• Home
 • »
 • News
 • »
 • career
 • »
 • LinkedIn Report: ಭಾರತದಲ್ಲಿ ಉದ್ಯೋಗಿಗಳಿಗೆ ಜಾಸ್ತಿ ಸಂಬಳಕ್ಕಿಂತ ಇದೇ ಮುಖ್ಯವಂತೆ: ಏನದು?

LinkedIn Report: ಭಾರತದಲ್ಲಿ ಉದ್ಯೋಗಿಗಳಿಗೆ ಜಾಸ್ತಿ ಸಂಬಳಕ್ಕಿಂತ ಇದೇ ಮುಖ್ಯವಂತೆ: ಏನದು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದಲ್ಲಿ, ಎರಡು ಅಥವಾ ಮೂರು ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಉಳಿಯುವವರಿಗೆ ಹೋಲಿಸಿದರೆ ಆಂತರಿಕ ಚಲನೆಯನ್ನು ಮಾಡಿದ ಉದ್ಯೋಗಿ ತಮ್ಮ ಕಂಪನಿಯಲ್ಲಿ ಉಳಿಯುವ ಸಾಧ್ಯತೆ ಸುಮಾರು 10% ಹೆಚ್ಚು ಎಂಬುದಾಗಿ ವರದಿ ಮಾಹಿತಿ ನೀಡಿದೆ.

 • Share this:

  ಲಿಂಕ್ಡ್‌ಇನ್ (LinkedIn) ನವೆಂಬರ್ 14 ರಂದು ಹೊಸ ಜಾಗತಿಕ ಮಟ್ಟದ ಸಂಶೋಧನೆಯನ್ನು ಆರಂಭಿಸಿದ್ದು, ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳು (Employees) ಸಂಭಾವನೆಗಿಂತಲೂ (Salary) ಮಿಗಿಲಾಗಿ ಗೌರವಿಸುವ ಉನ್ನತ ಆದ್ಯತೆಗಳೆಂದರೆ ಪ್ರಗತಿ, ಕೌಶಲ್ಯ ಮತ್ತು ವೃತ್ತಿ-ವೈಯಕ್ತಿಕ ಜೀವನದಲ್ಲಿ ಸಮತೋಲನ ( Work life Balance) ಕಾಪಾಡಿಕೊಳ್ಳುವಂತಹ ವಿಷಯಗಳಿಗೆ ಆದ್ಯತೆ ನೀಡುತ್ತಾರೆ ಎಂಬುದನ್ನು ಕಂಡುಕೊಂಡಿದೆ. ಉದ್ಯೋಗದಾತ-ಉದ್ಯೋಗಿ ಸಂಪರ್ಕದಲ್ಲಿನ ಕಡಿತವು ವೃತ್ತಿಪರರನ್ನು ದುರ್ಬಲಗೊಳಿಸಬಹುದು ಎಂದು ವರದಿಯು ತಿಳಿಸಿದೆ.


  ವೃತ್ತಿಜೀವನದಲ್ಲಿ ಬೆಳವಣಿಗೆ ಮತ್ತು ರೂಪಾಂತರ


  ಹೆಚ್ಚಿನ ವಲಯಗಳಲ್ಲಿನ ಉದ್ಯೋಗಿಗಳಿಗೆ ಉನ್ನತ ಆದ್ಯತೆಗಳ ಕುರಿತು ಈ ಸಮೀಕ್ಷೆಯು ಪ್ರಧಾನ್ಯತೆ ನೀಡಿದ್ದು, ಪ್ರಗತಿಯ ವಿಷಯದಲ್ಲಿ ಉದ್ಯೋಗಿಗಳು ತಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆ ಮತ್ತು ರೂಪಾಂತರವನ್ನು ಬಯಸುತ್ತಾರೆ ಎಂದು ವರದಿಯು ತಿಳಿಸಿದೆ. ಭಾರತದಲ್ಲಿ, ಎರಡು ಅಥವಾ ಮೂರು ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಉಳಿಯುವವರಿಗೆ ಹೋಲಿಸಿದರೆ ಆಂತರಿಕ ಚಲನೆಯನ್ನು ಮಾಡಿದ ಉದ್ಯೋಗಿ ತಮ್ಮ ಕಂಪನಿಯಲ್ಲಿ ಉಳಿಯುವ ಸಾಧ್ಯತೆ ಸುಮಾರು 10% ಹೆಚ್ಚು ಎಂಬುದಾಗಿ ವರದಿ ಮಾಹಿತಿ ನೀಡಿದೆ.


  linkedIn creators advise young professionals to be a combo specialist at work
  ಲಿಂಕ್ಡ್ಇನ್


  ವರದಿ ಯಾವ ಮಾಹಿತಿಗಳನ್ನು ಒದಗಿಸಿದೆ?


  ಸಂಶೋಧನೆಯು ವೃತ್ತಿಪರರು ಏನು ಬಯಸುತ್ತಾರೆ ಮತ್ತು ಉದ್ಯೋಗದಾತರು ಯಾವ ಸೇವೆಯನ್ನು ಒದಗಿಸುತ್ತಿದ್ದಾರೆ ಎಂಬುದರ ನಡುವೆ ಬೆಳೆಯುತ್ತಿರುವ ಸಂಪರ್ಕ ಕಡಿತವನ್ನು ಉಲ್ಲೇಖಿಸಿದೆ. ನೇಮಕಾತಿ ನಿಧಾನವಾಗುತ್ತಿದ್ದಂತೆ ಅಧಿಕಾರದ ಸಮತೋಲನವು ಉದ್ಯೋಗದಾತರಿಗೆ ಮರಳುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಉದ್ಯೋಗಿಗಳಿಗೆ ಅನಿಶ್ಚಿತತೆಯನ್ನು ನಿವಾರಿಸಲು ಮತ್ತು ಯಾವುದೇ ಕೆಲಸದ ಸ್ಥಳವನ್ನು ಉತ್ತಮವಾಗಿ ನೆರವಾಗುವಂತೆ ಮಾಡಲು ಉದ್ಯೋಗದಾತರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ, ವರದಿಯು ಕೆಲವು ಸಲಹೆಗಳನ್ನು ಸಹ ಸೂಚಿಸಿದೆ.


  ಇದನ್ನೂ ಓದಿ: Career Choices: ನೇಮು-ಫೇಮು ಎರಡೂ ಬೇಕೆಂದರೆ ಈ 5 ಕರಿಯರ್​​ಗಳಲ್ಲಿ ಒಂದನ್ನು ಆಯ್ಕೆ ಮಾಡಿ ಸಾಕು


  • ಉದ್ಯೋಗಿ ಸಂಪರ್ಕ ಹಾಗೂ ನಂಬಿಕೆಯನ್ನು ಕಾಪಾಡಿಕೊಳ್ಳುವುದು


  ಇಂದು, ಭಾರತದಲ್ಲಿ (51%) ಅರ್ಧದಷ್ಟು ಉದ್ಯೋಗದಾತರು ಉದ್ಯೋಗಿಗಳ ನಡುವೆ ಸಹಯೋಗ ಮತ್ತು ಜ್ಞಾನ ಹಂಚಿಕೆಯನ್ನು ಪ್ರೋತ್ಸಾಹಿಸುತ್ತಾರೆ. ತಮ್ಮ ಸಹೋದ್ಯೋಗಿಗಳೊಂದಿಗೆ ಸಂಪರ್ಕವನ್ನು ನಿರ್ಮಿಸಲು ಉದ್ಯೋಗಿಗಳಿಗೆ ಸಹಾಯ ಮಾಡುವ ಮೂಲಕ, ಉದ್ಯೋಗದಾತರು ತಮ್ಮ ತಂಡಗಳಿಗೆ ಶಕ್ತಿ ತುಂಬಬಹುದು ಮತ್ತು ಅವರ ಕಂಪನಿ ಸಂಸ್ಕೃತಿಯನ್ನು ಬಲಪಡಿಸಬಹುದು.


  ಇದಲ್ಲದೆ, ಉದ್ಯೋಗಿಗಳ ಮೇಲೆ ನಾಯಕತ್ವದ ಧೋರಣೆಯನ್ನು ಪ್ರದರ್ಶಿಸುವುದು ಮತ್ತು ನಿಯಂತ್ರಣ ಶೈಲಿಗಳಿಗೆ ಹಿಂತಿರುಗುವುದು ಜೊತೆಗೆ ನೌಕರರು ಕಚೇರಿಯಲ್ಲಿ ಇರಬೇಕು ಎಂದು ನಿರ್ದೇಶಿಸುವುದು ತ್ವರಿತವಾಗಿ ಉದ್ಯೋಗದಾತರು ಹಾಗೂ ಉದ್ಯೋಗಿಯ ನಡುವಿನ ನಂಬಿಕೆ ನಷ್ಟವಾಗುವಂತೆ ಮಾಡುತ್ತದೆ ಎಂದು ತಿಳಿಸಿದೆ.


  These companies have given permanent work from home to their employees stg asp
  ಸಾಂಕೇತಿಕ ಚಿತ್ರ


  • ಕೌಶಲ್ಯಗಳ ಮೇಲೆ ಕೇಂದ್ರೀಕರಿಸುವುದು


  ಉದ್ಯೋಗಗಳಿಗೆ ಅಗತ್ಯವಿರುವ ಕೌಶಲ್ಯ ವಿಧಾನಗಳು 2015 ರಿಂದ ಸುಮಾರು 29% ರಷ್ಟು ಬದಲಾಗಿದೆ ಮತ್ತು ಈ ಸಂಖ್ಯೆಯು 2025 ರ ವೇಳೆಗೆ 50% ವರೆಗೆ ಬೆಳೆಯುವ ನಿರೀಕ್ಷೆಯಿದೆ. ಇಂದು ಉದ್ಯೋಗಿಗಳು ಹೊಂದಿರುವ ಕೌಶಲ್ಯಗಳು ಮತ್ತು ಭವಿಷ್ಯದಲ್ಲಿ ಕಂಪನಿಗೆ ಅಗತ್ಯವಿರುವ ಕೌಶಲ್ಯಗಳನ್ನು ಅರಿತುಕೊಳ್ಳುವ ಮೂಲಕ, ಕಂಪನಿಗಳು ಬೆಳವಣಿಗೆಯ ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ನೇಮಿಸಿಕೊಳ್ಳಬಹುದು ಅಥವಾ ಮರುಹಂಚಿಕೊಳ್ಳಬಹುದು.


  ಲಿಂಕ್ಡ್‌ಇನ್ ಲರ್ನಿಂಗ್ ಕೋರ್ಸ್‌ ಏನಿದರ ವಿಶೇಷತೆ?


  ಉದ್ಯೋಗಿಗಳಲ್ಲಿರುವ ಅನಿಶ್ಚತತೆಯನ್ನು ನಿವಾರಿಸಲು ಹಾಗೂ ನಾಯಕರಿಗೆ ಈ ವಿಷಯದಲ್ಲಿ ಹೆಚ್ಚಿನ ನೆರವು ನೀಡಲು ಲಿಂಕ್ಡ್ಇನ್ ಸಂಸ್ಥೆಯು ಲಿಂಕ್ಡ್‌ಇನ್ ಲರ್ನಿಂಗ್ ಕೋರ್ಸ್‌ಗಳನ್ನು ಡಿಸೆಂಬರ್ 31, 2022 ರವರೆಗೆ ಉಚಿತವಾಗಿ ಲಭಿಸುವಂತೆ ಮಾಡಿದೆ.


  Done with Work From Home Now UK Bars and pubs offering Work From Pub facilities with Unlimited drinks and lunch
  ಸಾಂದರ್ಭಿಕ ಚಿತ್ರ


  ಸಂಸ್ಥೆಯು ಒದಗಿಸಿರುವ ಕೋರ್ಸ್‌ಗಳು ಸಂಸ್ಥೆಗಳು ಭವಿಷ್ಯದಲ್ಲಿ ರೂಪುಗೊಳ್ಳುವಂತೆ ಬಲಪಡಿಸುವುದು ಹೇಗೆ ಹಾಗೂ ಉದ್ಯೋಗಿಗಳಿಗೆ ನೆರವಾಗುವಂತೆ ಸಂಸ್ಥೆಯಲ್ಲಿ ಉದ್ಯೋಗಿ ಕ್ಷೇಮ ಯೋಜನೆಗಳನ್ನು ಪ್ರಸ್ತುತಪಡಿಸುವುದು, ಉದ್ಯೋಗದಾತ ಹಾಗೂ ಉದ್ಯೋಗಿಗಳ ನಡುವಿನ ಸಂಪರ್ಕವನ್ನು ಬಲಪಡಿಸುವುದು ಹೇಗೆ ಮೊದಲಾದ ವಿಧಾನಗಳನ್ನು ಕೋರ್ಸ್ ಒಳಗೊಂಡಿದೆ.


  ಗ್ಲೋಬಲ್ ಟ್ಯಾಲೆಂಟ್ ಟ್ರೆಂಡ್‌ ವರದಿ ಏನು ಹೇಳಿದೆ?


  ಲಿಂಕ್ಡ್‌ಇನ್ ತನ್ನ ಗ್ಲೋಬಲ್ ಟ್ಯಾಲೆಂಟ್ ಟ್ರೆಂಡ್‌ಗಳ ವರದಿಯನ್ನು ಪ್ರಕಟಿಸಿದ್ದು, ಕಾರ್ಮಿಕ ಮಾರುಕಟ್ಟೆಯ ಪ್ರವೃತ್ತಿಗಳು, ಉದ್ಯೋಗಿಗಳು ಮತ್ತು ಕೆಲಸದ ಸ್ಥಳಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಒಳನೋಟವನ್ನು ನಾಯಕರಿಗೆ ಒದಗಿಸುತ್ತದೆ.

  Published by:Kavya V
  First published: