• Home
  • »
  • News
  • »
  • career
  • »
  • Labor Law: ನೌಕರರೇ ಅಲರ್ಟ್, ಜಸ್ಟ್ 15 ನಿಮಿಷ ಹೆಚ್ಚು ಕೆಲಸ ಮಾಡಿದರೂ ನಿಮಗೆ ಈ ಲಾಭ ಸಿಗಬೇಕು

Labor Law: ನೌಕರರೇ ಅಲರ್ಟ್, ಜಸ್ಟ್ 15 ನಿಮಿಷ ಹೆಚ್ಚು ಕೆಲಸ ಮಾಡಿದರೂ ನಿಮಗೆ ಈ ಲಾಭ ಸಿಗಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಶಿಫ್ಟ್‌ಗಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದರೆ ಹಾಗೂ 180 ದಿನ ಕೆಲಸ ಮಾಡುವವರಿಗೆ ದೀರ್ಘ ರಜಾದಿನಗಳು ಸಿಗುತ್ತವೆ. ಅಲ್ಲದೇ, ಹೊಸ ಕಾರ್ಮಿಕ ಕಾನೂನಿನ ಪ್ರಕಾರ ನಾಲ್ಕು ದಿನ ಕೆಲಸ ಮತ್ತು ಮೂರು ದಿನ ರಜೆ ನೀಡಲಾಗುತ್ತದೆ.

  • Share this:

    ಭಾರತ ಸರ್ಕಾರ ಶೀಘ್ರದಲ್ಲೇ ದೇಶದಲ್ಲಿ ಹೊಸ ಕಾರ್ಮಿಕ ಕಾನೂನನ್ನು (New Labor Law) ಜಾರಿಗೆ ತರಲಿದೆ. ಅದರ ಪ್ರಕಾರ ಉದ್ಯೋಗಿ (Employee) ಕೇವಲ ಒಂದು ವರ್ಷ ಕೆಲಸ ಮಾಡಿದ ನಂತರ ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಅದೇ ವೇಳೆ, ನೌಕರರು ನಿಗದಿತ ಸಮಯಕ್ಕಿಂತ 15 ನಿಮಿಷಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಓವರ್‌ ಟೈಮ್‌ ಗೂ ಅವರು ಅರ್ಹರಾಗುತ್ತಾರೆ. ಹೌದು, ನೀವು ಶಿಫ್ಟ್‌ಗಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದರೆ ಹಾಗೂ 180 ದಿನ ಕೆಲಸ ಮಾಡುವವರಿಗೆ ದೀರ್ಘ ರಜಾದಿನಗಳು ಸಿಗುತ್ತವೆ. ಅಲ್ಲದೇ, ಹೊಸ ಕಾರ್ಮಿಕ ಕಾನೂನಿನ ಪ್ರಕಾರ ನಾಲ್ಕು ದಿನ ಕೆಲಸ ಮತ್ತು ಮೂರು ದಿನ ರಜೆ ನೀಡಲಾಗುತ್ತದೆ.


    31ಕ್ಕೂ ಹೆಚ್ಚು ರಾಜ್ಯಗಳ ಒಪ್ಪಿಗೆ


    ಕಾರ್ಮಿಕ ಸಚಿವಾಲಯದ ಪ್ರಕಾರ, ಹೊಸ ಕಾರ್ಮಿಕ ಕಾಯ್ದೆಯನ್ನು 30 ಕ್ಕೂ ಹೆಚ್ಚು ರಾಜ್ಯಗಳು ಒಪ್ಪಿಕೊಂಡಿವೆ. ಬಹುತೇಕ ರಾಜ್ಯಗಳು ಇದಕ್ಕಾಗಿ ನಿಯಮಗಳನ್ನು ರೂಪಿಸಿವೆ. ಮೂಲಗಳ ಪ್ರಕಾರ, ಕೆಲವು ರಾಜ್ಯಗಳು ಕೆಲವು ಅಂಶಗಳ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ್ದು, ಇದಕ್ಕಾಗಿ ಚರ್ಚೆಗಳು ನಡೆಯುತ್ತಿವೆ. ಆದರೆ, ಸರ್ಕಾರ ಈ ಕಾನೂನನ್ನು ಯಾವಾಗ ತರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಶೀಘ್ರದಲ್ಲೇ ಹೊಸ ಕಾನೂನು ಜಾರಿಗೆ ಬರಲಿದೆ ಎನ್ನಲಾಗಿದೆ.




    ಹೊಸ ಕಾರ್ಮಿಕ ಕಾಯ್ದೆ ಜಾರಿಗೆ ಬರುವುದರಿಂದ ನೌಕರರಿಗೆ ವಾರದಲ್ಲಿ ಮೂರು ದಿನ ರಜೆ ಸಿಗಲಿದೆ. ನೌಕರರು ವಾರಕ್ಕೆ 48 ಗಂಟೆ ಕೆಲಸ ಮಾಡಬೇಕು. ಈ ಸಮಯದಲ್ಲಿ, ಅರ್ಧ ಗಂಟೆಯ ರಜೆಯೂ ಎರಡು ಬಾರಿ ಲಭ್ಯವಿರುತ್ತದೆ. ಕಂಪನಿಯು 12-ಗಂಟೆಗಳ ಕೆಲಸದ ಶಿಫ್ಟ್ ಅನ್ನು ಜಾರಿಗೊಳಿಸಿದರೆ, ಅದು ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನಗಳ ರಜೆಯನ್ನು ನೀಡಬೇಕಾಗುತ್ತದೆ ಎಂದು ಹೊಸ ಕಾಯ್ದೆ ಹೇಳುತ್ತದೆ.


    ಮಹಿಳಾ ಉದ್ಯೋಗಿಗಳ ಒಪ್ಪಿಗೆಯಿಲ್ಲದೆ ರಾತ್ರಿ ಪಾಳಿ ಇಲ್ಲ


    ಹೊಸ ಕಾನೂನಿನ ಪ್ರಕಾರ, ಒಬ್ಬ ಉದ್ಯೋಗಿ ದೀರ್ಘ ರಜೆ ತೆಗೆದುಕೊಳ್ಳಬೇಕಾದರೆ, ಅವನು ವರ್ಷದಲ್ಲಿ ಕನಿಷ್ಠ 240 ದಿನ ಕೆಲಸ ಮಾಡಬೇಕಾಗಿತ್ತು. ಆದರೆ ಈಗ ಕೇವಲ 180 ದಿನ ಕೆಲಸ ಮಾಡಿದ ನಂತರ ರಜೆ ಪಡೆಯಬಹುದು. ಮಹಿಳಾ ಉದ್ಯೋಗಿಗಳನ್ನು ಅವರ ಒಪ್ಪಿಗೆಯಿಲ್ಲದೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಒತ್ತಾಯಿಸಲಾಗುವುದಿಲ್ಲ ಎಂದು ಹೊಸ ಕಾಯ್ದೆ ಹೇಳುತ್ತದೆ.


    ಇದನ್ನೂ ಓದಿ: Govt Job Interview: ಸರ್ಕಾರಿ ಕೆಲಸಕ್ಕಾಗಿ ನಡೆಯುವ ಸಂದರ್ಶನದಲ್ಲಿ ಕೇಳುವ 25 ಪ್ರಶ್ನೆಗಳ ಪಟ್ಟಿ ಇಲ್ಲಿದೆ


    ಪಿಎಫ್ ಮತ್ತು ಗ್ರಾಚ್ಯುಟಿಯಲ್ಲಿ ಹೆಚ್ಚಿನ ಕಡಿತ


    ಹೊಸ ಕರಡು ನಿಯಮಗಳ ಪ್ರಕಾರ, ಮೂಲ ವೇತನವು ಒಟ್ಟು ವೇತನದ ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚಿನದಾಗಿರುತ್ತದೆ. ಮೂಲ ವೇತನ ಹೆಚ್ಚಳದಿಂದ ಪಿಎಫ್ ಮತ್ತು ಗ್ರಾಚ್ಯುಟಿಗೆ ಕಡಿತವಾಗುವ ಮೊತ್ತ ಹೆಚ್ಚಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ನಿಯಮಗಳು ಜಾರಿಯಾದ ನಂತರ ನೌಕರನ ಕೈಯಲ್ಲಿ ಸಂಬಳ ಕಡಿಮೆಯಾದರೂ ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಹೆಚ್ಚು ಇರುತ್ತದೆ.




    ಎರಡು ದಿನಗಳಲ್ಲಿ ಅಂತಿಮ ಪರಿಹಾರ


    ಹೊಸ ಕಾರ್ಮಿಕ ಕಾನೂನು ಬಂದ ನಂತರ, ನೌಕರರ ಪೂರ್ಣ ಮತ್ತು ಅಂತಿಮ ಪಾವತಿಯನ್ನು ಕೇವಲ ಎರಡು ದಿನಗಳಲ್ಲಿ ಮಾಡಲಾಗುತ್ತದೆ. ಕೆಲಸ ಬಿಟ್ಟರೆ ಅಥವಾ ಕೆಲಸದಿಂದ ವಜಾಗೊಂಡರೆ, ಹಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಕೇವಲ ಎರಡು ದಿನಗಳಲ್ಲಿ ಇತ್ಯರ್ಥಗೊಳ್ಳುತ್ತವೆ. ಸದ್ಯ ಅಂತಿಮ ಪಾವತಿಯನ್ನು ಪೂರ್ಣಗೊಳಿಸಲು ಬರೋಬ್ಬರಿ 45 ದಿನಗಳನ್ನು ತೆಗೆದುಕೊಳ್ಳಲಾಗುತ್ತದೆ.


    ಇನ್ನು, ಯಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ಒಕ್ಕೂಟ ಮತ್ತು ಮಾಲೀಕರ ನಡುವಿನ ಮಾತುಕತೆ ವಿಫಲವಾದರೆ, ಅದನ್ನು ಸರ್ಕಾರಕ್ಕೆ ತಿಳಿಸಲಾಗುವುದು. ವಿಷಯವನ್ನು ನ್ಯಾಯಾಧಿಕರಣಕ್ಕೆ ಕಳುಹಿಸಲಾಗುವುದು. ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ನೌಕರರು ಮುಷ್ಕರ ನಡೆಸುವಂತಿಲ್ಲ. ಒಟ್ಟಾರೆ, ಈ ನೂತನ ಕಾರ್ಮಿಕ ಕಾಯ್ದೆ ಜಾರಿಯಾದಲ್ಲಿ ಪ್ರತಿ ಉದ್ಯೋಗಿ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ರಜೆಗಳಿಂದ ಹಿಡಿದು ಉಳಿತಾಯದ ತನಕ ಈ ಕಾಯ್ದೆಯಲ್ಲಿ ಪ್ರಯೋಜನಗಳಿವೆ.

    Published by:Kavya V
    First published: