• Home
 • »
 • News
 • »
 • career
 • »
 • Layoffs 2022: ಈ ವರ್ಷ ಯಾವೆಲ್ಲಾ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿವೆ, ಇಲ್ಲಿದೆ ಮಾಹಿತಿ

Layoffs 2022: ಈ ವರ್ಷ ಯಾವೆಲ್ಲಾ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿವೆ, ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಕಂಪನಿಯಲ್ಲಿ ಕೆಲಸ ಸಿಕ್ಕರೆ ಲೈಫ್‌ ಸೆಟೆಲ್‌ ಅಂದುಕೊಂಡಿದ್ದ ಅದೆಷ್ಟೋ ಉದ್ಯೋಗಿಗಳು ಈಗ ಬೀದಿಗೆ ಬಿದ್ದಿದ್ದಾರೆ. ಆರ್ಥಿಕ ಕುಸಿತ, ಆರ್ಥಿಕ ಹಿಂಜರಿತದಂತಹ ಸಂದರ್ಭಗಳನ್ನು ನಿಭಾಯಿಸಲು ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳ ವಜಾ ಅಸ್ತ್ರವನ್ನು ಪ್ರಯೋಗಿಸುತ್ತಿವೆ.

 • Share this:

  ಈ ವರ್ಷದಲ್ಲಿ ಪ್ರತಿಷ್ಠಿತ ಕಂಪನಿಗಳೇ (Tech Companies) ತನ್ನ ನೂರಾರು ಉದ್ಯೋಗಿಗಳನ್ನು (Employees) ಮುಲಾಜಿಲ್ಲದೇ ಮನೆಗೆ ಕಳುಹಿಸಿ ಬಿಟ್ಟಿವೆ (Layoffs) . ಈ ಕಂಪನಿಯಲ್ಲಿ ಕೆಲಸ ಸಿಕ್ಕರೆ ಲೈಫ್‌ ಸೆಟೆಲ್‌ ಅಂದುಕೊಂಡಿದ್ದ ಅದೆಷ್ಟೋ ಉದ್ಯೋಗಿಗಳು ಈಗ ಬೀದಿಗೆ ಬಿದ್ದಿದ್ದಾರೆ. ಆರ್ಥಿಕ ಕುಸಿತ, ಆರ್ಥಿಕ ಹಿಂಜರಿತದಂತಹ ಸಂದರ್ಭಗಳನ್ನು ನಿಭಾಯಿಸಲು ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳ ವಜಾ ಅಸ್ತ್ರವನ್ನು ಪ್ರಯೋಗಿಸುತ್ತಿವೆ. ಇದರಿಂದಾಗಿ ವಿಶ್ವದಾದ್ಯಂತ ಉದ್ಯೋಗಿಗಳ ವಜಾ ಪರ್ವ ಹೆಚ್ಚಾಗಿದೆ.


  ಮೆಟಾದಿಂದ 11,000 ಉದ್ಯೋಗಿಗಳು ವಜಾ


  ಅಮೆಜಾನ್‌, ಟ್ವಿಟ್ಟರ್, ಮೆಟಾ, ಮೈಕ್ರೋಸಾಫ್ಟ್‌, ಒರಾಕಲ್‌ ಹೀಗೆ ಹತ್ತಾರು ಕಂಪನಿಗಳು ಉದ್ಯೋಗ ಕಡಿತ ನೀತಿಯನ್ನು ಅನುಸರಿಸಿವೆ. ಉದ್ಯೋಗಿಗಳನ್ನು ವಜಾ ಮಾಡಿರುವ ಮೆಟಾ ಸಂಸ್ಥೆ ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಬುಧವಾರ, ಸಾಮಾಜಿಕ ಮಾಧ್ಯಮಗಳಾದ ಫೇಸ್​ಬುಕ್, ಇನ್​ಸ್ಟಾಗ್ರಾಮ್ ಹಾಗೂ ಮೆಸೆಂಜಿಂಗ್ ಆ್ಯಪ್ ವಾಟ್ಸ್​ಆ್ಯಪ್ ವೇದಿಕೆಗಳನ್ನು ನಿರ್ವಹಿಸುವ ‘ಮೆಟಾ’ 11,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್​ಬರ್ಗ್ ಬಹಿರಂಗಪಡಿಸಿದರು.


  Shares tumble more than 5% after Facebook parent Meta s quarterly revenue declines
  Facebook meta.


  ಜಾಗತಿಕವಾಗಿ ಕಂಪನಿಯ ಶೇಕಡಾ 13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಅವರು ತಿಳಿಸಿದರು. ಮೆಟಾ ಜಾಗತಿಕ ಟೆಕ್ ದೈತ್ಯನಾಗಿದ್ದರೂ, ಕಂಪನಿಯು ಅಪಾರ ನಷ್ಟ ಅನುಭವಿಸುತ್ತಿತ್ತು. ಈ ನಷ್ಟವನ್ನು ತಡೆಯಲು ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಝುಕರ್​ಬರ್ಗ್ ತಿಳಿಸಿದ್ದರು.


  ನಿಲ್ಲದ ಉದ್ಯೋಗಿಗಳ ವಜಾ ಪರ್ವ


  ಉದ್ಯೋಗಿಗಳ ವಜಾ ಮೆಟಾಗೆ ಮಾತ್ರ ಸೀಮಿತವಾಗಿಲ್ಲ, ಮೇಲೆ ಹೇಳಿದಂತೆ ಈ ಕ್ರಮವನ್ನು ಈಗಾಗ್ಲೇ ಹಲವಾರು ಕಂಪನಿಗಳು ಅನುಸರಿಸಿವೆ. ಆರ್ಥಿಕ ಪರಿಸ್ಥಿತಿಗಳು ಮತ್ತು ಇತರ ಅಂಶಗಳಿಂದಾಗಿ ಅನೇಕ ಇತರ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಿವೆ. ಕ್ರಂಚ್‌ಬೇಸ್‌ನ ಇತ್ತೀಚಿನ ವರದಿಯು US-ಆಧಾರಿತ ಟೆಕ್ ಸಂಸ್ಥೆಗಳು ಅಕ್ಟೋಬರ್ 2022ರ ಹೊತ್ತಿಗೆ 45,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ ಎಂದು ಬಹಿರಂಗಪಡಿಸಿದೆ.


  ಇತ್ತೀಚೆಗೆ ಸಿಬ್ಬಂದಿಯನ್ನು ವಜಾಗೊಳಿಸಿದ ಕೆಲವು ಪ್ರಮುಖ ಟೆಕ್ ಕಂಪನಿಗಳು:


  ಟ್ವಿಟರ್


  ಟ್ವಿಟರ್‌ ಅನ್ನು ಸ್ವಾಧೀನಪಡಿಸಿಕೊಂಡ ಎಲೋನ್ ಮಸ್ಕ್ ಮೊದಲಿಗೆ ಕಂಪನಿಯ 3,700 ಸಿಬ್ಬಂದಿಯನ್ನು ಕಡಿತಗೊಳಿಸುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಂಪನಿಯ ಉದ್ಯೋಗಿಗಳ ಸುಮಾರು 50% ಜನರನ್ನು ವಜಾಗೊಳಿಸಿದ್ದಾರೆ. ಮೈಕ್ರೊಬ್ಲಾಗಿಂಗ್ ವೆಬ್ ಸೈಟ್ ಟ್ವಿಟರ್ ಜಾಗತಿಕ ಮಟ್ಟದ ಉದ್ಯೋಗ ಕಡಿತದ ಭಾಗವಾಗಿ ಅಮೆರಿಕದ ನಂತರ ಭಾರತದಲ್ಲೂ ಉದ್ಯೋಗಿಗಳನ್ನು ವಜಾಗೊಳಿಸಿದೆ, ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿ ಅನೇಕ ಭಾರತೀಯ ಉನ್ನತ ಅಧಿಕಾರಿಗಳು ಸಂಸ್ಥೆಯಲ್ಲಿ ಇದ್ದರು.


  Sriram Krishnan will return to Twitter What else will change on Twitter


  ಸೇಲ್ಸ್‌ಫೋರ್ಸ್


  ಸೇಲ್ಸ್‌ಫೋರ್ಸ್ ಸಂಸ್ಥೆ ವೆಚ್ಚವನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ತಮ್ಮ ಜಾಗತಿಕ ಉದ್ಯೋಗಗಳಿಂದ ನೂರಾರು ಉದ್ಯೋಗಿಗಳನ್ನು ಕಡಿತಗೊಳಿಸಿದೆ ಎಂದು ವರದಿಯಾಗಿದೆ. ಹೆಡ್ಜ್ ಫಂಡ್ ಸ್ಟಾರ್‌ಬೋರ್ಡ್ ಮೌಲ್ಯವು ಕಂಪನಿಯಲ್ಲಿ ಪಾಲನ್ನು ಖರೀದಿಸಿದಾಗಿನಿಂದ ಸೇಲ್ಸ್‌ಫೋರ್ಸ್ ವೆಚ್ಚವನ್ನು ಕಡಿತಗೊಳಿಸಲು ಒತ್ತಡವನ್ನು ಎದುರಿಸುತ್ತಿದೆ.


  ಮೈಕ್ರೋಸಾಫ್ಟ್


  ಟೆಕ್ ದೈತ್ಯ, ಮೈಕ್ರೋಸಾಫ್ಟ್ 'ಸರಿಯಾದ ವ್ಯಾಪಾರ ಆದ್ಯತೆಗಳನ್ನು ಹೊಂದಿಸಲು ಮತ್ತು ರಚನಾತ್ಮಕ ಹೊಂದಾಣಿಕೆಗಳನ್ನು ಮಾಡಲು' ತನ್ನ ಅನೇಕ ವಿಭಾಗಗಳಲ್ಲಿ ಸುಮಾರು 1,000 ಸಿಬ್ಬಂದಿಯನ್ನು ವಜಾಗೊಳಿಸಿದೆ. ಆರ್ಥಿಕ ಹಿಂಜರಿತವನ್ನು ತಡೆದುಕೊಳ್ಳುವ ಪ್ರಯತ್ನದಲ್ಲಿ ಕಂಪನಿಯು ನೇಮಕಾತಿಯನ್ನು ಸಹ ನಿಧಾನಗೊಳಿಸಿದೆ.


  rupees 47 lakh package from Microsoft for visually impaired software engineer Yash Sonakia stg asp
  ಮೈಕ್ರೋಸಾಫ್ಟ್‌


  ಟೆನ್ಸೆಂಟ್


  ಟೆಕ್ ದೈತ್ಯ ಮತ್ತು ಅತ್ಯಮೂಲ್ಯ ಚೀನೀ ಕಂಪನಿ, ಆಗಸ್ಟ್ 2022 ರಲ್ಲಿ ಸುಮಾರು 5,500 ಉದ್ಯೋಗಿಗಳನ್ನು ವಜಾಗೊಳಿಸಿದೆ ಮತ್ತು ಮೊದಲ ಬಾರಿಗೆ ನೇಮಕಾತಿಯನ್ನು ಸ್ಥಗಿತಗೊಳಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ಇಳಿಮುಖವಾದ ಆದಾಯದಿಂದಾಗಿ ಈ ವಜಾಗೊಳಿಸುವಿಕೆಗಳು ಸಂಭವಿಸಿವೆ ಎಂದು ವರದಿಯಾಗಿದೆ.


  ಬೈಜುಸ್


  ಅಕ್ಟೋಬರ್, 2022 ರಲ್ಲಿ, ಭಾರತದ ಅತಿದೊಡ್ಡ ಎಡ್-ಟೆಕ್ ಕಂಪನಿ ಬೈಜುಸ್ ಸಹ ಸುಮಾರು 2,500 ಉದ್ಯೋಗಗಳನ್ನು ಅಂದರೆ ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಸುಮಾರು 5% ಸಿಬ್ಬಂದಿಯನ್ನು ತೆಗೆದುಹಾಕಿದೆ.
  ಇಷ್ಟಕ್ಕೆ ನಿಲ್ಲದ ಕಂಪನಿಯು ಈ ಪ್ರಕ್ರಿಯೆಯನ್ನು ಇನ್ನೂ ಕೆಲ ಉದ್ಯೋಗಿಗಳನ್ನು ತೆಗೆದು ಹಾಕುವ ಕುರಿತು ಯೋಜಿಸುತ್ತಿದೆ ಎನ್ನಲಾಗಿದೆ. ಈ ಹಣಕಾಸು ವರ್ಷದಲ್ಲಿ ಹಣಕಾಸುಗಳನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಲಾಭದಾಯಕವಾಗಲು ಮಾರ್ಕೆಟಿಂಗ್ ವಿಭಾಗ ಮತ್ತು ಇತರ ಮಾರ್ಗಗಳಲ್ಲಿ ವೆಚ್ಚವನ್ನು ಕಡಿತಗೊಳಿಸಲು ಬೈಜುಸ್ ಎದುರು ನೋಡುತ್ತಿದೆ.

  Published by:Kavya V
  First published: