• Home
  • »
  • News
  • »
  • career
  • »
  • IBPS PO Result 2022: ಐಬಿಪಿಎಸ್​ ಪಿಒ ಫಲಿತಾಂಶ ಪ್ರಕಟ; ಚೆಕ್​ ಮಾಡಲು ಲಿಂಕ್​ ಇಲ್ಲಿದೆ

IBPS PO Result 2022: ಐಬಿಪಿಎಸ್​ ಪಿಒ ಫಲಿತಾಂಶ ಪ್ರಕಟ; ಚೆಕ್​ ಮಾಡಲು ಲಿಂಕ್​ ಇಲ್ಲಿದೆ

ಐಬಿಪಿಎಸ್​

ಐಬಿಪಿಎಸ್​

ಮುಖ್ಯ ಪರೀಕ್ಷೆ ಅಕ್ಟೋಬರ್​ 1ರಂದು ನಡೆದಿತ್ತು. ಈಗ ಅಂತಿಮ ಫಲಿತಾಂಶ ಬಿಡುಗಡೆಯಾಗಿದ್ದು, ಸಂದರ್ಶನಕ್ಕೆ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ (IBPS) ಪ್ರೊಬೇಷನರಿ ಅಧಿಕಾರಿಗಳ ಹುದ್ದೆ ಫಲಿತಾಂಶ ಇಂದು ಪ್ರಕಟವಾಗುವ ಸಾಧ್ಯತೆ ಇದೆ. ಆಫೀಸರ್ ಸ್ಕೇಲ್ I, II, ಮತ್ತು IIIಕ್ಕೆ IBPS RRB PO ಪರೀಕ್ಷೆಯನ್ನು ನಡೆಸಿತ್ತು. ಈ ಮೂಲಕ ಬ್ಯಾಂಕಿಂಗ್​ ವಲಯದಲ್ಲಿ ನೇಮಕಾತಿಗೆ ಮುಂದಾಗಿತ್ತು. ದೇಶಾದ್ಯಂತ ನಡೆದ ಈ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟ ಮಾಡಲಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​​  ibps.in ನಲ್ಲಿ ಫಲಿತಾಂಶ ವೀಕ್ಷಣೆ ಮಾಡಬಹುದಾಗಿದೆ.


    IBPS RRB PO ಮುಖ್ಯ ಪರೀಕ್ಷೆಯು ಅಕ್ಟೋಬರ್ 1 ರಂದು ನಡೆಸಲಾಗಿತ್ತು. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿದ್ದರು.


    ಐಬಿಪಿಎಸ್ ಆರ್‌ಆರ್‌ಬಿ ಪಿಒ ಆಫೀಸರ್ ಸ್ಕೇಲ್ II ಮತ್ತು ಆಫೀಸರ್ ಸ್ಕೇಲ್ III ರ ನೇಮಕಾತಿಗಾಗಿ ಸೆಪ್ಟೆಂಬರ್ 24 ರಂದು ಒಂದೇ ಹಂತದಲ್ಲಿ ಏಕಕಾಲಕ್ಕೆ ಪರೀಕ್ಷೆ ನಡೆಸಿತ್ತು. ಎಲ್ಲಾ ಮೂರು ಪರೀಕ್ಷೆಗಳ ಫಲಿತಾಂಶದ ಸ್ಥಿತಿಯನ್ನು ಇಂದು ಅಕ್ಟೋಬರ್ 18 ರಂದು ಪ್ರಕಟಿಸಲಾಗುವುದು.


    ಪರೀಕ್ಷೆ ಫಲಿತಾಂಶ ವೀಕ್ಷಣೆ ಹೇಗೆ?


    ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ (IBPS) ನ ಅಧಿಕೃತ ವೆಬ್‌ಸೈಟ್‌ ibps.in ಗೆ ಭೇಟಿ ನೀಡಿ.
    ಮುಖಪುಟದಲ್ಲಿ, IBPS RRB PO ಫಲಿತಾಂಶ 2022 ಅನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
    ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ಲಾಗಿನ್​ ಆಗಿ.
    ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಅದರ ಮುದ್ರಣವನ್ನು ತೆಗೆದುಕೊಳ್ಳಿ.


    IBPS RRB PO ಗಾಗಿ ಮುಖ್ಯ ಫಲಿತಾಂಶ ಅಂತಿಮ ಆಯ್ಕೆಗಾಗಿ ಅಭ್ಯರ್ಥಿಗಳು ಸಂದರ್ಶನದ ಸುತ್ತಿಗೆ ಹಾಜರಾಬೇಕಿದೆ. IBPS RRB PO ಪೂರ್ವಭಾವಿ ಪರೀಕ್ಷೆ ಆಗಸ್ಟ್​ 20 ಮತ್ತು 21 ನಡೆದಿತ್ತು. ಮುಖ್ಯ ಪರೀಕ್ಷೆ ಅಕ್ಟೋಬರ್​ 1ರಂದು ನಡೆದಿತ್ತು. ಈಗ ಅಂತಿಮ ಫಲಿತಾಂಶ ಬಿಡುಗಡೆಯಾಗಿದ್ದು, ಸಂದರ್ಶನಕ್ಕೆ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಿದೆ. ಈ ಹುದ್ದೆಗೆ ನವೆಂಬರ್​​ನಲ್ಲಿ ಸಂದರ್ಶನ ನಡೆಯುವ ಸಾಧ್ಯತೆ ಇದೆ. ಇನ್ನು IBPS RRB PO ಮುಖ್ಯ ಪರೀಕ್ಷೆ ಸ್ಕೋರ್​ ಕಾರ್ಡ್​​ ಅಕ್ಟೋಬರ್​ ಕೊನೆವಾರದಲ್ಲಿ ಬಿಡುಗಡೆಯಾಗಲಿದೆ.

    Published by:Seema R
    First published: