• Home
 • »
 • News
 • »
 • career
 • »
 • Career Tips: ನೀವು ಯಶಸ್ವಿ ಉದ್ಯಮಿ ಆಗಬೇಕೆಂದರೆ, ಒಮ್ಮೆ ಇವರ ಮಾತನ್ನು ಕೇಳಲೇಬೇಕು

Career Tips: ನೀವು ಯಶಸ್ವಿ ಉದ್ಯಮಿ ಆಗಬೇಕೆಂದರೆ, ಒಮ್ಮೆ ಇವರ ಮಾತನ್ನು ಕೇಳಲೇಬೇಕು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಜೆಫ್ ಲರ್ನರ್ ವಿಶ್ವದಲ್ಲೇ ಹೆಸರುವಾಸಿಯಾಗಿರುವ ENTRE ಇನ್ಸ್ಟಿಟ್ಯೂಟ್ ಅನ್ನು ಜೆಫ್ ಸ್ಥಾಪಿಸಿದ್ದಾರೆ. ವೃತ್ತಿಜೀವನದಲ್ಲಿ ಮಹತ್ವಾಕಾಂಕ್ಷೆಯುಳ್ಳವರಾಗಿ ಹೇಗೆ ಬೆಳೆಯಬಹುದು ಎಂಬುದಕ್ಕೆ ಜೆಫ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

 • Share this:

  ರಾಲ್ಫ್ ವಾಲ್ಡೋ ಎಮರ್ಸನ್ (Ralph Waldo Emerson) ತಮ್ಮ ವೃತ್ತಿಜೀವನವನ್ನು ಯುನಿಟೇರಿಯನ್ ಮಂತ್ರಿಯಾಗಿ ಆರಂಭಿಸಿದರು. ಉಪನ್ಯಾಸಕರಾಗಿ, ತತ್ವಜ್ಞಾನಿಯಾಗಿ, ನಿರ್ಮೂಲನವಾದಿಯಾಗಿ ಮತ್ತು "ಸ್ವಾವಲಂಬನೆ" ( Independent) ಯಂತಹ ಪ್ರಬಂಧಗಳ ಲೇಖಕರಾಗಿ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದರು. ಎಮರ್ಸನ್ ಮಾನವ ಜಗತ್ತಿಗೆ ಚಿಂತನೆಗಳ ಅಪಾರ ಸಂಪತ್ತನ್ನು ಮೀಸಲಿರಿಸಿದ್ದಾರೆ. ಸ್ವಾವಲಂಬನೆಯ ಕುರಿತು ಎಮರ್ಸನ್ ನೀಡಿರುವ ಹೇಳಿಕೆಗಳು ಗುರಿಯ ಮೇಲೆ ಕೇಂದ್ರೀಕರಿಸುವಂತೆ ಮಾಡುತ್ತದೆ. ನಿಮ್ಮ ಜೀವನದಲ್ಲಿ ಏನಾಗಬೇಕೆಂದು ನೀವು ಉದ್ದೇಶಿಸಿರುವಿರೋ ಅದಕ್ಕಾಗಿ ನೀವು ಪ್ರಯತ್ನಪಡಬೇಕು ಎಂದು ಹೇಳಿದ್ದಾರೆ.


  ಇನ್ನೊಂದು ಉದಾಹರಣೆಯೆಂಬಂತೆ ಅಮೇರಿಕನ್ ಉದ್ಯಮಿ, ಮಾರ್ಗದರ್ಶಕ, ಸ್ಪೀಕರ್, ಪಿಯಾನೋ ವಾದಕ ಜೆಫ್ ಲರ್ನರ್ ಸಾಕಷ್ಟು ಶ್ರಮವಹಿಸಿ ವೃತ್ತಿಜೀವನದಲ್ಲಿ ಸಾಧನೆಗೈದ ವ್ಯಕ್ತಿಯಾಗಿದ್ದಾರೆ. ಇಂದು ಅವರು ಸಾಧಿಸಿದ ಸಾಧನೆಗೆ ಅವರು ಪಟ್ಟ ಶ್ರಮ ಕಾರಣವಾಗಿದೆ. ವಿಶ್ವದಲ್ಲೇ ಹೆಸರುವಾಸಿಯಾಗಿರುವ ENTRE ಇನ್ಸ್ಟಿಟ್ಯೂಟ್ ಅನ್ನು ಜೆಫ್ ಸ್ಥಾಪಿಸಿದ್ದಾರೆ. ವೃತ್ತಿಜೀವನದಲ್ಲಿ ಮಹತ್ವಾಕಾಂಕ್ಷೆಯುಳ್ಳವರಾಗಿ ಹೇಗೆ ಬೆಳೆಯಬಹುದು ಎಂಬುದಕ್ಕೆ ಜೆಫ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.


  ರಾಲ್ಫ್ ವಾಲ್ಡೋ ಎಮರ್ಸನ್


  ವಾಣಿಜ್ಯೋದ್ಯಮಿಯ ಅಗತ್ಯವೇನು?


  ಜಗತ್ತಿಗೆ ವಾಣಿಜ್ಯೋದ್ಯಮಿಯ ಅಗತ್ಯ ಏನಿದೆ ಎಂದು ವಿವರಿಸುವ ಜೆಫ್, ವಾಣಿಜ್ಯೋದ್ಯಮಿಯು ಜನರಿಗೆ ಅಗತ್ಯವಿರುವ ಹಾಗೂ ಕೈಗೆಟಕುವ ಯಾವುದನ್ನಾದರೂ ಒದಗಿಸುವ ಸಾಹಸದಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ ಎಂದು ಹೇಳುತ್ತಾರೆ.


  ವಾಣಿಜ್ಯೋದ್ಯಮಿ ಮ್ಯಾಗಜೀನ್‌ಗಳಲ್ಲಿ ತನ್ನ ಹೆಸರು ಬರುವಂತೆ ಇಲ್ಲವೇ ಕೈತುಂಬಾ ಹಣ ಸಂಪಾದಿಸಬೇಕೆಂಬ ಧೋರಣೆಯುಳ್ಳ ವ್ಯಕ್ತಿ ಮಾತ್ರವಾಗಿರುವುದಿಲ್ಲ. ಆತ ತನ್ನನ್ನು ನಂಬಿದ ಜನರಿಗೆ ಏನು ಬೇಕಾದರೂ ಮಾಡುವ ಸಾಹಸಿಯಾಗಿರುತ್ತಾನೆ ಎಂಬುದು ಜೆಫ್ ಮಾತಾಗಿದೆ. ಬುದ್ಧಿವಂತಿಕೆ ಹಾಗೂ ವಿವೇಕದೊಂದಿಗೆ ಸಂಪರ್ಕ ಹೊಂದಿದ ವಾಣಿಜ್ಯೋದ್ಯಮಿ ಪರಿಸ್ಥಿತಿಯನ್ನು ಎದುರಿಸುವ ಮನಸ್ಥಿತಿ ಹೊಂದಿದವರಾಗಿರುತ್ತಾರೆ ಎಂದು ತಿಳಿಸುತ್ತಾರೆ.


  ನೀವು ಸ್ಥಿತಿವಂತರಾಗಲು ಈ ನಿಯಮವನ್ನು ಅಳವಡಿಸಿಕೊಳ್ಳಿ


  ಅಸ್ಥಿರ ಆರ್ಥಿಕತೆಯ ಸಮಯದಲ್ಲಿ ಅನೇಕರು ಆರ್ಥಿಕವಾಗಿ ಹೆಣಗಾಡುತ್ತಿರುವಾಗ ಕೂಡ ಶ್ರೀಮಂತರಾಗುವುದು ಸುಲಭ ಎಂಬುದು ಜೆಫ್ ಮಾತಾಗಿದೆ. ಫೋರ್ಬ್ಸ್ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರತಿ ದಿನ 1,700 ಕ್ಕೂ ಹೆಚ್ಚು ಹೊಸ ಮಿಲಿಯನೇರ್‌ಗಳು ಮತ್ತು ಪ್ರಪಂಚದಾದ್ಯಂತ 4,000 ಕ್ಕಿಂತ ಹೆಚ್ಚು ಹೊಸ ಮಿಲಿಯನೇರ್‌ಗಳು ರೂಪುಗೊಳ್ಳುತ್ತಿದ್ದಾರೆ.


  ಇದರಲ್ಲಿ ಹೆಚ್ಚಿನವರು ಯಾವುದೇ ಸೌಕರ್ಯಗಳೊಂದಿಗೆ ಮುಂದೆ ಬಂದವರಲ್ಲ ಹಾಗೂ ಸೂಕ್ತವಾದ ಶಿಕ್ಷಣವನ್ನು ಹೊಂದಿದವರೂ ಅಲ್ಲ. ಹೆಚ್ಚಿನವರು ಸಾಂಪ್ರದಾಯಿಕ ಉದ್ಯೋಗವನ್ನು ತೊರೆದು ಇತರ ವಿಧಾನಗಳನ್ನು ಅನುಸರಿಸಿ ಸಾಧನೆಗೈದವರಾಗಿದ್ದಾರೆ.


  ಜೆಫ್ ಉದ್ಯಮಿಗಳಿಗೆ ಹೇಳಿರುವ ಕಿವಿಮಾತುಗಳೇನು?


  ಯಾವುದೇ ಮಿಲಿಯನೇರ್ ಸ್ವತ್ತುಗಳನ್ನು ಹೊಂದಿಕೊಂಡೇ ಜನಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ವ್ಯವಹಾರವನ್ನು ಅಭಿವೃದ್ಧಿಪಡಿಸಿಕೊಂಡು ಸ್ವತ್ತುಗಳನ್ನು ನಿರ್ಮಿಸುವುದರಲ್ಲಿ ಅವರ ಪ್ರಗತಿಯೇ ಸಮಾಜದಲ್ಲಿ ಅವರು ಮುಂದೆ ಬರಲು ಕಾರಣ ಎಂಬುದು ಜೆಫ್ ಮಾತಾಗಿದೆ.


  ಗಣ್ಯವ್ಯಕ್ತಿ, ಉದ್ಯೋಗಿಯಾಗಲು ಬಯಸುವವರು ಇಂದಿನ ದಿನಗಳಲ್ಲಿ ಇಂಟರ್ನೆಟ್ ಬಳಸಿಕೊಂಡು ಏನು ಬೇಕಾದರೂ ಸಾಧಿಸಬಹುದು ಎಂಬ ಕಿವಿಮಾತನ್ನು ಹೇಳಿದ್ದಾರೆ. ಡಿಜಿಟಲ್ ರಿಯಲ್ ಎಸ್ಟೇಟ್ ಎಂಬುದು ಹೆಚ್ಚು ಜನಪ್ರಿಯವಾಗಿರುವ ವ್ಯಾಪಾರವಾಗಿದ್ದು ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಆನ್‌ಲೈನ್‌ನಲ್ಲಿ ಉದ್ಯಿಮೆದಾರರ ನಡೆಸಬಹುದಾಗಿದೆ.


  ಉದ್ಯಮಿಗಳು ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಹಾಗೂ ಕ್ರಿಯಾತ್ಮಕವಾಗಿರಲು ಕೆಲವೊಂದು ಉದ್ದೇಶಗಳನ್ನು ಇರಿಸಿಕೊಳ್ಳಬೇಕು ಎಂಬುದು ಜೆಫ್ ಹೇಳಿಕೆಯಾಗಿದೆ.


  ತಿಳುವಳಿಕೆ ಪಡೆದುಕೊಳ್ಳುವುದು


  ಯಾವ ಕ್ಷೇತ್ರದಲ್ಲಿ ಉದ್ಯಮ ನಡೆಸಲು ಬಯಸುತ್ತೀರಿ ಅಲ್ಲಿ ಆಳವಾದ ಅಧ್ಯಯನ ನಡೆಸಿ ಹಾಗೂ ಅದಕ್ಕಾಗಿ ಯಾವ ಕೌಶಲ್ಯಗಳನ್ನು ಅರಿತುಕೊಳ್ಳಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಿ ಎಂಬುದು ಜೆಫ್ ಮಾತಾಗಿದೆ.


  ಸರಿಯಾದ ಜನರೊಂದಿಗೆ ಸಂಪರ್ಕ ಹೊಂದುವುದು


  ನಿಮ್ಮ ಬೆಳವಣಿಗೆಗೆ ಉತ್ತೇಜನಕಾರಿಯಾಗಿರುವ ನಾಲ್ಕು ಐದು ಜನರನ್ನು ಆರಿಸಿ ಹಾಗೂ ಅವರೊಂದಿಗೆ ಸಂಪರ್ಕ ಹೊಂದಿ.


  ನಿರ್ದಿಷ್ಟ ಗುರಿಗಳನ್ನು ಅರಿತುಕೊಳ್ಳುವುದು


  ಯಶಸ್ವಿಯಾಗುವುದು ಮೊದಲಾದ ಸಾಮಾನ್ಯ ಉದ್ದೇಶಗಳಲ್ಲದೆ ನೀವೇನು ಆಗಬೇಕೆಂದು ನಿರ್ಧರಿಸಿರುವಿರೋ ಅದಕ್ಕಾಗಿ ಪಣ ತೊಡಿ.


  ಇದನ್ನೂ ಓದಿ: Market Reseacher: ಬಹುಬೇಡಿಕೆಯ ವೃತ್ತಿಯಾದ ಮಾರ್ಕೆಟ್ ರಿಸರ್ಚ್​ ಅನಾಲಿಸ್ಟ್​ ಆಗಲು ಇಲ್ಲಿದೆ ಮಾಹಿತಿ


  ಮೌಲ್ಯಗಳಿಗೆ ಆದ್ಯತೆ ನೀಡುವುದು


  ಪ್ರತಿಯೊಂದಕ್ಕೂ ಇತರರ ನೆರವಿಗೆ ಕೈಚಾಚದೇ ನಿಮ್ಮ ಸ್ವಂತಿಕೆಯಲ್ಲಿ ಏನನ್ನಾದರೂ ಹೊಸತನ್ನು ಹೊರತನ್ನಿ.


  ಸಮಯಕ್ಕೆ ಮಹತ್ವ ನೀಡುವುದು


  ಯಶಸ್ವಿ ಜನರು ಸಮಯಕ್ಕೆ ಮಹತ್ವ ನೀಡುತ್ತಾರೆ ಹಾಗೂ ಅದನ್ನು ಯಾರಿಗೂ ನೀಡುವುದಿಲ್ಲ. ಇದು ತುಂಬಾ ಬೆಲೆಬಾಳುವಂಥದ್ದು ಎಂಬುದು ಅವರಿಗೆ ತಿಳಿದಿರುತ್ತದೆ.


  ವಿಶಾಲವಾಗಿ ಯೋಚಿಸುವುದು


  ನಿಮ್ಮ ಚೌಕಟ್ಟನ್ನು ಒಬ್ಬ ಮಾರ್ಗದರ್ಶಕರಿಗೆ ಮಾತ್ರವೇ ಮೀಸಲಿಡಬೇಡಿ. ನಿಮ್ಮ ಜೀವನದಲ್ಲಿ ಕಲಿಯುವ ಹೊಸ ಕೌಶಲ್ಯಗಳಿಂದ ಹೊಸತನ್ನು ಅರಿತುಕೊಳ್ಳಬಹುದು.


  ಸಾಧನೆಯತ್ತ ಮುನ್ನುಗ್ಗುವುದು


  ಜ್ಞಾನವನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ಅದನ್ನು ಸರಿಯಾದ ವಿಧಾನದಲ್ಲಿ ಬಳಸಿಕೊಳ್ಳಿ.


  ಸಮಸ್ಯೆಯನ್ನು ಪರಿಹರಿಸುವ ಬದಲಿಗೆ ಸಮಸ್ಯೆಯನ್ನು ಎದುರಿಸಿ


  ಸಮಸ್ಯೆಯನ್ನು ಪರಿಹರಿಸುವ ಬದಲಿಗೆ ಸಮಸ್ಯೆಯನ್ನು ಎದುರಿಸಿ ಎಂದು ಸಲಹೆ ನೀಡುವ ಜೆಫ್ ಲರ್ನರ್ ಸಮಸ್ಯೆಗೆ ತೊಡಕಾಗಿರುವ ಅಂಶಗಳನ್ನು ಸುಧಾರಿಸಿ ಎಂದು ತಿಳಿಸುತ್ತಾರೆ. ನಿಮ್ಮನ್ನು ನೀವು ಇನ್ನಷ್ಟು ಸುಧಾರಿಸುವ ಅಂಶಗಳತ್ತ ಗಮನ ಹರಿಸಿ ಎಂಬುದು ಜೆಫ್ ಹೇಳಿಕೆಯಾಗಿದೆ.


  ಆಲಸ್ಯತನವನ್ನು ಹೇಗೆ ಹೋಗಲಾಡಿಸಬಹುದು ಎಂಬುದಕ್ಕೆ ಜೆಫ್ ನೀಡಿರುವ ಸಲಹೆ ಅತ್ಯಂತ ಸೂಕ್ತವಾದುದಾಗಿದೆ. ಯಾವುದೇ ವೃತ್ತಿಯಲ್ಲಿ ಆಲಸ್ಯ ತಲೆದೋರಲು ಕಾರಣ ಭಯ ಎಂದು ತಿಳಿಸುವ ಜೆಫ್ ಇದನ್ನು ಹೋಗಲಾಡಿಸಿಕೊಂಡರೆ ಆಲಸ್ಯ ತನ್ನಿಂದ ತಾನೇ ಮಾಯವಾಗುತ್ತದೆ ಎಂದು ಹೇಳಿದ್ದಾರೆ. ನಮ್ಮಲ್ಲಿರುವ ಶಕ್ತಿಯ ಬಗ್ಗೆ ನಾವು ಅರಿತುಕೊಂಡು ಮುಂದುವರಿಯಬೇಕು ಎಂಬುದು ಜೆಫ್ ಹೇಳಿಕೆಯಾಗಿದೆ.

  Published by:Kavya V
  First published: