• Home
  • »
  • News
  • »
  • career
  • »
  • Mom Friendly Jobs: ನೀವು ತಾಯಿಯಾಗಿದ್ದರೆ, ಕೆಲಸಕ್ಕೆ ಸೇರುವ ಕಂಪನಿಯಲ್ಲಿ ಈ 5 ವಿಷಯಗಳನ್ನು ಗಮನಿಸಿ

Mom Friendly Jobs: ನೀವು ತಾಯಿಯಾಗಿದ್ದರೆ, ಕೆಲಸಕ್ಕೆ ಸೇರುವ ಕಂಪನಿಯಲ್ಲಿ ಈ 5 ವಿಷಯಗಳನ್ನು ಗಮನಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mom Friendly Company: ಚಿಕ್ಕ ಮಕ್ಕಳನ್ನು ಹೊಂದಿರುವ ಮಹಿಳಾ ಉದ್ಯೋಗಿಗಳಿಗೆ ದೊಡ್ಡ ಸಂಬಳಕ್ಕಿಂತ ಮಗುವಿನ ಲಾಲನೆ-ಪಾಲನೆಗೆ ಅಡ್ಡಿಯಾಗದಂತ ಕೆಲಸ ಬೇಕಿರುತ್ತದೆ. ಈ ರೀತಿ ಬಯಸುವ ಬಗ್ಗೆ ಯಾವ ಪಾಪ ಪ್ರಜ್ಞೆಯೂ, ಹಿಂಜರಿಕೆಯೂ ಬೇಡ.

  • Share this:

ನೀವೊಬ್ಬರು ಮಹಿಳಾ ಉದ್ಯೋಗಿಯಾಗಿದ್ದು (Woman Employee), ನಿಮಗೆ ಮಕ್ಕಳಿದ್ದಾರೆಯೇ? ಅಥವಾ ಈಗಷ್ಟೇ ಹೆರಿಗೆ ರಜೆ (Maternity Leave) ಮುಗಿಸಿ ಕೆಲಸಕ್ಕೆ ಮರುಳುತ್ತಿದ್ದೀರಾ? ಹಾಗಾದರೆ ನೀವು ಈ 5 ವಿಷಯಗಳತ್ತ ಗಮನ ಹರಿಸಬೇಕು. ಏಕೆಂದರೆ ಚಿಕ್ಕ ಮಕ್ಕಳನ್ನು ಹೊಂದಿರುವ ಮಹಿಳಾ ಉದ್ಯೋಗಿಗಳಿಗೆ ದೊಡ್ಡ ಸಂಬಳಕ್ಕಿಂತ ಮಗುವಿನ ಲಾಲನೆ-ಪಾಲನೆಗೆ ಅಡ್ಡಿಯಾಗದಂತ ಕೆಲಸ (Mom Friendly jobs) ಬೇಕಿರುತ್ತದೆ. ಈ ರೀತಿ ಬಯಸುವ ಬಗ್ಗೆ ಯಾವ ಪಾಪ ಪ್ರಜ್ಞೆಯೂ, ಹಿಂಜರಿಕೆಯೂ ಬೇಡ. ಮಕ್ಕಳ ಆರೈಕೆ ಜೊತೆಗೆ ಕೆಲಸ ಮಾಡಬೇಕು ಎಂಬ ನಿಮ್ಮ ನಿರ್ಧಾರ ಜವಾಬ್ದಾರಿಯುತ ಹಾಗೂ ಮೆಚ್ಚುವಂತದ್ದು ಎಂಬುವುದನ್ನು ನೆನಪಿನಲ್ಲಿಡಿ. ಮಹಿಳಾ ಉದ್ಯೋಗಿಸ್ನೇಹಿ ಅಂಶಗಳು ನೀವು ಸೇರುವ ಕಂಪನಿಯಲ್ಲಿ ಇವೆಯೇ ಎಂದು ತಿಳಿದುಕೊಳ್ಳಿ. ಅದಕ್ಕಾಗಿ ತಾಯಿಯಂದಿರು ಕಂಪನಿಯಲ್ಲಿ ಈ 5 ಅಂಶಗಳನ್ನು ನಿರೀಕ್ಷಿಸುವುದು ಸೂಕ್ತವೆನಿಸುತ್ತೆ.


1) ಫ್ಲೆಕ್ಸಿಬಲ್​ ವರ್ಕ್​ ಪಾಲಿಸಿ (flexible work policies) : ನೀವು ಸೇರುತ್ತಿರುವ ಇಲ್ಲವೇ ಈಗಾಗಲೇ ನೀವು ಉದ್ಯೋಗದಲ್ಲಿರುವ ಕಂಪನಿಯಲ್ಲಿ ಕೆಲಸದ ಪಾಳಿಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದೇ ಎಂದು ವಿಚಾರಿಸಿ. ವಾರದ ರಜೆಯನ್ನು ಬದಲಾಯಿಸಿಕೊಳ್ಳುವ ಅವಕಾಶ, ಅಗತ್ಯವಿದ್ದಾಗ ವರ್ಕ್​​ ಫ್ರಮ್​​ ಹೋಮ್​​ ತೆಗೆದುಕೊಳ್ಳಬಹುದಾ, ಮನೆಯಿಂದಲೇ ಕೆಲಸವನ್ನು ನಿರ್ವಹಸಲು ಬೇಕಾದ ಟೆಕ್ನಾಲಜಿ ಇದೆಯೇ ಎಂದು ತಿಳಿದುಕೊಳ್ಳಿ. ಇದರಿಂದ ತಾಯಂದಿರು ಮಗುವಿನ ಆರೈಕೆಯ ಜೊತೆಗೆ ಕೆಲಸವನ್ನು ಮಾಡಲು ನೆರವಾಗುತ್ತದೆ.
2) ಚೈಲ್ಡ್​​ ಕೇರ್: ತಾಯಂದಿರು ಆಫೀಸ್​ನಲ್ಲಿ ಚಿಂತೆಯಿಲ್ಲದೇ ಕೆಲಸ ಮಾಡಬೇಕೆಂದರೆ ಅವರ ಮಕ್ಕಳನ್ನು ಸರಿಯಾಗಿ ಯಾರಾದರೂ ನೋಡಿಕೊಳ್ಳಬೇಕು. ಮನೆಯ ಸದಸ್ಯರು ಇದಕ್ಕಾಗಿ ಲಭ್ಯವಿಲ್ಲದಾಗ ಮಕ್ಕಳನ್ನು ನೋಡಿಕೊಳ್ಳುವ ಚೈಲ್ಡ್​ ಕೇರ್​ ಸೆಂಟರ್​ಗಳ ಮೊರೆ ಹೋಗಬೇಕಾಗುತ್ತದೆ. ನಿಮ್ಮ ಆಫೀಸ್​ಗೆ ಹತ್ತಿರದಲ್ಲೇ ಇಂತಹ ಕೇರ್​ ಸೆಂಟರ್​ಗಳಿವೆಯೇ ಎಂದು ವಿಚಾರಿಸಿ. ಜೊತೆಗೆ ಬ್ರೇಕ್​ ಸಮಯದಲ್ಲಿ, ಅಗತ್ಯ ಬಿದ್ದಾಗ ಕೇರ್​ ಸೆಂಟರ್​ಗೆ ಹೋಗಿ ಮಗುವನ್ನು ನೋಡಿಕೊಂಡು ಬರಬಹುದಾ ಎಂದು ಟೀಂ ಲೀಡರ್ ಇಲ್ಲವೇ ಎಚ್​ ಆರ್​ ಬಳಿ ಚರ್ಚಿಸಿ.


3) ಲಿಂಗ ಸಮಾನತೆ ಇರಬೇಕು: ಹೊಸ ತಾಯಂದಿರಿಗೆ ಮಾತ್ರ ಹೆರಿಗೆ ರಜೆ ಅಲ್ಲ, ಹೊಸ ತಂದೆಯಂದಿರಿಗೂ ಪೋಷಕ ರಜೆಯನ್ನು ಕಂಪನಿ ನೀಡಬೇಕು. ಆಗ ತಾಯಿ ಮಾತ್ರವಲ್ಲ, ತಂದೆಯೂ ಮಗುವಿನ ಆರೈಕೆಯ ಪಾಲುದಾರ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇನ್ನು ಮಗುವಿಗಾಗಿ ಮಹಿಳಾ ಉದ್ಯೋಗಿ ರಜೆ ತೆಗೆದುಕೊಂಡರೆ ಅಥವಾ ಕಚೇರಿಯಿಂದ ಬೇಗ ತೆರಳಿದರೆ ಅವರನ್ನು ಬೇರೆ ದೃಷ್ಟಿಯಲ್ಲಿ ನೋಡುವ ಕಣ್ಣುಗಳಿರಬಾರದು. ಅದಕ್ಕಾಗಿ ಕಿರಿಕಿರಿ ಮಾಡುವ ಬಾಸ್​/ಮ್ಯಾನೇಜರ್ ಇರಬಾರದು. ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳುವ ಸಹೋದ್ಯೋಗಿಗಳು​ ಇರಬೇಕು.


What should mothers do to prevent their children from getting infected in winter


4) ವೃತ್ತಿಪರ ಮಾರ್ಗದರ್ಶನ ಬೇಕು: ವೃತ್ತಿಪರ ಮಾರ್ಗದರ್ಶನವು ತಮ್ಮ ವೃತ್ತಿಜೀವನದಲ್ಲಿ ಪ್ರತಿ ಉದ್ಯೋಗಿಗೆ ಸಹಾಯ ಮಾಡುತ್ತದೆ, ಇದು ಹೊಸ ಅಮ್ಮಂದಿರಿಗೆ ವಿಶೇಷವಾಗಿ ಸಹಾಯಕವಾಗಿದೆ. ಈಗಷ್ಟೇ ಕೆಲಸಕ್ಕೆ ಸೇರಿಕೊಂಡಿರುವ ತಾಯಿಯಾಗಿ, ನಿಮಗೆ ಮುಂದೇನು ಅಥವಾ ನೀವು ಈಗ ಕಂಪನಿಗೆ ಹೇಗೆ ಹೊಂದಿಕೊಳ್ಳುತ್ತೀರಿ ಎಂಬುದರ ಕುರಿತು ನಿಮಗೆ ಖಚಿತತೆ ಇಲ್ಲದಿರಬಹುದು. ಸುತ್ತಮುತ್ತಲಿನ ವಿವಿಧ ಅವಕಾಶಗಳ ಬಗ್ಗೆಯೂ ನಿಮಗೆ ತಿಳಿದಿಲ್ಲದಿರಬಹುದು. ಸಂಸ್ಥೆಯಲ್ಲಿ ಹಿರಿಯರ ಮಾರ್ಗದರ್ಶನವು ಇಲ್ಲಿ ಸಹಾಯ ಮಾಡುತ್ತದೆ. ನಿಮ್ಮನ್ನು ಬೆಂಬಲಿಸುವ  ಬಾಸ್ ಇಲ್ಲದಿದ್ದರೆ ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸಿ.


These companies have given permanent work from home to their employees stg asp
ಸಾಂಕೇತಿಕ ಚಿತ್ರ


5) ಪೋಷಕರ ರಜೆ ನೀತಿಗಳು: ಉದ್ಯೋಗದಲ್ಲಿರುವವರು ಮಗುವನ್ನು ಮಾಡಿಕೊಳ್ಳಲು ಮುಂದಾದಾಗ ಪೋಷಕರ ರಜೆ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅಂತಹ ನೀತಿ ಇಲ್ಲದೆ, ಕುಟುಂಬವನ್ನು ಪ್ರಾರಂಭಿಸುವ ಅಥವಾ ಕೆಲಸ ಮಾಡುವುದನ್ನು ಮುಂದುವರಿಸುವ ನಡುವಿನ ಆಯ್ಕೆಯು ಅನಗತ್ಯವಾಗಿ ಕಷ್ಟಕರವಾಗಬಹುದು. ನಿಮ್ಮ ಕಂಪನಿಯ ಮಾತೃತ್ವ ಮತ್ತು ಪಿತೃತ್ವ ನೀತಿಯ ವಿವರಗಳನ್ನು ಅರ್ಥಮಾಡಿಕೊಳ್ಳಲು HR ತಂಡವನ್ನು ಸಂಪರ್ಕಿಸಿ. ಇದರಿಂದ ಸ್ಪಷ್ಟತೆಯೊಂದಿಗೆ ಫ್ಯಾಮಿಲಿ ಪ್ಲ್ಯಾನಿಂಗ್​ ಮಾಡಬಹುದು. ಜೊತೆಗೆ ಚೇತರಿಕೆಯ ಅವಧಿಯಂತಹ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳಬಹುದು.

Published by:Kavya V
First published: