• Home
  • »
  • News
  • »
  • career
  • »
  • Career: ಕಂಪನಿಗಳಲ್ಲಿ ಎಚ್​ಆರ್​ ಆಗಬೇಕಾ? ನಿಮ್ಮ ಕನಸಿನ ವೃತ್ತಿಗೆ ಹೀಗಿರಲಿ ತಯಾರಿ

Career: ಕಂಪನಿಗಳಲ್ಲಿ ಎಚ್​ಆರ್​ ಆಗಬೇಕಾ? ನಿಮ್ಮ ಕನಸಿನ ವೃತ್ತಿಗೆ ಹೀಗಿರಲಿ ತಯಾರಿ

File photo

File photo

ಎಚ್‌ಆರ್ ಕ್ಷೇತ್ರದಲ್ಲಿ ಪ್ರಗತಿಗೆ ಒಂದು ನಿರ್ಧಾರ ಅಥವಾ ಕ್ರಿಯೆಯ ವಿಶಾಲ ಪರಿಣಾಮಗಳನ್ನು ನೋಡುವುದು ಅತ್ಯಗತ್ಯ

  • Share this:

ನೀವು ಮಾನವ ಸಂಪನ್ಮೂಲ (Human Resource- HR)  ಹುದ್ದೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದರೆ ಹಾಗೂ ಅದಕ್ಕಿಂತ ಉನ್ನತ ಹುದ್ದೆಯನ್ನು ಎದುರು ನೋಡುತ್ತಿದ್ದಲ್ಲಿ ಇದೊಂದು ಸುವರ್ಣವಕಾಶವಾಗಿದೆ. U.S. ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಅಂದಾಜಿನ ಪ್ರಕಾರ HR ಮ್ಯಾನೇಜ್‌ಮೆಂಟ್ ಉದ್ಯೋಗಗಳು 2031 ರ ವೇಳೆಗೆ 7% ರಷ್ಟು ಬೆಳೆಯುತ್ತಿವೆ, ಆದರೆ ವಾಲ್ ಸ್ಟ್ರೀಟ್ ಜರ್ನಲ್ HR ಮ್ಯಾನೇಜರ್ ಪಾತ್ರವನ್ನು 800 ವಿಭಾಗಗಳಲ್ಲಿ 35 ನೇ ಅತ್ಯಂತ ಭರವಸೆಯ ಉದ್ಯೋಗವೆಂದು ಪರಿಗಣಿಸಿದೆ. ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಮುಂದಿನ ಹಂತವನ್ನು ನಿಮ್ಮದಾಗಿಸಿಕೊಳ್ಳಲು ನೀವು ತಯಾರಿ ನಡೆಸುತ್ತಿರುವಾಗ, ಪರಿಣತಿಯನ್ನು ಹೆಚ್ಚಿಸಲು ಮತ್ತು ಮಾನವ ಸಂಪನ್ಮೂಲ ನಾಯಕರಾಗಿ ಬೆಳೆಯಲು ಕೆಳಗಿನ ಐದು ಸಲಹೆಗಳನ್ನು ಪರಿಗಣಿಸಿ.


ನಿಮ್ಮ ಯೋಚನೆಯನ್ನು ಮರುಹೊಂದಿಸಿಕೊಳ್ಳಿ


ಆಧುನಿಕ ಮಾನವ ಸಂಪನ್ಮೂಲದ ಗುರಿಯು ಜನರಿಗೆ-ಮೊದಲು ಕಂಪನಿ ಸಂಸ್ಕೃತಿಯನ್ನು ತಿಳಿಸುವುದಾಗಿದೆ. ಮಾನವ ಸಂಪನ್ಮೂಲದಲ್ಲಿ ಕೆಲಸ ಮಾಡುವ ಅತ್ಯುತ್ತಮ ಭಾಗವೆಂದರೆ ಉದ್ಯೋಗಿಗಳು ತಮ್ಮ ಸಮಯವನ್ನು ಧನಾತ್ಮಕ ರೀತಿಯಲ್ಲಿ ಹೇಗೆ ಅನುಭವಿಸುತ್ತಾರೆ ಎಂಬುದರ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ.


ಕೌಶಲ್ಯವನ್ನು ಸಂಗ್ರಹಿಸಿ


ಮನಸ್ಥಿತಿಯನ್ನು ಅರಿತುಕೊಳ್ಳಲು ಮಾನವ ಸಂಪನ್ಮೂಲ ನಾಯಕರಿಗೆ ಕೌಶಲ್ಯಗಳು ಅತ್ಯಗತ್ಯವಾಗಿದೆ. ವೃತ್ತಿಜೀವನದಲ್ಲಿ ನಿರ್ಣಾಯಕ ಹಂತದ ನಿರ್ಧಾರವನ್ನು ತೆಗೆದುಕೊಳ್ಳಲು ಈ ಕೌಶಲ್ಯ ಮುಖ್ಯವಾಗಿರುತ್ತದೆ.


ಉತ್ತಮ ಬಾಂಧವ್ಯ


ಎಚ್‌ಆರ್ ಲೀಡರ್‌ಗಳು ತಮ್ಮ ಎಲ್ಲಾ ಉದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು


ಸಂವಹನ


ಬರವಣಿಗೆ, ಮಾತು, ಆಲಿಸುವಿಕೆ ಹೀಗೆ ಹಿರಿಯ ಮಾನವ ಸಂಪನ್ಮೂಲ ವ್ಯಕ್ತಿಗಳು ಸುಲಭವಾಗಿ ವಿಚಾರಗಳನ್ನು ತಿಳಿಸುವವರಾಗಿರಬೇಕು ಹಾಗೂ ಯಾವುದೇ ನಿರ್ಧಾರಗಳನ್ನು ನಿರುಮ್ಮಳರಾಗಿ ತೆಗೆದುಕೊಳ್ಳುವಂತವರಾಗಿರಬೇಕು.


ಸಂಘರ್ಷ ನಿರ್ವಹಣೆ


ಸಂಘರ್ಷವನ್ನು ಧನಾತ್ಮಕವಾಗಿ ಪರಿಹರಿಸುವ ಮೂಲಕ ವ್ಯಕ್ತಿಗಳಿಗೆ ಹೇಗೆ ಸಹಾಯ ಮಾಡಬೇಕು ಎಂಬುದನ್ನು ಅನುಭವಿ ಮಾನವ ಸಂಪನ್ಮೂಲ ನಾಯಕನು ತಿಳಿದಿರುತ್ತಾನೆ. ಇದು ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.


ಇದನ್ನು ಓದಿ: ಜಗತ್ತನ್ನೇ ಆಳುತ್ತಿದ್ದಾರೆ ಭಾರತೀಯರು; ಪ್ರಮುಖ ದೇಶಗಳ ಮುಖ್ಯಸ್ಥರು ನಮ್ಮವರು!


ಕಾರ್ಯತಂತ್ರದ ಚಿಂತನೆ:


ಎಚ್‌ಆರ್ ಕ್ಷೇತ್ರದಲ್ಲಿ ಪ್ರಗತಿಗೆ ಒಂದು ನಿರ್ಧಾರ ಅಥವಾ ಕ್ರಿಯೆಯ ವಿಶಾಲ ಪರಿಣಾಮಗಳನ್ನು ನೋಡುವುದು ಅತ್ಯಗತ್ಯ


ವೈಯಕ್ತಿಕ ಜವಾಬ್ದಾರಿ:


ಮಾನವ ಸಂಪನ್ಮೂಲ ನಾಯಕರು ತಮ್ಮನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಾಗದಿದ್ದಲ್ಲಿ ಇತರರನ್ನು ಹೊಣೆಗಾರರನ್ನಾಗಿ ಮಾಡುವ ನೈತಿಕ ಅಧಿಕಾರವನ್ನು ಹೊಂದಿಲ್ಲ ಎಂಬುದನ್ನು ಅರಿತುಕೊಂಡಿರುತ್ತಾರೆ.


ಪ್ರಭಾವ:


ಮಾನವ ಸಂಪನ್ಮೂಲ ನಾಯಕರು ಔಪಚಾರಿಕ ಅಧಿಕಾರ ಅಥವಾ ಬಲವಾದ ಪರಿಕರಗಳಿಲ್ಲದೆ ಯಾರನ್ನಾದರೂ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಸಮರ್ಥರಾಗಿರಬೇಕು.


ಕಲಿಕೆಗೆ ಬದ್ಧರಾಗಿರಿ


ಮಾನವ ಸಂಪನ್ಮೂಲ ನಾಯಕರಾಗಲು ಕಲಿಕೆಯ ಅವಶ್ಯಕತೆಯಿದೆ. ನಿರಂತರವಾಗಿ ಬದಲಾಗುತ್ತಿರುವ ಉದ್ಯೋಗ ಕಾನೂನುಗಳೊಂದಿಗೆ ನಿಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುವ ಎಚ್‌ಆರ್ ತಂತ್ರಜ್ಞಾನದ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳುವವರೆಗೆ, ನೀವು ಎಚ್‌ಆರ್ ವಿಭಾಗದಲ್ಲಿ ಮುಂದುವರಿಸಲು ಬಯಸಿದರೆ ಕಲಿಕೆಯು ನಿಮ್ಮ ಸಂಗ್ರಹದ ಭಾಗವಾಗಿರಬೇಕು.


ಇದನ್ನು ಓದಿ: ಭಾರತವೇ ಹೆಮ್ಮೆ ಪಡುವ ಕೆಲಸ ಮಾಡಿದ ಯುವ ನರವಿಜ್ಞಾನಿ ಮೈತ್ರೇಯಿ


ಸರ್ಟಿಫಿಕೇಟ್‌ಗಳು ಅಗತ್ಯವಿದೆ


SHRM-CP/SCP (ಸರ್ಟಿಫೈಡ್ ಪ್ರೊಫೆಷನಲ್/ಸೀನಿಯರ್ ಸರ್ಟಿಫೈಡ್ ಪ್ರೊಫೆಷನಲ್) ಅಥವಾ PHR/SPHR (ಮಾನವ ಸಂಪನ್ಮೂಲಗಳಲ್ಲಿ ವೃತ್ತಿಪರರು/ಮಾನವ ಸಂಪನ್ಮೂಲಗಳಲ್ಲಿ ಹಿರಿಯ ವೃತ್ತಿಪರರು) ಮೊದಲಾದ ಪ್ರಮಾಣಪತ್ರಗಳನ್ನು ಗಳಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಈ ಪದವಿಗಳನ್ನು ಪಡೆಯುವುದು ಕಡಿಮೆ ವೆಚ್ಚದಾಯಕ ಹಾಗೂ ಶ್ರಮದಾಯಕ ಎಂದೆನಿಸಿದೆ.


ಸಂಪರ್ಕ ಸಾಧಿಸುವುದು


ಮಾನವ ಸಂಪರ್ಕ ಉದ್ಯಮವು ಉತ್ತಮ ಸಂಪರ್ಕಗಳ ಜಾಲವನ್ನೇ ಹೊಂದಿದೆ. ಎಚ್‌ಆರ್ ಕಾನ್ಫರೆನ್ಸ್‌ಗೆ ಹಾಜರಾಗುವುದು, ಲಿಂಕ್ಡ್‌ಇನ್ ಗುಂಪಿನ ಸಂವಾದದಲ್ಲಿ ಭಾಗವಹಿಸುವುದು, ವರ್ಚುವಲ್ ನೆಟ್‌ವರ್ಕಿಂಗ್ ಈವೆಂಟ್‌ಗೆ ಹಾಜರಾಗುವುದು ಹೀಗೆ ವೃತ್ತಿಗೆ ಅಗತ್ಯವಿರುವ ಸಂಪರ್ಕಗಳನ್ನು ಸಾಧಿಸುವುದು ಮುಖ್ಯವಾಗಿದೆ.

Published by:Seema R
First published: