• Home
  • »
  • News
  • »
  • career
  • »
  • Skills For Career: ವೃತ್ತಿ ಜೀವನಕ್ಕೆ ಪೂರಕವಾದ ಕೌಶಲ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಲಹೆ

Skills For Career: ವೃತ್ತಿ ಜೀವನಕ್ಕೆ ಪೂರಕವಾದ ಕೌಶಲ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಲಹೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Skills For Career: ಕೌಶಲ್ಯಗಳನ್ನು ಇನ್ನಷ್ಟು ಸಾಣೆ ಹಿಡಿಯಬೇಕು ಹಾಗೂ ವೃತ್ತಿಗೆ ಅಗತ್ಯವಿರುವ ಕೌಶಲ್ಯಗಳನ್ನು ನೀವು ಅರಿತುಕೊಳ್ಳಬೇಕಾದುದು ಮುಖ್ಯವಾಗಿದೆ.

  • News18 Kannada
  • Last Updated :
  • Karnataka, India
  • Share this:

ಉನ್ನತ ಯಾ ಹೆಚ್ಚುವರಿ ಕೌಶಲ್ಯವು (Skills) ನಿಮ್ಮಲ್ಲಿರುವ ಹೊಸ ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಲು ಸಹಕಾರಿಯಾಗಿದೆ(Help). ನಿಮ್ಮ ಗುರಿಯನ್ನು ಸಾಧಿಸಲು ಹಾಗೂ ನಿಮ್ಮೊಳಗಿರುವ ಆಂತರಿಕ ಶಕ್ತಿಯನ್ನು(Strength) ಒರೆಗೆ ಹಚ್ಚಲು ಹೆಚ್ಚುವರಿ ಕೌಶಲ್ಯ ಸಹಕಾರಿಯಾಗಿದೆ. ವೃತ್ತಿ  ಜೀವನದಲ್ಲಿ (Life) ಉನ್ನತಿಯನ್ನು ಸಾಧಿಸಲು ಕೂಡ ಈ ಹೆಚ್ಚುವರಿ ಕೌಶಲ್ಯ ಸಹಕಾರಿಯಾಗಿದೆ.


ಉನ್ನತ ಕೌಶಲ್ಯ ವೃತ್ತಿಯಲ್ಲಿ ಏಕಿರಬೇಕು?


ವೃತ್ತಿರಂಗದಲ್ಲಿ ನೀವು ಭಾವಿಸಿರುವ ಮಟ್ಟವನ್ನು ಏರಿಲ್ಲ ಎಂದಾದಲ್ಲಿ ನಿಮ್ಮಲ್ಲಿರುವ ಕೌಶಲ್ಯಗಳನ್ನು ಇನ್ನಷ್ಟು ಸಾಣೆ ಹಿಡಿಯಬೇಕು ಹಾಗೂ ವೃತ್ತಿಗೆ ಅಗತ್ಯವಿರುವ ಕೌಶಲ್ಯಗಳನ್ನು ನೀವು ಅರಿತುಕೊಳ್ಳಬೇಕಾದುದು ಮುಖ್ಯವಾಗಿದೆ. ಉನ್ನತ ಅಥವಾ ಹೆಚ್ಚುವರಿ ಕೌಶಲ್ಯ ಹೇಗೆ ಕೆಲಸ ಮಾಡುತ್ತದೆ ಹಾಗೂ ನಿಮ್ಮ ವೃತ್ತಿಗೆ ಈ ಕೌಶಲ್ಯಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.


ನಿಮ್ಮ ಆಕಾಂಕ್ಷೆಗಳಿಗೆ ಸಾಮರ್ಥ್ಯಗಳನ್ನು ಹೊಂದಿಸಿ


ನಿಮ್ಮ ಸಾಮರ್ಥ್ಯಗಳನ್ನು ದೃಷ್ಟಿ ಹಾಗೂ ಗುರಿಗೆ ಸರಿಹೊಂದಿಸಿದಾಗ ಉನ್ನತ ಕೌಶಲ್ಯ ಹೆಚ್ಚು ಲಾಭದಾಯಕವಾಗಿ ಕಂಡುಬರುತ್ತದೆ. ವೃತ್ತಿರಂಗದ ಬದಲಾವಣೆಗೂ ಈ ಕೌಶಲ್ಯ ಸಹಕಾರಿಯಾಗಿದ್ದು ಪ್ರಚಲಿತದಲ್ಲಿರುವ ಕೌಶಲ್ಯಗಳನ್ನು ಪರಿಗಣಿಸಿ ಅವುಗಳನ್ನು ರೂಢಿಸಿಕೊಳ್ಳಲು ಇದು ಉಪಯುಕ್ತ ಸಮಯವಾಗಿರುತ್ತದೆ. ಸಾಮರ್ಥ್ಯಕ್ಕೆ ತಕ್ಕಂತೆ ವೃತ್ತಿರಂಗದಲ್ಲಿ ಕಾರ್ಯನಿರ್ವಹಿಸುವುದು ಸಮಯದ ಪ್ರಯೋಜನವನ್ನು ನೀಡುತ್ತದೆ ಹಾಗೂ ನಿಮ್ಮನ್ನು ಕುಶಾಗ್ರಮತಿಯನ್ನಾಗಿಸುತ್ತದೆ.


ನಿಮ್ಮ ಉದ್ದೇಶ ಹಾಗೂ ಅದನ್ನು ಹೇಗೆ ಮಾಡಬಹುದು ಎಂಬುದರ ನಡುವೆ ಸಮತೋಲನ ಕಾಯ್ದುಕೊಳ್ಳಲು ಇದು ಸಹಕಾರಿಯಾಗಿದೆ. ಅದಕ್ಕಾಗಿ ತಾಳ್ಮೆಯಿಂದ ಕಾಯುವುದು ಮುಖ್ಯವಾಗಿದೆ.


ಸರಿಯಾದ ಸರ್ಟಿಫಿಕೇಶನ್ ಪ್ರೊಗ್ರಾಮ್ ಹುಡುಕಿ


ಮಾಡಬೇಕು ಎಂದು ನೀವು ಬದ್ಧರಾದಾಗ ಅದನ್ನು ಕಂಡುಕೊಳ್ಳಲು ಇರುವ ವಿಧಾನಗಳನ್ನು ಹುಡುಕಿ. ಆಯ್ಕೆಗಳು ಹಲವಾರಿದ್ದರೂ ಸರಿಯಾದ ಸರ್ಟಿಫಿಕೇಶನ್ ಕೋರ್ಸ್‌ಗಳು ನಿಮಗೆ ಪರಿಣಾಮಕಾರಿಯಾಗಿ ಹೆಚ್ಚುವರಿ ಕೌಶಲ್ಯಗಳನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಸರ್ಟಿಫಿಕೇಶನ್ ಪ್ರೋಗ್ರಾಮ್‌ಗಳನ್ನು ಕಲಿತುಕೊಳ್ಳುವ ಸಮಯದಲ್ಲಿ ಈ ಕೆಲವೊಂದು ಅಂಶಗಳತ್ತ ಗಮನ ಹರಿಸಿ


  • ಮಾನ್ಯತೆ ನೀಡುವವರು ಹಾಗೂ ನಿಮ್ಮನ್ನು ಅರ್ಹರು ಎಂದು ಪ್ರಮಾಣೀಕರಿಸುವ ವಿಶ್ವವಿದ್ಯಾಲಯಗಳು, ಸಂಸ್ಥೆಗಳು, ಆನ್‌ಲೈನ್ ಶಾಲೆಗಳು ಮತ್ತು ಇತರ ಸಂಸ್ಥೆಗಳು

  • ಅಧ್ಯಾಪಕರು, ಶಿಕ್ಷಣಶಾಸ್ತ್ರ ಮತ್ತು ಪಠ್ಯಕ್ರಮ

  • ನಿಮ್ಮ ಆದ್ಯತೆಯ ಕಾರ್ಯಕ್ರಮದ ಅವಧಿ ಮತ್ತು ಅದಕ್ಕೆ ಸಂಬಂಧಿಸಿದ ಹಣಕಾಸು

  • ಪ್ರೋಗ್ರಾಂನ ಸ್ವರೂಪ

  • ವಿಶೇಷ ಮಾಡ್ಯೂಲ್‌ಗಳು

  • ಉದ್ಯೋಗ ನೆರವು/ಖಾತರಿ ಕಾರ್ಯಕ್ರಮಗಳು

  • ನೀವು ಕೆಲಸ ಮಾಡುವ ಪರಿಕರಗಳ ಪಟ್ಟಿ

  • ಕೇಸ್ ಸ್ಟಡೀಸ್, ಕೋರ್ಸ್ ಸಾಮಗ್ರಿಗಳು


ಯೋಜನೆಗಳಲ್ಲಿ ಕೆಲಸ ಮಾಡಿ ಹಾಗೂ ದೃಢವಾದ ಪೋರ್ಟ್‌ಫೋಲಿಯೋ ನಿರ್ಮಿಸಿ


ಪ್ರಾಜೆಕ್ಟ್‌ಗಳಲ್ಲಿ ಹೆಚ್ಚು ಸಮಯ ವಿನಿಯೋಗಿಸಿ, ಇದರಿಂದ ನಿಮ್ಮ ಕೌಶಲ್ಯದ ವ್ಯಾಪ್ತಿ ಹೆಚ್ಚುತ್ತದೆ. ಈ ಕೌಶಲ್ಯಗಳು ವಿಭಿನ್ನ ಸನ್ನಿವೇಶಗಳನ್ನು ಎದುರಿಸಲು, ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲು ಮತ್ತು ಕಾಳಜಿಗಳನ್ನು ಪರಿಹರಿಸಲು ಅತ್ಯಂತ ಪ್ರಾಯೋಗಿಕ ವಿಧಾನಗಳನ್ನು ಕಂಡುಹಿಡಿಯಲು ಅನುವು ಮಾಡಿಕೊಡುತ್ತದೆ.


ಸರಿಯಾದ ವಿಷಯದ ಮೇಲೆ ಗಮನಹರಿಸಿ


ಕೌಶಲ್ಯದ ದೃಷ್ಟಿಕೋನಗಳಿಗೆ ಪೂರಕವಾಗಿರುವ ಸರಿಯಾದ ವಿಷಯದತ್ತ ಗಮನ ಹರಿಸಿ. ನೀವು ಡೇಟಾ ಸೈನ್ಸ್ ಅಥವಾ AI ನಲ್ಲಿದ್ದರೆ, ಅತ್ಯುತ್ತಮ ಪುಸ್ತಕಗಳನ್ನು ಓದಿ, ಸರಿಯಾದ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿ ಮತ್ತು ಪರಿಣಿತರಿಂದ ಪಾಡ್‌ಕಾಸ್ಟ್‌ಗಳನ್ನು ಆಲಿಸಿ. ಇದರಿಂದ ಸಂದರ್ಶನಗಳಲ್ಲಿ ಆತ್ಮವಿಶ್ವಾಸವನ್ನು ನೀವು ಪಡೆಯುತ್ತೀರಿ. ಹಾಗೂ ನಿಮ್ಮ ಗುರಿಯನ್ನು ಸುಲಭವಾಗಿ ತಲುಪುತ್ತೀರಿ.


ಸರಿಯಾದ ಸಂಪರ್ಕವನ್ನು ಪಡೆದುಕೊಳ್ಳಿ


ಉದ್ಯಮ ಅನುಭವಿಗಳೊಂದಿಗೆ ಸಂಪರ್ಕವನ್ನು ಪಡೆದುಕೊಳ್ಳಲು ಲಿಂಕ್ಡ್‌ಇನ್ ಬಳಸಿ. ಸಭೆ ಹಾಗೂ ಸೆಮಿನಾರ್‌ಗಳಿಗೆ ಹಾಜರಾಗಿ ಉದ್ಯಮ ಜಟಿಲತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ನಿಮ್ಮ ಪ್ರಾಜೆಕ್ಟ್ ಹಾಗೂ ಉದ್ಯಮ ಪರಿಕರಗಳು ಉದ್ಯಮ ರಂಗವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಆದರೆ ಸೂಕ್ತವಾದ ಸಂಪರ್ಕವು ಉದ್ಯೋಗ ಪ್ರೊಫೈಲ್ ಅನ್ನು ಗಟ್ಟಿಗೊಳಿಸುತ್ತದೆ.


ಇದರಿಂದ ವೇತನ ಪ್ರಮಾಣ, ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನ, ಉದ್ಯೋಗಕ್ಕೆ ತಕ್ಕುದಾದ ಕಂಪನಿಗಳನ್ನು ಹುಡುಕಲು ಸಹಾಯ ಮಾಡುತ್ತದೆ. ನಿಮ್ಮ ಗುರಿ ಏನು ಅದನ್ನು ಸಾಧಿಸಲು ಹೇಗೆ ಪ್ರಯತ್ನಪಡಬಹುದು ಎಂಬ ಅಂಶಗಳತ್ತ ಗಮನಹರಿಸಿ. ಅದಕ್ಕಾಗಿ ಯೋಜನೆಗಳನ್ನು ರೂಪಿಸಿ ಹಾಗೂ ಸಂಪರ್ಕಗಳನ್ನು ಸಾಧಿಸಿ. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದು ಖಂಡಿತ.

First published: