Career Growth: ಈ ರೀತಿ ಕೋರ್ಸ್​ ಆಯ್ಕೆ ಮಾಡಿಕೊಂಡ್ರೆ ನಿಮ್ಮ ಕೆರಿಯರ್ ಚೆನ್ನಾಗಿರುತ್ತೆ

ಆನ್‌ಲೈನ್‌ನಲ್ಲಿ ಸಾಕಷ್ಟು ವೃತ್ತಿಪರ ಕೋರ್ಸ್‌ಗಳ ಆಯ್ಕೆಗಳಿವೆ. ಆದರೆ ಗುರಿ ಸಾಧಿಸಲು ಹಾಗೂ ವೃತ್ತಿಯಲ್ಲಿ ಸೂಕ್ತ ನೆಲೆ ಕಂಡುಕೊಳ್ಳಲು ಸಹಕಾರಿಯಾಗಿರುವ ಕೋರ್ಸ್‌ಗಳು ಯಾವುವು? ಅವುಗಳ ಆಯ್ಕೆಯನ್ನು ಮಾಡುವುದು ಹೇಗೆ ಎಂಬ ಗೊಂದಲ ಇದ್ದೇ ಇರುತ್ತದೆ. ಅದಕ್ಕಾಗಿಯೇ ವೃತ್ತಿಯ ಅಭಿವೃದ್ಧಿಗೆ ಸೂಕ್ತವಾದ ಕೋರ್ಸ್ ಅನ್ನು ಆಯ್ಕೆಮಾಡುವಾಗ ಕೆಲವು ಹಂತಗಳನ್ನು ಅನುಸರಿಸಬೇಕು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಸರಿಯಾದ ವೃತ್ತಿಜೀವನದ (Career) ಪ್ರಕ್ರಿಯೆಯು ಪ್ರಾಥಮಿಕ ಶಿಕ್ಷಣದಿಂದ ಆರಂಭವಾಗಿ ನಿವೃತ್ತಿಯವರೆಗೂ ಮುಂದುವರಿಯುತ್ತದೆ. ಹೇಳಿ ಕೇಳಿ ಇದು ಸ್ಪರ್ಧಾತ್ಮಕ ಯುಗ ಹಾಗಾಗಿಯೇ ಇಲ್ಲಿ ಅಭಿವೃದ್ಧಿ ಹೊಂದಲು ಸ್ಮಾರ್ಟ್ ಆಗಿರಬೇಕು ಅಂತೆಯೇ ಕೌಶಲ್ಯವನ್ನು (Skills) ಹೊಂದಿರಬೇಕು. ಅದರಲ್ಲೂ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದಾದಲ್ಲಿ ಕಾಲಕ್ಕೆ ತಕ್ಕಂತಿರಬೇಕು. ಜಗತ್ತು ಶಿಕ್ಷಣ, ತಂತ್ರಜ್ಞಾನ (Technology) ಮತ್ತು ಸಮಾಜೀಕರಣದ ವಿಷಯದಲ್ಲಿ ಬದಲಾವಣೆಗೆ ಒಳಗಾಗುತ್ತಿರುವುದರಿಂದ ದೀರ್ಘಕಾಲದವರೆಗೆ ಮೌಲ್ಯಯುತವಾದ ವೃತ್ತಿಜೀವನವನ್ನು ಆಯ್ದುಕೊಳ್ಳುವುದು ನಿರ್ಣಾಯಕವಾಗಿದೆ. ವೃತ್ತಿಪರ ಕೋರ್ಸ್‌ಗಳು (Course) ವೃತ್ತಿಯ ಅಭಿವೃದ್ಧಿಗೆ ಕಾರಣವಾಗಿರುವುದು ಮಾತ್ರವಲ್ಲದೆ ಕೆಲಸದ ಉದ್ದೇಶವನ್ನು ಕಂಡುಕೊಳ್ಳಲು, ಹೊಸ ಪಾತ್ರಗಳನ್ನು ಅನ್ವೇಷಿಸಲು ಅಂತೆಯೇ ನೆಟ್‌ವರ್ಕಿಂಗ್ ಅವಕಾಶಗಳನ್ನು (Opportunity) ಗಳಿಸಲು ಸಹಕಾರಿಯಾಗಿವೆ. 


ವೃತ್ತಿಪರ ಕೋರ್ಸ್‌ಗಳು ಏಕೆ ಮುಖ್ಯ?
ಆನ್‌ಲೈನ್‌ನಲ್ಲಿ ಸಾಕಷ್ಟು ವೃತ್ತಿಪರ ಕೋರ್ಸ್‌ಗಳ ಆಯ್ಕೆಗಳಿವೆ. ಆದರೆ ಗುರಿ ಸಾಧಿಸಲು ಹಾಗೂ ವೃತ್ತಿಯಲ್ಲಿ ಸೂಕ್ತ ನೆಲೆ ಕಂಡುಕೊಳ್ಳಲು ಸಹಕಾರಿಯಾಗಿರುವ ಕೋರ್ಸ್‌ಗಳು ಯಾವುವು? ಅವುಗಳ ಆಯ್ಕೆಯನ್ನು ಮಾಡುವುದು ಹೇಗೆ ಎಂಬ ಗೊಂದಲ ಇದ್ದೇ ಇರುತ್ತದೆ. ಅದಕ್ಕಾಗಿಯೇ ವೃತ್ತಿಯ ಅಭಿವೃದ್ಧಿಗೆ ಸೂಕ್ತವಾದ ಕೋರ್ಸ್ ಅನ್ನು ಆಯ್ಕೆಮಾಡುವಾಗ ಕೆಲವು ಹಂತಗಳನ್ನು ಅನುಸರಿಸಬೇಕು.


ನಿಮ್ಮ ಆಸಕ್ತಿಗಳನ್ನು ಪರಿಗಣಿಸಿ:
ಕೋರ್ಸ್‌ಗಳು ವ್ಯಕ್ತಿಯ ಶೈಕ್ಷಣಿಕ ಕೌಶಲ್ಯಗಳನ್ನು ಬಲಪಡಿಸುವಂತಿರಬೇಕು. ವೃತ್ತಿಪರ ಕೋರ್ಸ್ ಅನ್ನು ಆಯ್ಕೆಮಾಡುವ ಮೊದಲ ಹಂತವೆಂದರೆ ಕಲಿಕೆಯ ಆಸಕ್ತಿಯ ವಿಷಯವನ್ನು ನಿರ್ಧರಿಸುವುದು. ಕಲಿಕೆಯ ಪ್ರಕ್ರಿಯೆಯಲ್ಲಿ ಸಮಯ ಮತ್ತು ಹಣವನ್ನು ನೀವು ಹೂಡಿಕೆ ಮಾಡುವುದರಿಂದ ಈ ನಿರ್ಧಾರವು ನಿರ್ಣಾಯಕವಾಗಿದೆ.


ಕೋರ್ಸ್ ವಿಷಯವನ್ನು ಪರಿಶೀಲಿಸಿ:
ದಾಖಲಾತಿ ಪ್ರಕ್ರಿಯೆಗೂ ಮುನ್ನ ಕೋರ್ಸ್ ವಿಷಯವನ್ನು ಪರಿಗಣಿಸಬೇಕಾದುದು ಅತ್ಯಗತ್ಯವಾಗಿದೆ. ಏಕೆಂದರೆ ಇದು ಒಟ್ಟಾರೆ ಕಲಿಕೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು. ವೃತ್ತಿಪರ ಅಭಿವೃದ್ಧಿಗಾಗಿ ಪ್ರತಿಯೊಂದು ವಿಷಯದ ಮಹತ್ವವನ್ನು ಸ್ಪಷ್ಟಪಡಿಸುವ ಮೂಲಕ ಕೋರ್ಸ್ ಕಲಿಕೆಯು ಆರಂಭ ಮಟ್ಟದಿಂದ ತಜ್ಞರ ಮಟ್ಟಕ್ಕೆ ಕೊಂಡೊಯ್ಯುವಂತಿರಬೇಕು.


ಇದನ್ನೂ ಓದಿ:  Career in Fashion Management: ಫ್ಯಾಷನ್ ಫೀಲ್ಡ್​​ನಲ್ಲೂ phd ಮಾಡಬಹುದು, ಸಂಪೂರ್ಣ ಮಾಹಿತಿ ಇಲ್ಲಿದೆ

ವೃತ್ತಿಪರ ಬೆಳವಣಿಗೆಗೆ ಲಭ್ಯವಿರುವ ವೃತ್ತಿ ಆಯ್ಕೆಗಳು:
ಯಾವುದೇ ಸಂಸ್ಥೆಗೆ ಪ್ರವೇಶಿಸಲು ಪರಿಣಾಮಕಾರಿ ಕೌಶಲ್ಯಗಳು ಅತ್ಯಗತ್ಯ. ಸಾಕಷ್ಟು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಮತ್ತು ಗ್ರಹಿಸಲು, ಒಬ್ಬ ವ್ಯಕ್ತಿಯು ಪರಿಣಾಮಕಾರಿಯಾಗಿ ಸಂವಹನ ಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ಇದಲ್ಲದೆ, ಕೆಲವು ಸಂಸ್ಥೆಗಳಿಗೆ ವಿದೇಶಿ ಭಾಷೆಯಲ್ಲಿ ಮಾತನಾಡುವ ನುರಿತ ಪ್ರತಿಭೆಗಳ ಅಗತ್ಯವಿರುತ್ತದೆ. ಇದರಿಂದಾಗಿ, ಹೆಚ್ಚು ಬೇಡಿಕೆಯಿರುವ ಭಾಷೆಗಳಲ್ಲಿ ಸುಧಾರಿತ ನೈಪುಣ್ಯತೆಯನ್ನು ಹೊಂದಿರುವ ವ್ಯಕ್ತಿಗಳು ಲಾಭದಾಯಕ ವೃತ್ತಿಜೀವನವನ್ನು ನಡೆಸಬಹುದು ಅಂತೆಯೇ ವೃತ್ತಿಜೀವನ ಕೂಡ ಸುಖಕರವಾಗಿರುತ್ತದೆ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ.


ಇದಲ್ಲದೆ, ವ್ಯವಸ್ಥಾಪಕ ಗುಣಗಳನ್ನು ಅಭಿವೃದ್ಧಿಪಡಿಸಲು ಮತ್ತು ಇತರ ತಂಡದ ಸದಸ್ಯರ ಮೇಲೆ ಪ್ರಭಾವ ಬೀರಲು ಉದ್ಯೋಗಿಗಳಿಗೆ ನಿರ್ವಹಣೆ ಮತ್ತು ನಾಯಕತ್ವದ ತರಬೇತಿಯ ಅಗತ್ಯವಿದೆ. ಇದಕ್ಕಾಗಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಕೂಡ ಲಭ್ಯವಿವೆ. ಇದು ಕಲಿಯುವವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಸಂದರ್ಶನಕ್ಕಾಗಿ ಹೆಚ್ಚಿನ ಆದ್ಯತೆ ಗಳಿಸಿಕೊಳ್ಳಬಹುದು. ಹಾಗಾಗಿ, ಬ್ಲಾಕ್‌ಚೈನ್, ಕ್ಲೌಡ್ ಟೆಕ್ನಾಲಜಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್ ಮತ್ತು ಇನ್ನೂ ಹೆಚ್ಚಿನ ವೃತ್ತಿಪರ ಟೆಕ್ ಕೋರ್ಸ್‌ಗಳ ಆಯ್ಕೆಮಾಡುವುದು ಉತ್ತಮವಾಗಿದೆ.


ವೃತ್ತಿಗೆ ಸರಿಹೊಂದುವ ಕೋರ್ಸ್‌ಗಳನ್ನು ಆಯ್ಕೆ ಮಾಡಿ
ಅತ್ಯುತ್ತಮ ವೃತ್ತಿಜೀವನವನ್ನು ಆಯ್ಕೆಮಾಡಿಕೊಳ್ಳುವುದು ಸವಾಲಿನ ಹಾಗೂ ಪ್ರಯಾಸದ ಕೆಲಸವಾಗಿದೆ. ಅದಾಗ್ಯೂ ವೃತ್ತಿ ಬೆಳವಣಿಗೆಗೆ ಅನುಕೂಲಕರವಾಗಿರುವ ವಿಧಾನಗಳನ್ನು ಆರಿಸಿಕೊಳ್ಳುವಾಗ ದೃಢತೆ ಹಾಗೂ ಮುಕ್ತ ಮನಸ್ಸು ಇರುವುದು ಅತ್ಯಗತ್ಯವಾಗಿದೆ. ಜೀವನದಲ್ಲಿ ಉದ್ದೇಶವನ್ನಿಟ್ಟುಕೊಂಡು ಅದಕ್ಕೆ ಸರಿಹೊಂದುವ ಕೋರ್ಸ್‌ಗಳ ಆಯ್ಕೆ ಮಾಡುವುದು ಒಳ್ಳೆಯದು.


ಇದನ್ನೂ ಓದಿ: IQ People Habits: ಪೋಷಕರೇ, ನಿಮ್ಮ ಮಕ್ಕಳ IQ ಹೆಚ್ಚಾಗಬೇಕೆಂದರೆ ಅವರಲ್ಲಿ ಈ ಅಭ್ಯಾಸಗಳನ್ನು ಬೆಳೆಸಿ

ವೃತ್ತಿಜೀವನದಲ್ಲಿ ನೀವು ಯಶಸ್ಸು ಹಾಗೂ ಲಾಭ ಇವೆರಡನ್ನೂ ಗಳಿಸಬೇಕು ಎಂದಾದಲ್ಲಿ ಕಠಿಣ ಪ್ರಯತ್ನ, ಯೋಜನೆ ಹಾಗೂ ನಿಮ್ಮನ್ನು ನೀವು ವಿಮರ್ಶಿಸಿಕೊಳ್ಳುವುದು ಮುಖ್ಯವಾಗಿದೆ. ಯಾವುದೇ ಕೋರ್ಸ್‌ಗಳನ್ನು ಅಯ್ಕೆಮಾಡುವ ಮುನ್ನ ಅದರ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಿ ಅಂತೆಯೇ ಇದು ನಿಮ್ಮ ಗುರಿ ಮುಟ್ಟಲು ಸಹಕಾರಿಯೇ ಎಂಬುದನ್ನು ನಿಮ್ಮಷ್ಟಕ್ಕೆ ಕಂಡುಕೊಳ್ಳಿ. ಸ್ನೇಹಿತರ, ಪರಿಚಿತರ, ಗುರುಗಳ ಮಾರ್ಗದರ್ಶವನ್ನು ಪಡೆದುಕೊಳ್ಳಿ.

Published by:Ashwini Prabhu
First published: