• Home
 • »
 • News
 • »
 • career
 • »
 • Job for Freshers: ಈ 5 ಉದ್ಯಮಗಳಲ್ಲಿ ಕೆಲಸಕ್ಕೆ ಹೊಸಬರೇ ಬೇಕಂತೆ: ಫ್ರೆಶರ್​​ಗಳಿಗೆ ಫುಲ್ ಡಿಮ್ಯಾಂಡ್

Job for Freshers: ಈ 5 ಉದ್ಯಮಗಳಲ್ಲಿ ಕೆಲಸಕ್ಕೆ ಹೊಸಬರೇ ಬೇಕಂತೆ: ಫ್ರೆಶರ್​​ಗಳಿಗೆ ಫುಲ್ ಡಿಮ್ಯಾಂಡ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಉದ್ಯೋಗಾವಕಾಶಗಳು ತೆರೆದಿರುವುದು ಫ್ರೆಶರ್​​ಗಳಿಗೆ ನೆಮ್ಮದಿ ತಂದಿದೆ. ಈ ಸಮಯದಲ್ಲಿ ಫ್ರೆಶರ್‌ಗಳನ್ನು ನೇಮಿಸಿಕೊಳ್ಳುತ್ತಿರುವ ಐದು ಉದ್ಯಮಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

 • Share this:

  ಎರಡು ವರ್ಷಗಳ ನಂತರ ಸಾಂಕ್ರಾಮಿಕ (Pandemic) ಬಳಿಕ ಉದ್ಯೋಗ ಮಾರುಕಟ್ಟೆಯಲ್ಲಿ (Job Market) ಪ್ರಸ್ತುತ ನೇಮಕಾತಿ (Recruitment) ಜೋರಾಗಿದೆ. ಹಾಗಾಗಿ ಉದ್ಯಮ ಕ್ಷೇತ್ರದಲ್ಲಿ ಪ್ರತಿಭಾವಂತರು, ಆಗ ತಾನೇ ಕಲಿಕೆ ಮುಗಿಸಿದ ಯುವ ಪ್ರತಿಭೆಗಳು, ಕೌಶಲ್ಯಗಳನ್ನು ಹೊಂದಿರುವ ವೃತ್ತಿಪರರರು, ಫ್ರೆಶರ್ಸ್‌ ಎದುರು ನೋಡುತ್ತಿರುವ ಅವಕಾಶ ಬಂದಿದೆ. ಉದ್ಯೋಗಾವಕಾಶಗಳು ತೆರೆದಿರುವುದು ಫ್ರೆಶರ್​ಗಳಿಗೆ ನೆಮ್ಮದಿ ತಂದಿದೆ. ಈ ಸಮಯದಲ್ಲಿ ಫ್ರೆಶರ್‌ಗಳನ್ನು ನೇಮಿಸಿಕೊಳ್ಳುತ್ತಿರುವ ಐದು ಉದ್ಯಮಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. 


  1) ಮಾಹಿತಿ ಮತ್ತು ತಂತ್ರಜ್ಞಾನ (IT)ವಲಯ : ವರದಿಯೊಂದರ ಪ್ರಕಾರ, ಐಟಿ ವಲಯವು ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು 65% ಕ್ಕಿಂತ ಹೆಚ್ಚು ಉತ್ಸಾಹವನ್ನು ತೋರಿಸುತ್ತಿದೆ. ವಾಸ್ತವವಾಗಿ, ಐಟಿ ವಲಯವು ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸುಮಾರು ಒಂದು ಲಕ್ಷ ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ. ಉದ್ಯಮದಲ್ಲಿ ಹೆಚ್ಚಿದ ರಫ್ತುಗಳು (FY 22-23 ರಲ್ಲಿ 8-10% ಹೆಚ್ಚಳ), ಸಾಫ್ಟ್‌ವೇರ್ ಉತ್ಪನ್ನಗಳ ಗಮನಾರ್ಹ ಬೆಳವಣಿಗೆ ಮತ್ತು ಕೇಂದ್ರ ಸರ್ಕಾರವು USD 111.58 ಶತಕೋಟಿ ಬಜೆಟ್ ಅನ್ನು ಇದಕ್ಕಾಗಿ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಈ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ.


  Central Silk Board Recruitment 2022 apply for scientist b posts
  ಸಾಂದರ್ಭಿಕ ಚಿತ್ರ


  2) ಶಿಕ್ಷಣ ಕ್ಷೇತ್ರ: ಸಾಂಕ್ರಾಮಿಕ ಕೋವಿಡ್‌ ಸಮಯದಲ್ಲಿ ಇಡೀ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್‌ ಕ್ರಾಂತಿಯಾಗಿದೆ. ಈ ಉದ್ಯಮವು ಡಿಜಿಟಲ್-ಮೊದಲ ಮಾದರಿಗೆ ಅತ್ಯಂತ ಕಡಿಮೆ ಸಮಯದಲ್ಲಿ ಅತೀ ವೇಗವಾಗಿ ಹೊಂದಿಕೊಳ್ಳಬೇಕಾಗಿತ್ತು. ರೆಡ್‌ಸೀರ್ ಮತ್ತು ಒಮಿಡಿಯಾರ್ ನೆಟ್‌ವರ್ಕ್‌ನ ವರದಿಯ ಪ್ರಕಾರ, ಭಾರತದ ಎಡ್ಟೆಕ್ (Ed-tech)ಮಾರುಕಟ್ಟೆಯು 2022 ರ ವೇಳೆಗೆ $3.5Biilion ಅನ್ನು ಮುಟ್ಟುತ್ತದೆ ಮತ್ತು ಉನ್ನತ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸುತ್ತವೆ.
  ಅಂದರೆ ಬೆಳವಣಿಗೆಯನ್ನು ಬೆಂಬಲಿಸಲು ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಅನಿವಾರ್ಯವಾಗಿದೆ. ವಾಸ್ತವವಾಗಿ, edtech ಸ್ಟಾರ್ಟ್‌ಅಪ್‌ಗಳಲ್ಲಿ ಮಾರಾಟ, ಮಾರ್ಕೆಟಿಂಗ್, ವಿಷಯ, ವಿನ್ಯಾಸ ಮತ್ತು ತಾಂತ್ರಿಕ ಸ್ಥಾನದಲ್ಲಿ ಹೆಚ್ಚಿನ ಅವಕಾಶಗಳಿರುತ್ತವೆ.


  3) ಟೆಲಿಕಾಂ ವಲಯ: ಪ್ರಸ್ತುತ ನೇಮಕಾತಿಯ ಭರಾಟೆಯಲ್ಲಿರುವ ಮತ್ತೊಂದು ವಲಯವೆಂದರೆ ಟೆಲಿಕಾಂ ಉದ್ಯಮ. ಉದ್ಯಮದ ವರದಿಗಳ ಪ್ರಕಾರ, ಟೆಲಿಕಾಂ ಕಂಪನಿಗಳು INR 3,000 ಕೋಟಿಗಳನ್ನು ತುಂಬುವ ನಿರೀಕ್ಷೆಯಿದೆ. ಭಾರತದಾದ್ಯಂತ ಡೇಟಾ ಕೇಂದ್ರಗಳ ವಿಸ್ತರಣೆಯನ್ನು ಉತ್ತೇಜಿತವಾಗಲಿದೆ. ಹೆಚ್ಚುವರಿಯಾಗಿ, IoT, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಂತಹ 5G-ಕೇಂದ್ರಿತ ತಂತ್ರಜ್ಞಾನಗಳಲ್ಲಿ ಉದ್ಯೋಗದ ಪಾತ್ರಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದಕ್ಕೆ ಡೊಮೇನ್‌ನಲ್ಲಿ ಕಿರಿಯ ಮತ್ತು ತಾಜಾ ಪ್ರತಿಭೆಗಳ ಒಳಗೊಳ್ಳುವಿಕೆ ಅಗತ್ಯವಿರುತ್ತದೆ.


  ಇದನ್ನೂ ಓದಿ: New Job Secret: ಹೊಸದಾಗಿ ಕೆಲಸಕ್ಕೆ ಸೇರುವ ಪ್ರತಿ ಉದ್ಯೋಗಿಯೂ ತಿಳಿದಿರಬೇಕಾದ ರಹಸ್ಯ ಇದು


  4) ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್: ಅಕ್ಟೋಬರ್ ತಿಂಗಳು ಹತ್ತಿರವಾಗುತ್ತಿದ್ದಂತೆ, ಲಾಜಿಸ್ಟಿಕ್ಸ್ ಮತ್ತು ಇ-ಕಾಮರ್ಸ್ ಕಂಪನಿಗಳು ಹಬ್ಬದ ಋತುವಿನ ಬೇಡಿಕೆಗಳನ್ನು ಪೂರೈಸಲು ತಮ್ಮ ನೇಮಕಾತಿ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ. ಉದ್ಯಮವು ಪ್ರಸ್ತುತ ಕಾರ್ಯಾಚರಣೆಗಳು, ಮಾರಾಟಗಳು, ಮಾರ್ಕೆಟಿಂಗ್ ಮತ್ತು ಸೇವೆ ಸೇರಿದಂತೆ ಬಹು ಪ್ರೊಫೈಲ್‌ಗಳಲ್ಲಿ ತಾಜಾ ಸ್ಥಾನಗಳನ್ನು ತುಂಬಲು ನೋಡುತ್ತಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ನಿಮ್ಮನ್ನು ಎದುರು ನೋಡುತ್ತಿವೆ.


  5) ಫಿನ್‌ಟೆಕ್: ಇ-ಲೆಂಡಿಂಗ್‌ನಲ್ಲಿ ಹೆಚ್ಚುತ್ತಿರುವ ಬೇಡಿಕೆಯ ಜೊತೆಗೆ ಹಣಕಾಸು ಸೇವೆಗಳ ಡಿಜಿಟಲೀಕರಣವು ಭಾರತದಲ್ಲಿ ಅನೇಕ ಫಿನ್‌ಟೆಕ್ ಸಂಸ್ಥೆಗಳು ಪ್ರವರ್ಧಮಾನಕ್ಕೆ ಬಾಗಿಲು ತೆರೆದಿದೆ. ಇದು ದೇಶದಲ್ಲಿ ಇದೀಗ ವೇಗವಾಗಿ ಬೆಳೆಯುತ್ತಿರುವ ಮತ್ತು ಬೇಡಿಕೆಯಲ್ಲಿರುವ ಉದ್ಯಮಗಳಲ್ಲಿ ಒಂದಾಗಿದೆ. ಅದರಲ್ಲೂ ವಿಶೇಷವಾಗಿ ಹೊಸಬರಿಗೆ ಹೆಚ್ಚು ಕೌಶಲ್ಯದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಈ ವಲಯದಲ್ಲಿನ ಡೇಟಾ ಸೈನ್ಸ್, ಡೆವೊಪ್ಸ್, ಬ್ಲಾಕ್‌ಚೈನ್ ಮತ್ತು ಸೈಬರ್ ಸೆಕ್ಯುರಿಟಿ ವಿಭಾಗಗಳು ಯುವ ಪ್ರತಿಭೆಗಳನ್ನು ಹುಡುಕುತ್ತಿವೆ.
  ಒಟ್ಟಾರೆ, ಮೇಲೆ ಹೇಳಲಾಗಿರುವ ಕ್ಷೇತ್ರಗಳಲ್ಲಿ ಫ್ರೆಶರ್ಸ್‌ ಗೆ ಸಾಕಷ್ಟು ಅವಕಾಶಗಳಿದ್ದು, ಅವರು ಈ ವಿಭಾಗದಲ್ಲಿ ಓದಿದ್ದರೆ ಅಥವಾ ಈ ವಲಯದಲ್ಲಿ ಕೆಲಸ ಮಾಡಲು ಬೇಕಾಗಿರುವ ಕೌಶಲ್ಯಗಳನ್ನು ಹೊಂದಿದ್ದರೆ ಖಂಡಿತವಾಗಿಯೂ ಅವಕಾಶಗಳನ್ನು ಪಡೆದುಕೊಂಡು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು.

  Published by:Kavya V
  First published: