• Home
  • »
  • News
  • »
  • career
  • »
  • Law Career Options: LLB ಓದಿದವರು ವಕೀಲರಾಗುವುದಷ್ಟೇ ಅಲ್ಲ, ಈ ವೃತ್ತಿಗಳನ್ನು ಸಹ ಮಾಡಬಹುದು

Law Career Options: LLB ಓದಿದವರು ವಕೀಲರಾಗುವುದಷ್ಟೇ ಅಲ್ಲ, ಈ ವೃತ್ತಿಗಳನ್ನು ಸಹ ಮಾಡಬಹುದು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನೀವು ಕಂಪನಿಗೆ ಅಥವಾ ಖಾಸಗಿ ವ್ಯಕ್ತಿಗಳಿಗೆ ಕಾನೂನು ಸಲಹೆಗಾರರಾಗಬಹುದು. ಕ್ಲಿಷ್ಟಕರ ಕಾನೂನು ಸಮಸ್ಯೆಗಳ ಬಗ್ಗೆ ಗ್ರಾಹಕರಿಗೆ ಸಲಹೆ ನೀಡಬಹುದು ಮತ್ತು ಶಿಫಾರಸುಗಳನ್ನು ಮಾಡಬಹುದು.

  • Share this:

    ವಿದ್ಯಾರ್ಥಿಯಾಗಿ (Students) ಓದುವುದಕ್ಕೂ ಹಾಗೂ ಅದೇ ಕ್ಷೇತ್ರದಲ್ಲಿ ವೃತ್ತಿ ಜೀವನ (Career Life) ಆರಂಭಿಸುವುದರ ಮಧ್ಯೆ ವ್ಯತ್ಯಾಸವಿದೆ. ನಾವು ವೃತ್ತಿ ಜೀವನಕ್ಕೆ ಧುಮುಕಿದ ಮೇಲೆಯೇ ಅದರ ಆಳ ಅಗಲ ಗೊತ್ತಾಗುತ್ತೆ.ಆ ಕ್ಷೇತ್ರದ ಬಗ್ಗೆಯೇ ನಾವು ಓದಿದ್ದರೂ ಕೆಲಸ ಮಾಡುವಾಗ ಅದು ಕಷ್ಟಕರ ಎನಿಸಬಹುದು ಅಥವಾ ಸವಾಲುಗಳು ಕಗ್ಗಂಟಾಗಬಹುದು. ಒತ್ತಡವನ್ನೂ (Career Stress) ನೀವು ಅನುಭವಿಸಬಹುದು. ಇವೆಲ್ಲದರಿಂದ ನೀವು ವೃತ್ತಿ ಬದಲಾವಣೆಗೆ ಯೋಚಿಸಬಹುದು.


    ಅಂದಹಾಗೆ ನೀವು ಕಾನೂನನ್ನು ಓದಿದ್ದು, ವಕೀಲ ವೃತ್ತಿ (Law Career) ಬದಲಾವಣೆಗೆ ಆಲೋಚಿಸುತ್ತಿದ್ದರೆ ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳಲೇಬೇಕು. ನೀವು ಯಾವ ಕಾರಣಕ್ಕೆ ವೃತ್ತಿ ಬದಲಾವಣೆ ಹುಡುಕುತ್ತಿದ್ದೀರಿ ಮತ್ತು ಹೊಸ ವೃತ್ತಿಯಲ್ಲಿ ನೀವು ಏನನ್ನು ಬಯಸುತ್ತೀರಿ ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು.


    ವಕೀಲರಾಗಿ ವೃತ್ತಿಯನ್ನು ಯಾವಾಗ ಬದಲಾಯಿಸಬೇಕು?


    ವಕೀಲ ವೃತ್ತಿಯು ನಿಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ಕೇಳುತ್ತದೆ. ನೀವು ಜೀವನದ ಬಹುದೊಡ್ಡ ಬದಲಾವಣೆಯನ್ನು ಎದುರು ನೋಡುತ್ತಿದ್ದರೆ, ವೃತ್ತಿ ಹಾಗೂ ವೈಯಕ್ತಿಕ ಜೀವನದ ಸಮತೋಲನ ಬೇಕೆಂದು ಬಯಸಿದರೆ ಅಥವಾ ಕಾನೂನು ವೃತ್ತಿಯಿಂದ ಬೇಸತ್ತಿದ್ದರೆ ನೀವು ನಿಮ್ಮ ವೃತ್ತಿಯನ್ನು ಬದಲಾಯಿಸಬಹುದು.




    ಆದ್ರೆ ಅದಕ್ಕೂ ಮೊದಲು ಈ ಕೆಳಗಿನ ಪ್ರಶ್ನೆಗಳನ್ನು ನಿಮಗೆ ನೀವೇ ಒಮ್ಮೆ ಕೇಳಿಕೊಳ್ಳಿ.


    *ವಕೀಲ ವೃತ್ತಿಯನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆಯೇ?


    *ವಕೀಲನಾಗಿ ನನ್ನ ಶಕ್ತಿಯನ್ನು ಯಾವುದು ಕಡಿಮೆ ಮಾಡುತ್ತಿದೆ?


    *ನನ್ನ ಭಾವೋದ್ರೇಕಗಳು ಯಾವುವು? ನಾನು ಯಾವಾಗ ಹೆಚ್ಚು ತೃಪ್ತಿ ಹೊಂದಿದ್ದೇನೆ ಅಥವಾ ಶಕ್ತಿಯುತವಾಗಿರುತ್ತೇನೆ?


    *ನನ್ನ ಆದರ್ಶ ಕೆಲಸದ ಸಂಸ್ಕೃತಿ ಯಾವುದು? ನಿರ್ವಹಣಾ ಶೈಲಿಯಾ ಅಥವಾ ಕಂಪನಿ ಸಂಸ್ಕೃತಿಯಾ?


    ಇವೆಲ್ಲ ಪ್ರಶ್ನೆಗಳನ್ನು ನೀವು ಕೇಳಿಕೊಂಡಮೇಲೆ ವಕೀಲ ವೃತ್ತಿ ಬದಲಾವಣೆ ಮಾಡಲೇಬೇಕು ಎಂದುಕೊಂಡರೆ ಮೊದಲು ವಕೀಲರಾಗಿ ನಿಮ್ಮ ಸಾಮರ್ಥ್ಯಗಳನ್ನು ಅರಿತುಕೊಳ್ಳಿ.


    ಇದನ್ನೂ ಓದಿ: Professional Growth: ವೃತ್ತಿಪರ ಕೆಲಸಗಾರರು ಎನಿಸಿಕೊಳ್ಳಲು ಟೈಂ ಮ್ಯಾನೇಜ್​ಮೆಂಟ್​ ಹೇಗಿರಬೇಕು?


    ಏಕೆಂದರೆ ನೀವು ಬೇಡಿಕೆಯಲ್ಲಿರುವ ಕೌಶಲ್ಯಗಳೊಂದಿಗೆ ಉತ್ತಮವಾಗಿ ಹೊಂದಿಕೆಯಾಗುವ ಇತರ ವೃತ್ತಿಗಳ ಬಗ್ಗೆ ಯೋಚಿಸಲು ಪ್ರಾರಂಭಿಸಬಹುದು. ಇದರಲ್ಲೂ ನಿಮಗೆ ಸಾಕಷ್ಟು ಅವಕಾಶಗಳಿರುತ್ತವೆ.


    ವಕೀಲರಿಗೆ ಪರ್ಯಾಯ ವೃತ್ತಿಗಳು


    ಕಾನೂನು ಅಭ್ಯಾಸವು ಅನೇಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಅದು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿನ ಅನೇಕ ವೃತ್ತಿ ಅವಕಾಶಗಳನ್ನು. ಅದರಲ್ಲಿ ಮುಖ್ಯವಾದವುಗಳು ಈ ಕೆಳಕಂಡಂತಿವೆ.


    ಕಾನೂನು ಸಲಹೆಗಾರ: ನೀವು ಕಂಪನಿಗೆ ಅಥವಾ ಖಾಸಗಿ ವ್ಯಕ್ತಿಗಳಿಗೆ ಕಾನೂನು ಸಲಹೆಗಾರರಾಗಬಹುದು. ಕ್ಲಿಷ್ಟಕರ ಕಾನೂನು ಸಮಸ್ಯೆಗಳ ಬಗ್ಗೆ ಗ್ರಾಹಕರಿಗೆ ಸಲಹೆ ನೀಡಬಹುದು ಮತ್ತು ಶಿಫಾರಸುಗಳನ್ನು ಮಾಡಬಹುದು.




    ಲೀಗಲ್‌ ಪ್ರಾಜೆಕ್ಟ್‌ ಮ್ಯಾನೇಜ್‌ ಮೆಂಟ್‌ : ಕಾನೂನು ಪ್ರಾಜೆಕ್ಟ್ ಮ್ಯಾನೇಜರ್‌ಗಳು ಕಾನೂನು ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ. ಲೀಗಲ್‌ ಪ್ರಾಜೆಕ್ಟ್‌ ಮ್ಯಾನೇಜರ್‌ ಆದವರು ಸಂಸ್ಥೆಯ ಎಲ್ಲಾ ಕಾನೂನು ಕಾರ್ಯಗಳ ಬಗ್ಗೆ ಪರಿಶೀಲಿಸುತ್ತಾರೆ.


    ಸಂಸ್ಥೆಯ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಗ್ರಾಹಕರ ತೃಪ್ತಿಯನ್ನು ಸುಧಾರಿಸಲು ಮತ್ತು ಆದಾಯವನ್ನು ಹೆಚ್ಚಿಸಲು ತಂತ್ರಗಳನ್ನು ರೂಪಿಸುತ್ತಾರೆ.


    ಕಾನೂನು ಬರವಣಿಗೆ: ಕಾನೂನು ಬರಹಗಾರರಾಗಿಯೂ ನೀವು ಕೆಲಸ ಮಾಡಬಹುದು. ನೀವು ಕಾನೂನು ಸಂಸ್ಥೆಯಿಂದ ಹಿಡಿದು ಸರ್ಕಾರಿ ಏಜೆನ್ಸಿಗೆ, ಮಾರ್ಕೆಟಿಂಗ್ ಕಂಪನಿಗೆ, ಪತ್ರಿಕೆಗಳಿಗೆ ಬರೆಯಬಹುದು.


    ನೀವು ಕಥೆಗಳನ್ನು ಬರೆಯಲು ಮತ್ತು ಆ ಮೂಲಕ ಸಾರ್ವಜನಿಕರಿಗೆ ತಿಳಿಸಲು ಬಯಸಿದರೆ, ಪತ್ರಿಕೋದ್ಯಮವು ನಿಮಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ.


    ಇನ್ನು ನೀವು ಕಾನೂನು ಅಭ್ಯಾಸದಿಂದ ಸಂಪೂರ್ಣವಾಗಿ ಹೊರಬರಲು ಬಯಸದಿದ್ದರೆ, ನೀವು ಕೇಸ್ ಸಂಶೋಧನೆಯಲ್ಲಿ ಕೆಲಸ ಮಾಡಬಹುದು. ಜೊತೆಗೆ ಕಾನೂನು ದಾಖಲೆಗಳನ್ನು ಬರೆಯಬಹುದು.


    ಸಾಂದರ್ಭಿಕ ಚಿತ್ರ


    ಕಾನೂನು ಬಿಲ್ಲಿಂಗ್ ತಜ್ಞರು: ಸಂಖ್ಯೆಗಳನ್ನು ನೀವು ಇಷ್ಟಪಡುವವರಾಗಿದ್ದರೆ ನೀವು ಕಾನೂನು ಬಿಲ್ಲಿಂಗ್ ಅನ್ನು ಪರಿಗಣಿಸಬಹುದು. ಇಲ್ಲಿ ನೀವು ಬಿಲ್ಲಿಂಗ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ನೀವು ಸಂಶೋಧಿಸಬಹುದು. ಇನ್‌ವಾಯ್ಸ್‌ಗಳು ಮತ್ತು ಪ್ರೊಫಾರ್ಮ್‌ಗಳನ್ನು ಸಿದ್ಧಪಡಿಸಬಹುದು.


    ಅಂದಹಾಗೆ ವಕೀಲ ವೃತ್ತಿಯನ್ನು ಬದಲಾಯಿಸುವುದು ಅತ್ಯಂತ ಗಂಭೀರವಾದ ವಿಚಾರ ಅನ್ನೋದನ್ನು ನೀವು ನೆನಪಿಡಬೇಕು. ನೀವು ಕಾನೂನಿನ ಹೊರಗೆ ವೃತ್ತಿಪರ ಸಂಬಂಧಗಳು ಮತ್ತು ಸ್ನೇಹವನ್ನು ಹೊಂದಿದ್ದರೆ ಅವುಗಳನ್ನು ಕೂಡ ಬಳಸಿಕೊಳ್ಳಬಹುದು. ಅವರು ನಿಮ್ಮ ಮುಂದಿನ ವೃತ್ತಿಜೀವನದ ಬಗ್ಗೆ ಮೌಲ್ಯಯುತವಾದ ಸಲಹೆಗಳನ್ನು ನೀಡಬಹುದು.

    Published by:Kavya V
    First published: