ಈಗಿನ ಒತ್ತಡ ಭರಿತ ಜೀವನದಲ್ಲಿ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಯೋಗವು ತುಂಬಾನೇ ಸಹಾಯಕವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಪ್ರಪಂಚದಾದ್ಯಂತ ಬಹುತೇಕರು ದಿನ ಬೆಳಗಾದರೆ ಸಾಕು ಯೋಗಾಸನಗಳನ್ನು ಅಭ್ಯಾಸ ಮಾಡುತ್ತಾರೆ. ಅನೇಕ ಜನರಿಗೆ, ಯೋಗಾಸನಗಳನ್ನು ಚೆನ್ನಾಗಿ ಕಲಿತುಕೊಳ್ಳುವುದು ತುಂಬಾನೇ ಅತ್ಯಗತ್ಯವಾಗಿರುತ್ತದೆ. ಯೋಗ ಕ್ಷೇತ್ರದಲ್ಲಿನ ವ್ಯಾಪಕ ಅಧ್ಯಯನಗಳು ಮತ್ತು ಸಂಶೋಧನೆಗಳು ಯೋಗ ವ್ಯವಸ್ಥೆಯು ಜೀವನಶೈಲಿ, ಅಸ್ವಸ್ಥತೆಗಳು ಸೇರಿದಂತೆ ವಿವಿಧ ಮನೋ-ಭಾವನಾತ್ಮಕ ಕಾಯಿಲೆಗಳ ನಿರ್ವಹಣೆ ಮತ್ತು ಚಿಕಿತ್ಸೆಯಲ್ಲಿ ಸಾಕಷ್ಟು ಯಶಸ್ವಿಯಾಗಿದೆ ಎಂದು ಹೇಳಬಹುದು. ಯೋಗ ಶಿಕ್ಷಕ ವೃತ್ತಿಯು ಆಧುನಿಕ ಜಗತ್ತಿನಲ್ಲಿ, ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ವೃತ್ತಿಗಳಲ್ಲಿ ಒಂದಾಗಿದೆ.
ಆಸಕ್ತಿದಾಯಕವಾಗಿ, ನೀವು ಹೀಗೆ ಯೋಗ ಶಿಕ್ಷಕರಾಗಿ ಒಂದೊಳ್ಳೆಯ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಮೊದಲು ಅದಕ್ಕೆ ಬೇಕಾದ ತರಬೇತಿಯನ್ನು ಪಡೆಯುವುದು ತುಂಬಾನೇ ಮುಖ್ಯವಾಗುತ್ತದೆ.
ನೀವು ಜನರಿಗೆ ಸಹಾಯ ಮಾಡಲು ಮತ್ತು ಯೋಗ ಮಾಡಲು ಇಷ್ಟಪಡುವುದಾದರೆ ನೀವು ಯೋಗ ತರಬೇತುದಾರನಾಗುವ ಬಗ್ಗೆ ಗಂಭೀರವಾಗಿ ಯೋಚಿಸಬಹುದು. ಎಲ್ಲಾ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಜಿಮ್ ಗಳು, ಆರೋಗ್ಯ ಆರೈಕೆ ಕೇಂದ್ರಗಳು, ಕಂಪನಿಗಳು ಮತ್ತು ಹೌಸಿಂಗ್ ಸೊಸೈಟಿಗಳಲ್ಲಿ ಈ ಯೋಗ ಬೋಧಕರ ಅಗತ್ಯವಿದೆ. ಇದಲ್ಲದೆ, ಅನೇಕ ಟಿವಿ ಚಾನೆಲ್ ಗಳು ಸಹ ಯೋಗ ಕಾರ್ಯಕ್ರಮಗಳಿಗೆ ಬೋಧಕರನ್ನು ನೇಮಿಸಿಕೊಳ್ಳುತ್ತವೆ.
ಯಶಸ್ವಿ ಯೋಗ ಶಿಕ್ಷಕರಾಗಲು ಅಭ್ಯಾಸದ ಸಂಘಟಿತ ತಿಳುವಳಿಕೆಯನ್ನು ಹೊಂದಿರಬೇಕು, ಜೊತೆಗೆ ಸೂಕ್ತ ಬೋಧನೆ ಮತ್ತು ಸ್ಥಿರವಾದ ಅಭ್ಯಾಸವನ್ನು ಮಾಡಬೇಕಾಗುತ್ತದೆ. ಈ ಶ್ರೇಷ್ಠ ವೃತ್ತಿಜೀವನದಲ್ಲಿ ಜನರಿಗೆ ಸಾಕಷ್ಟು ಅವಕಾಶಗಳಿವೆ.
ಯೋಗ ಶಿಕ್ಷಕರಾಗಲು ಏನೆಲ್ಲಾ ಮಾಡಬೇಕು ನೋಡಿ
ಒಬ್ಬ ಯೋಗ ಶಿಕ್ಷಕನು ಯೋಗದ ಅಭ್ಯಾಸದಲ್ಲಿ ಸಾಕಷ್ಟು ಜ್ಞಾನವಂತ ಮತ್ತು ನೈಪುಣ್ಯತೆಯನ್ನು ಹೊಂದಿರಬೇಕು. ಯೋಗ ಬೋಧಕರು ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ.
ಇದನ್ನೂ ಓದಿ: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ನೇಮಕಾತಿ- 243 ಹುದ್ದೆಗಳಿಗೆ ಅರ್ಜಿ ಹಾಕಿ
ಏಕೆಂದರೆ ಅವರು ತಮ್ಮ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಯೋಗಾಸನಗಳನ್ನು ಹೇಳಿಕೊಡಬೇಕು. ಒಬ್ಬ ಮಾರ್ಗದರ್ಶಕನಾಗಿ ಯೋಗ ಬೋಧಕನು ತನ್ನ ತರಗತಿಯಲ್ಲಿ ಬರುವ ಪ್ರತಿಯೊಬ್ಬರು ಯೋಗವನ್ನು ಹೇಗೆ ಅಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ನೋಡಬೇಕಾಗುತ್ತದೆ.
ವೈವಿಧ್ಯಮಯ ಗುರಿಗಳನ್ನು ಹೊಂದಿದ್ದರೂ, ಜನರು ಯೋಗ ಕಲಿಯಲು ಬಂದಾಗ, ಅವರು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಸಮತೋಲನದಂತಹ ಕೆಲವು ಅಗತ್ಯಗಳನ್ನು ಹಂಚಿಕೊಳ್ಳುತ್ತಾರೆ.
ಈ ಗುರಿಗಳನ್ನು ಸಾಧಿಸಲು, ಶಿಕ್ಷಕರು ಸಾಮಾನ್ಯವಾಗಿ ತಮ್ಮ ಪಾಠದ ಯೋಜನೆಗಳನ್ನು ತಾವು ಕಲಿತ ಮತ್ತು ತರಬೇತಿ ಪಡೆದ ತತ್ವಗಳ ಮೇಲೆ ಆಧಾರಿಸುತ್ತಾರೆ. ಮಾನವ ಸ್ವಭಾವದೊಂದಿಗೆ ಗುರುತಿಸಿಕೊಳ್ಳುವ ಮೂಲಕ ಮನಸ್ಸು ಮತ್ತು ದೇಹವನ್ನು ಒಟ್ಟಾರೆಯಾಗಿ ಒಳಗೊಂಡಿರುವ ಸಮಗ್ರ ವ್ಯಕ್ತಿತ್ವದ ಅಗತ್ಯಗಳನ್ನು ಪೂರೈಸಲು, ಯೋಗ ಶಿಕ್ಷಕನು ಹಲವಾರು ಪ್ರಮುಖ ಗುಣಗಳನ್ನು ಹೊಂದಿರಬೇಕು.
ಯಾವ ಯಾವ ಕ್ಷೇತ್ರಗಳಲ್ಲಿ ಈ ಯೋಗ ಶಿಕ್ಷಕರ ಅಗತ್ಯವಿದೆ?
ಎಲ್ಲಾ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಜಿಮ್ ಗಳು, ಆರೋಗ್ಯ-ಆರೈಕೆ ಕೇಂದ್ರಗಳು, ಕಂಪನಿಗಳು ಮತ್ತು ಹೌಸಿಂಗ್ ಸೊಸೈಟಿಗಳಲ್ಲಿ ಯೋಗ ಬೋಧಕರ ಅಗತ್ಯವಿದೆ. ಇದಲ್ಲದೆ, ಅನೇಕ ಟಿವಿ ಚಾನೆಲ್ಗಳು ತಮ್ಮ ಯೋಗ ಕಾರ್ಯಕ್ರಮಗಳಿಗೆ ಬೋಧಕರನ್ನು ನೇಮಿಸಿಕೊಳ್ಳುತ್ತವೆ.
ಯೋಗ ಶಿಕ್ಷಕನಾಗಲು ಈ ಅರ್ಹತೆಗಳು ಇರಲೇಬೇಕು..
ಪ್ರಸ್ತುತ, ಕೆಲಸ ಮಾಡುವ ಸಂಸ್ಥೆಗಳು ಮತ್ತು ಶಿಕ್ಷಣ ಎರಡರಲ್ಲೂ ಯೋಗ ಬೋಧಕರಿಗೆ ಬೇಡಿಕೆ ಹೆಚ್ಚುತ್ತಿದೆ. ಯೋಗವು ನಿಖರವಾದ ಭಂಗಿಗಳು ಮತ್ತು ನಿಯಂತ್ರಿತ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಇದನ್ನು ತಪ್ಪಾಗಿ ಮಾಡಿದಾಗ ಸ್ನಾಯುಗಳಿಗೆ ಸಾಕಷ್ಟು ಅಸ್ವಸ್ಥತೆಯನ್ನು ಉಂಟು ಮಾಡುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಇದು ಇತರ ದೈಹಿಕ ವ್ಯಾಯಾಮಗಳಿಗೆ ವ್ಯತಿರಿಕ್ತವಾಗಿದೆ.
ಯೋಗವನ್ನು ಕಲಿಸುವಾಗ ಯಾವುದೇ ರೀತಿಯ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು, ವೃತ್ತಿಪರ ತರಬೇತಿ ಮತ್ತು ಕ್ಷೇತ್ರದಲ್ಲಿ ಪ್ರಮಾಣ ಪತ್ರವನ್ನು ಪಡೆಯುವುದು ಅತ್ಯಂತ ಮುಖ್ಯ ಮತ್ತು ಅಗತ್ಯವಾಗಿದೆ.
ಯೋಗ ಶಿಕ್ಷಕರಾಗಲು, ಅರ್ಜಿದಾರರು ಯೋಗ ತರಬೇತಿಯಲ್ಲಿ ಡಿಪ್ಲೊಮಾ ಮಾಡಬೇಕು ಮತ್ತು ಬ್ಯಾಚುಲರ್ಸ್ ಇನ್ ಎಜುಕೇಶನ್ (ಬಿಇಡಿ) ಅನ್ನು ಯೋಗ ಕೋರ್ಸ್ ಗಳಲ್ಲಿ ಪರಿಣತಿಯೊಂದಿಗೆ ಹೊಂದಿರಬೇಕು.
ಯೋಗದ ಪ್ರಕಾರವನ್ನು ಅವಲಂಬಿಸಿ, ತರಬೇತಿ ಕಾರ್ಯಕ್ರಮವು ಕೆಲವು ವಾರಗಳಿಂದ ಕೆಲವು ವರ್ಷಗಳವರೆಗೆ ವಿಸ್ತರಿಸಿಕೊಳ್ಳಬಹುದು. ಯೋಗದಲ್ಲಿ ಮಾಸ್ಟರ್ ಇನ್ ಎಜುಕೇಶನ್ (ಎಂಇಡಿ) ವಿವಿಧ ಯೋಗ ತಂತ್ರಗಳು ಮತ್ತು ತತ್ವಶಾಸ್ತ್ರಗಳ ಬಗ್ಗೆ ಗಣನೀಯ ಜ್ಞಾನವನ್ನು ಗಳಿಸಲು ಸಹಾಯ ಮಾಡುತ್ತದೆ.
ಫಿಟ್ನೆಸ್ ಉದ್ಯಮ ಅರ್ಜಿದಾರರಿಗೆ ವೃತ್ತಿಜೀವನದ ಅವಕಾಶಗಳನ್ನು ಹೆಚ್ಚಿಸುತ್ತದೆ. ಕೆಲವು ಆಕಾಂಕ್ಷಿಗಳು ಯೋಗದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಗೆ ದಾಖಲಾಗುತ್ತಾರೆ.
ನೀವು ಯೋಗ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ನೋಂದಾಯಿಸಿಕೊಳ್ಳಲು ಆಯ್ಕೆ ಮಾಡಬಹುದು ಮತ್ತು ಹೀಗೆ ಮಾಡುವುದರಿಂದ ನೀವು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಎಲ್ಲಿಯಾದರೂ ಹೋಗಿ ಯೋಗವನ್ನು ಕಲಿಸಬಹುದು.
ಯೋಗ ಶಿಕ್ಷಕರ ತರಬೇತಿಯಲ್ಲಿ ಕೋರ್ಸ್ ಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಯೋಗ ಬೋಧಕರಾಗಲು ಅಗತ್ಯವಿರುವ ಸಾಮರ್ಥ್ಯಗಳನ್ನು ಪಡೆಯಬಹುದು.
ನೆನಪಿಡಿ, ಅನೇಕ ಯೋಗಶಾಲೆಗಳ ಬಗ್ಗೆ ಸಂಪೂರ್ಣ ತಿಳುವಳಿಕೆ, ಘನ ಯೋಗಾಭ್ಯಾಸ ಮತ್ತು ವಿವಿಧ ಯೋಗಾಸನಗಳ ಆಳವಾದ ತಿಳುವಳಿಕೆ, ಯೋಗ ತತ್ವಶಾಸ್ತ್ರಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಯೋಗದ ಈ ಪ್ರಾಚೀನ ಸಂಪ್ರದಾಯದಿಂದ ಜಗತ್ತು ಹೇಗೆ ಪ್ರಯೋಜನ ಪಡೆಯಬಹುದು ಎಂಬುದು ಬಹಳ ಮುಖ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ