ಪ್ರತಿಷ್ಠಿತ ಕಂಪನಿಗಳಲ್ಲಿ, ಉನ್ನತ ಹುದ್ದೆಗಳಲ್ಲಿ (Higher Position in Company) ಇರುವವರು ಪ್ರತಿ ದಿನ 12 ರಿಂದ 14 ಗಂಟೆ ನಿರಂತರವಾಗಿ ದುಡಿಯುತ್ತಾರೆ. ಇದರಿಂದ ಅವರ ಎಕ್ಸ್ಪೀರಿಯೆನ್ಸ್ ವ್ಯಾಲ್ಯೂ (Experience Value) ಕೂಡಾ ಹೆಚ್ಚಾಗುವುದು. ಆದ್ರೆ ಹಲವಾರು ಕಾರಣದಿಂದ ಕೆಲವೊಮ್ಮೆ ಕಂಟಿನ್ಯೂ ಆಗಿ ಕೆಲಸ ಮಾಡುವುದು ಅವರ ಚಾಯ್ಸ್ ಆಗಿರದೇ, ಅಗತ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವರ್ಕ್ನಿಂದ ಬ್ರೇಕ್ (Break from Work) ತೆಗೆದುಕೊಳ್ಳುವುದು ಹೇಗೆ? ಎಂಬ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಎಲ್ಲರಿಗೂ ಅವರು ಮಾಡುತ್ತಿರುವ ಕೆಲಸದಿಂದ ಒಂದಲ್ಲ ಒಂದು ಸಮಯದಲ್ಲಿ ಬ್ರೇಕ್ ಬೇಕೆ ಬೇಕೆನಿಸುತ್ತದೆ. ಕೆಲವು ಸಲ ದೂರದ ಪ್ರಯಾಣಕ್ಕೆ ಕೆಲಸದಿಂದ ಬ್ರೇಕ್, ಮತ್ತೊಂದು ಸಲ ಉನ್ನತ ಶಿಕ್ಷಣ ಮಾಡುವುದಕ್ಕೆ, ಗರ್ಭಿಣಿ ಆದ ಮಹಿಳೆಯರಿಗೆ ಮಗುವಿನ ಆರೈಕೆಗೆ ಅಂತಾನೇ ತಾವು ಸದ್ಯಕ್ಕೆ ಮಾಡುತ್ತಿರುವ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳಲು ಇಚ್ಛೆ ಪಡುತ್ತಾರೆ. ಆದ್ರೆ ಸಡನ್ ಆಗಿ ಇರೋ ಕೆಲಸದಿಂದ ಬ್ರೇಕ್ ತೆಗೆದುಕೊಂಡರೆ ಆರ್ಥಿಕ ಸಮಸ್ಯೆಗಳು ಬರುವುದಿಲ್ಲವೇ ಅಂತ ನಿಮ್ಗೆ ಅನಿಸೋದು ಸಹಜ. ಅದ್ಕೆ ಉತ್ತರ ಹೀಗ್ ತಿಳಿಯೋಣ. ಬನ್ನಿ.
1) ಬಜೆಟ್ ಪ್ಲ್ಯಾನ್ ಇರಲಿ
ನಿಮ್ಮ ಇತರ ಗುರಿಗಳಿಗಾಗಿ ಸಮರ್ಪಕವಾಗಿ ಹಣ ಉಳಿಸುತ್ತಿರುವಾಗ, ನಿಮಗೆ ಬಜೆಟ್ನ ಅಗತ್ಯ ಇರೋದಿಲ್ಲ. ಆದ್ರೆ, ವೃತ್ತಿ ಜೀವನದಿಂದ ಬ್ರೇಕ್ ತೆಗೆದುಕೊಳ್ಳಬೇಕು ಎಂದು ನೀವು ಅಂದುಕೊಂಡಿದ್ದರೆ, ಖಂಡಿತ ನಿಮಗೆ ಹೆಚ್ಚಿನ ಹಣದ ಉಳಿತಾಯ ಮತ್ತು ಉತ್ತಮ ಬಜೆಟ್ ಯೋಜನೆ ಅಗತ್ಯ ಮತ್ತು ಅನಿವಾರ್ಯ ಎಂದೇ ಹೇಳಬಹುದು. ಆದ್ದರಿಂದ ಉತ್ತಮ ಉಳಿತಾಯ ನಿಮ್ಮ ಜೊತೆ ಇರಲಿ.
ನೀವು ಇಂದು ಏನು ಖರ್ಚು ಮಾಡುತ್ತಿದ್ದೀರಿ ಅಂತ ನಿಮಗೆ ಚೆನ್ನಾಗಿ ತಿಳಿದಿರುತ್ತೆ. ವೃತ್ತಿಜೀವನದಿಂದ ಬ್ರೇಕ್ ತೆಗೆದುಕೊಂಡಾಗ ಯಾವ ರೀತಿಯ ಖರ್ಚು ಇರುತ್ತದೆ ಎಂಬುದನ್ನು ನೀವು ಇಂದೇ ಅಂದಾಜಿಸಿಕೊಳ್ಳಬೇಕು. ಆಗ ನಿಮಗೆ ಪ್ರಯಾಣ ಅಥವಾ ಮಕ್ಕಳ ಆರೈಕೆ ಅಂತಹ ಕೆಲವು ವೆಚ್ಚಗಳು ಕಡಿಮೆಯಾಗಬಹುದು ಆದರೆ ಆರೋಗ್ಯ ವಿಮೆಗಳ ವೆಚ್ಚಗಳಂತಹ ಹೊಸ ವೆಚ್ಚಗಳು ಬರಬಹುದು. ಯಾವುದಕ್ಕೂ ಕೆರಿಯರ್ನಿಂದ ಬ್ರೇಕ್ ತೆಗದುಕೊಳ್ಳಬೇಕಾಗಿದ್ರೆ ಮುಂದಿನ ಖರ್ಚುಗಳ ಬಗ್ಗೆ ಕೂಲಂಕುಷವಾಗಿ ಯೋಚಿಸುವುದು ಎಲ್ಲ ರೀತಿಯಿಂದಲೂ ಸಮಂಜಸ ಯೋಚನೆ.
2) ಸೂಕ್ತ ಸಮಯದ ಯೋಜನೆ ನಿಮ್ಮದಾಗಿರಲಿ
ಕರಿಯರ್ನಿಂದ ಬ್ರೇಕ್ ತೆಗೆದುಕೊಂಡ ನಂತರ ಸಮಯಕ್ಕೆ ಬೆಲೆ ನೀಡದಿದ್ದರೆ, ನಿಮ್ಮ ಒಟ್ಟಾರೆ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಹಾಳು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾವುದೇ ಸಂದರ್ಭವಿರಲಿ, ನಿಮ್ಮ ಸಮಯಕ್ಕೆ ಸೂಕ್ತ ಬೆಲೆಯನ್ನು ನೀವು ನೀಡಿ.
ಆಫೀಸ್ ಕೆಲಸದ ಕಟ್ಟುನಿಟ್ಟಾದ ವೇಳಾಪಟ್ಟಿಗಳಿಂದ ನಿಮಗೆ ವಿರಾಮ ಬೇಕು ಎಂದು ನಿಮಗೆ ಅನಿಸಿದರೆ, ಅದಕ್ಕೆ ಸ್ವಲ್ಪ ದಿನ ರೆಸ್ಟ್ ಮಾಡಿ ನಂತರ ಸೂಕ್ತ ಸಮಯದ ದಿನಚರಿ ಅಳವಡಿಸಿಕೊಂಡು ಅದನ್ನು ಫಾಲೋ ಮಾಡೋದು ಒಳ್ಳೆಯದು.
ಕೆಲವರು ವೃತ್ತಿಯನ್ನು ಬದಲಾಯಿಸಬೇಕೆಂದು ತಮ್ಮ ಕರಿಯರ್ನಿಂದ ಬ್ರೇಕ್ ತೆಗೆದುಕೊಂಡಾಗ, ಬೇರೆ ಕೆಲಸವನ್ನು ಹುಡುಕುವುದಕ್ಕೆ ಸ್ವಲ್ಪ ಸಮಯವಾದ್ರೂ ಮೀಸಲಿಡಬೇಕು. ಇಲ್ಲದಿದ್ದರೆ ನೀವು ನಿಮ್ಮ ವಿರಾಮದ ಸಮಯ ಕಳೆಯುವುದರ ಜೊತೆಗೆ ಉಳಿತಾಯವನ್ನೂ ಸಹ ಖಾಲಿ ಮಾಡಿಕೊಳ್ಳಬಹುದು.
3) ನಿಮ್ಮ ಹವ್ಯಾಸಗಳನ್ನೇ ಪಾರ್ಟ್ಟೈಮ್ ಜಾಬ್ ಮಾಡಿಕೊಳ್ಳಿ.
ವೃತ್ತಿ ಜೀವನದಿಂದ ವಿರಾಮ ತೆಗೆದುಕೊಂಡ ನಂತರ ಬೇಗ ಕೆಲಸ ಸಿಗದೇ ಇರಬಹುದು. ಆಗ ನಿಮ್ಮ ಉಳಿತಾಯ ಖಾಲಿ ಆಗಬಹುದು. ನಿಮಗೆ ಸಾಲಗಳು ಹೆಚ್ಛಾಗಬಹುದು. ನಿಮಗೆ ವರ್ಷಾನುಗಟ್ಟಲೇ ಸಂಬಳವಿಲ್ಲದೇ ಆಗಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಹವ್ಯಾಸಗಳನ್ನೇ ಪಾರ್ಟ್ಟೈಮ್ ಕೆಲಸವನ್ನಾಗಿಸಿಕೊಂಡು ಹಣ ಗಳಿಸಬಹುದು.
ನೀವು ಎಷ್ಟು ಹೊತ್ತು ಕೆಲಸ ಮಾಡುತ್ತಿರಾ ಎಂಬುವುದು ಇಂಪಾರ್ಟೆಂಟ್ ಅಲ್ಲ. ಬದಲಿಗೆ ಬೇಗ ಮಲಗಿ ಬೇಗೆ ಎದ್ದೇಳುವುದು ಮುಖ್ಯ. ಯಾಕೆ ಅಂತ ಕಾರಣ ಕೇಳಿ? ಮುಂಜಾನೆಯ ಸಮಯ ಪ್ರೊಡಕ್ಟಿವ್ ಸಮಯ. ಈ ಸಮಯವನ್ನ ನೀವು ಚೆನ್ನಾಗಿ ಬಳಸಿಕೊಂಡಿಲ್ಲ ಎಂದಾದ್ರೆ, ಪಾರ್ಟ್ ಟೈಮ್ ಕೆಲಸವೂ ಎಫೆಕ್ಟಿವ್ ಇರೋದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ