• Home
 • »
 • News
 • »
 • career
 • »
 • Google ಸಂಸ್ಥೆಯಲ್ಲಿ ಕೆಲಸ ಸಿಗಬೇಕು ಎಂದರೆ ಈ 20 ಪ್ರಶ್ನೆಗಳಿಗೆ ತಯಾರಾಗಿ ಸಾಕು

Google ಸಂಸ್ಥೆಯಲ್ಲಿ ಕೆಲಸ ಸಿಗಬೇಕು ಎಂದರೆ ಈ 20 ಪ್ರಶ್ನೆಗಳಿಗೆ ತಯಾರಾಗಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗೂಗಲ್ ತನ್ನ ಮಾನವ ಸಂಪನ್ಮೂಲಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಅದಕ್ಕೆ ತನ್ನದೆ ಆದ ರೀತಿಯಲ್ಲಿ ಅಭ್ಯರ್ಥಿಗಳನ್ನು ವಿಶೇಷ, ಕ್ರಿಯಾತ್ಮಕ, ಕಷ್ಟಕರ ಹಾಗೂ ಟ್ರಿಕ್ಕಿ ಪ್ರಶ್ನೆಗಳನ್ನು ಕೇಳುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಅಲ್ಲದೆ, ಅದು ಪ್ರತಿ ಬಾರಿ ಇದೇ ರೀತಿಯ ಪ್ರಶ್ನೆಗಳನ್ನೇ ಕೇಳುತ್ತದೆ ಎನ್ನಲಾಗದು.

ಮುಂದೆ ಓದಿ ...
 • Share this:

  ಟೆಕ್ ಜಗತ್ತಿನಲ್ಲಿ (Tech Companies) ಯಾವ ಕಂಪನಿ ಕೆಲಸ ಮಾಡಲು ಅತ್ಯುತ್ತಮ ಅಥವಾ ಬಹುಜನರ ಪರಮ ಆಸೆ ಯಾವ ಕಂಪನಿಯಲ್ಲಿ ಉದ್ಯೋಗ (JOB)  ಮಾಡುವುದಾಗಿರುತ್ತದೆ ಎಂಬ ಪ್ರಶ್ನೆಯನ್ನು ಯಾರಾದರೂ ಟೆಕ್ ವಿದ್ಯಾರ್ಥಿಗೆ ಕೇಳಿದರೆ ಅವರ ಬಾಯಲ್ಲಿ ಗೂಗಲ್ (GOOGLE) ಎಂಬ ದೈತ್ಯ ಕಂಪನಿಯ ಹೆಸರು ಬರದೇ ಖಂಡಿತ ಇರದು. ಹೌದು, ಜಗತ್ತಿನ ಸರ್ವಶ್ರೇಷ್ಠ ಟೆಕ್ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡ ಹಾಗೂ ಹೆಚ್ಚುಕಡಿಮೆ ಪ್ರತಿ ವರ್ಷವೂ ಕೆಲಸ ಮಾಡಬಯಸುವ ಅತ್ಯುತ್ತಮ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿರುವ ಗೂಗಲ್ ಸಂಸ್ಥೆಯಲ್ಲಿ ಕೆಲಸಗಿಟ್ಟಿಸಿಕೊಳ್ಳುವುದು ಸುಲಭದ ಮಾತು ಅಲ್ಲವೇ ಅಲ್ಲ ಎಂಬುದೂ ಅಷ್ಟೇ ಸತ್ಯ.


  ಗೂಗಲ್ ತನ್ನ ಮಾನವ ಸಂಪನ್ಮೂಲಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಅದಕ್ಕೆ ತನ್ನದೆ ಆದ ರೀತಿಯಲ್ಲಿ ಅಭ್ಯರ್ಥಿಗಳನ್ನು ವಿಶೇಷ, ಕ್ರಿಯಾತ್ಮಕ, ಕಷ್ಟಕರ ಹಾಗೂ ಟ್ರಿಕ್ಕಿ ಪ್ರಶ್ನೆಗಳನ್ನು ಕೇಳುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಅಲ್ಲದೆ, ಅದು ಪ್ರತಿ ಬಾರಿ ಇದೇ ರೀತಿಯ ಪ್ರಶ್ನೆಗಳನ್ನೇ ಕೇಳುತ್ತದೆ ಎನ್ನಲಾಗದು. ಆದಾಗ್ಯೂ ಅದರ ಪರಿಚಯ ನಿಮಗಿರಲಿ ಹಾಗೂ ಆ ದಿಸೆಯಲ್ಲಿ ನೀವು ಇನ್ನಷ್ಟು ಕ್ರಿಯಾತ್ಮಕತೆಯಿಂದ ಅಧ್ಯಯನ ಮಾಡುವಂತಾಗಲಿ ಎಂಬ ದೃಷ್ಟಿಯಿಂದ ಈ ಲೇಖನದಲ್ಲಿ ಈ ಹಿಂದೆ ಗೂಗಲ್ ನಲ್ಲಿ ಕೇಳಲಾಗಿರುವ 20 ಕಷ್ಟಕರ ಪ್ರಶ್ನೆಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.


  ಹುದ್ದೆ: ಸಾಫ್ಟ್ವೇರ್ ಇಂಜಿನಿಯರ್


  ಪ್ರಶ್ನೆ 1: ಬೈನರಿ ಟ್ರೀ ಯನ್ನು ಅನುಷ್ಠಾನ ಮಾಡಿ ಹಾಗೂ ಅದರ ಗುಣಾತ್ಮಕತೆಗಳನ್ನು ವಿವರಿಸಿ.


  ಹುದ್ದೆ: ಅಸೋಸಿಯೇಟ್ ಪ್ರಾಡಕ್ಟ್ ಮ್ಯಾನೆಜರ್


  ಪ್ರಶ್ನೆ 2: ಜಿಮೇಲ್ ನಲ್ಲಿ ಗಿಗಾ ಬೈಟಿನ ಒಂದು ಮಾರ್ಜಿನಲ್ ಪ್ರಮಾಣದ ಬೆಲೆ ಎಷ್ಟು?


  ಹುದ್ದೆ: ಸಾಫ್ಟ್ವೇರ್ ಇಂಜಿನಿಯರ್


  ಪ್ರಶ್ನೆ 3: ಗೂಗಲ್ ಸಂಸ್ಥೆಯು ತನ್ನ ಸರ್ವರ್ ಗಳಿಗಾಗಿ ಹೆಚ್ಚಿನ ರ್‍ಯಾಮ್ ಖರೀದಿಸುವುದೋ ಅಥವಾ ಹೆಚ್ಚಿನ ಡಿಸ್ಕ್ ಸ್ಪೇಸ್ ಖರೀದಿಸುವುದೋ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವೆಚ್ಚದ ಆಧಾರದ ಮೇಲೆ ಸಮರ್ಪಕವಾದಂತಹ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುವಂತಹ ವೆಚ್ಚದ ಮಾದರಿಯನ್ನು ರಚಿಸಿ.
  ಹುದ್ದೆ: ಸಾಫ್ಟ್ವೇರ್ ಇಂಜಿನಿಯರ್


  ಪ್ರಶ್ನೆ 4: ಮಲ್ಟಿಪಲ್ ಕಲೆಕ್ಷನ್ ಗಳ ಮೇಲೆ ಇಟರೇಟರ್ ಅನ್ನು ಬರೆಯಿರಿ


  ಹುದ್ದೆ: ಸಾಫ್ಟ್ವೇರ್ ಇಂಜಿನಿಯರ್


  ಪ್ರಶ್ನೆ 5: ನೀವು ಒಂದು URL ಗೂಗಲ್ ನಲ್ಲಿ ಕೆಟ್ಟದ್ದಾಗಿದ್ದು ಅತ್ಯಂತ ವೇಗಕರವಾಗಿದೆ ಎಂಬುದನ್ನು ಹೇಗೆ ಪತ್ತೆಹಚ್ಚುವಿರಿ?


  ಹುದ್ದೆ: ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್


  ಪ್ರಶ್ನೆ 6: ಕಾನ್ವೆಕ್ಸ್ ಹೆಲ್ ಇದಕ್ಕೆ ಇದಕ್ಕೆ ಪರಿಹಾರವೊಂದನ್ನು ರಚಿಸಿ ಹಾಗೂ ಅದರ ಸಂಕೀರ್ಣತೆಯನ್ನು ವಿವರಿಸಿ


  ಹುದ್ದೆ: ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್


  ಪ್ರಶ್ನೆ 7: ಒಂದು ಶಾಲಾ ಬಸ್ಸಿನಲ್ಲಿ ಎಷ್ಟು ಗಾಲ್ಫ್ ಚೆಂಡುಗಳು ಹಿಡಿಯುತ್ತವೆ?


  ಹುದ್ದೆ: ಇಂಜಿನಿಯರ್


  ಪ್ರಶ್ನೆ 8: ಬೇ ಏರಿಯಾದಲ್ಲಿ ನಿಮಗೆ ಜಾಗಗಳ ಬೆಲೆಗಳನ್ನು ಕೊಟ್ಟರೆ, ನೀವು ಮೀನ್ ಅಥವಾ ಮೇಡಿಯನ್ ಗಳಲ್ಲಿ ಏನನ್ನು ಆರಿಸಿಕೊಳ್ಳುವಿರಿ? ಏಕೆ?
  ಹುದ್ದೆ: ಪ್ರಾಡಕ್ಟ್ ಮ್ಯಾನೆಜರ್


  ಪ್ರಶ್ನೆ 9: ಬ್ರೌಸರ್ ನಲ್ಲಿ ನೀವು ಯುಆರ್‍ಎಲ್ ಅನ್ನು ಟೈಪಿಸಲು ಪ್ರಾರಂಭಿಸುವ ನಿರ್ದಿಷ್ಟ ಬಿಂದುವು ತದನಂತರ ಪುಟ ತೆರೆದಾಗ ಏನಾಗುತ್ತದೆ?


  ಹುದ್ದೆ: ಪ್ರಾಡಕ್ಟ್ ಮ್ಯಾನೆಜರ್


  ಪ್ರಶ್ನೆ10 : ನೀವು ಸೆಲೆಬ್ರಿಟಿಯೊಬ್ಬರ ವೆಬ್ ಸೈಟೊಂದನ್ನು ನಿರ್ವಹಿಸುತ್ತಿರುವಾಗ ಸಡನ್ ಆಗಿ ಆ ಸೈಟಿನಲ್ಲಿ ಟ್ರಾಫಿಕ್ ಕುಸಿತ ಉಂಟಾಗುವುದು, ಜಾಹೀರಾತುಗಳ ಮೇಲೆ ಕ್ಲಿಕ್ ಮಾಡುವ ದರ ಕುಗ್ಗುವುದು ಉಂಟಾದಾಗ ಅದರ ಮೂಲ ಕಾರಣವನ್ನು ಹೇಗೆ ಕಂಡುಕೊಳ್ಳುವಿರಿ?


   ಹುದ್ದೆ: ಆಡ್ ಸೆನ್ಸ್ ಅಕೌಂಟ್ ಮ್ಯಾನೆಜರ್


  ಪ್ರಶ್ನೆ 11: ಗೂಗಲ್ ಗೆ ಈಗ ಮುಂದಿನ ಬಿಲಿಯನ್ ಡಾಲರ್ ಮೊತ್ತರ ಐಡಿಯಾ ಏನು?


   ಹುದ್ದೆ: ಪ್ರೊಗ್ರ್ಯಾಮರ್


  ಪ್ರಶ್ನೆ 12: ಎಂಎಸ್ ಪೈಂಟ್ ಕ್ಲೋನ್ ಅನ್ನು ನೀವು ಹೇಗೆ ಅನುಷ್ಠಾನಗೊಳಿಸುತ್ತೀರಿ? ಅದು ಕ್ಯಾನ್ವಾಸ್ ಮೇಲೆ ಬರೆಯುವಂತೆ, ಚಿತ್ರಿಸುವಂತೆ ಆಗಲು ನಿಮಗೆ ಬೇಕಾದ ಅವಶ್ಯಕ ಯುಐ ಘಟಕಗಳು ಹಾಗೂ ಇತರೆ ಅಗತ್ಯತೆಗಳು ಯಾವುವು?


   ಹುದ್ದೆ: ಪೆಟಂಟ್ ಡಾಕೆಟಿಂಗ್ ಪರಿಣಿತ


  ಪ್ರಶ್ನೆ 13: ನಿಮ್ಮ ಬಳಿ 7 ಚೆಂಡುಗಳಿವೆ, ಅದರಲ್ಲಿ ಒಂದು ಇತರೆ ಚೆಂಡುಗಳಿಗಿಂತ ಅಲ್ಪ ಭಾರವಾಗಿದೆ. ನಿಮ್ಮ ಬಳಿ ಒಂದು ಅಳೆತೆಯ ಮಾಪನವಿದೆ, ತೀರ್ಪು ನೀಡುವಂತಹ ಒಂದು ಮಾಪನ ಎಂದಿಟ್ಟುಕೊಳ್ಳಿ. ಆ ಮಾಪನವನ್ನು ಕೇವಲ ಎರಡು ಬಾರಿ ಮಾತ್ರವೇ ಬಳಸಿ ಹೆಚ್ಚು ಭಾರವಾದ ಚೆಂಡನ್ನು ಹೇಗೆ ಕಂಡುಹಿಡಿಯುವಿರಿ?


   ಹುದ್ದೆ: ಪ್ರಾಜೆಕ್ಟ್ ಮ್ಯಾನೆಜರ್


  ಪ್ರಶ್ನೆ 14: ನಿಮ್ಮ ಬಳಿ ಖಾಲಿ ಜಾಗವೊಂದಿದೆ, ಅದರಲ್ಲಿ ನೀವು ಒಂದು ಹೂವು ಹಾಕಿದರೆ ಒಂದೇ ದಿನದಲ್ಲಿ ಅದರ ಸಂಖ್ಯೆ ದ್ವಿಗುಣಗೊಳ್ಳುತ್ತದೆ ಹಾಗೂ 45 ದಿನದ ನಂತರ ಆ ಜಾಗವು ತುಂಬಿ ಹೋಗಿದೆ. ಹಾಗಾದರೆ ಆ ಜಾಗವು ಯಾವ/ಎಷ್ಟನೇ ದಿನದಂದು ಅರ್ಧ ತುಂಬಿತ್ತು.
   ಹುದ್ದೆ: ರಿಚ್ ಮಿಡಿಯಾ ಕ್ಯಾಂಪೇನ್ ಮ್ಯಾನೆಜರ್


  ಪ್ರಶ್ನೆ 15: ಈ ಸದ್ಯದ ಕ್ಷಣದಲ್ಲಿ ಜಗತ್ತಿನಲ್ಲಿ ಎಷ್ಟು ಜನರು ತಮ್ಮ ಸೆಲ್ ಫೋನ್ ಗಳನ್ನು ಬಳಸುತ್ತಿದ್ದಾರೆಂದು ಹೇಳಬಲ್ಲಿರಾ?


   ಹುದ್ದೆ: ಮೊಬೈಲ್ ಪ್ರಾಡಕ್ಟ್ ಮ್ಯಾನೆಜರ್


  ಪ್ರಶ್ನೆ 16: ನಿಮಗೆ "ಪೀಕ್ ಆಯಿಲ್" ಎಂದರೇನು ಗೊತ್ತೆ? ಗೊತ್ತಾ...ಅದ್ಭುತ. ನೀವೀಗ ಗೂಗಲ್ ಸಂಸ್ಥೆಯ ಪೀಕ್ ಆಯಿಲ್ ಗೆ ವ್ಯವಸ್ಥಾಪಕರಾಗಿದ್ದೀರಿ. ನೀವೇನು ಮಾಡುವಿರಿ?


  ಹುದ್ದೆ: ಸಾಫ್ಟ್ವೇರ್ ಇಂಜಿನಿಯರ್


  ಪ್ರಶ್ನೆ 17: ಜಗತ್ತಿನ ಎಲ್ಲ ಪುಸ್ತಕಗಳನ್ನು ಕ್ಯಾಟಾಲಾಗ್ ಮಾಡುವಂತಹ ಯಾವುದಾದರೂ ವ್ಯವಸ್ಥೆ ಅಥವಾ ಅಲ್ಗಾರಿದಮ್ ಅನ್ನು ರಚಿಸಿರಿ


   ಹುದ್ದೆ: ಆಡ್ ವರ್ಡ್ಸ್ ರಿಪ್ರಸಂಟೇಟಿವ್


  ಪ್ರಶ್ನೆ 18: ಹೈದಾರಾಬಾದಿನಲ್ಲಿ ಎಷ್ಟು ಬಸ್ಸುಗಳಿವೆ?


   ಹುದ್ದೆ: ಇಂಡಸ್ಟ್ರಿ ಲೀಡರ್


  ಪ್ರಶ್ನೆ19 : ಮಾಧ್ಯಮ ಏಜನ್ಸಿಗಳು ಯಾವ ರೀತಿ ದುಡ್ಡು ಮಾಡುತ್ತಿವೆ ಎಂದು ನಿಮಗನಿಸುತ್ತದೆ?


   ಹುದ್ದೆ: ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್


  ಪ್ರಶ್ನೆ 20 : 1 ಅನ್ನು 32 ಬಿಟ್ ಬೈನರಿ ಸಂಖ್ಯೆಗೆ ಸೇರಿಸಿದಾಗ ಎಷ್ಟು ಬಿಟ್ ಗಳು ಬದಲಾಯಿಸಲ್ಪಡುತ್ತವೆ ಎಂಬುದನ್ನು ಹೇಳುವ ಸಂಭವನೀಯತೆಯ ಸೂತ್ರವನ್ನು ಬರೆಯಿರಿ.

  Published by:Kavya V
  First published: