ಸಾಮಾನ್ಯ ಆಡುಭಾಷೆಯಲ್ಲಿ ಉಪನ್ಯಾಸಕ (Lecturer )ಹಾಗೂ ಪ್ರಾಧ್ಯಾಪಕ (Professor)ಎರಡೂ ಒಂದೇ ತರಹದ ವೃತ್ತಿ (Career). ಆದ್ರೆ ಇವೆರಡೂ ಒಂದೇ ಬಗೆಯ ವೃತ್ತಿಯಾದರೂ ಇದರಲ್ಲಿ ಪ್ರಮುಖ ವ್ಯತ್ಯಾಸಗಳಿವೆ. ಒಂದೇ ರೀತಿಯ ಪರಿಸರದಲ್ಲಿ ಕಾರ್ಯ ನಿರ್ವಹಿಸಿದರೂ ಇಬ್ಬರೂ ಬೇರೆ ಬೇರೆಯಾದ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಉಪನ್ಯಾಸಕ ಹಾಗೂ ಪ್ರಾಧ್ಯಾಪಕ ವೃತ್ತಿ ಬೇರೆ ಬೇರೆ !
ಉಪನ್ಯಾಸಕರು: ಇವರು ಸಾಮಾನ್ಯವಾಗಿ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಅಲ್ಲದೇ ಇವರಿಗೆ ಪಿಎಚ್‌ಡಿ ಅಥವಾ ಸ್ನಾತಕೋತ್ತರ ಪದವಿ ಅಗತ್ಯವಿಲ್ಲ. ಅವರಿಗೆ ಇರಬೇಕಾದದ್ದು ಅಗತ್ಯ ತರಬೇತಿ, ವೃತ್ತಿಪರ ಅನುಭವ ಅಥವಾ ವಿಶೇಷ ಜ್ಞಾನ. ಉಪನ್ಯಾಸಕರು ಸಾಮಾನ್ಯವಾಗಿ ಒಂದು ವರ್ಷದ ಒಪ್ಪಂದಗಳನ್ನು ಹೊಂದಿರುತ್ತಾರೆ ಮತ್ತು ಅವರ ಕೆಲಸವು ಸಾಮಾನ್ಯವಾಗಿ ಯಾವುದೇ ಸೇವೆ ಅಥವಾ ಸಂಶೋಧನೆಯ ಜವಾಬ್ದಾರಿಗಳನ್ನು ಹೊಂದಿರುವುದಿಲ್ಲ.
ಉಪನ್ಯಾಸಕರಾಗಿರುವುದರ ಜೊತೆಗೆ, ಅವರು ಅದೇ ಸಮಯದಲ್ಲಿ ಇತರ ವೃತ್ತಿಗಳನ್ನು ಸಹ ಮಾಡಬಹುದಾಗಿದೆ. ಉಪನ್ಯಾಸಕರು ಸಾಮಾನ್ಯವಾಗಿ ಅವರು ನಿಯೋಜಿಸಲಾದ ಕಾಲೇಜು ಅಥವಾ ಸಂಸ್ಥೆಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಾರೆ.
ಪ್ರಾಧ್ಯಾಪಕ: ಪ್ರಾಧ್ಯಾಪಕರು ಪೂರ್ಣ ಸಮಯದ ಉಪನ್ಯಾಸಕರಾಗಿರುತ್ತಾರೆ. ಅವರು ತಮ್ಮದೇ ಆದ ಅಧ್ಯಯನಗಳು ಮತ್ತು ಸಂಶೋಧನೆಗಳನ್ನು ಕೈಗೊಳ್ಳುತ್ತಾರೆ. ಶೈಕ್ಷಣಿಕ ಸಂಸ್ಥೆಗಳು ಅವರ ವೃತ್ತಿಪರ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡುತ್ತದೆ ಅಲ್ಲದೇ ಇವರೂ ಕೂಡ ಪಿಎಚ್‌ಡಿ ಹೊಂದಿರುವುದು ಕಡ್ಡಾಯವೇನಲ್ಲ.
ಪ್ರೊಫೆಸರ್‌ಗಳನ್ನೂ ನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಿಸಲಾಗುತ್ತದೆ. ಸಾಮಾನ್ಯವಾಗಿ ಒಂದರಿಂದ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಲವೊಮ್ಮೆ 5 ರಿಂದ 7 ವರ್ಷಗಳ ನಂತರ ಮಾತ್ರ ಕಾಯಂ ಸ್ಥಾನದ ಆಯ್ಕೆಯನ್ನು ಹೊಂದಿರುತ್ತಾರೆ.
ಲೆಕ್ಚರರ್ ಮತ್ತು ಪ್ರೊಫೆಸರ್ ಗಳ ನಡುವಿನ ಪ್ರಮುಖ ವ್ಯತ್ಯಾಸಗಳು
ಉಪನ್ಯಾಸಕ ಅರ್ಹತೆಗಳು: ಉಪನ್ಯಾಸಕರ ಶೈಕ್ಷಣಿಕ ಅಗತ್ಯತೆಗಳು ಅಷ್ಟೇನೂ ನಿರ್ದಿಷ್ಟವಾಗಿರೋದಿಲ್ಲ. ಅವರು ಶಿಕ್ಷಣದ ಹೊರಗಿನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುವುದರಿಂದ, ಅವರು ತಮ್ಮ ಅನುಭವವನ್ನು ತಮ್ಮ ವಿದ್ಯಾರ್ಥಿಗಳಿಗೆ ನೀಡಬಹುದು.
ಅವರ ನೈಜ-ಪ್ರಪಂಚದ ಅನುಭವದೊಂದಿಗೆ ವಿದ್ಯಾರ್ಥಿಗಳಿಗೆ ಕಲಿಸಬಹುದು. ಕೆಲವು ಉಪನ್ಯಾಸಕರು ಕೇವಲ ಕಾಲೇಜು ಡಿಪ್ಲೊಮಾದೊಂದಿಗೆ ಅತ್ಯುತ್ತಮ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೂ ಹೆಚ್ಚಿನವರು ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ.
ಪ್ರಾಧ್ಯಾಪಕರ ಅರ್ಹತೆಗಳು: ಪ್ರೊಫೆಸರ್ ಹುದ್ದೆಗೆ ಅರ್ಹರಾಗಲು ಅಭ್ಯರ್ಥಿಯು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪದವಿಯನ್ನು ಹೊಂದಿರಬೇಕು. ಅದು ಕಾಲೇಜು ಡಿಪ್ಲೊಮಾಕ್ಕಿಂತ ಹೆಚ್ಚಿನದಾಗಿದ್ದು, ಸ್ನಾತಕೋತ್ತರ ಅಥವಾ ಪಿಎಚ್‌ಡಿ ಹೊಂದಿರಬೇಕಾಗುತ್ತದೆ.
ಪ್ರಾಧ್ಯಾಪಕರು ತಮ್ಮ ಪಿಎಚ್‌ಡಿಯನ್ನು ಇನ್ನೂ ಪೂರ್ಣಗೊಳಿಸಲ್ಲವಾದರೆ ಅಥವಾ ಪದವಿಯನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಬೇಕಾದರೆ, ಅವರು ಅರೆಕಾಲಿಕ ಕೆಲಸವನ್ನು ಪ್ರಾರಂಭಿಸಬಹುದು.
ತಮ್ಮ ಡಾಕ್ಟರೇಟ್ ಅನ್ನು ಪೂರ್ಣಗೊಳಿಸಿದ ನಂತರ, ಅವರು ಪೂರ್ಣ ಸಮಯದ ಪ್ರಾಧ್ಯಾಪಕರಾಗಿ ಕೆಲಸ ಮಾಡಬಹುದು. ಅಲ್ಲದೇ ಸಂಶೋಧನೆ ಮತ್ತು ಬೋಧನೆ ಎರಡರಲ್ಲೂ ಗಮನಹರಿಸಬಹುದು.
ಕೆಲಸದ ಜವಾಬ್ದಾರಿಗಳಲ್ಲೂ ಇದೆ ವ್ಯತ್ಯಾಸ
ಉಪನ್ಯಾಸಕರು ಮತ್ತು ಪ್ರಾಧ್ಯಾಪಕರ ಅನೇಕ ಉದ್ಯೋಗ ಜವಾಬ್ದಾರಿಗಳು ಒಂದೇ ಎಂಬಂತೆ ಕಂಡರೂ ಇವುಗಳಲ್ಲಿ ವ್ಯತ್ಯಾಸವಿದೆ.
ಲೆಕ್ಚರರ್ : ಉಪನ್ಯಾಸಕರು ಪ್ರಾಧ್ಯಾಪಕರಿಗಿಂತ ಕಡಿಮೆ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಪರಿಗಣಿಸಿದರೆ, ಅವರು ಮಾಡಲು ಕಡಿಮೆ ಕೆಲಸವನ್ನು ಹೊಂದಿರಬಹುದು. ಸಾಮಾನ್ಯವಾಗಿ ಪ್ರತಿ ಸೆಮಿಸ್ಟರ್‌ಗೆ ಮೂರು ಅಥವಾ ನಾಲ್ಕು ಕೋರ್ಸ್‌ಗಳನ್ನು ಕಲಿಸುತ್ತಾರೆ.
ಪ್ರೊಫೆಸರ್ : ಪ್ರಾಧ್ಯಾಪಕರು ಶೈಕ್ಷಣಿಕ ಸಂಸ್ಥೆಯಲ್ಲಿ ಹೆಚ್ಚು ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಅವರು ಉಪನ್ಯಾಸಗಳನ್ನು ನೀಡುವುದರ ಜೊತೆಗೆ ಮೌಲ್ಯಮಾಪನಗಳನ್ನು ನಡೆಸುವುದು, ಶೈಕ್ಷಣಿಕ ವಿಭಾಗಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುವುದು ಮತ್ತು ಪಠ್ಯಕ್ರಮವನ್ನು ವಿನ್ಯಾಸಗೊಳಿಸುವ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.
ಯಾವುದು ಸರಿಯಾದ ಆಯ್ಕೆ?
ಶಿಕ್ಷಣ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಗಣನೀಯ ಮಾರುಕಟ್ಟೆಯನ್ನು ಸೃಷ್ಟಿಸುತ್ತಿದೆ. ಹಾಗಾಗಿ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರಿಗೆ ಅದ್ಭುತ ಅವಕಾಶಗಳನ್ನು ನೀಡಿದೆ. ಆದಾಗ್ಯೂ, ನಿಮ್ಮ ಆಯ್ಕೆಯು ನಿಮ್ಮ ಅಂತಿಮ ಗುರಿಗಳ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣದಲ್ಲಿ ಉಳಿಯಲು ಮತ್ತು ಸಂಶೋಧನೆ ಮಾಡಲು ಬಯಸುವವರಿಗೆ ಪ್ರಾಧ್ಯಾಪಕರಾಗುವುದು ಉತ್ತಮ ಆಯ್ಕೆಯಾಗಿದೆ.
ಇನ್ನು ನಿಮಗೆ ಬೋಧನೆಯಲ್ಲಿ ಆಸಕ್ತಿ ಇದ್ದು ನೀವು ಸ್ವಂತ ಉದ್ಯೋಗ ಅಥವಾ ವ್ಯಾಪಾರದಂತಹ ಆಸಕ್ತಿಗಳನ್ನೂ ಮುಂದುವರಿಸಲು ಬಯಸಿದರೆ ಉಪನ್ಯಾಸಕರಾಗಬಹುದು. ಇದರಿಂದ ನಿಮ್ಮ ನೈಜ-ಪ್ರಪಂಚದ ಕಲಿಕೆಗಳು ಮತ್ತು ಅನುಭವಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ