JoSAA Seat Allotment Result 2022: ಜೆಇಇ ಸೀಟು ಹಂಚಿಕೆ ಕೌನ್ಸಿಲಿಂಗ್​ ಆರಂಭ; ಫಲಿತಾಂಶಕ್ಕೆ ಹೀಗೆ ಚೆಕ್​ ಮಾಡಿ

JoSAA Seat Allotment Result 2022: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಮತ್ತಿತ್ತರ ಇತರ ಸಂಸ್ಥೆಗಳಿಗೆ ಪ್ರವೇಶಕ್ಕಾಗಿ ಈ ಜೋಸಾ ಕಾನ್ಸೆಲಿಂಗ್​ ಅನ್ನು ನಡೆಸಲಾಗುತ್ತದೆ.

ವಿದ್ಯಾರ್ಥಿಗಳು

ವಿದ್ಯಾರ್ಥಿಗಳು

  • Share this:
    ಜೆಇಇ ಮುಖ್ಯ ಪರೀಕ್ಷೆ (JEE Mains) ಮತ್ತು ಜೆಇಇ ಅಡ್ವಾನ್ಸ್ಡ್ (JEE Advanced) 2022 ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಕುರಿತು ಇಂದು ಜಂಟಿ ಸೀಟು ಹಂಚಿಕೆ ಪ್ರಾಧಿಕಾರ (Joint Seat Allocation Authority) ಫಲಿತಾಂಶ ಬಿಡುಗಡೆ ಮಾಡಿದೆ. ದೇಶಾದ್ಯಂತ ಇಂಜಿನಿಯರಿಂಗ್​ ಕಾಲೇಜುಗಳಲ್ಲಿ ಅಭ್ಯರ್ಥಿಗಳ ಸೀಟು ಹಂಚಿಕೆ ಕುರಿತು ಇಂದು ಮೊದಲ ಸುತ್ತಿನ ಕೌನ್ಸಿಲಿಂಗ್​​ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಸೀಟು ಹಂಚಿಕೆ ಫಲಿತಾಂಶವನ್ನು ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಪರಿಶೀಲನೆ ಮಾಡಬಹುದಾಗಿದೆ.

    ಆರು ಸುತ್ತು ಮೂಲಕ ಸೀಟು ಹಂಚಿಕೆ

    ದೇಶಾದ್ಯಂತ ಏಕಕಾಲಕ್ಕೆ ನಡೆಯುವ ಜೆಇಇ ಪರೀಕ್ಷೆಯ ಸೀಟು ಹಂಚಿಕೆ ಫಲಿತಾಂಶವನ್ನು ಒಟ್ಟು ಆರು ಸುತ್ತುಗಳ ಮೂಲಕ ಜೋಸಾ ಪ್ರಕಟಿಸಲಿದೆ. ಮೊದಲ ಸುತ್ತಿನ ಫಲಿತಾಂಶ ಇಂದು ಪ್ರಕಟವಾಗಿದ್ದು, ಎರಡನೇ ಸುತ್ತಿನ ಫಲಿತಾಂಶ ಸೆಪ್ಟೆಂಬರ್​​ 28ರಂದು ಹೊರಬೀಳಲಿದೆ. 3 ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯು ಅಕ್ಟೋಬರ್ 3 ರಿಂದ 7 ರವರೆಗೆ, 4 ನೇ ಸುತ್ತಿನಲ್ಲಿ ಅಕ್ಟೋಬರ್ 8 ರಿಂದ 11 ರವರೆಗೆ ನಡೆಯಲಿದೆ. 5- ಅಕ್ಟೋಬರ್ 12 ರಿಂದ 15, ಸುತ್ತು 6- ಅಕ್ಟೋಬರ್ 16 ರಿಂದ 17ರವರೆಗೆ ನಡೆಯಲಿದೆ.

    1 ನೇ ಸುತ್ತಿನ ಹಂಚಿಕೆಯಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಸೆಪ್ಟೆಂಬರ್ 26 ರ ಸಂಜೆ 5 ಗಂಟೆಯವರೆಗೆ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ಮಾಹಿತಿ ನೀಡಬಹುದು. ಈ ವೇಳೆ ಅರ್ಜಿದಾರರು ಕೌನ್ಸೆಲಿಂಗ್ ಶುಲ್ಕವನ್ನು ಪಾವತಿ ಮಾಡುವುದರ ಜೊತೆಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

    ಏನಿದು  josaa

    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಮತ್ತಿತ್ತರ ಇತರ ಸಂಸ್ಥೆಗಳಿಗೆ ಪ್ರವೇಶಕ್ಕಾಗಿ ಈ ಜೋಸಾ ಕಾನ್ಸೆಲಿಂಗ್​ ಅನ್ನು ನಡೆಸಲಾಗುತ್ತದೆ.

    ಇದನ್ನು ಓದಿ: ಮಾರ್ಕೆಂಟಿಂಗ್​ ಮ್ಯಾನೇಜರ್ ಹುದ್ದೆಗೆ Walk-in-Interview; ತಿಂಗಳಿಗೆ 50 ಸಾವಿರ ರೂ ವೇತನ

    ಫಲಿತಾಂಶ ವೀಕ್ಷಣೆ ಹೇಗೆ
    ಹಂತ 1: ಅಧಿಕೃತ ವೆಬ್‌ಸೈಟ್ josaa.nic.in ಗೆ ಹೋಗಿ
    ಹಂತ 2: ಸೀಟು ಹಂಚಿಕೆ ಫಲಿತಾಂಶ-ರೌಂಡ್ 1 ವೀಕ್ಷಿಸಿ ಲಿಂಕ್ ಅನ್ನು ಕ್ಲಿಕ್​ ಮಾಡಿ.
    ಹಂತ 3: JEE (ಮುಖ್ಯ) 2022 ರಲ್ಲಿ ನೋಂದಾಯಿಸದ ಮತ್ತು JEE (ಅಡ್ವಾನ್ಸ್ಡ್) 2022 ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಂತರ JEE (ಮುಖ್ಯ) 2022 ಅಪ್ಲಿಕೇಶನ್ ಸಂಖ್ಯೆಯನ್ನು ನೋಂದಾಯಿಸಿ
    ಹಂತ 4: ನಿಮ್ಮ JoSAA ಸೀಟ್ ಹಂಚಿಕೆ ಫಲಿತಾಂಶ-1 2022 ರ ಫಲಿತಾಂಶವು ಪರದೆಯ ಮೇಲೆ ತೋರಿಸುತ್ತದೆ.
    ಹಂತ 5: ಭವಿಷ್ಯದ ಬಳಕೆಗಾಗಿ ನಿಮ್ಮ ಸುತ್ತಿನ 1 ಸೀಟು ಹಂಚಿಕೆ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.

    ಇದನ್ನು ಓದಿ: ದಾವಣಗೆರೆ ವಿವಿಯಲ್ಲಿ ಎಫ್​ಡಿಎ ಸೇರಿ ಹಲವು ಹುದ್ದೆ ನೇಮಕಾತಿ

    ಅಭ್ಯರ್ಥಿಯು ಹಂಚಿಕೆಯಾದ ಸೀಟನ್ನು ಒಪ್ಪಿಕೊಳ್ಳಬೇಕು. ಇಲ್ಲ ಜಂಟಿ ಸೀಟು ಹಂಚಿಕೆಯ ನಂತರದ ಸುತ್ತಿನಲ್ಲಿ ಯಾವುದಾದರೂ ಶೈಕ್ಷಣಿಕ ಕಾರ್ಯಕ್ರಮದ ಆಯ್ಕೆಗಾಗಿ ಸೀಟನ್ನು ಕಾಯ್ದಿರಿಸುವ, ಸ್ಲೈಡ್  ಅಥವಾ ಫ್ಲೋಟ್ಆ ಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕು. ಈ ರೀತಿ ನಿಗದಿಪಡಿಸಿದ ಸೀಟನ್ನು ತಿರಸ್ಕರಿಸುವ ಅಭ್ಯರ್ಥಿಗಳು ಮುಂದಿನ ಶೈಕ್ಷಣಿಕ ವರ್ಷ 2022-23ರ ಜಂಟಿ ಸೀಟು ಹಂಚಿಕೆಯಲ್ಲಿ ಭಾಗವಹಿಸುವಂತಿಲ್ಲ.
    Published by:Seema R
    First published: