Ananya Singh: ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಪಾಸ್; ಕೇವಲ 22 ವರ್ಷಕ್ಕೆ ಅನನ್ಯಾ ಸಿಂಗ್‌ IAS ಅಧಿಕಾರಿ

ದೇಶದ ಅತ್ಯುನ್ನತ ಹುದ್ದೆ ಎಂದರೆ ಅದು ಐಎಎಸ್‌. ಐಎಎಸ್‌ ಅಧಿಕಾರಿ ಆಗಬೇಕೆಂದು ಎಲ್ಲರೂ ಕನಸು ಕಾಣುತ್ತಾರೆ. ಆದರೆ ಆ ಕನಸನ್ನು ಕೆಲವೇ ಕೆಲವು ಜನ ಮಾತ್ರ ನನಸು ಮಾಡಿಕೊಳ್ಳುತ್ತಾರೆ. ಅಂತಹವರಲ್ಲಿ ಕೇವಲ 22 ವರ್ಷ ವಯಸ್ಸಿನಲ್ಲಿ ಪ್ರಯಾಗ್‌ರಾಜ್‌ ನಗರದ ಅನನ್ಯಾ ಸಿಂಗ್ ಐಎಎಸ್ ಅಧಿಕಾರಿಯಾಗಿದ್ದಾರೆ. ಆದರೂ ಅವರು ಮಾಡಿದ ಸಾಧನೆ ಅವರನ್ನು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಕೂರಿಸಿದೆ.

ಅನನ್ಯಾ ಸಿಂಗ್‌

ಅನನ್ಯಾ ಸಿಂಗ್‌

  • Share this:
ದೇಶದ ಅತ್ಯುನ್ನತ ಹುದ್ದೆ ಎಂದರೆ ಅದು ಐಎಎಸ್‌ . ಈ ಐಎಎಸ್‌ ಅಧಿಕಾರಿ (IAS Officer) ಆಗಬೇಕೆಂದು ಎಲ್ಲರೂ ಕನಸು ಕಾಣುತ್ತಾರೆ. ಆದರೆ ಆ ಕನಸನ್ನು ಕೆಲವೇ ಕೆಲವು ಜನ ಮಾತ್ರ ನನಸು ಮಾಡಿಕೊಳ್ಳುತ್ತಾರೆ. ಅಂತಹವರಲ್ಲಿ ಕೇವಲ 22 ವರ್ಷ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾಗಿರುವ ಪ್ರಯಾಗ್‌ರಾಜ್‌ (Prayagraj)  ನಗರದ ಅನನ್ಯಾ ಸಿಂಗ್ (Ananya Singh) ಅವರಿಗೆ ಇನ್ನು ಚಿಕ್ಕ ವಯಸ್ಸು. ಆದರೂ ಅವರು ಮಾಡಿದ ಸಾಧನೆ ಅವರನ್ನು ಜಿಲ್ಲಾಧಿಕಾರಿ ಹುದ್ದೆಯಲ್ಲಿ (Post of District Collector) ಕೂರಿಸಿದೆ. ಇದರಿಂದ ಅವರು ಈ ಕನಸಿಗೆ ಎಷ್ಟು ಕಷ್ಟಪಟ್ಟಿರಬಹುದು ಎಂದು ಯಾರಿಗಾದರೂ ಮನವರಿಕೆ ಆಗುತ್ತದೆ.

ಈ ಪರೀಕ್ಷೆ ಅತ್ಯಂತ ಕಠಿಣ ಪರೀಕ್ಷೆ ಎಂದು ಕೆಲವರು ಹೇಳುತ್ತಾರೆ. 6-7 ಸಲ ಈ ಪರೀಕ್ಷೆ ಬರೆದರೂ ಉತ್ತಿರ್ಣ ಆಗುವುದು ಕಷ್ಟ ಎಂದು ಹೇಳುವವರ ಪೈಕಿ ಇವರು ಕೇವಲ ಒಂದು ವರ್ಷದ ತಯಾರಿಯ ನಂತರ ಯುಪಿಎಸ್‌ಸಿ ನಡೆಸಿದ ಅತ್ಯಂತ ಕಠಿಣ ಪರೀಕ್ಷೆ - ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತಿರ್ಣವಾಗುವುದರ ಮೂಲಕ ಯಶಸ್ವಿಯಾಗಿದ್ದಾರೆ. ಅವರು ಅಖಿಲ ಭಾರತ 51 ನೇ ಶ್ರೇಯಾಂಕ ಗಳಿಸಿದರು. ಅವರ ಯುಪಿಎಸ್‌ಸಿ ಪ್ರಯಾಣ ಹೇಗಿತ್ತು? ಎಂಬುದರ ಕುರಿತು ಈ ಲೇಖನದಲ್ಲಿ ಇಂದು ತಿಳಿಯೋಣ. ಇನ್ನಷ್ಟು ತಿಳಿಯಲು ಕೂತುಹಲ ಇದ್ದರೆ ಮುಂದೆ ಓದಿ.

ಅನನ್ಯಾ ಸಿಂಗ್‌ ಅವರ ಯುಪಿಎಸ್‌ಸಿ ತಯಾರಿ ಹೇಗಿತ್ತು?
ಅನನ್ಯಾ ಸಿಂಗ್ ಬಾಲ್ಯದಿಂದಲೂ ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಅವರು ತಮ್ಮ ಪದವಿಯ ಕೊನೆಯ ವರ್ಷದಲ್ಲಿ UPSC ಪರೀಕ್ಷೆಗೆ ತಯಾರಿಯನ್ನು ಪ್ರಾರಂಭಿಸಿದರು. ಆರಂಭದಲ್ಲಿ ದಿನಕ್ಕೆ 7-8 ಗಂಟೆ ಓದುತ್ತಿದ್ದರು. ನಂತರ, ಅವರು ಆರು ಗಂಟೆಗಳ ಅಧ್ಯಯನ ವೇಳಾಪಟ್ಟಿಯನ್ನು ನಿಗದಿಪಡಿಸಿದರು. ಅವರು ಯುಪಿಎಸ್‌ಸಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಿಗೆ ಏಕಕಾಲದಲ್ಲಿ ತಯಾರಿ ನಡೆಸುತ್ತಿದ್ದರು.

ಇದನ್ನೂ ಓದಿ: Viral Story: ಚಹಾ ಮಾರುತ್ತಿದ್ದವ ಈಗ ಉನ್ನತ ಅಧಿಕಾರಿ! ಆನಂದ್ ಮಹೀಂದ್ರಾ ಪ್ರತಿಕ್ರಿಯೆಗೆ ನೆಟ್ಟಿಗರು ಫಿದಾ

UPSC ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ, ಅವರು ತಾವು ಹೇಗೆ ಅಧ್ಯಯನ ನಡೆಸಿದ್ದೇನೆ ಎನ್ನುವ ಕೆಲವು ಟ್ರಿಕ್ಸ್‌ಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಅವರು ಪಠ್ಯಕ್ರಮದ ಪ್ರಕಾರ ಪುಸ್ತಕಗಳನ್ನು ಸಂಗ್ರಹಿಸುವ ಮೂಲಕ ಅಧ್ಯಯನ ನಡೆಸಲು ಪ್ರಾರಂಭಿಸಿದರು. ಇದರೊಂದಿಗೆ ಕೈ ನೋಟ್ಸ್ ಮಾಡಿಕೊಳ್ಳುತ್ತಿದ್ದರು. ಅವರು ಮಾಡಿಕೊಳ್ಳುತ್ತಿದ್ದ ಟಿಪ್ಪಣಿಗಳು ಎರಡು ಪ್ರಯೋಜನಗಳನ್ನು ಹೊಂದಿದ್ದವು ಎಂದು ಹೇಳುತ್ತಾರೆ. ಈ ಟಿಪ್ಪಣಿಗಳು ಚಿಕ್ಕದಾಗಿದ್ದವು ಮತ್ತು ಮತ್ತೆ ಮತ್ತೆ ಓದಲು ತುಂಬಾ ಸುಲಭ ಎನಿಸುತ್ತಿದ್ದವು. ಇದರಿಂದ ಯಾವುದೇ ವಿಷಯ ಇರಲಿ ಬೇಗನೆ ಅರ್ಥವಾಗುತ್ತಿತ್ತು. ಎಷ್ಟೆ ಓದಿದರೂ, ಮನನ ಮಾಡಿಕೊಳ್ಳುವುದೇ ಯಶಸ್ಸಿನ ಕೀಲಿಕೈ ಎಂದು ಹೇಳುತ್ತಾರೆ.

ಅನನ್ಯಾ ಸಿಂಗ್‌ ಅವರ ಶೈಕ್ಷಣಿಕ ಹಿನ್ನೆಲೆ?
ಬಾಲ್ಯದಿಂದಲೂ ಅನನ್ಯಾ ಸಿಂಗ್ ಯಾವಾಗಲೂ ಟಾಪರ್. ಪ್ರಯಾಗರಾಜ್‌ನ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು 10 ನೇ ಬೋರ್ಡ್ ಪರೀಕ್ಷೆಯಲ್ಲಿ 96 ಶೇಕಡಾ ಅಂಕಗಳನ್ನು ಪಡೆದಿದ್ದರೆ, 12 ನೇ ತರಗತಿಯಲ್ಲಿ 98.25 ಶೇಕಡಾ ಅಂಕಗಳನ್ನು ಗಳಿಸಿದ್ದರು. ಸಿಐಎಸ್‌ಸಿಇ ಮಂಡಳಿಯಿಂದ 10ನೇ ಮತ್ತು 12ನೇ ತರಗತಿಯಲ್ಲಿ ಈ ಯುವತಿ ಜಿಲ್ಲಾ ಟಾಪರ್ ಆಗಿದ್ದಾರೆ. ಶಾಲೆಯ ಅಧ್ಯಯನ ಪೂರ್ಣಗೊಳಿಸಿದ ನಂತರ, ಅನನ್ಯಾ ಸಿಂಗ್ ಅವರು ದೆಹಲಿ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಅರ್ಥಶಾಸ್ತ್ರ ದಲ್ಲಿ ಪದವಿ ಪಡೆದರು.

ಇದನ್ನೂ ಓದಿ:  IAS-IPS Family: ಈ ಕುಟುಂಬದಲ್ಲಿ ಮೂವರು ಐಎಎಸ್, ಒಬ್ಬರು ಐಪಿಎಸ್! ಇವರ ಕಥೆ ಇಂಟ್ರೆಸ್ಟಿಂಗ್

ಅವರು 2019ರ UPSC CSE ನಲ್ಲಿ 51 ನೇ ಶ್ರೇಯಾಂಕ ಪಡೆದುಕೊಂಡಿದ್ದರು. ಅನನ್ಯಾ ಸಿಂಗ್ ಅವರು ಸರ್ಕಾರಿ ಪರೀಕ್ಷೆಯ ಫಲಿತಾಂಶವನ್ನು ನೋಡಿದ ನಂತರ, ಅವರಿಗೆ ಇದು ನನ್ನ ಫಲಿತಾಂಶನಾ? ಎಂದು ಆಶ್ಚರ್ಯಗೊಂಡಿದ್ದೆ ಎಂದು ಹೇಳುತ್ತಾರೆ. ಅವರು ಕೇವಲ 22 ನೇ ವಯಸ್ಸಿನಲ್ಲಿ IAS ಅಧಿಕಾರಿಯಾಗಬೇಕೆಂಬ ಅವರ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದರು. IAS ಅನನ್ಯಾ ಸಿಂಗ್ ಪ್ರಸ್ತುತ ಪಶ್ಚಿಮ ಬಂಗಾಳದ ಕೇಡರ್‌ನಲ್ಲಿ ತಮ್ಮ ಆರಂಭಿಕ ಸೇವೆಯನ್ನು ನೀಡುತ್ತಿದ್ದಾರೆ.
Published by:Ashwini Prabhu
First published: