Cope With Stress: ವೃತ್ತಿಜೀವನದಲ್ಲಿ ಕಾಣಿಸಿಕೊಳ್ಳುವ ಮಿಡ್‌-ಲೈಫ್‌ ಸಮಸ್ಯೆಯನ್ನು ಪರಿಹರಿಸುವುದು ಹೇಗೆ?

Cope With a Midlife Crisis: ಜೀವನದಲ್ಲಿ ಮನುಷ್ಯನು ಯಾವಾಗಲೂ ಹುಮ್ಮಸ್ಸಿನಿಂದ ಇರಲು ಅಸಾಧ್ಯ. ಕೆಲವೊಮ್ಮೆ ಆತನ ವೃತ್ತಿಗೆ ಸಂಬಂಧ ಪಟ್ಟಿರಬಹುದು. ಇನ್ನೂ ಕೆಲವೊಮ್ಮೆ ಆತನ ವಯಸ್ಸಿಗೂ ಕಾರಣವಾಗಿರಬಹುದು. ವೃತ್ತಿಯ ಜೀವನದಲ್ಲಿ ಮಧ್ಯ ವಯಸ್ಸಿಗೆ ಬರುವಾಗ ಆತನಿಗೆ ಜೀವನದ ಮೇಲೆ ನಿರಾಸೆ ಆದಾಗ ಏನು ಮಾಡಬೇಕು ಎಂಬುದಾಗಿ ಇಲ್ಲೊಂದು ಲೇಖನವಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವ ದೆಹಲಿ: ಜೀವನದಲ್ಲಿ ಉತ್ತಮವಾದ ಕೆಲಸವನ್ನು(Work) ಪಡೆಯಬೇಕೆಂದು ಅನೇಕರು ಆಶಿಸುತ್ತಾರೆ. ಆ ಕೆಲಸವು ಸಿಕ್ಕಿರುತ್ತದೆ ಕೂಡ. ಆದರೆ ಜೀವನ ಮುಂದೆ ಸಾಗಿ ಜೀವನದ ಮಧ್ಯಂತರ ಭಾಗಕ್ಕೆ ಬಂದಾಗ ಕೆಲವರಲ್ಲಿ ಈ ಉದ್ಯೋಗ ನನಗೆ ಸರಿ ಬರುತ್ತದೆಯೇ? ಇದನ್ನು ಹೀಗೆಯೇ ಮುಂದೆ ಸಾಗಿಸಬಲ್ಲೆನೆ? ಇಷ್ಟು ವರ್ಷಗಳ ಕಾಲ ಈ ಕಷ್ಟದ ಕೆಲಸವನ್ನು ಸರಿಯಾಗಿ ನಿಭಾಯಿಸಿದೀನಾ? ಹೀಗೆ ಅನೇಕ ಪ್ರಶ್ನೆಗಳು ಜೀವನದ ಮಧ್ಯ (Mid Life) ಕಾಲ ಅಂದರೆ 40 ರ ಆಸುಪಾಸಿನಲ್ಲಿ ಈ ರೀತಿ ಕೆಲವರಿಗೆ ಅನಿಸಲು ಶುರುವಾಗುತ್ತದೆ. ಅದು ಯಾಕೆ ಹೀಗೆ? ಈ ಜೀವನದ ಅರ್ಧಭಾಗ ಅದೇ ಕೆಲಸ ನಿರ್ವಹಣೆ ಮಾಡಿದ್ರೂ ಸಹ ಕೆಲವು ಸಲ ಹೀಗ್ಯಾಕೆ ಅನಿಸುತ್ತೆ? ಎಂಬುದಕ್ಕೆ ಈ ಲೇಖನದಲ್ಲಿಂದು ನಾವು ಉತ್ತರವನ್ನು ಪಡೆಯೋಣ.

ಸಂಶೋಧನೆಯ ಪ್ರಕಾರ, “ಕೆಲಸ ಮಾಡುತ್ತಿರುವ ಅನೇಕ ವೃತ್ತಿಪರರು, ಅದರಲ್ಲೂ ತಮ್ಮ ವೃತ್ತಿಜೀವನದಲ್ಲಿ ಎತ್ತರದ ಸ್ಥಾನದಲ್ಲಿರುವವರು ಸಹ ತಮ್ಮ 40 ರ ಆಸುಪಾಸಿನ ಮಧ್ಯಭಾಗದಲ್ಲಿ ತಾವು ಈಗ ನಿರ್ವಹಿಸುತ್ತಿರುವ ಉದ್ಯೋಗದ ಬಗ್ಗೆ ಅತೃಪ್ತಿ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ.

"ನನ್ನ ಉಳಿದ ವೃತ್ತಿಪರ ವೃತ್ತಿಜೀವನದಲ್ಲಿ ಇನ್ನು ಇಷ್ಟು ಕೆಲಸ ಬಾಕಿ ಇದೆಯೇ?” ಎಂದು ಅವರು ಆಶ್ಚರ್ಯಪಡುತ್ತಾರೆ ಅಥವಾ ಅವರು ತೆಗೆದುಕೊಂಡ ಹಿಂದಿನ ನಿರ್ಧಾರಗಳಿಗೆ ಬಹಳಷ್ಟು ಪಶ್ಚಾತ್ತಾಪ ಪಡುತ್ತಾರೆ.

ಇದಕ್ಕೆಲ್ಲ ಒಬ್ಬ ವಿಶೇಷ ವ್ಯಕ್ತಿ ಇಂದು ನಮಗೆಲ್ಲ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರೆಂದರೆ ವೃತಿ ತರಬೇತುದಾರ ಸಾವನ್ ಕಪೂರ್, ಅವರು ಮಧ್ಯಂತರ ಜೀವನ ಅಥವಾ ಮಿಡ್-ಲೈಫ್ ವೃತ್ತಿಜೀವನದ ಬಿಕ್ಕಟ್ಟನ್ನು ಹೇಗೆ ಪರಿಹಾರ ಮಾಡಬಹುದು ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತಾರೆ.

ಹಾಗಿದ್ರೆ ಮೊದಲಿಗೆ ನಮಗೆಲ್ಲ ಬರುವ ಪ್ರಶ್ನೆ ಏನಂದ್ರೆ ಮಿಡ್‌-ಲೈಫ್‌ ಸಮಸ್ಯೆ ಎಂದ್ರೇನು? ಅದಕ್ಕೆ ಮುಂದೆ ಉತ್ತರ ತಿಳಿಯೋಣ.

ಇದನ್ನೂ ಓದಿ: ಈ ರೀತಿ ಮಾಡಿದ್ರೆ ನಿಮ್ಮ ಅಡುಗೆ ಕೆಲಸ ಬೇಗ ಮುಗಿದು ಹೋಗುತ್ತೆ

ಹಾಗಿದ್ರೆ ಮಿಡ್‌-ಲೈಫ್‌ ಸಮಸ್ಯೆ ಎಂದ್ರೇನು?

ಈ ಮಿಡ್‌-ಲೈಫ್‌ ಎಂದ್ರೆ ಜೀವನದ ಮಧ್ಯಭಾಗ ಸುಮಾರು 40 ರ ಆಸುಪಾಸಿನಲ್ಲಿ ನಮ್ಮ ವೃತ್ತಿಜೀವನದ ಬಗ್ಗೆ ನಮಗೆ ಅನೇಕ ಸಂದೇಹಗಳು ಬರಲಾರಂಭಿಸುತ್ತವೆ. ಕೆಲವು ಸಂದರ್ಭಗಲ್ಲಿ ವೃತ್ತಿ ಜೀವನವನ್ನೆ ಬಿಟ್ಟು ಬಿಡಬೇಕು ಎಂದು ಅನಿಸುವಷ್ಟು ಖಿನ್ನತೆಗೆ ಜಾರುವ ಸಂದರ್ಭಗಳು ಕೂಡ ಇರುತ್ತವೆ. ಇದನ್ನೆ ಮಿಡ್‌-ಲೈಫ್‌ ಸಮಸ್ಯೆ ಎನ್ನುತ್ತಾರೆ.

ವೃತ್ತಿ ಜೀವನದಲ್ಲಿ ಜನರು ಮಿಡ್ಲೈಫ್ ವೃತ್ತಿ ಸಮಸ್ಯೆಯನ್ನು ಅನುಭವಿಸುತ್ತಾರೆ. ಏಕೆ?

ಅದಕ್ಕೆ ಉತ್ತರ ಇಲ್ಲಿದೆ ಬನ್ನಿ. ಮಿಡ್-ಲೈಫ್ ವೃತ್ತಿಜೀವನದ ಬಿಕ್ಕಟ್ಟನ್ನು ಹೊಂದಿರುವ ಅನೇಕರು ಕೆಲಸ ಮಾಡುವವರೇ ಆಗಿರುತ್ತಾರೆ ಎಂಬುದು ಇಲ್ಲಿ ಮುಖ್ಯವಾದ ವಿಚಾರ ಆಗಿದೆ.

ಈ ಕೆಲಸ ಮಾಡುವ ವೃತ್ತಿಪರರು ತಮ್ಮ ಉದ್ಯೋಗಗಳಿಂದ ವಿಚಲಿತರಾಗುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ನಾವು ಇಷ್ಟು ವರ್ಷಗಳ ಕಾಲ ಮಾಡಿದ ಕೆಲಸ ನಮ್ಮ ಇಷ್ಟದ ಕೆಲಸವೇ ಅಲ್ಲ. ಈ ವೃತ್ತಿ ಜೀವನವನ್ನು ಆಯ್ಕೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾರೆ. ಅವರಿಗೆ ಇಷ್ಟವಿಲ್ಲದ ವೃತ್ತಿಜೀವನ ಇಷ್ಟು ದಿನ ಮಾಡಿದ ಪರಿಣಾಮ ಈ ಮಿಡ್‌-ಲೈಪ್‌ ಸಮಸ್ಯೆ ಅವರನ್ನು ಬಹುವಾಗಿ ಕಾಡುತ್ತದೆ.

ಇದನ್ನು ಇನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, "ನಾನು ನನಗೆ ಇಷ್ಟವಿರದ ಕ್ಷೇತ್ರ ಅಥವಾ ಸ್ಥಾನದಲ್ಲಿದ್ದೇನೆ, ಮುಂದೇನು?” ಎಂಬ ಪ್ರಶ್ನೆ ಅವರನ್ನು ತೀವ್ರವಾಗಿ ಬಾಧಿಸತೊಡಗುತ್ತದೆ. ಈ ಪಶ್ಚಾತ್ತಾಪವೇ ಮಿಡ್-ಲೈಫ್ ವೃತ್ತಿಜೀವನದ ಸಮಸ್ಯೆಗೇ ನೇರ ಕಾರಣವಾಗಿ ಕಾಣುತ್ತದೆ.

ಆಕಾಂಕ್ಷೆಯ ಹಂತ ಎಂದು ಕರೆಯಲ್ಪಡುವ ಹಂತವು ಸಾಮಾನ್ಯವಾಗಿ ನಿಮ್ಮ ಉನ್ನತ ಶಿಕ್ಷಣ ಅಥವಾ ಕಾಲೇಜು ಪದವಿಯನ್ನು ಪಡೆದಾಗ ಪ್ರಾರಂಭವಾಗುತ್ತದೆ. ನೀವು ಆಯ್ಕೆ ಮಾಡುವ ವಿಷಯ ಯಾವುದು ಎಂಬುದರ ಮೇಲೆ ಈ ಹಂತವು ನಿರ್ಧಾರವಾಗುತ್ತದೆ. ಮುಂದೆ ಏನಾಗ ಬಯಸುವೀರಿ ಎಂಬುದು ಕೂಡ ಈ ಹಂತದಲ್ಲಿದೆ. ಈ ಹಂತದಲ್ಲಿ ಗಂಭೀರವಾದ ಆತ್ಮಾವಲೋಕನದ ಅಗತ್ಯ ಇರುತ್ತದೆ. ಇಲ್ಲದಿದ್ರೆ ಮುಂದೆ ಇಂತಹ ಮಿಡ್‌ ಲೈಪ್‌ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

What are the first signs of a Midlife Crisis, Handling a Midlife crisis, Triggers a Midlife Crisis, ಜೀವನದಲ್ಲಿ ಜಿಗುಪ್ಸೆ ಆಗ್ತಾ ಇದ್ಯಾ ಹಾಗಾದ್ರೆ ಈ ಲೇಖನ ಓದಿ, ನಿಮ್ಮ ಬೇಡವಾದ ಜೀವನಕ್ಕೆ ಬೇಕಾದ ಮಾತುಗಳು, News Kannada, News Karnataka.
ಸಾಂದರ್ಭಿಕ ಚಿತ್ರ


ಪೂರೈಸದ ವೃತ್ತಿ ಮಹತ್ವಾಕಾಂಕ್ಷೆಗಳು ಮಿಡ್ಲೈಫ್ ವೃತ್ತಿಜೀವನದ ಬಿಕ್ಕಟ್ಟಿಗೆ ಕಾರಣವಾಗುವ ಎರಡನೇ ಅಂಶವಾಗಿದೆ. ಒಬ್ಬರ ಪ್ರಗತಿಯ ನಿರೀಕ್ಷೆ ಈಡೇರದಿರಬಹುದು. ವೃತ್ತಿನಿರತರು ಹುದ್ದೆ, ಸಂಬಳ, ಕಲಿಕೆ ಮತ್ತು ಅವರ ವೃತ್ತಿಜೀವನವು ಕೆಲಸದ ಪ್ರಪಂಚದೊಂದಿಗೆ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವ ಜವಾಬ್ದಾರಿಯ ವಿಷಯದಲ್ಲಿ ಅನೇಕ ನಿರೀಕ್ಷೆಗಳನ್ನು ಹೊಂದಿರಬಹುದು. ಇದು ಸಾಮಾನ್ಯವಾಗಿ ಈ ಎರಡನೆಯ ಕಾರಣಕ್ಕೆ ಮೂಲವಾಗಿದೆ. ಈ ಸಮಸ್ಯೆ ಹೆಚ್ಚಾದಾಗ ಮಿಡ್‌-ಲೈಫ್‌ ಸಮಸ್ಯೆ ಎದುರಾಗುತ್ತದೆ.

ಮಿಡ್‌-ಲೈಫ್‌ ಸಮಸ್ಯೆಯ ಲಕ್ಷಣಗಳಿವು:

ಇದು ವ್ಯಕ್ತಿಯ ಮಾನಸಿಕ ಆರೋಗ್ಯ, ಮಾನಸಿಕ ಸಮತೋಲನ, ಭಾವನಾತ್ಮಕ ಸಮಸ್ಯೆಗಳು, ಶರೀರಶಾಸ್ತ್ರ ಸಮಸ್ಯೆಗಳು ಇನ್ನು ಹೆಚ್ಚಿನ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಇದರ ಇತರ ರೋಗಲಕ್ಷಣಗಳೆಂದರೆ ವೃತ್ತಿ ಜೀವನ ಕಷ್ಟವೆನಿಸುವುದು, ಸ್ವಾಭಿಮಾನಕ್ಕೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳುವುದು, ವೃತ್ತಿಯಲ್ಲಿ ಸಂತೋಷದ ಕೊರತೆಯನ್ನು ಅನುಭವಿಸುವುದು, ಹೀಗೆ ಇತರ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಹೊಸ ನೇಮಕಾತಿಗಳು, ಗ್ರಾಹಕರು, ಮಾರಾಟಗಾರರು ಮತ್ತು ಇತರ ಸೇವಾ ಪೂರೈಕೆದಾರರ ಕಡೆಗೆ ಅಸಮಾಧಾನದ ವರ್ತನೆಯಂತಹ ಇತರ ವಿಧಾನಗಳಲ್ಲಿಯೂ ಸಹ ಇದು ಕಾಣಿಸಿಕೊಳ್ಳಬಹುದು.

ಇದು ಒಬ್ಬರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಕಾರಾತ್ಮಕ ದೃಷ್ಟಿಕೋನಕ್ಕೆ ದಾರಿ ಮಾಡಿಕೊಡುತ್ತದೆ. ದೀರ್ಘಕಾಲದ ಆಯಾಸವು ಮಿಡ್-ಲೈಫ್ ವೃತ್ತಿಪರ ಬಿಕ್ಕಟ್ಟಿನ ಮತ್ತೊಂದು ಸಂಕೇತವಾಗಿದೆ. ಇದು ಎಂಡಾರ್ಫಿನ್‌ ಹಾರ್ಮೊನ್‌ಗಳಿಂದ ಉಂಟಾಗುತ್ತದೆ.

ಮಿಡ್-ಲೈಫ್ ವೃತ್ತಿ ಸಮಸ್ಯೆಯನ್ನು ಹೇಗೆ ನಿಭಾಯಿಸಬಹುದು?

40 ರ ಆಸುಪಾಸಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಒಂದು ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತೆ ಕಾಡುತ್ತಿದೆ ಅಥವಾ ಕೆಲಸದಲ್ಲಿ ಸಂತೋಷವೇ ಸಿಗುತ್ತಿಲ್ಲ ಎಂದಾದರೆ ನೀವು ಮಿಡ್‌-ಲೈಪ್‌ ವೃತ್ತಿಜೀವನದ ಸಮಸ್ಯೆ ಕಾಡುತ್ತಿದೆ ಎಂದು ಅದರ ಅರ್ಥವಾಗಿದೆ.

ಇದನ್ನೂ ಓದಿ: ಈ 2 ವಸ್ತುಗಳನ್ನು ಬಳಸಿದ್ರೆ ಕುತ್ತಿಗೆಯ ಕಪ್ಪು ಕಲೆ ಮಾಯವಾಗುತ್ತೆ

ಮೇಲ್ನೋಟಕ್ಕೆ ಇದು ಸಾಮಾನ್ಯ ಸಮಸ್ಯೆ ಎಂದು ಕಂಡು ಬಂದರೂ ಸಹ ಮುಂದೆ ಈ ಸಮಸ್ಯೆ ದೊಡ್ಡದಾಗಬಹುದು. ಅದಕ್ಕೆ ಈ ಸಮಸ್ಯೆಯನ್ನು ಬಗೆಹರಿಸುವ ಮುಖ್ಯ ಕೆಲಸವೆಂದರೆ ವೃತ್ತಿ ತರಬೇತುದಾರರನ್ನು ನೇಮಿಸಿಕೊಳ್ಳುವುದು ಮಿಡ್ಲೈಫ್ ವೃತ್ತಿಪರ ಸಮಸ್ಯೆಗೆ ಅತ್ಯುತ್ತಮವಾದ ಕ್ರಮವಾಗಿದೆ.

ಮೊದಲನೆಯದಾಗಿ, ಇದು ಏಕೆ ಸಂಭವಿಸುತ್ತದೆ ಎಂಬುದರ ಜ್ಞಾನವನ್ನು ತಿಳಿಯಲು ನಿಮಗೆ ವೃತ್ತಿ ತರಬೇತುದಾರರು ಸಹಾಯ ಮಾಡುತ್ತಾರೆ. ವೃತ್ತಿ ತರಬೇತುದಾರರು ನಿಮ್ಮ ಸಮಸ್ಯೆಯನ್ನು ಪತ್ತೆಹಚ್ಚಲು ನಿಮಗೆ ಸಹಾಯ ಮಾಡಬಹುದು.

ಎರಡನೆಯದಾಗಿ, ವೃತ್ತಿ ತರಬೇತುದಾರರು ನಿಮ್ಮ ವೈಯಕ್ತಿಕ ಬೆಳವಣಿಗೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಹಾಯ ಮಾಡುತ್ತಾರೆ. ಇದರಿಂದ ನೀವು ಚಿಂತೆಯಿಂದ ಹೊರಬರಲು ಸಹಾಯವಾಗುತ್ತದೆ.

ವೃತ್ತಿ ತರಬೇತುದಾರರು ನಿಮ್ಮ ವ್ಯಕ್ತಿತ್ವ, ಸ್ವಯಂ-ಅರಿವು, ನಿಮ್ಮ ಧ್ಯೇಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅನುವಾಗುವ ಬದಲಾವಣೆಗಳ ಕುರಿತು ನಿಮ್ಮೊಂದಿಗೆ ಚರ್ಚೆ ಮಾಡಿ, ನಂತರ ಅದಕ್ಕೆ ಪರಿಹಾರಗಳನ್ನು ಸೂಚಿಸುತ್ತಾರೆ.

ವೃತ್ತಿಜೀವನ ಉತ್ತಮವಾಗಿರಲು ವೃತ್ತಿಜೀವನದ ತಂತ್ರಗಳು ಇಲ್ಲಿವೆ:

ತರಬೇತುದಾರರು ನಿಮ್ಮ ವೃತ್ತಿ ಜೀವನದಲ್ಲಿ ಸೂಕ್ತವಾಗಿ ಮೇಲೇರಲು ತೆಗೆದುಕೊಳ್ಳಬೇಕಾದ ವೃತ್ತಿ ಜೀವನದ ತಂತ್ರಗಳನ್ನು ತಿಳಿಸಿಕೊಡುತ್ತಾರೆ. ಆ ವೃತ್ತಿಜೀವನದ ತಂತ್ರಗಳು ಇಲ್ಲಿವೆ. ವೃತ್ತಿ ತರಬೇತುದಾರರು ನೀವು ಯಾರು ಎಂಬುದಕ್ಕೆ ಪ್ರಮುಖವಾಗಿ ನಾಲ್ಕು ತಂತ್ರಗಳನ್ನು ಇಲ್ಲಿ ಚರ್ಚಿಸಿದ್ದಾರೆ.

ಅವುಗಳಲ್ಲಿ ಮೊದಲನೆಯದು, ನೀವು ಯಾರೆಂಬುದರ ಬಗ್ಗೆ ನಿಮಗೆಷ್ಟು ತಿಳಿದಿದೆ ಮತ್ತು ಇತರರಿಗೆ ನಿಮ್ಮ ಬಗ್ಗೆ ಎಷ್ಟು ತಿಳಿದಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಆಗಿದೆ.

ಎರಡನೆಯದಾಗಿ, ನಿಮಗೆ ನೀವೆ ಹಾಕಿಕೊಂಡ ಕೆಲವು ಕುರುಡು ನಂಬಿಕೆಗಳ ಬಗ್ಗೆ ಚರ್ಚೆ ಮಾಡಿ ಅವುಗಳನ್ನು ಪರಿಹರಿಸುತ್ತಾರೆ. ಮೂರನೆಯದಾಗಿ, ಕೆಲವು ಆಂತರಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಆಂತರಿಕ ಸಮಸ್ಯೆಗಳೆಂದರೆ ಖಿನ್ನತೆ, ಇತರ ಮಾನಸಿಕ ಸಮಸ್ಯೆಗಳು ಆಗಿವೆ.

ಕೊನೆಯದಾಗಿ, ನಿಮಗೆ ಗೊತ್ತಿಲ್ಲದೆ ಭಯ ಪಡುವ ವಿಷಯಗಳಿಗೆ ಉತ್ತಮ ಪರಿಹಾರಗಳನ್ನು ನೀಡುತ್ತಾರೆ. ಈ ಎಲ್ಲ ಮಾನಸಿಕ ಸಮಸ್ಯೆಗಳನ್ನು ದೂರ ಮಾಡಿ ನಿಮಗೆ ನಿಮ್ಮ ಕೆಲಸದ ಮೇಲೆ ಪ್ರೀತಿ ಬರುವ ಆಗೆ ಮಾಡುತ್ತಾರೆ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಸಕಾರಾತ್ಮಕ ಬದಲಾವಣೆಗಳಿಗೆ ಹಿಂತಿರುಗಲು ನಿಮಗೆ ಸಹಾಯ ಮಾಡುತ್ತಾರೆ. ತರಬೇತುದಾರರು ಕೆಲಸದ ಯೋಜನೆಯನ್ನು ಅಭಿವೃದ್ಧಿಪಡಿಸಲು ನಿಮಗೆ ಸಹಾಯ ಮಾಡುತ್ತಾರೆ.

ಹೀಗೆ ನಿಮ್ಮ ಒಟ್ಟಾರೆ ಜೀವನದಲ್ಲಿ ಈ ಮಿಡ್‌-ಲೈಪ್‌ ಸಮಸ್ಯೆ ಬಂದರೆ ಹೆದರಿಕೊಳ್ಳುವ ಬದಲು ಅದನ್ನು ಸಕಾರಾತ್ಮಕವಾಗಿ ನಿಭಾಯಿಸಿ. ನಿಮ್ಮ ಸಮಸ್ಯೆಯಿಂದ ಹೊರ ಬನ್ನಿ. ಇದರಿಂದ ನಿಮ್ಮ ವೈಯಕ್ತಿಕ ಮತ್ತು ಆರ್ಥಿಕ ಬೆಳವಣಿಗೆಗೆ ಕೂಡ ಆಗುತ್ತದೆ ಎಂದು ತರಬೇತುದಾರರು ಹೇಳುತ್ತಾರೆ.
First published: