಸಲಹೆ ನೀಡುತ್ತಾರೆ ತಜ್ಞರು. ನಿಮ್ಮ ಕೌಶಲ್ಯಗಳು ಅಥವಾ ಸಾಮರ್ಥ್ಯಗಳು ನಿಖರವಾಗಿ ಏನು ಎಂದು ನಿಮಗೆ ಖಚಿತವಾಗಿಲ್ಲದಿದ್ದರೆ, ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ನಿಮಗೆ ಪಾಠ ಹೇಳಿಕೊಟ್ಟ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಿರಿ.

  ಇದನ್ನೂ ಓದಿ: Travel Tips: ಟ್ರಿಪ್ ಹೋಗುವಾಗ ಈ 5 ತಪ್ಪುಗಳನ್ನು ಮಾಡಿದ್ರೆ ಎಂಜಾಯ್ ಮಾಡೋಕೆ ಆಗಲ್ವಂತೆ

  ನಿಮ್ಮಲ್ಲಿರುವ ಕೌಶಲ್ಯಗಳು ಯಾವುವು ಎಂಬುದರ ಬಗ್ಗೆ ನಿಮಗೆ ಸ್ಪಷ್ಟವಾದ ಚಿತ್ರಣವಿರಬೇಕು. ನೀವು ನಿಮ್ಮ ಕನಸಿನ ಉದ್ಯೋಗವನ್ನು ಕಂಡುಕೊಂಡಾಗ, ನೀವು ಅರ್ಹತೆ ಪಡೆಯಲು ಮತ್ತು ಹೆಚ್ಚು ಸ್ಪರ್ಧಾತ್ಮಕ ಅಭ್ಯರ್ಥಿಯಾಗಲು ಯಾವ ಕೌಶಲ್ಯಗಳು ಬೇಕು ಎಂದು ನಿಮಗೆ ನಿಖರವಾಗಿ ತಿಳಿದಿರಬೇಕು.

  3. ನೀವು ಇಷ್ಟಪಡುವ ವೃತ್ತಿಯಲ್ಲಿ ಯಶಸ್ಸು ಕಂಡವರನ್ನು ಸಂಪರ್ಕಿಸಿ
  ನಿಮ್ಮ ಗುರಿಗಳು ಮತ್ತು ಸಾಮರ್ಥ್ಯಗಳ ಬಗ್ಗೆ ನೀವು ಸ್ಪಷ್ಟವಾದ ಚಿತ್ರಣವನ್ನು ಪಡೆದ ನಂತರ, ನೀವು ಆಸಕ್ತಿ ಹೊಂದಿರುವ ಉದ್ಯಮಗಳ ಬಗ್ಗೆ ಮತ್ತು ಅದರಲ್ಲಿ ಯಶಸ್ಸು ಕಂಡಂತಹ ಜನರನ್ನು ಸಂಪರ್ಕಿಸಿ. ನೀವು ಇಷ್ಟಪಡುವ ವೃತ್ತಿಯಲ್ಲಿ ಯಾರು ಯಶಸ್ಸು ಕಂಡವರು ಇರುತ್ತಾರೆ ಅಂತ ಲಿಂಕ್ಡ್ಇನ್ ನಲ್ಲಿ ಅವರೊಂದಿಗೆ ಪರಿಚಯ ಮಾಡಿಕೊಳ್ಳಿರಿ ಮತ್ತು ಅವರ ಬಳಿ ಸ್ವಲ್ಪ ಸಮಯ ಕೇಳಿ. ನಿಮ್ಮ ಸಂಭಾಷಣೆಯ ಸಮಯದಲ್ಲಿ, ಕೆಲಸವು ನಿಜವಾಗಿಯೂ ಹೇಗಿದೆ ಎಂದು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳಿರಿ.
  Published by:Ashwini Prabhu
  First published: