• Home
  • »
  • News
  • »
  • career
  • »
  • Communication Designer: ಮುಂಬರುವ ವರ್ಷಗಳಲ್ಲಿ ಕಮ್ಯುನಿಕೇಷನ್ ಡಿಸೈನರ್​ ವೃತ್ತಿಗೆ ಫುಲ್ ಡಿಮ್ಯಾಂಡ್

Communication Designer: ಮುಂಬರುವ ವರ್ಷಗಳಲ್ಲಿ ಕಮ್ಯುನಿಕೇಷನ್ ಡಿಸೈನರ್​ ವೃತ್ತಿಗೆ ಫುಲ್ ಡಿಮ್ಯಾಂಡ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅತ್ಯುತ್ತಮ ವೃತ್ತಿ ಜೀವನ ನೀಡುವ 60 ಸಾವಿರಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು ಈ ಕ್ಷೇತ್ರದಲ್ಲಿವೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಇದಕ್ಕೆ ಯಾವ ಅರ್ಹತೆಗಳು ಬೇಕಾಗುತ್ತವೆ? ಎಲ್ಲೆಲ್ಲಿ ಉದ್ಯೋಗಾವಕಾಶಗಳಿವೆ ಅನ್ನೋದನ್ನು ನೋಡೋಣ.

  • Share this:

    ಕಮ್ಯುನಿಕೇಷಶನ್‌ ಡಿಸೈನ್‌  (Communication Designer) ಅಥವಾ ಸಂವಹನ ವಿನ್ಯಾಸ ಸಾಕಷ್ಟು ಅವಕಾಶಗಳನ್ನು ಹೊಂದಿರುವಂಥ ಕ್ಷೇತ್ರವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚಿನ ಜನರು ಅನುಸರಿಸಿದ ಕೋರ್ಸ್‌ ಹಾಗೂ ವೃತ್ತಿಯಲ್ಲಿ (Course and Careers) ಇದೂ ಕೂಡ ಒಂದು. ಸಾಂಪ್ರದಾಯಿಕವಾಗಿ ಇದನ್ನು ಗ್ರಾಫಿಕ್ಸ್‌ ಡಿಸೈನ್‌ (Graphic Designer) ಅಂತಲೇ ಕರೀತಾರೆ. ಅಂಕಿಅಂಶಗಳ ಪ್ರಕಾರ, ಮುಂಬರುವ ವರ್ಷಗಳಲ್ಲಿ ಸಂವಹನ ವಿನ್ಯಾಸಕರ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಎನ್ನಲಾಗಿದೆ. ಸದ್ಯ ಭಾರತದಲ್ಲಿ ಈ ಕ್ಷೇತ್ರದಲ್ಲಿ ಅತ್ಯುನ್ನತ ಅರ್ಹತೆ ಹೊಂದಿರುವ ಕಮ್ಯುನಿಕೇಶನ್‌ ಡಿಸೈನರ್‌ ಗಳ ಸಂಖ್ಯೆ ಕೇವಲ 5 ಸಾವಿರ.


    ಹಾಗಾಗಿ ಅತ್ಯುತ್ತಮ ವೃತ್ತಿ ಜೀವನ ನೀಡುವ 60 ಸಾವಿರಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು ಈ ಕ್ಷೇತ್ರದಲ್ಲಿವೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಇದಕ್ಕೆ ಯಾವ ಅರ್ಹತೆಗಳು ಬೇಕಾಗುತ್ತವೆ? ಎಲ್ಲೆಲ್ಲಿ ಉದ್ಯೋಗಾವಕಾಶಗಳಿವೆ ಅನ್ನೋದನ್ನು ನೋಡೋಣ.


    ಶೈಕ್ಷಣಿಕ ಅರ್ಹತೆ


    ಕಮ್ಯುನಿಕೇಷನ್‌ ಡಿಸೈನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಇದರಲ್ಲಿ ಪದವಿ, ಡಿಪ್ಲೊಮಾ ಅಥವಾ ಸರ್ಟಿಫೈಡ್‌ ಕೋರ್ಸ್‌ ಗಳನ್ನು ಮಾಡಬಹುದು. ಅಲ್ದೇ, ಯುಜಿ ಮತ್ತು ಪಿಜಿ ಮಟ್ಟದಲ್ಲಿ ಪೂರ್ಣ ಸಮಯ, ಅರೆಕಾಲಿಕ ಅಥವಾ ಆನ್‌ಲೈನ್ ಮೋಡ್‌ಗಳಲ್ಲಿಯೂ ಕೋರ್ಸ್‌ ಗಳನ್ನು ತೆಗೆದುಕೊಳ್ಳಬಹುದು.


    how to make study guide for students


    ಇನ್ನು ಬೇರೆ ಬೇರೆ ಕಮ್ಯುನಿಕೇಶನ್ ಡಿಸೈನ್ ಕೋರ್ಸ್‌ಗಳನ್ನೂ ನೀವು ಮಾಡಬಹುದು. 4 ವರ್ಷದ ಬ್ಯಾಚುಲರ್ ಇನ್ ಡಿಸೈನ್ (ಬಿಡಿಎಸ್) ಕೋರ್ಸ್‌, ನಾಲ್ಕು ವರ್ಷದ ಬ್ಯಾಚುಲರ್ ಇನ್ ಅಪ್ಲೈಡ್ ಆರ್ಟ್ಸ್ (ಬಿಎಫ್‌ಎ)ಕೋರ್ಸ್‌, 3 ವರ್ಷದ ಬ್ಯಾಚುಲರ್ ಇನ್ ವೊಕೇಶನ್ (ಬಿವಿಒಸಿ)ಕೋರ್ಸ್‌, ಅಲ್ದೇ, ಎರಡು ವರ್ಷಗಳ ಮಾಸ್ಟರ್ ಇನ್ ಡಿಸೈನ್ (MDes), ಮಾಸ್ಟರ್ ಇನ್ ಆರ್ಟ್ಸ್ (MA), ಮತ್ತು ಮಾಸ್ಟರ್ ಇನ್ ವೊಕೇಶನ್ (MVoc)ಕೂಡ ಮಾಡಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಯುಜಿ ಮತ್ತು ಪಿಜಿ ಮಟ್ಟಕ್ಕೆ ಒಂದರಿಂದ ಎರಡು ವರ್ಷಗಳ ಪ್ರಮಾಣೀಕರಣ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು.


    ಇನ್ನು ಕಮ್ಯುನಿಕೇಷನ್‌ ಡಿಸೈನ್‌ ಕ್ಷೇತ್ರದಲ್ಲಿ ನುಗ್ಗಬೇಕಾದರೆ ನೀವು ಕೆಲವು ಕೌಶಲ್ಯಗಳನ್ನು ಹೊಂದಿರುವುದು ಅತ್ಯಗತ್ಯ. ಕ್ರಿಯೇಟಿವಿಟಿ, ಉತ್ತಮ ಸಂವಹನ ಕೌಶಲ್ಯಗಳು, ವಿವಿಧ ಸಾಫ್ಟ್‌ವೇರ್‌ಗಳ ಜ್ಞಾನ, ಡೆಡ್‌ ಲೈನ್‌ ನಲ್ಲಿ ಕೆಲಸ ಮಾಡುವ ಸಾಮರ್ಥ್ಯ ಗಳನ್ನು ಹೊಂದಿರಬೇಕಾಗುತ್ತದೆ.


    ಸಂವಹನ ವಿನ್ಯಾಸ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಉದ್ಯಮದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿವೆ.


    ಜಾಹೀರಾತು ಏಜೆನ್ಸಿಗಳು: ಕಲ್ಪನೆಯಲ್ಲಿ ಪ್ರತಿಭಾನ್ವಿತರಾದ ಡಿಸೈನರ್ ಗೆ ಜಾಹೀರಾತು ಅಮೂಲ್ಯವಾದ ಅವಕಾಶಗಳನ್ನು ನೀಡುತ್ತದೆ. ಜಾಹೀರಾತು ವಿನ್ಯಾಸಕರು ವಿಶುವಲ್‌ ಕಮ್ಯುನಿಕೇಶನ್‌ ಅಥವಾ ದೃಶ್ಯ ಸಂವಹನ ಗುಂಪಿಗಾಗಿ ಕೆಲಸ ಮಾಡುತ್ತಾರೆ.


    ಗ್ರಾಫಿಕ್ ಡಿಸೈನರ್: ಗ್ರಾಫಿಕ್ ಡಿಸೈನರ್‌ ಉತ್ತಮ ಕಲ್ಪನೆಯ ಜೊತೆಗೆ ವಿಷಯದ ಒಳಹೊರಗನ್ನು ತಿಳಿದು ಅದಕ್ಕೆ ತಕ್ಕನಾಗಿ ಕ್ರಿಯೇಟಿವ್‌ ಆಗಿ ವಿನ್ಯಾಸ ಮಾಡುತ್ತಾರೆ. ಇವರು ಹೆಚ್ಚಾಗಿ ಪುಸ್ತಕ, ಮ್ಯಾಗಜಿನ್‌, ಸೋಷಿಯಲ್‌ ಮೀಡಿಯಾ, ಜಾಹೀರಾತುಗಳಿಗಾಗಿ ಕೆಲಸ ಮಾಡುತ್ತಾರೆ.


    Animation course with abundant job opportunities and the Career in Animation stg asp
    ಅನಿಮೇಷನ್‌


    ವಿನ್ಯಾಸ ನಿರ್ದೇಶಕ: ವಿನ್ಯಾಸ ನಿರ್ದೇಶಕರಾದವರು UI/UX, ಮುದ್ರಣ, ವಿತರಣೆ, ಪ್ರಚಾರ, ಮತ್ತು ದೃಶ್ಯ ಪತ್ರವ್ಯವಹಾರ, ಯೋಜನೆಯೊಂದಿಗಿನ ಪ್ರತಿ ವಿಷಯಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ.


    ಮಾಹಿತಿ ವಿನ್ಯಾಸಕ: ಇನ್ಫೋಗ್ರಾಫಿಕ್ಸ್‌ನೊಂದಿಗೆ ಸಂದೇಶ, ಅಂಕಿಅಂಶಗಳನ್ನು ಅಪ್‌ಗ್ರೇಡ್ ಮಾಡುವುದು ಮತ್ತು ವೀಕ್ಷಕರಿಗೆ ಅದನ್ನು ಇಂಟೆರೆಸ್ಟಿಂಗ್‌ ಆಗಿ ತೋರಿಸುವುದು ಮಾಹಿತಿ ವಿನ್ಯಾಸಕರ ಕೆಲಸವಾಗಿದೆ.


    ಇದನ್ನೂ ಓದಿ: Nursing Career: ನರ್ಸಿಂಗ್ ಓದಿದವರಿಗೆ ಕಾರ್ಪೊರೇಟ್ ಫೀಲ್ಡ್​​ನಲ್ಲಿ ಇವೆ ಭರ್ಜರಿ ಉದ್ಯೋಗಾವಕಾಶಗಳು


    ಅನಿಮೇಷನ್ ಮತ್ತು ಆನ್‌ಲೈನ್ ಮತ್ತು ವಿಡಿಯೋ ಗೇಮ್ ಡಿಸೈನರ್: ಅನಿಮೇಷನ್ ಡಿಸೈನರ್ ಎಂದರೆ ಅನಿಮೇಟೆಡ್ ಪಾತ್ರವನ್ನು ರಚಿಸುವಲ್ಲಿ ಪರಿಣತಿ ಹೊಂದಿರುವವರು. ಅವರು ಹೆಚ್ಚಾಗಿ ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಚಲನಚಿತ್ರಗಳಲ್ಲಿನ ಅನಿಮೆಶನ್, ಕಾರ್ಟೂನ್‌ಗಳು, ಆಟಗಳ ಪಾತ್ರಗಳನ್ನು ಆನಿಮೇಟರ್‌ಗಳು ರಚಿಸುತ್ತಾರೆ. ವೀಡಿಯೋ ಗೇಮ್ ಡಿಸೈನರ್‌ ಆದವನು ತನ್ನ ಕ್ರಿಯೇಟಿವ್‌ ಕಲ್ಪನೆಗಳಿಂದ ಆಟಗಳನ್ನು ಊಹಿಸಿ ವಿನ್ಯಾಸಗೊಳಿಸುತ್ತಾನೆ.


    ವೆಬ್ ಡಿಸೈನರ್: ವೆಬ್ ಡಿಸೈನರ್ ಎಂದರೆ ವೆಬ್ ಪುಟಗಳನ್ನು ರಚಿಸುವವ, ಕೋಡ್ ಮಾಡುವವನು ಎಂದರ್ಥ. ಅನೇಕ ವೆಬ್ ವಿನ್ಯಾಸಕರು ಚಿತ್ರಗಳು, ಧ್ವನಿ, ಪಠ್ಯ, ವೀಡಿಯೊಗಳು ಮತ್ತು ಗ್ರಾಫಿಕ್ಸ್ ಅನ್ನು ಸಂಯೋಜಿಸುವ ಮೂಲಕ ಅದನ್ನು ರಚಿಸುತ್ತಾರೆ. ಅಂದಹಾಗೆ ಯಾವುದೇ ಸಂಸ್ಥೆಗೆ ವೆಬ್‌ಸೈಟ್‌ಗಳು ಬಹಳ ಮುಖ್ಯ ಅನ್ನೋದು ಗಮನಾರ್ಹ.


    ಸಂಬಳ ನಿರೀಕ್ಷೆ: ಈ ಉದ್ಯಮದ ಅಭ್ಯರ್ಥಿಗಳು ಪಡೆಯುವ ವೇತನವು ಅವರ ಆಯ್ಕೆ, ಅವರು ಕೆಲಸ ಮಾಡುವ ವಲಯ, ಉದ್ಯೋಗದ ವಿವರ, ಅವರಿಗಿರುವ ಕೌಶಲ್ಯದ ಮಟ್ಟ ಜೊತೆಗೆ ಅವರ ಶೈಕ್ಷಣಿಕ ಅರ್ಹತೆಯನ್ನು ಅವಲಂಭಿಸಿರುತ್ತದೆ. ಇದು ಕ್ಷೇತ್ರದಿಂದ ಕ್ಷೇತ್ರಕ್ಕೆ ಬದಲಾಗುತ್ತದಾದರೂ ವಾರ್ಷಿಕವಾಗಿ ಅವರು 3 ಲಕ್ಷದಿಂದ ರೂ 20 ಲಕ್ಷದವರೆಗೂ ಗಳಿಸಬಹುದು.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು