• Home
  • »
  • News
  • »
  • career
  • »
  • Employees Expectations: ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಕೊಡದಿದ್ದರೂ, ಇವುಗಳನ್ನು ಕೊಟ್ಟರೆ ಸಾಕಂತೆ!

Employees Expectations: ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಕೊಡದಿದ್ದರೂ, ಇವುಗಳನ್ನು ಕೊಟ್ಟರೆ ಸಾಕಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಂಪನಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಉದ್ಯೋಗಿಗಳನ್ನು ಪ್ರಶಂಸಿಸಿ ಹಾಗೂ ರಜಾದಿನಗಳನ್ನು ನೀಡಿ. ರಜಾದಿನಗಳನ್ನು ಆನಂದವಾಗಿ ಕಳೆದ ನಂತರ ಉದ್ಯೋಗಿಗಳು ಇನ್ನಷ್ಟು ಸ್ಫೂರ್ತಿ ಹಾಗೂ ಕ್ಷಮತೆಯಿಂದ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ.

  • Share this:

    ಸಂಸ್ಥೆಯ ಉನ್ನತಿಗೆ ಉದ್ಯೋಗದಾತ ಹಾಗೂ ಉದ್ಯೋಗಿಗಳ (Employer and Employee) ಪಾತ್ರ ಅತ್ಯಂತ ಹಿರಿದಾದುದು. ಉದ್ಯೋಗಿಗಳನ್ನು ಅರಿತುಕೊಳ್ಳುವ ಉದ್ಯೋಗದಾತ ತನ್ನ ಸಂಸ್ಥೆಯ ಉದ್ಯೋಗಿಗಳನ್ನು ಖುಷಿಯಾಗಿರಿಸಿಕೊಳ್ಳಲು ( Happiness) ಕೆಲವೊಂದು ನಿಯಮಗಳನ್ನು ರೂಪಿಸಬೇಕಾಗುತ್ತದೆ. ತಮ್ಮ ಕೆಲಸದಲ್ಲಿ ಖುಷಿಯಾಗಿರುವ ಉದ್ಯೋಗಿಗಳು ಹೆಚ್ಚು ಕ್ರಿಯಾತ್ಮಕ ಹಾಗೂ ಉತ್ಪಾದಕರಾಗಿರುತ್ತಾರೆ ಎಂಬುದು ತಿಳಿದುಬಂದಿದೆ. ನಿಮ್ಮ ಉದ್ಯೋಗಿಗಳೊಂದಿಗೆ ಪಾರದರ್ಶಕ ಹಾಗೂ ನಿಷ್ಟಾವಂತರಾಗಿರುವುದು ಅವರಿಗೂ ಉದ್ಯೋಗ ತಾಣದಲ್ಲಿ ಗೌರವವಿದೆ ಎಂಬುದನ್ನು ನೆನಪಿಸುತ್ತದೆ. ನಿಮ್ಮ ಉದ್ಯೋಗಿ ತಂಡವನ್ನು ಇನ್ನಷ್ಟು ಖುಷಿಯಾಗಿರಿಸಲು ಇಲ್ಲಿದೆ ಕೆಲವೊಂದು ಟಿಪ್ಸ್. 


    1. ಕಚೇರಿ-ವೈಯಕ್ತಿಕ ಜೀವನದ ಸಮತೋಲನ: ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡನ್ನೂ ಸಮತೋಲನದಿಂದ ಮುನ್ನಡೆಸಬೇಕು. ಈ ಸಮಯದಲ್ಲಿ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಒತ್ತಡರಹಿತ ವಾತಾವರಣವನ್ನು ನಿರ್ಮಿಸಬೇಕಾಗುತ್ತದೆ. ಅವರ ವೈಯಕ್ತಿಕ ಆದ್ಯತೆಗಳಿಗೂ ಮಹತ್ವ ನೀಡಬೇಕಾಗುತ್ತದೆ.


    2. ಉದ್ಯೋಗಿಗಳಿಗೆ ಮಹತ್ವ ನೀಡುವುದು: ಕಂಪನಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡುತ್ತಿರಿ. ಉದ್ಯೋಗಿಗಳಿಗೆ ಕಂಪನಿಯ ಬಗ್ಗೆ ಸ್ಪಷ್ಟ ಮಾಹಿತಿ ಇರಲಿ.


    good employee qualities follow these tips for good office environment

    3. ಪಾರದರ್ಶಕ ಹಾಗೂ ನಿಷ್ಠೆ: ಪ್ರತಿಕ್ರಿಯೆ ಮತ್ತು ಉದ್ಯೋಗಿ ಕಾಳಜಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ಉದ್ಯೋಗದಾತರಲ್ಲಿ ಇರಬೇಕು. ಕಲಿತದ್ದನ್ನು ಹಂಚಿಕೊಳ್ಳುವ ಮೂಲಕ ಮತ್ತು ಸಮಸ್ಯೆಯನ್ನು ಪರಿಹರಿಸುವ ಕ್ರಮವನ್ನು ಹಂಚಿಕೊಳ್ಳುವ ಮೂಲಕ ಉದ್ಯೋಗದಾತರು ಯಾವಾಗಲೂ ಪಾರದರ್ಶಕವಾಗಿರಬೇಕು. ಕಂಪನಿಗೆ ಬಂದಿರುವ ಫಲಿತಾಂಶಗಳನ್ನು ಉದ್ಯೋಗಿಗಳೊಂದಿಗೆ ನಿಮ್ಮ ತಂಡದೊಂದಿಗೆ ಹಂಚಿಕೊಳ್ಳಿ.


    4. ಹೆಚ್ಚಿನ ರಜೆಗಳನ್ನು ನೀಡಿ: ಕಂಪನಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಉದ್ಯೋಗಿಗಳನ್ನು ಪ್ರಶಂಸಿಸಿ ಹಾಗೂ ರಜಾದಿನಗಳನ್ನು ನೀಡಿ. ರಜಾದಿನಗಳನ್ನು ಆನಂದವಾಗಿ ಕಳೆದ ನಂತರ ಉದ್ಯೋಗಿಗಳು ಇನ್ನಷ್ಟು ಸ್ಫೂರ್ತಿ ಹಾಗೂ ಕ್ಷಮತೆಯಿಂದ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ.


    5. ಸಂವಹನ ಉತ್ತಮವಾಗಿರಲಿ: ಉದ್ಯೋಗಿಗಳು ತಮ್ಮ ವಿಚಾರಗಳನ್ನು ಮಂಡಿಸುವಂತೆ ಅವಕಾಶ ನೀಡಿ, ಅವರಿಗೆ ತಮ್ಮ ಸಲಹೆಗಳನ್ನು ಪ್ರಸ್ತುತಪಡಿಸಲು ವೇದಿಕೆಯನ್ನೊದಗಿಸಿ.




    6. ಉತ್ತಮ ವೃತ್ತಿಜೀವನವನ್ನೊದಗಿಸಿ: ಉದ್ಯೋಗಿಗೆ ವೃತ್ತಿಗೆ ಪೂರಕವಾಗಿರುವ ತರಬೇತಿ ಹಾಗೂ ಮಾರ್ಗದರ್ಶನಗಳನ್ನು ಒದಗಿಸಿ. ಉತ್ತಮ ಉದ್ಯೋಗವಕಾಶಗಳು ಅವರಿಗೆ ದೊರೆಯುವಂತೆ ಮಾಡಿ.


    7. ಧನಾತ್ಮಕ ಪರಿಸರ ನಿರ್ಮಿಸಿ: ಸಂತೋಷವಾಗಿರುವ ಉದ್ಯೋಗಿಗಳು ಸಂತೋಷವಾದ ಕಂಪನಿಯನ್ನು ಸೃಷ್ಟಿಸುತ್ತಾರೆ. ಆಗಾಗ್ಗೆ ಭೋಜನ ಕೂಟಕ್ಕೆ ಕರೆದೊಯ್ಯುವುದು, ತಿನಿಸುಗಳ ಆಯೋಜನೆ, ಪಾರ್ಟಿಗಳನ್ನು ನಡೆಸುವುದು ಹೀಗೆ ಉದ್ಯೋಗಿಗಳಿಗೂ ನೀವು ಗಮನ ನೀಡುತ್ತಿದ್ದೀರಿ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿ.


    8.ಉದ್ಯೋಗಿಗಳಿಗೆ ಆದ್ಯತೆ ನೀಡಿ: ಉದ್ಯೋಗಿಗಳಿಗೆ ವಿಚಾರಗಳನ್ನು ಮಂಡಿಸಲು ಅವಕಾಶ ನೀಡಿ ಹಾಗೂ ಸಭೆಗಳಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಮುಕ್ತಮನಸ್ಸಿನಿಂದ ವಿಚಾರಗಳನ್ನು ಮಂಡಿಸಲು ಅವಕಾಶ ನೀಡಿ. ನೈತಿಕವಾಗಿ ಉದ್ಯೋಗಿಗಳನ್ನು ಬೆಂಬಲಿಸಿ.




    9. ಉದಾಹರಣೆಗಳನ್ನು ಹೊಂದಿಸುವುದು: ನಿಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ನೀವೇ ಒಬ್ಬ ಮಾರ್ಗದರ್ಶಕರು ಎಂಬುದನ್ನು ಮರೆಯದಿರಿ. ನೀವು ಉತ್ತಮ ಉದಾಹರಣೆಯಾದಲ್ಲಿ ಉದ್ಯೋಗಿಗಳು ನಿಮ್ಮನ್ನು ಅನುಕರಿಸುತ್ತಾರೆ ಹಾಗೂ ಅನುಸರಿಸುತ್ತಾರೆ.


    10.ಧನ್ಯವಾದ ಅರ್ಪಿಸಿ: ಉದ್ಯೋಗಿಗಳ ಸಮರ್ಪಣಾ ಭಾವಕ್ಕೆ ಧನ್ಯವಾದ ಅರ್ಪಿಸಿ ಹಾಗೂ ಪರಿಶ್ರಮಕ್ಕೆ ಉತ್ತಮವಾದ ಮಾನ್ಯತೆ ನೀಡಿ. ಉದ್ಯೋಗಿಗಳಿಗೆ ಅವಕಾಶ ನೀಡಿ ಹಾಗೂ ಅವರ ಕ್ರಿಯಾತ್ಮಕತೆಯನ್ನು ಮೆಚ್ಚಿಕೊಳ್ಳಿ.


    Urban youth under immense pressure to maintain their existence as per society s expectations study report stg asp
    ಸಾಂಕೇತಿಕ ಚಿತ್ರ


    11. ಉದ್ಯೋಗಿಗಳನ್ನು ಗುರುತಿಸಿ ಹಾಗೂ ಸನ್ಮಾನಿಸಿ: ಉತ್ತಮ ವ್ಯವಹಾರ ಐಡಿಯಾಗಳನ್ನು ನೀಡಿದ ಉದ್ಯೋಗಿಗಳನ್ನು ಗುರುತಿಸುವುದು ಹಾಗೂ ಅವರಿಗೆ ಬಹುಮಾನಗಳನ್ನು ನೀಡುವುದು ಉದ್ಯೋಗಿಗಳಲ್ಲಿರುವ ಕ್ರಿಯಾತ್ಮಕತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.


    ನೀವು ನೀಡುವ ಬಹುಮಾನ ದೊಡ್ಡದಾಗಿರಬೇಕು ಎಂದೇನಿಲ್ಲ. ಉದ್ಯೋಗಿಗಳಿಗೆ ನೀವು ಅವರ ಮೇಲೆ ನಂಬಿಕೆ ಇಟ್ಟಿದ್ದೀರಿ ಎಂಬ ಭಾವನೆ ಬರುವಂತೆ ಮಾಡಿದರೆ ಸಾಕು.


    12. ಉದ್ಯೋಗಿಗಳಿಗೆ ಪ್ರಯೋಜನಗಳನ್ನು ಒದಗಿಸಿ: ಉದ್ಯೋಗಿ ವಿಮೆ ಪಾಲಿಸಿಗಳು, ರಜಾದಿನದ ಆಫರ್‌ಗಳು, ಬೋನಸ್‌ಗಳು, ತಿಂಗಳಲ್ಲಿ ಹೊರಗೆ ಕರೆದುಕೊಂಡು ಹೋಗುವುದು, ರೆಸಾರ್ಟ್‌ಗಳಿಗೆ ಭೇಟಿ ನೀಡುವುದು, ಕಚೇರಿಯಲ್ಲಿಯೇ ವಾರಕ್ಕೊಮ್ಮೆ ವಿವಿಧ ಮನರಂಜನೆಗಳನ್ನು ಆಯೋಜಿಸುವುದು ಹೀಗೆ ನಿಮ್ಮ ಉದ್ಯೋಗಿಗಳನ್ನು ಖುಷಿಯಾಗಿರಿಸುವ ಪ್ರಯತ್ನವನ್ನು ಮಾಡುತ್ತಿರಿ.

    Published by:Kavya V
    First published: