ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ (Competitive World) ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿರುವ ಮತ್ತು ಅದಕ್ಕೆ ತಕ್ಕಂತಹ ಸಂಬಳ (Salary) ಇರುವ ಕೆಲಸವನ್ನು ಹುಡುಕುವುದು (Job Search) ಎಂದರೆ ಸುಲಭದ ಮಾತಲ್ಲ ಬಿಡಿ. ಅದರಲ್ಲೂ ನಮಗೆ ಬೇಕಾದ ಸ್ಥಳದಲ್ಲಿ ಮತ್ತು ನಮಗೆ ಬೇಕಾಗುವಂತಹ ಕೆಲಸದ ವಾತಾವರಣ ಸಿಗುವುದು ತುಂಬಾನೇ ಕಷ್ಟ ಅಂತ ಹೇಳಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಒಂದು ಒಳ್ಳೆಯ ಜವಾಬ್ದಾರಿಯುತವಾದ ಸ್ಥಾನಕ್ಕೆ ಒಬ್ಬ ಸರಿಯಾದ ಅಭ್ಯರ್ಥಿಯನ್ನು ಹುಡುಕುವುದು ಸಹ ಹಲವಾರು ಉದ್ಯೋಗದಾತರಿಗೆ ದೊಡ್ಡ ಸವಾಲಿನ ವಿಷಯವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಉದ್ಯೋಗದಾತರಿಗೆ, ಕೆಲಸದ ಪಾತ್ರಕ್ಕೆ ಸರಿಯಾದ ವ್ಯಕ್ತಿಯನ್ನು ಹುಡುಕುವುದು ಒಂದು ದೊಡ್ಡ ಕೆಲಸವೇ ಸರಿ, ಏಕೆಂದರೆ ಹೆಚ್ಚು ಉತ್ಸಾಹಿಯಾಗಿರುವ ಅಭ್ಯರ್ಥಿಗಳಲ್ಲಿ ಇರುವ ಕೌಶಲ್ಯಗಳು ಮತ್ತು ಪದವಿಗಳನ್ನು ಸಹ ಹೊಂದಿರುವ ಒಂದು ಉತ್ತಮವಾದ ರೆಸ್ಯೂಮ್ ಅನ್ನು ನೋಡಲು ಇಷ್ಟಪಡುತ್ತಾರೆ ಅಂತ ಹೇಳಬಹುದು.
ಅದೆಷ್ಟೋ ಬಾರಿ ಈ ಎಲ್ಲಾ ಗುಣಗಳು ಒಬ್ಬ ಅಭ್ಯರ್ಥಿಯಲ್ಲಿ ಇರುವುದು ತುಂಬಾನೇ ಕಷ್ಟ. ಹೀಗಾಗಿ ಒಳ್ಳೆಯ ಅಭ್ಯರ್ಥಿಗೆ ಬೇಕಾದ ಕೆಲಸ ಮತ್ತು ಉದ್ಯೋಗದಾತರಿಗೆ ಬೇಕಾದ ಒಳ್ಳೆಯ ಉದ್ಯೋಗಿ ಅನೇಕ ಬಾರಿ ಸಿಗದೇ ಹೋಗಬಹುದು. ಆದಾಗ್ಯೂ, ಆಗಾಗ್ಗೆ, ಈ ಕೌಶಲ್ಯಗಳು ಮತ್ತು ಅನೇಕ ಪುಟಗಳ ಉದ್ದದ ರೆಸ್ಯೂಮ್ ಗಳು ಸರಿಯಾದ ಕೆಲಸವನ್ನು ಹುಡುಕಿಕೊಡುವಲ್ಲಿ ಅಭ್ಯರ್ಥಿಗೆ ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತವೆ ಅಂತ ಯಾರೂ ನಿಖರವಾಗಿ ಹೇಳಲು ಸಾಧ್ಯವಿಲ್ಲ.
ನಿಮ್ಮ ರೆಸ್ಯೂಮ್ ಮತ್ತು ನೀವು ನಿಮ್ಮನ್ನು ಸಂದರ್ಶನದ ಸಮಯದಲ್ಲಿ ಪ್ರಸ್ತುತ ಪಡಿಸಿಕೊಳ್ಳುವ ರೀತಿಯು ನಿಜವಾಗಿಯೂ ನಿಮಗೆ ಒಳ್ಳೆಯ ಕೆಲಸವನ್ನು ದೊರಕಿಸಿಕೊಡುವಲ್ಲಿ ಸಹಾಯ ಮಾಡಬಹುದು. ನಿಮ್ಮ ರೆಸ್ಯೂಮ್ ಹೆಚ್ಚು ಪುಟಗಳಿಗಿಂತಲೂ ನಿಮ್ಮ ಕೌಶಲ್ಯಗಳು, ಅನುಭವ ಮತ್ತು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುವಂತಿರಬೇಕು.
1. ರೆಸ್ಯೂಮ್ ನ ಪ್ರಾಮುಖ್ಯತೆ
ನಿಮ್ಮ ರೆಸ್ಯೂಮ್ ನಲ್ಲಿ ಬರೆದಿರುವ ವಿವರವು ನಿಮ್ಮ ಮತ್ತು ಉದ್ಯೋಗದಾತರ ನಡುವಿನ ಮೊದಲ ಸಂವಹನ ಬಿಂದುವಾಗಿರುತ್ತದೆ. ಆದ್ದರಿಂದ ಸಾದ್ಯವಾದಷ್ಟು ನಿಮ್ಮ ರೆಸ್ಯೂಮ್ ಅನ್ನು ಚೆನ್ನಾಗಿ ಸ್ಪಷ್ಟವಾಗಿ ಬರೆಯುವುದು ತುಂಬಾನೇ ಮುಖ್ಯವಾಗುತ್ತದೆ.
ನಿಮಗೆ ಶಾಲೆಯಲ್ಲಿ ಲಭಿಸಿದ ಪ್ರಶಸ್ತಿಗಳು ಮತ್ತು ಭಾಗವಹಿಸಿದ ಸ್ಪರ್ಧೆಗಳ ಪಟ್ಟಿಯನ್ನು ನೀವು ರೆಸ್ಯೂಮ್ ನಲ್ಲಿ ಸೇರಿಸಿದ್ದರೆ, ಸಂದರ್ಶಕರು ಅವರ ಉದ್ಯೋಗಕ್ಕೆ ಸಂಬಂಧಪಟ್ಟ ಕೌಶಲ್ಯಗಳು ನಿಮ್ಮಲ್ಲಿವೆಯೇ ಅಂತ ನೋಡಲು ನಿಮ್ಮ ರೆಸ್ಯೂಮ್ ನಲ್ಲಿ ಹುಡುಕಾಡುತ್ತಿರಬಹುದು. ಉದ್ಯೋಗಕ್ಕೆ ಸರಿಹೊಂದುವ ಹಾಗೆ ನಿಮ್ಮ ರೆಸ್ಯೂಮ್ ಅನ್ನು ಸಿಡ್ಡಪಡಿಸಿಕೊಳ್ಳಿರಿ.
2. ಕಂಪನಿಯ ಬಗ್ಗೆ ತಿಳಿದುಕೊಳ್ಳಿ
ಕೆಲಸಕ್ಕೆ ಅರ್ಜಿ ಸಲ್ಲಿಸಿದವರ ಪೈಕಿ ನೀವು ಸ್ವಲ್ಪ ಎಲ್ಲರಿಗಿಂತಲೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳಲು, ಅರ್ಜಿ ಸಲ್ಲಿಸಲಾಗುತ್ತಿರುವ ಕೆಲಸಕ್ಕೆ ಸಂಬಂಧಿಸಿದಂತೆ ಅಗತ್ಯ ಕೌಶಲ್ಯಗಳನ್ನು ಎತ್ತಿ ತೋರಿಸುವ ರೆಸ್ಯೂಮ್ ಗಳನ್ನು ನಿರ್ಮಿಸುವುದು ಅನಿವಾರ್ಯವಾಗಿದೆ.
ಈ ಪ್ರವೃತ್ತಿಯಿಂದ ಉದ್ಭವಿಸುವ ಸಂಬಂಧಿತ ಸಮಸ್ಯೆಯೆಂದರೆ, ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ನಂತರ ಮತ್ತು ಸಂದರ್ಶನ ಮಾಡಿದ ನಂತರ, ಅಭ್ಯರ್ಥಿಯು ಕಂಪನಿ ಮತ್ತು ಅದರ ಉತ್ಪನ್ನಗಳು ಅಥವಾ ಸೇವೆಗಳ ಬಗ್ಗೆ ಚೆನ್ನಾಗಿ ಸಂಶೋಧಿಸಲ್ಪಡುವುದಿಲ್ಲ. ಕಂಪನಿಯನ್ನು ಚೆನ್ನಾಗಿ ತಿಳಿದುಕೊಳ್ಳುವುದು ಮತ್ತು ಅದಕ್ಕೆ ಎಲ್ಲಿ ಹೊಂದಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವುದು ತುಂಬಾನೇ ಸಹಾಯ ಮಾಡಬಹುದು.
3. ಮೃದು ಕೌಶಲ್ಯಗಳನ್ನು ಬೆಳೆಸಿಕೊಳ್ಳಿ
ಹೆಚ್ಚು ಮೌಲ್ಯಯುತವಾದ ಮತ್ತೊಂದು ಸಾಧನವೆಂದರೆ ಮೃದು ಕೌಶಲ್ಯಗಳ ಅಭಿವೃದ್ಧಿ. ಏಕೆಂದರೆ ಉದ್ಯೋಗದಾತರು ಹೆಚ್ಚು ಕೌಶಲ್ಯಗಳಿರುವ ಕೆಲಸಗಾರರನ್ನು ಹುಡುಕುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಒಬ್ಬ ವ್ಯಕ್ತಿಯು ಕಂಪನಿಗೆ ತರುವ ಕೌಶಲ್ಯಗಳಲ್ಲಿ ವಿಶ್ವಾಸ, ರೆಸ್ಯೂಮ್ ನ ಭಾಷೆ, ವೀಡಿಯೋ ಸಂದರ್ಶನದಲ್ಲಿ ಒಬ್ಬ ವ್ಯಕ್ತಿಯು ಹೇಗೆ ಕಾಣುತ್ತಾನೆ ಮತ್ತು ಪ್ರಶ್ನೆಗಳಿಗೆ ಎಷ್ಟು ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಲಾಗುತ್ತದೆ ಎಂಬುದನ್ನು ಒಳಗೊಂಡಿರುವ ಪ್ರಸ್ತುತಿಯಲ್ಲಿ ವಿಶ್ವಾಸ ಸಹ ತುಂಬಾನೇ ಮುಖ್ಯವಾಗುತ್ತದೆ.
4. ಹೊಸ ಕೌಶಲ್ಯಗಳನ್ನು ಕಲಿಯುವುದು ಮುಖ್ಯವಾಗಿದೆ
ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ನಂತರದಲ್ಲಿ ಎಲ್ಲವೂ ಡಿಜಿಟಲೀಕರಣಗೊಳ್ಳುತ್ತಿದ್ದು, ಹೆಚ್ಚು ಕೌಶಲ್ಯಗಳನ್ನು ಹೊಂದಿರುವುದು ತುಂಬಾನೇ ಮುಖ್ಯವಾಗುತ್ತದೆ. ತಂತ್ರಜ್ಞಾನ ಬೆಳೆಯುತ್ತಿರುವ ವೇಗದೊಂದಿಗೆ, ಮಾರುಕಟ್ಟೆ ಪ್ರವೃತ್ತಿಗಳು ಬದಲಾಗುತ್ತಲೇ ಇರುತ್ತವೆ, ಮತ್ತು ಕಂಪನಿಗಳಿಂದ ನಿರೀಕ್ಷೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಆದ್ದರಿಂದ, ಕಂಪನಿಗಳು ಅಭ್ಯರ್ಥಿಯು ಎಷ್ಟರ ಮಟ್ಟಿಗೆ ಕೌಶಲ್ಯಗಳನ್ನು ಹೊಂದಿದ್ದಾರೆ ಮತ್ತು ಅವರು ಕೆಲಸದಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಬಹುದೇ ಎಂದು ಸಹ ನೋಡುತ್ತಾರೆ. ಇದು ಮರು-ಕಲಿಕೆಯ ಉದ್ಯಮದ ಅಂಶಗಳನ್ನು ಒಳಗೊಂಡಿದೆ, ಇದರಲ್ಲಿ ಅಭ್ಯರ್ಥಿಯು ಪರಿಣಿತನಾಗಿರಬಹುದು ಆದರೆ ಉದ್ಯಮವು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಬದಲಾಗಿರುವುದರಿಂದ ಮತ್ತೆ ಕಲಿಯಬೇಕಾದ ಅಗತ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ