ದೇಶದ ಪ್ರತಿಯೊಂದು ಜಿಲ್ಲೆಗೂ (District) ಜಿಲ್ಲಾಧಿಕಾರಿ ಇರುತ್ತಾರೆ. ಅಂದರೆ ಡಿಸ್ಟ್ರಿಕ್ಟ್ ಕಲೆಕ್ಟರ್ (District Collector), ಇವರನ್ನು ಡಿಸಿ ಎಂದು ಕರೆಯಲಾಗುತ್ತದೆ. ಈ ಹುದ್ದೆಯನ್ನು ನಮ್ಮ ದೇಶದ ಆಡಳಿತ ವ್ಯವಸ್ಥೆಯ 7ನೇ ಅತ್ಯುನ್ನತ ಹುದ್ದೆ ಎಂದು ಪರಿಗಣಿಸಲಾಗಿದೆ. ಪ್ರಪಂಚದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ UPSC ಪರೀಕ್ಷೆಯಲ್ಲಿ ಯಶಸ್ವಿಯಾದವರನ್ನು ಈ ಹುದ್ದೆಗೆ ನೇಮಕ ಮಾಡಲಾಗುತ್ತದೆ. ಹಾಗಾದರೆ ಈ ಹುದ್ದೆಯ ಮಹತ್ವವೇನು? ಜಿಲ್ಲಾಧಿಕಾರಿಯಾಗುವುದು ಹೇಗೆ? ಇವರಿಗೆ ಯಾವೆಲ್ಲಾ ಅಧಿಕಾರ ಸಿಗುತ್ತದೆ. ಈ ಹುದ್ದೆಗೆ ಸಿಗುವ ಸಂಬಳ, ಸೌಲಭ್ಯಗಳು ಯಾವುವು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಯಾರು ಜಿಲ್ಲಾಧಿಕಾರಿಯಾಗುತ್ತಾರೆ?
ಮೇಲೆ ಹೇಳಿದಂತೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳು ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ರ್ಯಾಂಕ್ (Rank) ಅನ್ನು ನೀಡಲಾಗುತ್ತೆ. ರ್ಯಾಂಕ್ ಆಧಾರದ ಮೇಲೆ ಐಎಎಸ್ ಅಧಿಕಾರಿಗಳನ್ನು ಜಿಲ್ಲಾಡಳಿತದ ಹುದ್ದೆಗೆ ನೇಮಿಸಲಾಗುತ್ತದೆ. ಇಲ್ಲಿ ಅನುಭವ ಪಡೆದ ನಂತರ ಜಿಲ್ಲಾಧಿಕಾರಿ ಹುದ್ದೆಗೆ ಬಡ್ತಿ ನೀಡಲಾಗುತ್ತದೆ.
UPSC ಪರೀಕ್ಷೆಯಷ್ಟೇ ಅಲ್ಲ ಟ್ರೈನಿಂಗ್ ಸಹ ನೀಡಲಾಗುತ್ತೆ
ಕಠಿಣ ಪರೀಕ್ಷೆ, ಸಂದರ್ಶನದ ಬಳಿಕ LBSNAA ತರಬೇತಿ ಹಂತವನ್ನು ಅನ್ನು ತಲುಪಲೇಬೇಕು. IAS ಆದವರಿಗೆ ಮಸ್ಸೂರಿಯಲ್ಲಿರುವ LBSNAA ನಲ್ಲಿ ತರಬೇತಿ ನೀಡಲಾಗುತ್ತದೆ. LBSNAAಯ ಪೂರ್ಣ ರೂಪ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಆಗಿದೆ. ಈ ಅಕಾಡೆಮಿಯು ಉತ್ತರಾಖಂಡದ ಮುಸ್ಸೂರಿಯಲ್ಲಿದೆ. ಪ್ರತಿಯೊಬ್ಬ UPSC ಆಕಾಂಕ್ಷಿಯೂ ಇಲ್ಲಿಗೆ ತಲುಪಲು ಕನಸು ಕಾಣುತ್ತಾರೆ. UPSC ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.
ಜಿಲ್ಲಾಧಿಕಾರಿಯ ಕರ್ತವ್ಯಗಳೇನು?
ಜಿಲ್ಲಾಧಿಕಾರಿಯಾದವರ ಮುಖ್ಯವಾದ ಕರ್ತವ್ಯವೆಂದರೆ ಜಿಲ್ಲಾ ಮಟ್ಟದಲ್ಲಿ ಕಂದಾಯ ನಿರ್ವಹಣೆಯ ಜವಾಬ್ದಾರಿಯನ್ನು ಹೊರುವುದು. ಜಿಲ್ಲೆಯ ಆಡಳಿತವನ್ನು ಉತ್ತಮವಾಗಿ ನಿರ್ವಹಿಸುವುದು ಡಿಸಿ ಆದವರ ಕೆಲಸ. ಅದಕ್ಕಾಗಿಯೇ ಜಿಲ್ಲೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ. ಇದರಾಚೆಗೆ ಈ ಜವಾಬ್ದಾರಿಗಳನ್ನೂ ಡಿಸಿ ನಿರ್ವಹಿಸಬೇಕು.
ಪ್ರಸ್ತುತ 7ನೇ ವೇತನ ಆಯೋಗದ ಪ್ರಕಾರ ಜಿಲ್ಲಾಧಿಕಾರಿಗಳ ವೇತನ ಸುಮಾರು 80 ಸಾವಿರ ರೂಪಾಯಿ. ಆದರೆ ಕ್ಯಾಬಿನೆಟ್ ಕಾರ್ಯದರ್ಶಿ ಹುದ್ದೆಗೆ ತಲುಪುವ ಹೊತ್ತಿಗೆ ಅವರ ಸಂಬಳ 2,50,000 ರೂ. ಆಗಿರುತ್ತದೆ. ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಪಿಂಚಣಿ, DA ಸೌಲಭ್ಯ ಸಿಗುತ್ತದೆ.
ಸಂಬಳದಾಚೆಗೆ ಯಾವೆಲ್ಲಾ ಸೌಲಭ್ಯಗಳು ಸಿಗುತ್ತವೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ