• Home
  • »
  • News
  • »
  • career
  • »
  • Notice Period: ನೋಟಿಸ್ ಪಿರಿಯಡ್ ಈಗ 3 ತಿಂಗಳಂತೆ! ಶುರುವಾಗಿದೆ ಉದ್ಯೋಗಿಗಳ ಚರ್ಚೆ

Notice Period: ನೋಟಿಸ್ ಪಿರಿಯಡ್ ಈಗ 3 ತಿಂಗಳಂತೆ! ಶುರುವಾಗಿದೆ ಉದ್ಯೋಗಿಗಳ ಚರ್ಚೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Notice Period: ಕಂಪನಿಯಿಂದ ಹೊರ ಹೋಗುವ ಮತ್ತು ಕಂಪನಿಗೆ ಹೊಸದಾಗಿ ಬಂದು ಸೇರಿಕೊಳ್ಳುವ ಉದ್ಯೋಗಿಗಳ ಬಾಯಲ್ಲಿ ನಾವು ಈ ‘ನೋಟಿಸ್ ಪಿರಿಯಡ್’ ಬಗ್ಗೆ ತುಂಬಾನೇ ಕೇಳುತ್ತಿರುತ್ತೇವೆ.

  • Share this:

ಮೊದಲೆಲ್ಲಾ ಈ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳ ವಿಷಯದಲ್ಲಿ ತಮ್ಮ ಕಂಪನಿಯನ್ನು ತೊರೆದು ಬೇರೆ ಕಂಪನಿಗಳಿಗೆ ಹೋಗುವ ಉದ್ಯೋಗಿಗಳಿಗೆ (Employee) ‘ನೋಟಿಸ್ ಪಿರಿಯಡ್’ (Notice Period) ಎಂದರೆ ಕಂಪನಿಯನ್ನು ಬಿಟ್ಟು ಹೋಗುವ ಅವಧಿ ಬರೀ 30 ದಿನಗಳು ಮಾತ್ರವೇ ಇತ್ತು. ಆದರೆ, ವರ್ಷಗಳು ಕಳೆದಂತೆ ಆ 30 ದಿನಗಳ ನೋಟಿಸ್ ಪಿರಿಯಡ್ ಹಾಗೆ ವಿಸ್ತರಣೆ ಆಗಿ ಇಂದು ಕೆಲವು ಕಂಪನಿಗಳು ಈ ಅವಧಿಯನ್ನು 3 ತಿಂಗಳು (Month) ಎಂದರೆ 90 ದಿನಗಳವರೆಗೆ ವಿಸ್ತರಿಸಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಂತೂ ಕೆಲವು ಕಂಪನಿಗಳು (Companies) 60 ದಿನಗಳು ಅಥವಾ 90 ದಿನಗಳು ‘ನೋಟಿಸ್ ಪಿರಿಯಡ್’ ಅಂತಾನೆ ಹೇಳುತ್ತವೆ.


ಆದರೆ ವಿಪರ್ಯಾಸ ಎಂದರೆ ಇದೇ ಕಂಪನಿಗಳು ಬೇರೆ ಉದ್ಯೋಗಿಗಳಿಗೆ ತಮ್ಮ ಕಂಪನಿ ಕೆಲಸಕ್ಕೆ ಸೇರಿಸಿಕೊಳ್ಳಲು ಬೇಗನೆ ಎಂದರೆ 2 ರಿಂದ 3 ವಾರಗಳಲ್ಲಿಯೇ ಬಂದು ಸೇರಿಕೊಳ್ಳಿ ಅಂತ ಹೇಳುವುದನ್ನು ಸಹ ನಾವು ನೋಡಿರುತ್ತೇವೆ. ಈಗಂತೂ ಕಂಪನಿಯಿಂದ ಹೊರ ಹೋಗುವ ಮತ್ತು ಕಂಪನಿಗೆ ಹೊಸದಾಗಿ ಬಂದು ಸೇರಿಕೊಳ್ಳುವ ಉದ್ಯೋಗಿಗಳ ಬಾಯಲ್ಲಿ ನಾವು ಈ ‘ನೋಟಿಸ್ ಪಿರಿಯಡ್’ ಬಗ್ಗೆ ತುಂಬಾನೇ ಕೇಳುತ್ತಿರುತ್ತೇವೆ ಅಂತ ಹೇಳಬಹುದು.


ಯಶ್ ಟಕ್ಕರ್ ಕೇಳಿದ್ರು ನಿಮ್ ಕಂಪನಿ ನೋಟಿಸ್ ಪಿರಿಯಡ್ ಏನು ಅಂತ!


ಲಿಂಕ್ಡ್ಇನ್ ಬಳಕೆದಾರರಾದ ಯಶ್ ಟಕ್ಕರ್ ಅವರು ತಾವು ಕೆಲಸ ಮಾಡುತ್ತಿರುವ ಕಂಪನಿಗಳಲ್ಲಿನ ನೋಟಿಸ್ ಪಿರಿಯಡ್ ಅವಧಿ ಏನು ಎಂದು ಜನರನ್ನು ಕೇಳಿದ್ದಾರೆ. ಅವರು ತಮ್ಮ ಹಿಂದಿನ ಪೋಸ್ಟ್ ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು ಅದರಲ್ಲಿ ಈ ರೀತಿ ಬರೆದಿದೆ, "90 ದಿನಗಳ ನೋಟಿಸ್ ಅವಧಿಯನ್ನು ಹೊಂದಿರುವ ಕಂಪನಿಯು ಒಂದು ಅಥವಾ ಎರಡು ವಾರಗಳಲ್ಲಿ ತಕ್ಷಣವೇ ತಮ್ಮ ಕಂಪನಿಗೆ ಸೇರಿಕೊಳ್ಳಬಹುದಾದ ಅಭ್ಯರ್ಥಿಗಳನ್ನು ಹುಡುಕುತ್ತಿದೆ".


ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ತಕ್ಷಣವೇ ವೈರಲ್ ಆಯಿತು ಮತ್ತು ನೆಟ್ಟಿಗರಿಂದ ಟನ್ ಗಟ್ಟಲೆ ಪ್ರತಿಕ್ರಿಯೆಗಳನ್ನು ಗಳಿಸಿತು. ಕೆಲವರು ತಮ್ಮ ವೈಯಕ್ತಿಕ ಅನುಭವಗಳನ್ನು ವಿವರಿಸಿದರೆ, ಇತರರು ಇದನ್ನು ಉದ್ಯೋಗಿಗಳ ವಿರುದ್ಧ ಕಂಪನಿಗಳ "ಮೂನ್‌ಲೈಟಿಂಗ್" ತಂತ್ರ ಅಂತ ಪರಿಗಣಿಸಬಹುದೇ ಎಂದು ಉಲ್ಲೇಖಿಸಿದರು.


"ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವ ಹುದ್ದೆಯಲ್ಲಿರುವ ನಾನು ಯಾವಾಗಲೂ ಈ ಸಮಸ್ಯೆಯನ್ನು ಎದುರಿಸುತ್ತೇನೆ, ನಾವು ತಕ್ಷಣವೇ ನೇಮಕ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಆಯ್ಕೆಯಾದ ಅಭ್ಯರ್ಥಿಗೆ ಆ ಕಂಪನಿಯನ್ನು ಬಿಟ್ಟು ಹೊರ ಬರಬೇಕಾದರೆ ನೋಟಿಸ್ ಅವಧಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ನನ್ನ ಅಭಿಪ್ರಾಯದಲ್ಲಿ, ಒಂದು ತಿಂಗಳ ನೋಟಿಸ್ ಅವಧಿ ಸಾಕು ಅಂತ ಅನ್ನಿಸುತ್ತದೆ. ಮತ್ತು ಅದೇ ನಿಯಮವನ್ನು ಎಲ್ಲಾ ಕಂಪನಿಗಳಲ್ಲಿ ಅನ್ವಯಿಸಿದರೆ ಆಗ ಈ ನೇಮಕಾತಿಯ ಪ್ರಕ್ರಿಯೆ ಸುಲಭವಾಗುತ್ತದೆ" ಎಂದು ಲಿಂಕ್ಡ್ ಇನ್ ಬಳಕೆದಾರರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.


ನೋಟಿಸ್ ಪಿರೆಡ್ ಬಗ್ಗೆ ನೆಟ್ಟಿಗರು ಏನ್ ಹೇಳ್ತಾರೆ?


“ಕೆಲವು ಮಧ್ಯಮ ಮಟ್ಟದ ಕಂಪನಿಗಳು ತುರ್ತು ಅಗತ್ಯವನ್ನು ಹೊಂದಿದ್ದರೂ ಸಹ ನೋಟಿಸ್ ಅವಧಿಯನ್ನು ಕಡಿಮೆ ಮಾಡುವುದಿಲ್ಲ. ಅವರಲ್ಲಿ ಕೆಲವರು ಬಟ್ಟೆಗಳನ್ನು ಬದಲಾಯಿಸುವಂತೆ ಕಂಪನಿಗಳನ್ನು ಬದಲಾಯಿಸುವುದನ್ನು ನಾನು ನೋಡಿದ್ದೇನೆ" ಎಂದು ಲಿಂಕ್ಡ್ಇನ್ ಬಳಕೆದಾರರೊಬ್ಬರು ಬರೆದಿದ್ದಾರೆ.


ಇನ್ನೊಬ್ಬ ವ್ಯಕ್ತಿಯು ಕಾಮೆಂಟ್ ಮಾಡಿ "ತುಂಬಾ ನಿಜ ಇದು.. ನಾನು ಯಾವಾಗಲೂ ಎಚ್ ಆರ್ ಅನ್ನು ಕೇಳಲು ಈ ಅವಕಾಶವನ್ನು ಯಾವಾಗ ಪಡೆಯುತ್ತೇನೆ ಎಂದು ನಾನು ಯಾವಾಗಲೂ ಆಶ್ಚರ್ಯ ಪಡುತ್ತೇನೆ, ನೀವು ಒಂದು ವಾರದೊಳಗೆ ಅಥವಾ ತಕ್ಷಣವೇ ಒಬ್ಬ ಉದ್ಯೋಗಿಯನ್ನು ನೇಮಿಸಿಕೊಳ್ಳಬೇಕಾದ ತೀವ್ರ ಅಗತ್ಯವಿದ್ದಾಗ ನಾನು ಅರ್ಜಿ ಸಲ್ಲಿಸಿದ ಈ ಹುದ್ದೆಗೆ ನಿಮ್ಮ ನೋಟಿಸ್ ಅವಧಿ ಯಾವುದು?


ಒಂದು ವಾರದಲ್ಲಿ ನಾನು ಕೆಲಸಕ್ಕೆ ಸೇರಲು ಸಾಧ್ಯವಾದರೆ, ನನ್ನ ಅಪಾಯಿಂಟ್ಮೆಂಟ್ ಪತ್ರದಲ್ಲಿಯೂ ಸಹ ಒಂದು ವಾರದೊಳಗೆ ನಾನು ಬಿಟ್ಟುಹೋಗಬಹುದಾದ ಅದೇ ನಿಯಮಗಳನ್ನು ಹೊಂದಿರಬೇಕು" ಎಂದು ಹೇಳಿದರು.


ಈ ಅಭ್ಯಾಸದ ಪರವಾಗಿದ್ದ ಒಬ್ಬ ವ್ಯಕ್ತಿಯು "ಏಕೆ ಮಾಡಬಾರದು? 90 ದಿನಗಳ ನೋಟಿಸ್ ಗ್ರಾಹಕರಿಗೆ ಬದ್ಧ ಫಲಿತಾಂಶಗಳನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಇಡೀ ಕಂಪನಿಗೆ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವುದು, ಇದರಿಂದ ಜನರು ಸಂಬಳವನ್ನು ಪಡೆಯುತ್ತಾರೆ, ಒಂದು ವಾರವು ನಿರುದ್ಯೋಗಿಗಳನ್ನು ಆಕರ್ಷಿಸುವುದು ಅಥವಾ ವ್ಯವಹಾರದ ಅವಕಾಶಗಳನ್ನು ಪಡೆಯಲು ಸುಲಭವಾಗಿ ಸೇರಬಹುದು. ಒಬ್ಬರು ಎಚ್ಚರಿಕೆಯಿಂದ ಮತ್ತು ಅನೇಕ ದೃಷ್ಟಿಕೋನಗಳಿಂದ ಯೋಚಿಸಬೇಕು" ಎಂದು ಹೇಳಿದರು.


ಒಬ್ಬ ಬಳಕೆದಾರರಂತೂ ಇದನ್ನು "ಗುಲಾಮಗಿರಿ" ಎಂದು ಪರಿಗಣಿಸಿದರು. "ಯುಎಸ್ ಇನ್ನೂ ದೊಡ್ಡ ಸಾಫ್ಟ್‌ವೇರ್ ಕಂಪನಿಗಳನ್ನು ಹೊಂದಿದೆ ಮತ್ತು ಇಲ್ಲಿ ಪ್ರತಿಯೊಬ್ಬರೂ ಒಂದು ವಾರದ ನೋಟಿಸ್ ನೊಂದಿಗೆ ಕಾರ್ಯ ನಿರ್ವಹಿಸುತ್ತಾರೆ, ಇದನ್ನು ಉದ್ಯೋಗಿಗಳು ಸೌಜನ್ಯದಿಂದ ನೀಡುತ್ತಾರೆ ಮತ್ತು ಕಂಪನಿಯವರಿಂದ ಯಾವುದೇ ಬಲವಂತವಿರುವುದಿಲ್ಲ" ಎಂದು ಅವರು ವಿವರಿಸಿದರು.

First published: