• Home
  • »
  • News
  • »
  • career
  • »
  • Job Interview Tips: ನಿಮ್ಮ ಬಗ್ಗೆ ಹೇಳಿ: ಜಾಬ್ ಇಂಟರ್​ವ್ಯೂನಲ್ಲಿ ಕೇಳುವ ಈ ಮೊದಲ ಪ್ರಶ್ನೆಗೆ ನಿಮ್ಮ ಉತ್ತರ ಹೀಗಿರಲಿ

Job Interview Tips: ನಿಮ್ಮ ಬಗ್ಗೆ ಹೇಳಿ: ಜಾಬ್ ಇಂಟರ್​ವ್ಯೂನಲ್ಲಿ ಕೇಳುವ ಈ ಮೊದಲ ಪ್ರಶ್ನೆಗೆ ನಿಮ್ಮ ಉತ್ತರ ಹೀಗಿರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದಿನ ಜಾಬ್​ ಇಂಟರ್​ವ್ಯೂಗಳಲ್ಲಿ ಮೊದಲನೆಯದಾಗಿ ಕೇಳುವ ಬೇಸಿಕ್​ ಪ್ರಶ್ನೆ ನಿಮ್ಮ ಬಗ್ಗೆ ಹೇಳಿ ಅಥವಾ ಇಂಟ್ರಡ್ಯೂಸ್​ ಯುವರ್​ ಸೆಲ್ಫ್​ ಎಂಬುವುದೇ ಆಗಿದೆ. ನನ್ನ ಹೆಸರು, ನನ್ನ ವಯಸ್ಸು ಇಷ್ಟು, ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ನಾನು.. ಎಂದು ಹೇಳುವ ಕಾಲ ಮುಗಿದಿದೆ.

  • Share this:

ನೀವು ಫ್ರೆಶರ್​ (Freshers) ಆಗಿರಲಿ ಇಲ್ಲವೇ ಕೆಲ ವರ್ಷಗಳ ಕಾಲ ಕೆಲಸ ಮಾಡಿದ ಅನುಭವವೇ ಇರಲಿ. ಜಾಬ್​​ ಇಂಟರ್​ವ್ಯೂ (Job Interview) ಎಂದೊಡನೆ ಬಹುತೇಕ ಮಂದಿ ಕೊಂಚ ನರ್ವಸ್​​ ಆಗುತ್ತಾರೆ. ಏಕೆಂದರೆ ಕೆಲಸಕ್ಕಾಗಿ ನಡೆಯುವ ಸಂದರ್ಶನ ನಿಮ್ಮ ಕರಿಯರ್​ನ ದಿಕ್ಕನ್ನೇ ಬದಲಿಸಬಹುದು. ಇನ್ನು ಬದಲಾದ ಸಂದರ್ಭದಲ್ಲಿ ಸಂದರ್ಶನಗಳ ರೀತಿ-ನೀತಿಗಳಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಸಂದರ್ಶನಕಾರರು ಈಗ ನಿಮ್ಮ ಬುದ್ಧಿಶಕ್ತಿಯನ್ನು ಪರೀಕ್ಷಿಸುವುದಕ್ಕಿಂತ ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಾಗಿ ನೋಡುತ್ತಾರೆ. ಎಲ್ಲಾ ಮಾದರಿಯ ಕೆಲಸಗಳ ಸಂದರ್ಶನವೂ ಕಾರ್ಪೊರೇಟ್​ಮಯವಾಗಿದೆ ಎಂದರೆ ತಪ್ಪಾಗಲಾರದು. ನೀವು ಅರ್ಜಿ ಹಾಕಿರುವ ಕೆಲಸದ ಬಗ್ಗೆ ಮಾತ್ರ ನೀವು ಇಂಟರ್​ವ್ಯೂನಲ್ಲಿ ಹೇಳಿದರೆ ಸಾಕಾಗದು. ಸಾವಿರಾರು ಅಭ್ಯರ್ಥಿಗಳ ಮಧ್ಯೆ ನಿಮ್ಮನ್ನು ಆಯ್ಕೆ ಮಾಡಬೇಕೆಂದರೆ ನಿಮ್ಮಲ್ಲಿ ಕೆಲವೊಂದು ಕೌಶಲ್ಯಗಳು ಇರಬೇಕು.


ಇಂದಿನ ಜಾಬ್​ ಇಂಟರ್​ವ್ಯೂಗಳಲ್ಲಿ ಮೊದಲನೆಯದಾಗಿ ಕೇಳುವ ಬೇಸಿಕ್​ ಪ್ರಶ್ನೆ ನಿಮ್ಮ ಬಗ್ಗೆ ಹೇಳಿ ಅಥವಾ ಇಂಟ್ರಡ್ಯೂಸ್​ ಯುವರ್​ ಸೆಲ್ಫ್​ ಎಂಬುವುದೇ ಆಗಿದೆ. ನನ್ನ ಹೆಸರು, ನನ್ನ ವಯಸ್ಸು ಇಷ್ಟು, ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ನಾನು.. ಎಂದು ಹೇಳುವ ಕಾಲ ಮುಗಿದಿದೆ. ಈ ರೀತಿ ಉತ್ತರಿಸುವುದು ನಿಮ್ಮನ್ನು ಸಾಮಾನ್ಯ ಅಭ್ಯರ್ಥಿಯಾಗಿಸುತ್ತದೆ. ಮೊದಲ ಪ್ರಶ್ನೆಯ ಉತ್ತರದಲ್ಲೇ ನೀವು ಸಂದರ್ಶಕರ ಮೇಲೆ ಒಳ್ಳೆಯ ಇಂಪ್ರೆಶನ್​ ಕ್ರಿಯೇಟ್​ ಮಾಡಬೇಕು ಎಂದರೆ ಸ್ಮಾರ್ಟ್​ ಆಗಿ ಈ ಪ್ರಶ್ನೆಗೆ ಉತ್ತರಿಸಬೇಕು. ಅದಕ್ಕಾಗಿ ನೀವು SEAT ಫಾರ್ಮುಲಾ ಬಳಸಿ.


ಇದನ್ನೂ ಓದಿ: Job Interviewನಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆ, ಅದಕ್ಕೆ ಹೇಳಬೇಕಾದ ಸರಿಯಾದ ಉತ್ತರ ಇಲ್ಲಿದೆ


ಇಂಟ್ರಡ್ಯೂಸ್​ ಯುವರ್​ ಸೆಲ್ಫ್​..


ಈ ಪ್ರಶ್ನೆಗೆ ನಿಮ್ಮ ಹೆಸರು, ವಯಸ್ಸು, ಕುಟುಂಬದ ವಿವರ, ಮದುವೆಯಾಗಿದೆಯೇ ಇಲ್ಲವೇ ಎಂದೆಲ್ಲಾ ಹೇಳುವುದು ಅಗತ್ಯವಿಲ್ಲ. ಅದರ ಬದಲಿಗೆ ನೀವು SEAT ಸೂತ್ರವನ್ನು ಬಳಸಿ ನಿಮ್ಮನ್ನು ಪರಿಚಯ ಮಾಡಿಕೊಳ್ಳುವುದನ್ನು ಕಲಿಯಿರಿ. ಹಾಗಾದರೆ ಈ SEAT ಎಂದರೆ ಏನು ಎಂದು ಮೊದಲಿಗೆ ತಿಳಿಯೋಣ.




S- SKILLS


ಸೀಟ್​ ಫಾರ್ಮುಲಾದ ಮೊದಲ ಅಕ್ಷರ ಎಸ್​ ಎಂದರೆ ಸ್ಕಿಲ್ಸ್​. ಜಾಬ್​ ಇಂಟರ್​ವ್ಯೂನಲ್ಲಿ ಮೊದಲಿಗೆ ನಿಮ್ಮ ಸ್ಕಿಲ್ಸ್​ ಅಂದರೆ ಕೌಶಲ್ಯಗಳ ಬಗ್ಗೆ ಮಾತನಾಡಬೇಕು. ನೀವು ಅಪ್ಲೈ ಮಾಡಿರುವ ಕೆಲಸಕ್ಕೆ ಬೇಕಿರುವ, ನಿಮ್ಮಲ್ಲಿರುವ ಕೌಶಲ್ಯದ ಬಗ್ಗೆ ಹೇಳಬೇಕು. ಉದಾಹರಣೆಗೆ ನೀವು ನ್ಯೂಸ್​ ರಿಪೋಟರ್​​ ಕೆಲಸಕ್ಕೆ ಇಂಟರ್​ವ್ಯೂ ನೀಡುತ್ತಿದ್ದರೆ,  ತಮ್ಮಲ್ಲಿ ಕಮ್ಯುನಿಕೇಷನ್​ ಸ್ಕಿಲ್ಸ್​ ಚೆನ್ನಾಗಿದೆ ಎಂಬುದನ್ನು ಕಡಿಮೆ ವಾಕ್ಯಗಳಲ್ಲಿ ಹೇಳಬೇಕು. ಜನರೊಂದಿಗೆ ಸಂಪರ್ಕದಲ್ಲಿರುವುದು ನನ್ನ ವ್ಯಕ್ತಿತ್ವದ ಗುಣಗಳಲ್ಲಿ ಒಂದು. ಅದೇ ನನ್ನ ಉದ್ಯೋಗವೂ ಆದರೆ ನನ್ನ ಕೆಲಸಕ್ಕೆ ನಾನು ಹೆಚ್ಚಿನ ನ್ಯಾಯವನ್ನು ಒದಗಿಸಬಹುದು ಎಂದು ವಿವರಿಸಿ.




E- EXPERIENCE & EDUCATION


ಸೀಟ್​ ಫಾರ್ಮುಲಾದ ಎರಡನೇ ಅಕ್ಷರ E ಅಂದರೆ ಎಕ್ಸಪೀರಿಯನ್ಸ್​​ ಹಾಗೂ ಎಜುಕೇಷನ್​ ಎಂದು. ಇಲ್ಲಿ ನಿಮ್ಮ ಕೆಲಸದಲ್ಲಿ ನಿಮಗಿರುವ ಅನುಭವ ಹಾಗೂ ನಿಮ್ಮ ಶಿಕ್ಷಣದ ಬಗ್ಗೆ ವಿವರಿಸಬೇಕು. ಯಾವ ಕಾಲೇಜಿನಿಂದ ಯಾವ ಪದವಿ ಪಡೆದಿದ್ದೀರಿ. ಈ ಹಿಂದೆ ಎಲ್ಲಿ, ಎಷ್ಟು ವರ್ಷ, ಯಾವ ಹುದ್ದೆಯಲ್ಲಿ ಕೆಲಸ ಮಾಡಿದ್ದೀರಿ ಎಂದು ಸಂದರ್ಶಕರಿಗೆ ತಿಳಿಸಿ.


Heading for a job interview What should your dress be like Here are some super tips for that stg asp
ಸಾಂಕೇತಿಕ ಚಿತ್ರ


A ACHIVEMENTS


ಸೀಟ್​​ ಫಾರ್ಮುಲಾದ 3ನೇ ಅಕ್ಷರ A ಅಂದರೆ ಅಚೀವ್​ಮೆಂಟ್​. ಇಲ್ಲಿ ನೀವು ನಿಮ್ಮ ಸಾಧನೆ ಬಗ್ಗೆ ವಾಸ್ತವಕ್ಕೆ ಹತ್ತಿರ ಇರುವಂತೆ ಹೇಳಬೇಕು. ಫ್ರೆಶರ್​ ಆಗಿದ್ದರೆ ಓದಿನ ಸಮಯದಲ್ಲಿ ನೀವು ಮಾಡಿದ ಸಾಧನೆ ಬಗ್ಗೆ ಹೇಳಬೇಕು. ಇಲ್ಲವೇ ಹಿಂದಿನ ಕೆಲಸದಲ್ಲಿ ನೀವು ಎಷ್ಟು ಯಶಸ್ವಿಯಾಗಿ ಕೆಲಸ ಮಾಡಿದ್ದೀರಿ ಎಂದು ಹೇಳಬೇಕು.




T- TYPE OF PERSON YOU ARE


ಸೀಟ್​ ಫಾರ್ಮುಲಾದ ಕೊನೆಯ ಅಕ್ಷರ T ಎಂದರೆ ಟೈಪ್​ ಆಫ್​ ಪರ್ಸನ್​ ಯುವರ್​ ಅಂತ. ನೀವು ಎಂಥಹ ವ್ಯಕ್ತಿ ಎಂದು ಹೇಳಬೇಕು. ಉದಾಹರಣೆಗೆ ನಾನು ಕೆಲಸದಲ್ಲಿ ಸವಾಲುಗಳನ್ನು ಹಾಗೂ ಸಮಸ್ಯೆಗಳಿಗೆ ಭಿನ್ನವಾದ,  ಹೊಸದಾದ ಪರಿಹಾರಗಳನ್ನು ಕಂಡು ಹಿಡಿಯುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದಾಗಿ ಹೇಳಬೇಕು.

Published by:Kavya V
First published: