• Home
  • »
  • News
  • »
  • career
  • »
  • LinkedIn: ಇಲ್ಲಿದೆ ನೋಡಿ ಯುವ ವೃತ್ತಿಪರರಿಗೆ ಲಿಂಕ್ಡ್ಇನ್ ಕ್ರಿಯೇಟರ್ಗಳು ನೀಡಿದ ಸಲಹೆ

LinkedIn: ಇಲ್ಲಿದೆ ನೋಡಿ ಯುವ ವೃತ್ತಿಪರರಿಗೆ ಲಿಂಕ್ಡ್ಇನ್ ಕ್ರಿಯೇಟರ್ಗಳು ನೀಡಿದ ಸಲಹೆ

ಲಿಂಕ್ಡ್ಇನ್

ಲಿಂಕ್ಡ್ಇನ್

ಇತ್ತೀಚಿನ ಪದವೀಧರರಿಗೆ ಮತ್ತು ವೃತ್ತಿಜೀವನ ಇನ್ನೇನು ಪ್ರಾರಂಭ ಮಾಡಬೇಕೆಂಬ ಆರಂಭಿಕ ವೃತ್ತಿಪರರಿಗೆ ಪ್ರಸ್ತುತ ಉದ್ಯೋಗ ಮಾರುಕಟ್ಟೆ ಹೇಗಿದೆ ಎಂದು ತಿಳಿಯುವುದು ತುಸು ಕಷ್ಟವೇ ಸರಿ. ಅಂತವರಿಗೆ ಇಲ್ಲಿದೆ ಕೆಲವು ಸಲಹೆಗಳು.

  • Share this:

ಇನ್ನೇನು ಪದವಿ ಮುಗೀತು ಎಂದರೆ ಸಾಕು ಮುಂದೆ ಯಾವ ಉದ್ಯೋಗ ಹಿಡಿಯುವುದು? ಉದ್ಯೋಗವನ್ನು ಎಲ್ಲಿ ಹುಡುಕಬೇಕು? ಹೇಗೆ ಉದ್ಯೋಗದಾತರ ಮನವೊಲಿಸಿ ಕೆಲಸವನ್ನು ಗಿಟ್ಟಿಸಿಕೊಳ್ಳಬೇಕು ಎಂಬ ನೂರಾರು ಪ್ರಶ್ನೆಗಳು ಪ್ರತಿ ಪದವೀಧರ ಅಥವಾ ಇತ್ತಿಚೀಗೆ ಕಾಲೇಜು (College) ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ (Students) ಕಾಡುತ್ತದೆ. ಇತ್ತೀಚಿನ ಪದವೀಧರರಿಗೆ ಮತ್ತು ವೃತ್ತಿಜೀವನ ಇನ್ನೇನು ಪ್ರಾರಂಭ ಮಾಡಬೇಕೆಂಬ ಆರಂಭಿಕ ವೃತ್ತಿಪರರಿಗೆ ಪ್ರಸ್ತುತ ಉದ್ಯೋಗ ಮಾರುಕಟ್ಟೆ ಹೇಗಿದೆ ಎಂದು ತಿಳಿಯುವುದು ತುಸು ಕಷ್ಟವೇ ಸರಿ. ಉದ್ಯೋಗಾವಕಾಶಗಳು ಎಲ್ಲ ಕಡೆ ಹೆಚ್ಚಿವೆ ಎಂದು ತಜ್ಞರು ಹೇಳುತ್ತಿದ್ದರೂ ಸಹ, ಅನೇಕ ಯುವಕರು (Youths) ಕೆಲಸ ಇಲ್ಲದೇ ಅಲೆದಾಡುತ್ತಾ ಕೆಲಸಕ್ಕೆ (Work)ಸೇರಿಕೊಳ್ಳಲು ಕಷ್ಟಪಡುತ್ತಾರೆ.


ಇದರ ಕುರಿತು “ಇಂದು ಹೆಚ್ಚು ವಿದ್ಯಾವಂತರೇ ಆಗಿದ್ದರೂ ಸಹ ಉದ್ಯೋಗವನ್ನು ಹುಡುಕಲು ಬಂದಾಗ ಪ್ರತಿಯೊಬ್ಬರು ಹೆಚ್ಚಿನ ತೊಂದರೆಗಳನ್ನು ಎದುರಿಸುತ್ತಾರೆ, ಉದಾಹರಣೆಗೆ ಪ್ರವೇಶ ಮಟ್ಟದ ಕೆಲಸಕ್ಕೆ ಅಗತ್ಯವಿರುವ ಸ್ಪರ್ಧೆ ಮತ್ತು ಕೌಶಲ್ಯಗಳು ಇಲ್ಲದೇ ಹೋದಾಗ ಕೆಲಸ ಸಿಗುವುದು ಸ್ವಲ್ಪ ಕಷ್ಟ. ಹಾಗಾಗಿ ಕೆಲಸಗಳು ಇವೆ ಆದರೆ ಅವುಗಳಿಗೆ ಬೇಕಾದ ಕೌಶಲ್ಯಗಳು ಯುವಜನರಲ್ಲಿ ಇಲ್ಲ" ಎಂದು ಉದ್ಯೋಗದಾತರು ದೂರುತ್ತಿದ್ದಾರೆ.


ಉತ್ತಮ ವೃತ್ತಿ ಸಲಹೆಗಳನ್ನು ನೀಡುತ್ತಿರುವ ವಿವಿಧ ಸಾಮಾಜಿಕ ಜಾಲತಾಣಗಳು


ಆದರೆ ಲಿಂಕ್ಡ್‌ಇನ್, ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ತಮ ಉದ್ಯೋಗ ಪಡೆಯಲು ಉತ್ತಮ ವೃತ್ತಿ ಸಲಹೆಗಳು ಇಲ್ಲಿವೆ ಎಂದು ಉದ್ಯೋಗಿ ಇತಿಹಾಸಕಾರರ ಉದ್ಯೋಗ ಹುಡುಕಾಟ ಪ್ಲಾಟ್‌ಫಾರ್ಮ್‌ ಹೇಳಿಕೆ ನೀಡಿದೆ. ಸಿಎನ್‌ಬಿಸಿ ಮೇಕ್ ಇಟ್, ಮೂರು ಲಿಂಕ್ಡ್‌ಇನ್ ಕ್ರಿಯೆಟರ್ಸ್‌ಗಳ ಜೊತೆ ಮಾತನಾಡಿ “ಅವರು ವೃತ್ತಿಪರ, ಸ್ಪೂರ್ತಿದಾಯಕ ವಿಷಯ ಮತ್ತು ಸಲಹೆಯನ್ನು ಹಂಚಿಕೊಳ್ಳಲು ಈ ಲಿಂಕ್ಡ್‌ಇನ್‌ ಪ್ಲಾಟ್‌ಫಾರ್ಮ್‌ ಅನ್ನು ಬಳಸುತ್ತಾರೆ ಹಾಗೂ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಯುವ ಕೆಲಸಗಾರರಿಗೆ ಅತ್ಯುತ್ತಮ ಸಲಹೆಗಳನ್ನು ನೀಡಲು ಕೂಡ ಈ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆ" ಎಂದು ವರದಿ ಮಾಡಿದೆ.


ಇದನ್ನೂ ಓದಿ: ತಿಂಗಳಿಗೆ 78 ಸಾವಿರ ಸಂಬಳ, ಸಹಾಯಕ ಇಂಜಿನಿಯರಿಂಗ್ ಹುದ್ದೆಗೆ ಅರ್ಜಿ ಆಹ್ವಾನ


ಕೋಲ್ಡ್ ಸಂದೇಶಗಳನ್ನು ಕಳುಹಿಸುವ ಧೈರ್ಯ ಮಾಡಿ ಎನ್ನುವ ಆಡ್ರೆ ಪೆ


2016 ರಲ್ಲಿ, ಕೇವಲ 15 ವರ್ಷ ವಯಸ್ಸಿನಲ್ಲಿ, ಆಡ್ರೆ ಪೆ ಅವರು ಫಿಲಿಫೈನ್ಸ್‌ನಲ್ಲಿ ತಂತ್ರಜ್ಞಾನ ಪ್ರವೇಶಕ್ಕಾಗಿ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ವೈಟೆಕ್ ಅನ್ನು ಪ್ರಾರಂಭಿಸಿದರು. ಇಂದು, ವೈಟೆಕ್ ಪ್ರಸ್ತುತ 10 ದೇಶಗಳಲ್ಲಿ 400 ಸದಸ್ಯರನ್ನು ಮತ್ತು 26 ಶಾಖೆಗಳನ್ನು ಹೊಂದಿದೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ ಜೂನಿಯರ್ ಆಗಿರುವ ಪೆ ಅವರು, ತನ್ನ ವೃತ್ತಿ ಕ್ಷೇತ್ರದ ಜನರಿಗೆ ಕೋಲ್ಡ್‌ ಸಂದೇಶಗಳನ್ನು ಕಳುಹಿಸುವ ಮೂಲಕ ತನ್ನ ವೃತ್ತಿಪರ ನೆಟ್‌ವರ್ಕ್ ಅನ್ನು ಬಲಪಡಿಸಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.


"ನಮ್ಮ ಬ್ಲಾಗ್‌ನಲ್ಲಿ ತಂತ್ರಜ್ಞಾನದಲ್ಲಿ ಮಹಿಳೆಯರು ಹೆಚ್ಚು ಸಕ್ರಿಯವಾಗಬೇಕು ಎಂದು ನಾನು ಬಯಸಿದ್ದೆ ಆದರೆ ಅದರ ಬಗ್ಗೆ ಈ ಮುಂಚೆ ನನಗೆ ಹೆಚ್ಚು ಮಾಹಿತಿ ತಿಳಿದಿರಲಿಲ್ಲ. ಹಾಗಾಗಿ ಉತ್ತಮ ಮಾಹಿತಿ ಹುಡುಕುತ್ತಾ ನಾನು ಲಿಂಕ್ಡ್‌ಇನ್‌ ಗೆ ಹೋಗಿ ಅಲ್ಲಿದ್ದ ಉದ್ಯೋಗದಾತರಿಗೆ ಮೆಸೇಜ್ ಮಾಡಿದೆ. ಆದ್ದರಿಂದ ನನಗೆ ಅನೇಕ ಉದ್ಯೋಗ ಅವಕಾಶಗಳು ಸಿಕ್ಕಿವೆ " ಎಂದು ಪೆ ಅವರು ಸಿಎನ್‌ಬಿಸಿ ಮೇಕ್ ಇಟ್‌ಗೆ ಹೇಳುತ್ತಾರೆ.


ಸ್ವಯಂ ಭರವಸೆಯನ್ನು ಅಭ್ಯಾಸ ಮಾಡಿ ಎನ್ನುವ ಡೈಲನ್‌ ಗಂಬರ್ಡೆಲ್ಲಾ


ಡೈಲನ್ ಗಂಬರ್ಡೆಲ್ಲಾ ಅವರ ಸಲಹೆಯು ಅತ್ಯಂತ ಸರಳವಾಗಿದೆ. ಆದರೆ ಪರಿಣಾಮಕಾರಿಯಾಗಿದೆ. ಅದೇನೆಂದರೆ "ಸ್ವಯಂ-ಭರವಸೆಯನ್ನು ಅಭ್ಯಾಸ ಮಾಡಿ ಮತ್ತು ಅದನ್ನು ರೂಢಿಸಿಕೊಳ್ಳಿ" ಎನ್ನುತ್ತಾರೆ ನೆಕ್ಸ್ಟ್ ಜನ್ ಹೆಚ್‌ಕ್ಯುನ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿರುವ 26 ರ ಹರೆಯದ ಗಂಬರ್ಡೆಲ್ಲಾ. ಈ ಸಂಸ್ಥೆಯು ಲಿಂಕ್ಡ್‌ಇನ್‌ ಪ್ಲಾಟ್‌ಫಾರ್ಮ್‌ ನ ಯುವ ಉದ್ಯಮಿಗಳಿಗೆ ತಮ್ಮ ಗುರಿಗಳನ್ನು ತಲುಪಲು ಸಹಾಯ ಮಾಡಲು ಮೀಸಲಾಗಿರುವ ಒಂದು ವ್ಯಾಪಾರ ಕೇಂದ್ರವಾದೆ. "ಇಲ್ಲಿ ಯುವ ವೃತ್ತಿಪರರನ್ನು ನಿರಂತರವಾಗಿ ಪ್ರೋತ್ಸಾಹಿಸುವ ನಿಜವಾದ ಉದ್ಯೋಗದಾತರ ಗುಂಪಿದೆ" ಎಂದು ಹೇಳುತ್ತಾರೆ ಗಂಬರ್ಡೆಲ್ಲಾ.


ಕಾಂಬೋ ಸ್ಪೆಷಲಿಸ್ಟ್ ಆಗಿರಿ ಎನ್ನುವ ಎರಿಕ್ ಸಿಮ್


ಎರಿಕ್‌ ಸಿಮ್‌ ಅವರು 1997 ರಲ್ಲಿ ಲ್ಯಾಂಕಾಸ್ಟರ್ ವಿಶ್ವವಿದ್ಯಾನಿಲಯದಿಂದ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿಯನ್ನು ಪಡೆದ ನಂತರ, ತಮ್ಮ ಪಿಎಚ್‌ಡಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಲೈಬ್ರರಿ ಸಹಾಯಕರ ಹುದ್ದೆಗೆ ವಾಕ್​ ಇನ್​ ಇಂಟರ್​ವ್ಯೂ


ಈಗಾಗಲೇ ಇವರು ಬ್ಯಾಂಕಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದು, “ಈ ಕೆಲಸಕ್ಕೆ ಸೇರುವ ಮುಂಚೆ ಹಲವಾರು ಇತರ ವೃತ್ತಿಗಳನ್ನು ಹುಡುಕಾಡಿದ್ದೆ. ಆದರೆ ಎಲ್ಲೂ ಕೆಲಸ ಸಿಗದೇ ಇದ್ದಾಗ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ನಿರ್ಧರಿಸಿದೆ. ಆದ್ದರಿಂದ ಇಂತಹದೇ ಕೆಲಸ ಬೇಕು ಎಂದು ಕೂರುವ ಬದಲು ಯಾವುದೇ ಕೆಲಸ ಸಿಕ್ಕರೂ ಸಹ ಅದರಲ್ಲಿ ಮುಂದುವರಿಯಿರಿ. ಕೆಲಸದಲ್ಲಿ ಕಾಂಬೋ ಸ್ಪೆಷಲಿಸ್ಟ್‌ ಆಗಿ ” ಎಂದು ವ್ಯವಸ್ಥಾಪಕ ನಿರ್ದೇಶಕ, ಪ್ರಾಧ್ಯಾಪಕ, ಹೂಡಿಕೆದಾರ ಮತ್ತು ವೃತ್ತಿ ತರಬೇತುದಾರ ಆಗಿರುವ ಎರಿಕ್‌ ಸಿಮ್‌ ಹೇಳುತ್ತಾರೆ.

First published: