• Home
  • »
  • News
  • »
  • career
  • »
  • Fake job: ನಕಲಿ ಕೆಲಸಗಳ ಬಲೆಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಉಪಾಯ

Fake job: ನಕಲಿ ಕೆಲಸಗಳ ಬಲೆಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಉಪಾಯ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈಗಂತೂ ತುಂಬಾ ಕೆಲಸಗಳ ಜಾಹೀರಾತುಗಳನ್ನು ಈ ಸೈಟ್ ಗಳಲ್ಲಿ ಪೋಸ್ಟ್ ಮಾಡುತ್ತಾರೆ ಮತ್ತು ಅನೇಕ ಉದ್ಯೋಗಾಂಕ್ಷಿಗಳು ಸಹ ತಮಗೆ ಕೆಲಸ ಸಿಗಬಹುದು ಅನ್ನೋ ಒಂದು ಆಸೆಯಿಂದ ಅವರಿಗೆ ತಮ್ಮ ಮಾಹಿತಿಯನ್ನು ನೀಡುತ್ತಾರೆ ಆದರೆ ಅದು ನಕಲಿಯಾಗಿರುತ್ತದೆ.

  • Trending Desk
  • Last Updated :
  • New Delhi, India
  • Share this:

ಕಳೆದ ಎರಡೂವರೆ ವರ್ಷದಿಂದ (Year) ಎಂದರೆ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದ ಅನೇಕ ಜನರು ತಮ್ಮ ಕೆಲಸಗಳನ್ನು (Work) ಕಳೆದುಕೊಂಡು ತಮ್ಮ ಹಳ್ಳಿಗೆ (Rural) ಸಂಸಾರ ಸಮೇತವಾಗಿ ಹೋಗಿರುವುದನ್ನು ನಾವು ನೋಡಿದ್ದೇವೆ. ಈಗ ಈ ಉದ್ಯೋಗಗಳನ್ನು (Employment) ಹುಡುಕಿ ಕೊಡಲು ಮತ್ತು ಉದ್ಯೋಗಿಗಳು ಮತ್ತು ಉದ್ಯೋಗದಾತರ ನಡುವೆ ಒಂದು ಸಂಪರ್ಕ ಒದಗಿಸಲು ಸಹಾಯ ಮಾಡುವ ಅನೇಕ ಉದ್ಯೋಗ ಲಿಸ್ಟ್ ಮಾಡುವ ಸೈಟ್ ಗಳು ಸಹ ಇಂಟರ್ನೆಟ್ (Internet) ನಲ್ಲಿ ಹುಟ್ಟಿಕೊಂಡಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಆದರೆ ಈಗಂತೂ ತುಂಬಾ ಕೆಲಸಗಳ ಜಾಹೀರಾತುಗಳನ್ನು ಈ ಸೈಟ್ ಗಳಲ್ಲಿ ಪೋಸ್ಟ್ ಮಾಡುತ್ತಾರೆ ಮತ್ತು ಅನೇಕ ಉದ್ಯೋಗಾಂಕ್ಷಿಗಳು ಸಹ ತಮಗೆ ಕೆಲಸ ಸಿಗಬಹುದು ಅನ್ನೋ ಒಂದು ಆಸೆಯಿಂದ ಅವರಿಗೆ ತಮ್ಮ ಮಾಹಿತಿಯನ್ನು ನೀಡುತ್ತಾರೆ.


ಆದರೆ ಇದರಲ್ಲಿ ಎಷ್ಟೋ ಕೆಲಸಗಳು ನಿಜವಾಗಿ ಕೆಲಸ ಕೊಡಿಸುವ ಲಿಂಕ್ ಗಳು ಆಗಿರುವುದಿಲ್ಲ. ಕೇವಲ ನಿಮ್ಮ ವೈಯುಕ್ತಿಕ ಮಾಹಿತಿಯನ್ನು ಮತ್ತು ನಿಮ್ಮಿಂದ ಹಣವನ್ನು ಪಡೆದುಕೊಂಡು ಮೋಸ ಮಾಡುವ ಜನರು ಇರುತ್ತಾರೆ. ಇಂತಹ ನಕಲಿ ಉದ್ಯೋಗಗಳ ಜಾಲಕ್ಕೆ ನೀವು ಸಿಕ್ಕಿ ಹಾಕಿಕೊಂಡರೆ, ನಿಮ್ಮ ಹಣ ಮತ್ತು ಸಮಯ ಸಹ ವ್ಯರ್ಥವಾಗುವುದು ಗ್ಯಾರಂಟಿ ಅಂತ ಹೇಳಬಹುದು.


ದಿನೇ ದಿನೇ ಹೆಚ್ಚಾಗುತ್ತಿವೆ ಸೈಬರ್ ವಂಚನೆಗಳು


ಸೈಬರ್ ವಂಚನೆಗೆ ಸಂಬಂಧಿಸಿದ ಪ್ರಕರಣಗಳು ದಿನೇ ದಿನೇ ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಪ್ರಕರಣಗಳಲ್ಲಿ, ನಕಲಿ ಉದ್ಯೋಗದ ಭರವಸೆಗಳನ್ನು ಒಳಗೊಂಡ ವಂಚನೆಯ ಘಟನೆಗಳು ಗಣನೀಯ ಪಾಲನ್ನು ಹೊಂದಿವೆ. ಕಳೆದ ಒಂದು ವಾರದಲ್ಲಿ ನರೇಂದ್ರ ಮೋದಿ ಸರ್ಕಾರವು ಮ್ಯಾನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾದ 130 ಉದ್ಯೋಗಿಗಳನ್ನು ಈ ರೀತಿಯ ನಕಲಿ ಉದ್ಯೋಗದ ಜಾಲದಿಂದ ರಕ್ಷಿಸಿದೆ ಎಂದು ವರದಿಯೊಂದು ಹೇಳುತ್ತಿದೆ.


ಇದನ್ನೂ ಓದಿ: ಟೈಲರಿಂಗ್​​ನಲ್ಲಿ ಆಸಕ್ತಿ ಇದೆಯಾ? ಹಾಗಾದರೆ ಇಲ್ಲಿದೆ ಕೆಲಸ


ಈ ರೀತಿಯ ನಕಲಿ ಉದ್ಯೋಗ ಹಗರಣಕ್ಕೆ ಜನರು ಬಲಿಯಾಗುವುದನ್ನು ತಡೆಯಲು, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ನಕಲಿ ಆನ್ಲೈನ್ ಉದ್ಯೋಗದ ಪ್ರಸ್ತಾಪದಲ್ಲಿ ಗಮನಿಸಬೇಕಾದ ಐದು ಸೂಚಕಗಳನ್ನು ಹೊರತಂದಿದೆ.


ಕಂಪನಿಯೊಂದಿಗಿನ ಆರಂಭಿಕ ಸಂಭಾಷಣೆಯ ನಂತರ ನೀವು ತಕ್ಷಣವೇ ನೇಮಕಾತಿ ಪತ್ರವನ್ನು ಸ್ವೀಕರಿಸಿದರೆ ಅದು ಉದ್ಯೋಗ ವಂಚನೆಯ ಸುಳಿವು ಆಗಿರಬಹುದು. ಅಪಾಯಿಂಟ್ಮೆಂಟ್ ಅಥವಾ ಆಫರ್ ಲೆಟರ್ ನಲ್ಲಿ ಮತ್ತೊಂದು ಎಚ್ಚರಿಕೆಯ ಚಿಹ್ನೆಯೆಂದರೆ ಅಸ್ಪಷ್ಟವಾದ ಕೆಲಸದ ವಿವರಗಳು. ನೇಮಕಾತಿ ಪತ್ರದಲ್ಲಿ ಅಸ್ಪಷ್ಟ ಉದ್ಯೋಗದ ಅವಶ್ಯಕತೆಗಳು ಮತ್ತು ಕೆಲಸದ ವಿವರಣೆ ಸರಿಯಾಗಿ ಇರದೆ ಇದ್ದರೆ ನೀವು ತುಂಬಾನೇ ಜಾಗರೂಕರಾಗಿರಬೇಕು.


ಖಾಸಗಿ ಮಾಹಿತಿ ತಿಳಿಸಬೇಡಿ


ಇ-ಮೇಲ್ ನ ಭಾಷೆಯನ್ನು ಗಮನಿಸಿ, ಅದನ್ನು ಅನುಚಿತವಾಗಿ ಬರೆದಿದ್ದರೆ, ಅದು ನಕಲಿಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಸಂಭಾವ್ಯ ಉದ್ಯೋಗದಾತನು ಸಂದರ್ಶನದ ಸಮಯದಲ್ಲಿ ಖಾಸಗಿ ಮಾಹಿತಿಯನ್ನು ಕೇಳಿದರೆ, ಅದು ಹಗರಣವಾಗಿರಬಹುದು. ಅಂತಹ ಮಾಹಿತಿಯನ್ನು ಕೂಡಲೇ ಬಹಿರಂಗಪಡಿಸಬೇಡಿ. ನಿಮಗೆ ನೀಡಲಿರುವ ಉದ್ಯೋಗಕ್ಕೆ ನೀವು ಮೊದಲು ಹಣವನ್ನು ಪಾವತಿಸಲು ನಿಮ್ಮನ್ನು ಕೇಳಿದರೆ, ಅದು ವಂಚನೆಯಾಗಿರುವ ಎಲ್ಲಾ ಸಾಧ್ಯತೆಗಳು ಇವೆ.


ಸೈಬರ್ ವಂಚನೆಗೆ ಬಲಿಯಾದರೆ ಏನು ಮಾಡಬೇಕು?


ಆದಾಗ್ಯೂ, ನೀವು ಈ ಮೇಲಿನ ಯಾವುದೇ ಅಂಶಗಳನ್ನು ನೀವು ಗಮನಿಸದೆ ನಕಲಿ ಉದ್ಯೋಗದ ವಂಚನೆಗೆ ಬಲಿಯಾಗಬಹುದು. ಅಂತಹ ಸಂದರ್ಭದಲ್ಲಿ, ಸೈಬರ್ ಅಪರಾಧದ ಸಂತ್ರಸ್ತರು ತಮ್ಮ ದೂರನ್ನು cybercrime.gov.in ನಲ್ಲಿ ದಾಖಲಿಸಬಹುದು. ಕಳೆದ ತಿಂಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಯುವಕರು ಮತ್ತು ಅರ್ಜಿದಾರರಿಗೆ "ಲಾಭದಾಯಕ ಉದ್ಯೋಗಗಳನ್ನು ಜಾಹೀರಾತು ಮಾಡುವ ನಕಲಿ ಉದ್ಯೋಗ ದಂಧೆಗಳ" ಬಗ್ಗೆ ಎಚ್ಚರವಾಗಿರುವಂತೆ ತಿಳಿಸಿತ್ತು.


ಇದನ್ನೂ ಓದಿ; ಕೆಎಸ್​ಎಪಿಎಸ್​ನಲ್ಲಿ ನೇಮಕಾತಿ; ಅರ್ಜಿ ಸಲ್ಲಿಕೆಗೆ ನಾಳೆಯೇ ಕಡೆಯ ದಿನ


ಮ್ಯಾನ್ಮಾರ್ ನಲ್ಲಿ ಉದ್ಯೋಗದ ಆಸೆ ತೋರಿಸಿ ಕೆಲವು ಅಮಾಯಕ ಜನರನ್ನು ಸಾಗಿಸಲಾಗುತ್ತಿತ್ತು ಮತ್ತು ಅಲ್ಲಿ ಅಮಾನವೀಯ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲಾಗುತ್ತಿತ್ತೆಂಬ ಆರೋಪದ ಅಡಿಯಲ್ಲಿ ಕೆಲವು ನಕಲಿ ಉದ್ಯೋಗದಾತರನ್ನು ಬಂಧಿಸಲಾಗಿದೆ ಎಂದು ಎಂಇಎ ವರದಿ ಮಾಡಿದೆ.

First published: