• Home
  • »
  • News
  • »
  • career
  • »
  • Infosys Recruitment Dispute: ಉದ್ಯೋಗಿಗಳ ಆಯ್ಕೆಯಲ್ಲಿ ಇನ್ಫೋಸಿಸ್ ತಾರತಮ್ಯ, ಅಮೆರಿಕಾದಲ್ಲಿ ಸೃಷ್ಟಿಯಾಯ್ತು ವಿವಾದ

Infosys Recruitment Dispute: ಉದ್ಯೋಗಿಗಳ ಆಯ್ಕೆಯಲ್ಲಿ ಇನ್ಫೋಸಿಸ್ ತಾರತಮ್ಯ, ಅಮೆರಿಕಾದಲ್ಲಿ ಸೃಷ್ಟಿಯಾಯ್ತು ವಿವಾದ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Infosys Recruitment Dispute: ತಾರತಮ್ಯದ ನೇಮಕಾತಿ ನೀತಿ ಬಗ್ಗೆ ಭಾರತೀಯ ಐಟಿ ಸಂಸ್ಥೆ ಇನ್ಫೋಸಿಸ್‌ ವಿರುದ್ಧ ಹಲವರು ಮೊಕದ್ದಮೆ ಹೂಡಿದ್ದಾರೆ.

  • Share this:

ಬೆಂಗಳೂರು ಮೂಲದ ಟೆಕ್‌ ಕಂಪನಿ (Tech Company) ಇನ್ಫೋಸಿಸ್‌ ಆಡಳಿತವು ಅಮೆರಿಕಾದಲ್ಲಿ ನೇಮಕಾತಿ ವಿಚಾರವಾಗಿ ಆಗಾಗ್ಗೆ ವಿವಾದವನ್ನು ( Dispute) ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತದೆ. ಭಾರತ ಮೂಲದ ಐಟಿ ಸಂಸ್ಥೆಯು ಭಾರತೀಯ ಮೂಲದವರನ್ನು, ಮಕ್ಕಳಿರುವ ಮಹಿಳೆಯರನ್ನು (Women) ಮತ್ತು 50ಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ನೇಮಿಸಿಕೊಳ್ಳದಂತೆ ಕೇಳಿಕೊಂಡಿದೆ ಎಂದು ಬೆಂಗಳೂರಿನ ಪ್ರಧಾನ ಕಚೇರಿ (Headquarters) ಹೊಂದಿರುವ ಐಟಿ ಕಂಪನಿ ಇನ್ಫೋಸಿಸ್‌ನ (Infosys) ಅಮೆರಿಕ ಘಟಕದ ಟ್ಯಾಲೆಂಟ್‌ ಅಕ್ವೆಸಿಷನ್‌ನ ಮಾಜಿ ಉಪಾಧ್ಯಕ್ಷರಾದ (ವಿಪಿ) ಜಿಲ್ ಪ್ರೀಜೀನ್‌ ಹೇಳಿದ್ದಾರೆ. ತಾರತಮ್ಯದ ನೇಮಕಾತಿ ನೀತಿ ಬಗ್ಗೆ ಭಾರತೀಯ ಐಟಿ ಸಂಸ್ಥೆ ಇನ್ಫೋಸಿಸ್‌ ವಿರುದ್ಧ ಹಲವರು ಮೊಕದ್ದಮೆ ಹೂಡಿದ್ದಾರೆ.


2021ರಲ್ಲಿ ಐಟಿ-ಕಂಪನಿ ಇನ್ಫೋಸಿಸ್ ವಿರುದ್ಧ ಮೊಕದ್ದಮೆ


ಈ ಸಂಬಂಧ, ಇನ್ಫೋಸಿಸ್‌ನಲ್ಲಿ ಪ್ರತಿಭಾ ಉದ್ಯೋಗಿಗಳ ನೇಮಕಾತಿ ವಿಭಾಗದ ಮಾಜಿ ಉಪಾಧ್ಯಕ್ಷೆ ಜಿಲ್ ಪ್ರೀಜೀನ್ ಸೆಪ್ಟೆಂಬರ್ 2021ರಲ್ಲಿ ಐಟಿ-ಕಂಪನಿ ಇನ್ಫೋಸಿಸ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಪ್ರೀಜೀನ್ ಅವರು ಮಾಜಿ ಹಿರಿಯ ವಿಪಿ ಮತ್ತು ಸಲಹಾ ಮುಖ್ಯಸ್ಥ ಮಾರ್ಕ್ ಲಿವಿಂಗ್‌ಸ್ಟನ್ ಮತ್ತು ಮಾಜಿ ಪಾಲುದಾರರಾದ ಡಾನ್ ಆಲ್ಬ್ರೈಟ್ ಮತ್ತು ಜೆರ್ರಿ ಕರ್ಟ್ಜ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಪ್ರತಿಕೂಲವಾದ ಕೆಲಸದ ವಾತಾವರಣಕ್ಕಾಗಿ ಅವರು ಇನ್ಫೋಸಿಸ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.


ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್, ತಾರತಮ್ಯದ ನೇಮಕಾತಿಯ ಆರೋಪದ ಹಿಂದಿರುವ ಕಾರ್ಯನಿರ್ವಾಹಕರ ವಿರುದ್ಧದ ದೂರನ್ನು ವಜಾಗೊಳಿಸುವಂತೆ ಕಂಪನಿಯು ಮಾಡಿದ್ದ ಮನವಿಯನ್ನು ತಿರಸ್ಕರಿಸಿತು. ಸೆಪ್ಟೆಂಬರ್ 30 ರಿಂದ 21 ದಿನಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಧೀಶರು ಆರೋಪಿಗಳಿಗೆ ಸೂಚಿಸಿದ್ದರು. ಇನ್ಫೋಸಿಸ್‌ನಲ್ಲಿ ಪ್ರತಿಭಾ ಉದ್ಯೋಗಿಗಳ ನೇಮಕಾತಿ ವಿಭಾಗದ ಮಾಜಿ ಉಪಾಧ್ಯಕ್ಷೆ ಜಿಲ್ ಪ್ರೀಜೀನ್ ಅಮೆರಿಕಾ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿ ಭಾರತೀಯ ಮೂಲದ ಜನರು, ಮಕ್ಕಳಿರುವ ಮಹಿಳೆಯರು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ತಪ್ಪಿಸುವಂತೆ ಇನ್ಫೋಸಿಸ್ ತನ್ನನ್ನು ಕೇಳಿಕೊಂಡಿತ್ತು ಎಂದು ತಿಳಿಸಿದ್ದರು.


ಈ ಹಿಂದೆಯು ಯುಸ್‌ನಲ್ಲಿ ಇನ್ಫೋಸಿಸ್ ಮೇಲೆ ತಾರತಮ್ಯದ ನೇಮಕಾತಿ ಆರೋಪ


ಇನ್ಫೋಸಿಸ್ ಯುನೈಟೆಡ್ ಸ್ಟೇಟ್ಸಿನಲ್ಲಿ ತಾರತಮ್ಯದ ನೇಮಕಾತಿ ಅಭ್ಯಾಸಗಳ ಆರೋಪಗಳನ್ನು ಈ ಹಿಂದೆಯು ಎದುರಿಸಿತ್ತು. ಇದಕ್ಕೂ ಮೊದಲು, ಸಂಸ್ಥೆಯು ಭಾರತೀಯ ಮತ್ತು ಪುರುಷ ಕಾರ್ಮಿಕರಿಗೆ ಒಲವು ತೋರುತ್ತಿದೆ ಎಂದು ಆರೋಪಿಸಿ ನಾಲ್ವರು ಮಹಿಳಾ ಉದ್ಯೋಗಿಗಳು ಸಮಾನ ಉದ್ಯೋಗ ಅವಕಾಶ ಆಯೋಗಕ್ಕೆ ತಾರತಮ್ಯ ದೂರನ್ನು ಸಲ್ಲಿಸಿದ್ದರು.


ರಾಷ್ಟ್ರೀಯತೆಯ ಕಾರಣದಿಂದ ಇನ್ಫೋಸಿಸ್  ತಿರಸ್ಕರಿಸಿತು


2013ರಲ್ಲಿ, ಅಮೇರಿಕಾದ ಇನ್ಫಿ ಉದ್ಯೋಗಿ, ಅರ್ಜಿದಾರ ಬ್ರೆಂಡಾ ಕೊಹ್ಲರ್ ತಮ್ಮ ರಾಷ್ಟ್ರೀಯತೆಯ ಕಾರಣದಿಂದ ಇನ್ಫೋಸಿಸ್ ತನ್ನನ್ನು ತಿರಸ್ಕರಿಸಿತು ಎಂದು ಆರೋಪಿಸಿದ್ದರು. ಯುಎಸ್‌ನಲ್ಲಿ ಇನ್ಫೋಸಿಸ್ ಉದ್ಯೋಗಿಗಳು ದಕ್ಷಿಣ ಏಷ್ಯಾ ಮೂಲದ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಪ್ರೀಜೀನ್ ಅವರು 59 ವರ್ಷದವರಾಗಿದ್ದಾಗ 2018 ರಲ್ಲಿ ಇನ್ಫೋಸಿಸ್‌ಗೆ ನೇಮಕಗೊಂಡರು. ಪ್ರೀಜೀನ್ ಅವರು ಉಪಾಧ್ಯಕ್ಷರು ಮತ್ತು ಪಾಲುದಾರರ ಹಂತಗಳಲ್ಲಿ ಕಾರ್ಯನಿರ್ವಾಹಕರನ್ನು ನೇಮಕ ಮಾಡುವಲ್ಲಿ ಪರಿಣಿತರಾಗಿ ಕೆಲಸ ಮಾಡುತ್ತಿದ್ದರು.


ಇದನ್ನೂ ಓದಿ: ಪಾರ್ಸೆಲ್​ ತೆಗೆದುಕೊಳ್ಳುವ ಮೊದಲು ಹೀಗೆ ಮಾಡಿ! ಇಲ್ಲಾ ಅಂದ್ರೆ ಮೋಸ ಹೋಗ್ತೀರಾ


ಪ್ರೀಜೀನ್ ದೂರಿನ ಪ್ರಕಾರ, ಅವರು ತಮ್ಮ ಉದ್ಯೋಗದ ಮೊದಲ ಎರಡು ತಿಂಗಳಲ್ಲಿ ಈ ಅತಿರೇಕದ ಸಂಸ್ಕೃತಿಯನ್ನು ಬದಲಾಯಿಸಲು ಪ್ರಯತ್ನಿಸಿದರಂತೆ. ಆದರೆ “ಇನ್ಫೋಸಿಸ್ ಪಾಲುದಾರರಾದ ಜೆರ್ರಿ ಕರ್ಟ್ಜ್ ಮತ್ತು ಡಾನ್ ಆಲ್ಬ್ರೈಟ್ ಅವರ ಪ್ರತಿರೋಧವನ್ನು ಎದುರಿಸಬೇಕಾಯಿತು" ಎಂದು ಹೇಳಿದ್ದಾರೆ.


ಇನ್ಫೋಸಿಸ್‌ನಲ್ಲಿ ಚಾಲ್ತಿಯಲ್ಲಿರುವ ಪಕ್ಷಪಾತ


ಭಾರತೀಯ ಮೂಲದ ಹೆಚ್ಚಿನ ಸಲಹೆಗಾರರನ್ನು ನೇಮಿಸಿಕೊಳ್ಳದಿರಲು ಕಂಪನಿಯು ಆದ್ಯತೆ ನೀಡುತ್ತದೆ, ಮನೆಯಲ್ಲಿ ಮಕ್ಕಳಿಲ್ಲದ ಮಹಿಳೆಯರಿಗೆ ಆದ್ಯತೆ ನೀಡುವುದು ಮತ್ತು ಇನ್ನೂ ಐವತ್ತರ ಹರೆಯದ ವ್ಯಕ್ತಿಗಳಿಗೆ ಆದ್ಯತೆ ನೀಡಬೇಕೆಂದು ಇನ್ಫೋಸಿಸ್ ಪಾಲುದಾರರು ಅಥವಾ ಕಾರ್ಯನಿರ್ವಾಹಕರಿಂದ ತಾನು ವಾಡಿಕೆಯಂತೆ ವಿನಂತಿಗಳನ್ನು ಸ್ವೀಕರಿಸಿದ್ದೇನೆ ಎಂದು ಪ್ರೀಜೀನ್ ಹೇಳಿದರು.


ಇನ್ಫೋಸಿಸ್‌ನಲ್ಲಿ ಚಾಲ್ತಿಯಲ್ಲಿರುವ ಪಕ್ಷಪಾತವು ನ್ಯೂಯಾರ್ಕ್ ನಗರದ ಮಾನವ ಹಕ್ಕುಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಮತ್ತು ತನ್ನ ಕೆಲಸವನ್ನು ಸಹ ಕಸಿದುಕೊಳ್ಳುತ್ತಿದೆ ಎಂದು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: ಐಟಿ ದೈತ್ಯ ಇನ್ಫೋಸಿಸ್ಬೈಕ್​​ನಲ್ಲಿ ಲಡಾಖ್ ಹೋಗುವ ಕನಸು ಕಾಣುತ್ತಿದ್ದೀರಾ? ಹಾಗಿದ್ರೆ ಈ ಬೈಕ್ ಬೆಸ್ಟ್


ಇನ್ಫೋಸಿಸ್ ಭಾರತದ ದೊಡ್ಡ ಐಟಿ ಕಂಪನಿಯಾಗಿದ್ದು, ತನ್ನ ಹೂಡಿಕೆದಾರರಿಗೆ ಭಾರಿ ಲಾಭಾಂಶವನ್ನು ನೀಡುತ್ತಿದೆ ಮತ್ತು ಮುಂದಿನ ವಾರ ಹಣಕಾಸು ವರ್ಷ 23 ಗಾಗಿ ತನ್ನ ಮೊದಲ ಮಧ್ಯಂತರ ಲಾಭಾಂಶವನ್ನು ಪ್ರಕಟಿಸಲಿದೆ.


ಐಟಿ ಮೇಜರ್ ತನ್ನ ಸೆಪ್ಟೆಂಬರ್ 2022 ತ್ರೈಮಾಸಿಕ ಗಳಿಕೆಯನ್ನು ಸಹ ಪ್ರಕಟಿಸುತ್ತದೆ. ಕೇವಲ ಹಣಕಾಸು ವರ್ಷ 2022 ರಲ್ಲಿ ಇನ್ಫೋಸಿಸ್ ಷೇರುದಾರರಿಗೆ 620% ಲಾಭಾಂಶವನ್ನು ನೀಡಿತ್ತು.

First published: