• Home
  • »
  • News
  • »
  • career
  • »
  • Infosys: ‘ಮೂನ್‌ಲೈಟಿಂಗ್’ ಬಗ್ಗೆ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಒಂದು ಹೊಸ ಸುದ್ದಿ ನೀಡಿದೆ

Infosys: ‘ಮೂನ್‌ಲೈಟಿಂಗ್’ ಬಗ್ಗೆ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಒಂದು ಹೊಸ ಸುದ್ದಿ ನೀಡಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Infosys: ಮನೆಯಲ್ಲಿ ಕುಳಿತು ಒಂದು ಕೆಲಸಕ್ಕಿಂತ ಹೆಚ್ಚು ಕೆಲಸಗಳನ್ನು ಒಂದೇ ಸಮಯಕ್ಕೆ ಮಾಡುವುದನ್ನು ಶುರು ಮಾಡಿದ್ದರು. ಇದನ್ನು ಐಟಿ ಕಂಪನಿಗಳು ‘ಮೂನ್‌ಲೈಟಿಂಗ್’ ಅಂತ ಹೊಸ ಹೆಸರು ನೀಡಿದರು.

  • Share this:

ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ವಿಪ್ರೋ (Wipro) ಕಂಪನಿಯ ಅಧ್ಯಕ್ಷ ರಿಷದ್ ಪ್ರೇಮ್‌ಜೀ ಅವರು ತಮ್ಮ ಕಂಪನಿಯ 300 ಕ್ಕೂ ಹೆಚ್ಚು ಉದ್ಯೋಗಿಗಳನ್ನು (Employees) ಒಂದೇ ಸಮಯದಲ್ಲಿ ಕೆಲಸದಿಂದ ತೆಗೆದು ಹಾಕಿದ್ದರು. ಅದಕ್ಕೆ ಕಾರಣ ಎಂದರೆ ಕಂಪನಿಯ ಉದ್ಯೋಗಿಗಳು ‘ಮೂನ್‌ಲೈಟಿಂಗ್’ (Moon Lighting) ಮಾಡಿರುವುದು ಕಂಡು ಬಂದಿರುವುದರಿಂದ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂಬ ಕಾರಣವನ್ನು (Reason) ನೀಡಿದ್ದರು.


ಏನಿದು ‘ಮೂನ್‌ಲೈಟಿಂಗ್’?


ಈ ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅನೇಕರು ‘ಮೂನ್‌ಲೈಟಿಂಗ್’ ಮಾದರಿಯ ಕೆಲಸಕ್ಕೆ ಕೈ ಹಾಕಿದ್ದು, ಮನೆಯಲ್ಲಿ ಕುಳಿತು ಒಂದು ಕೆಲಸಕ್ಕಿಂತ ಹೆಚ್ಚು ಕೆಲಸಗಳನ್ನು ಒಂದೇ ಸಮಯಕ್ಕೆ ಮಾಡುವುದನ್ನು ಶುರು ಮಾಡಿದ್ದರು. ಇದನ್ನು ಐಟಿ ಕಂಪನಿಗಳು ‘ಮೂನ್‌ಲೈಟಿಂಗ್’ ಅಂತ ಹೊಸ ಹೆಸರು ನೀಡಿದರು.


ಇತ್ತೀಚೆಗೆ ಈ ‘ಮೂನ್‌ಲೈಟಿಂಗ್’ ಬಗ್ಗೆ ಐಟಿ ದೈತ್ಯರು ಬೇರೆ ಬೇರೆಯಾದ ಅಭಿಪ್ರಾಯಗಳನ್ನು ಹೊಂದಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಏನಾದರೂ ಕೆಲಸ ಮಾಡಿ, ಆದರೆ ಕಂಪನಿಯ ಕೆಲಸವನ್ನು ಮಾತ್ರ ಮೊದಲು ಮಾಡಿ ಅಂತ ಹೇಳಿದರೆ, ಇನ್ನೂ ಕೆಲವು ಕಂಪನಿಗಳು ಈ ‘ಮೂನ್‌ಲೈಟಿಂಗ್’ ಅನ್ನು ಒಪ್ಪಿಕೊಳ್ಳಲು ತಯಾರಿಲ್ಲ ಅಂತ ಹೇಳಬಹುದು.


‘ಮೂನ್ಲೈಟಿಂಗ್’ ಬಗ್ಗೆ ವಿಪ್ರೋ ಹೇಳಿದ್ದೇನು?


ವಿಪ್ರೋ ಕಂಪನಿ ಈ ‘ಮೂನ್‌ಲೈಟಿಂಗ್’ ಪ್ರಕ್ರಿಯೆಯಲ್ಲಿ ಅದರ ಪ್ರತಿಸ್ಪರ್ಧಿಗಳ ಜೊತೆಗೆ ತಮ್ಮ ಉದ್ಯೋಗಿಗಳು ಕೆಲಸ ಮಾಡುತ್ತಿರುವುದು ಕಂಡು ಬಂದ ನಂತರ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ್ದರು. ಈ ಹಿಂದೆ ‘ಮೂನ್‌ಲೈಟಿಂಗ್’ ಬಗ್ಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದ ಕಂಪನಿಯ ಮುಖ್ಯಸ್ಥರು, ‘ಮೂನ್‌ಲೈಟಿಂಗ್’ ಸಮಗ್ರತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂಬ ತಮ್ಮ ಇತ್ತೀಚಿನ ಹೇಳಿಕೆಗಳಿಗೆ ತಾವು ಬದ್ಧರಾಗಿರುವುದಾಗಿ ಹೇಳಿದರು.


‘ಮೂನ್ಲೈಟಿಂಗ್’ ಬಗ್ಗೆ ಇನ್ಫೋಸಿಸ್ ಏನ್ ಹೇಳ್ತಾ ಇದೆ?


‘ಮೂನ್‌ಲೈಟಿಂಗ್’ ಮತ್ತು ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಬಗ್ಗೆ ಹೆಚ್ಚುತ್ತಿರುವ ಚರ್ಚೆಯ ನಡುವೆ, ಭಾರತದ ಐಟಿ ದೈತ್ಯ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಕಂಪನಿಯ ಆಡಳಿತ ಮಂಡಳಿಯ ಪೂರ್ವಾನುಮತಿಯೊಂದಿಗೆ ಕಂಪನಿಯ ಹೊರಗೆ ಬೇರೆ ಅಲ್ಪಾವಧಿಯ ಕೆಲಸವನ್ನು ತೆಗೆದುಕೊಳ್ಳಲು ಅವಕಾಶ ನೀಡಿದೆ.


ಇದನ್ನು ಆಡಳಿತ ಮಂಡಳಿಯು ಕಳುಹಿಸಿದ ಆಂತರಿಕ ಇ-ಮೇಲ್ ಮೂಲಕ ಕಂಪನಿಯ ಉದ್ಯೋಗಿಗಳಿಗೆ ತಿಳಿಸಲಾಯಿತು. ಈ ಮೂಲಕ, ಇನ್ಫೋಸಿಸ್ ತಮ್ಮ ಉದ್ಯೋಗಿಗಳಿಗೆ ಕಂಪನಿಯ ಹೊರಗೆ ಬೇರೆ ಕಂಪನಿಗಳಿಂದ ಸಿಗುವ ಪ್ರಾಜೆಕ್ಟ್ ಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿದ ಭಾರತದ ಮೊದಲ ಪ್ರಮುಖ ಐಟಿ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.


ಇದನ್ನೂ ಓದಿ: ಈ 5 ಕಾರುಗಳಿಗೆ ಫುಲ್ ಕ್ರೇಜ್, ಸಿಕ್ಕಾಪಟ್ಟೆ ಡಿಮ್ಯಾಂಡ್​! ಅಂಥದ್ದೇನಿದೆ ನೀವೂ ನೋಡಿ


"ಅಲ್ಪಾವಧಿಯ ಕೆಲಸವನ್ನು ತೆಗೆದುಕೊಳ್ಳಲು ಬಯಸುವ ಯಾವುದೇ ಉದ್ಯೋಗಿಯು, ತಮ್ಮ ಮ್ಯಾನೇಜರ್ ಮತ್ತು ಎಚ್ಆರ್ ನ ಪೂರ್ವಾನುಮತಿ ಪಡೆದು ಮತ್ತು ಅವರ ವೈಯಕ್ತಿಕ ಸಮಯದಲ್ಲಿ ಅದನ್ನು ಮಾಡಬಹುದು. ಆದಾಗ್ಯೂ, ಕಂಪನಿಯು ತನ್ನ ಇ-ಮೇಲ್ ನಲ್ಲಿ 'ಮೂನ್‌ಲೈಟಿಂಗ್' ಎಂಬ ಪದವನ್ನು ಬಳಸುವುದರಿಂದ ದೂರ ಉಳಿದಿದೆ, ಏಕೆಂದರೆ ಅದು ಎರಡು ಉದ್ಯೋಗಗಳೆಂದು ಅರ್ಥೈಸುತ್ತದೆ, ಇದು ಐಟಿ ಉದ್ಯಮದಲ್ಲಿ ಪ್ರಮುಖ ವಿವಾದವನ್ನು ಸೃಷ್ಟಿಸಿದೆ.


ಕಂಪನಿ ಕಳುಹಿಸಿದ ಇ-ಮೇಲ್ ನಲ್ಲಿ ಏನಿದೆ?


ಆದಾಗ್ಯೂ, ಇ-ಮೇಲ್ ನಲ್ಲಿ ಉದ್ಯೋಗಿಗಳು ಸೈಡ್ ಪ್ರಾಜೆಕ್ಟ್ ಗಳನ್ನು ತೆಗೆದುಕೊಳ್ಳುವಾಗ ಅನುಸರಿಸಬೇಕಾದ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಿದೆ, ಇದು ಇನ್ಫೋಸಿಸ್ ನಲ್ಲಿ ಅವರ ಕೆಲಸಕ್ಕೆ ಅಡ್ಡಿಯಾಗದಂತೆ ಮಾಡಬಹುದು ಎಂದು ಸ್ಪಷ್ಟವಾಗಿ ಹೇಳಿದೆ.


ಇದನ್ನೂ ಓದಿ: BEMLನಲ್ಲಿ ಕೆಲಸ ಖಾಲಿ ಇದೆ, BE, B Tech ಆಗಿದ್ರೆ ಅಪ್ಲೈ ಮಾಡಿ


"ಇನ್ಫೋಸಿಸ್ ನೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವವರ ಸಾಮರ್ಥ್ಯದ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಉದ್ಯೋಗಿಗಳನ್ನು ಸಂಪೂರ್ಣವಾಗಿ ನಂಬುತ್ತೇವೆ. ಇದಲ್ಲದೆ, ಇನ್ಫೋಸಿಸ್ ಉದ್ಯೋಗ ಒಪ್ಪಂದದ ಪ್ರಕಾರ, ಉದ್ಯೋಗಿಗಳು ಸಂಭಾವ್ಯ ಹಿತಾಸಕ್ತಿ ಸಂಘರ್ಷವಿರುವಲ್ಲಿ ಬೇರೆ ಉದ್ಯೋಗವನ್ನು ಸ್ವೀಕರಿಸುವ ಮೂಲಕ ಕೆಲಸ ಮಾಡುವಂತಿಲ್ಲ" ಎಂದು ಇನ್ಫೋಸಿಸ್ ತನ್ನ ಇ-ಮೇಲ್ ನಲ್ಲಿ ತಿಳಿಸಿದೆ.

First published: