IBPS RRB Prelims Result 2022: ಐಬಿಪಿಎಸ್​ ಆರ್​ಆರ್​ಬಿ ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶ ಪ್ರಕಟ; ಕಟ್​ ಆಫ್​ ಅಂಕ ಇಷ್ಟು

 IBPS RRB ಕ್ಲರ್ಕ್​ ಪರೀಕ್ಷೆ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತ ಪ್ರೀಲಿಮ್ಸ್ ಆಗಿದ್ದು, ಎರಡನೇ ಹಂತ ಮುಖ್ಯ ಪರೀಕ್ಷೆ ನಡೆಯಲಿದೆ.

ಐಬಿಪಿಎಸ್​

ಐಬಿಪಿಎಸ್​

  • Share this:
    ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್​ ಬ್ಯಾಂಕಿಂಗ್​ ಸೆಲೆಕ್ಷನ್ (Institute of Banking Personnel Selection)​ ಆರ್​ಆರ್​ಬಿ ಕ್ಲರ್ಕ್​ಗಳ (IBPS RRB Clerk)  ನೇಮಕಾತಿಗೆ ನಡೆಸಿದ್ದ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ. ಕಳೆದ ತಿಂಗಳು ಅಂದರೆ ಆಗಸ್ಟ್​ 7ನೇ, 13ನೇ ಮತ್ತು 14 ರಂದು IBPS RRB ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪ್ರಿಲಿಮ್ಸ್​ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಇದೀಗ ಮುಖ್ಯ ಪರೀಕ್ಷೆ ಎದುರಿಸಬಹುದಾಗಿದೆ.

    ಬ್ಯಾಂಕಿಂಗ್​ ವಲಯದಲ್ಲಿ ಸೇವೆ ಮಾಡುವ ಆಕಾಂಕ್ಷೆಯಿಂದ ಐಬಿಪಿಎಸ್​ ಆರ್​ಆರ್​ಬಿ ಹುದ್ದೆಗೆ ತಯಾರಿ ನಡೆಸುತ್ತಿದ್ದ ಅಭ್ಯರ್ಥಿಗಳು ಈ ಆರ್​ಆರ್​ಬಿ ಪರೀಕ್ಷೆ ಫಲಿತಾಂಶಕ್ಕೆ ಎದುರು ನೋಡುತ್ತಿದ್ದರು. ಇದೀಗ ಅಭ್ಯರ್ಥಿಗಳು ಈ ಲಿಂಕ್​ ಮೂಲಕ ಫಲಿತಾಂಶ ವೀಕ್ಷಣೆ ಮಾಡಬಹುದಾಗಿದೆ. ಇನ್ನು ಆರ್​ಆರ್​ಬಿ ಮುಖ್ಯ ಪರೀಕ್ಷೆಗೆ ಅರ್ಹರಾದ ಮತ್ತು ಅನರ್ಹಗೊಂಡ ಎಲ್ಲಾ ಅಭ್ಯರ್ಥಿಗಳು ಈ ಫಲಿತಾಂಶ ಪಡೆಯಬಹುದಾಗಿದೆ.

    ಇದನ್ನು ಓದಿ: ಬಿಇಎಲ್​ನಲ್ಲಿ 50 ಅಪ್ರೆಂಟಿಸ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಲಿಖಿತ ಪರೀಕ್ಷೆ ಇಲ್ಲ

    ಎರಡು ಹಂತದಲ್ಲಿ ನಡೆಯುವ ಪರೀಕ್ಷೆ
    IBPS RRB ಕ್ಲರ್ಕ್​ ಪರೀಕ್ಷೆ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತ ಪ್ರೀಲಿಮ್ಸ್ ಆಗಿದ್ದು, ಎರಡನೇ ಹಂತ ಮುಖ್ಯ ಪರೀಕ್ಷೆ ನಡೆಯಲಿದೆ. ಪ್ರೀಲಿಮ್ಸ್​ನಲ್ಲಿ ಅರ್ಹಗೊಂಡ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬಹುದು. ಬಳಿಕ ಸಂದರ್ಶನದ ಮೂಲಕ ಈ ಆಯ್ಕೆ ನಡೆಯಲಿದೆ. ಇದೇ ಅಕ್ಟೋಬರ್​ 1 ರಂದು ಮುಖ್ಯ ಪರೀಕ್ಷೆ ನಡೆಯಲಿದೆ.

    ಫಲಿತಾಂಶ ವೀಕ್ಷಣೆ ವಿಧಾನ
    -ಅಭ್ಯರ್ಥಿಗಳು ಐಬಿಪಿಎಸ್​ನ ಅಧಿಕೃತ ವೆಬ್​ಸೈಟ್​ htttps://www.ibps.in ಗೆ ಭೇಟಿ ನೀಡಬೇಕು.
    -ಬಳಿಕ CRP-RRBs-XIn ಕಚೇರಿ ಸಹಾಯಕರ ಹುದ್ದೆಗೆ ಪ್ರಿಲಿಮ್ಸ್​ ಫಲಿತಾಂಶದ ಮೇಲೆ ಕ್ಲಿಕ್​ ಮಾಡಬೇಕು.
    -ನಂತರ ನಿಮ್ಮ ಲಾಗಿನ್‌ ಐಡಿ, ಜನ್ಮ ದಿನಾಂಕ, ನೋಂದಣಿ ಸಂಖ್ಯೆಯನ್ನು ನಮೂದಿಸಿ.
    -ಆಗ ನಿಮಗೆ ಪ್ರಿಲಿಮ್ಸ್ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ.
    ಅದನ್ನು ಡೌನ್‌ಲೋಡ್‌ ಮಾಡಿಕೋಂಡು, ಪ್ರಿಂಟ್‌ ತೆಗೆದುಕೊಳ್ಳಿ

    ಇದನ್ನು ಓದಿ: ದೂರಸಂಪರ್ಕ ಇಲಾಖೆಯಲ್ಲಿ ಡಿಗ್ರಿ ಆದವರಿಗೆ ಉದ್ಯೋಗಾವಕಾಶ; ತಿಂಗಳಿಗೆ 75 ಸಾವಿರ ರೂ ವೇತನ

    ಕಟ್​ ಆಫ್​​ ಅಂಕಗಳು
    ಕಟ್ಆಫ್ ಅಂಕಗಳು ನೇಮಕಾತಿ ಪ್ರಕ್ರಿಯೆಯ ಮುಂದಿನ ಹಂತಗಳನ್ನು ಫಲಿತಾಂಶದ ವೇಳೆ ಪಡೆಯ ಬಹುದಾಗಿದೆ. IBPS RRB ಕ್ಲರ್ಕ್ ಪ್ರಿಲಿಮ್ಸ್ 2022 ಪರೀಕ್ಷೆಯ ಕಟ್-ಆಫ್ ಅಂಕಗಳನ್ನು ಪ್ರತಿ ರಾಜ್ಯಕ್ಕೂ ಪ್ರಕಟಿಸಲಾಗುತ್ತದೆ. ಐಬಿಪಿಎಸ್​​ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಐಬಿಪಿಎಸ್​ ವರ್ಗವಾರು ಕಟ್-ಆಫ್ ಅಂಕಗಳನ್ನು ಸಹ ಘೋಷಿಸುತ್ತದೆ. IBPS RRB ಕ್ಲರ್ಕ್ ಕಟ್ಆಫ್ ಅಂಕಗಳನ್ನು ಪತ್ರಿಕೆಯ ಮಟ್ಟ, ಪರೀಕ್ಷೆಯನ್ನು ತೆಗೆದುಕೊಂಡ ಅಭ್ಯರ್ಥಿಗಳ ಸಂಖ್ಯೆ ಮತ್ತು ಖಾಲಿ ಹುದ್ದೆಗಳ ಸಂಖ್ಯೆಯಿಂದ ನಿರ್ಧರಿಸಲಾಗುತ್ತದೆ.

    IBPS RRB ಕ್ಲರ್ಕ್ 8,106  ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿ. ಆಗಸ್ಟ್​ನಲ್ಲಿ ಪರೀಕ್ಷೆ ನಡೆಸಿತ್ತು.
    Published by:Seema R
    First published: