• Home
  • »
  • News
  • »
  • career
  • »
  • Internship: ವೃತ್ತಿ ಜೀವನಕ್ಕೆ ಇಂಟರ್ನ್​ಶಿಪ್ ಎಷ್ಟು ಸಹಕಾರಿ? ಇಲ್ಲಿದೆ ಮಾಹಿತಿ

Internship: ವೃತ್ತಿ ಜೀವನಕ್ಕೆ ಇಂಟರ್ನ್​ಶಿಪ್ ಎಷ್ಟು ಸಹಕಾರಿ? ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತದಲ್ಲಿಕಳೆದ ಆರು ವರ್ಷಗಳಿಂದ ಇಂಟರ್ನ್‌ಶಿಪ್‌ ಪಡೆಯುತ್ತಿರುವವರ ಸಂಖ್ಯೆಯು ಗಣನೀಯವಾಗಿ ಹೆಚ್ಚಿದೆ ಕಳೆದ ವರ್ಷ 10 ಲಕ್ಷ ಜನರು ಇಂಟರ್ನ್‌ಶಿಪ್‌ ಪಡೆದಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಕಲಿಯುತ್ತಿರುವ ಸಮಯದಲ್ಲೇ (TIme) ಕೆಲವರು ಇಂಟರ್ನ್​ಶಿಪ್ (Internship)​ ಮಾಡಲು ಬಯಸುತ್ತಾರೆ. ತಮ್ಮ ಪ್ರಾಯೋಗಿಕ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗಿರುತ್ತದೆ. ವಿವಿಧ ಉದ್ಯೋಗ (Employement) ಕ್ಷೇತ್ರದಲ್ಲಿ ಈ ಪ್ರಾಯೋಗಿಕ ತರಬೇತಿ ಪಡೆಯಲು ಅವಕಾಶ ಇರುತ್ತದೆ. ಇನ್ನು ಕಲಿತ ಕೆಲ ದಿನಗಳ ನಂತರ ಕೆಲಸಕ್ಕೆ ಸೇರುವುದಕ್ಕಿಂತ ಮುಂಚಿತವಾಗಿ ಅನುಭವಕ್ಕಾಗಿ ಇಂಟರ್ನ್​ಶಿಪ್ ಮಾಡಲಾಗುತ್ತದೆ. ಈ ಕುರಿತು ಇನ್ನಷ್ಟು ಮಾಹಿತಿಗಾಗಿ (Information) ಮುಂದೆ ಓದಿ. 


ಭಾರತದಲ್ಲಿಕಳೆದ ಆರು ವರ್ಷಗಳಿಂದ ಇಂಟರ್ನ್‌ಶಿಪ್‌ ಪಡೆಯುತ್ತಿರುವವರ ಸಂಖ್ಯೆಯು ಗಣನೀಯವಾಗಿ ಹೆಚ್ಚಿದೆ ಕಳೆದ ವರ್ಷ 10 ಲಕ್ಷ ಜನರು ಇಂಟರ್ನ್‌ಶಿಪ್‌ ಪಡೆದಿದ್ದಾರೆ ಎಂದು ಇಂಟರ್ನ್‌ಶಿಪ್‌ ಮತ್ತು ಟ್ರೇನಿಂಗ್‌ ಪ್ಲಾಟ್‌ ಫಾರಂ ಇಂಟರ್ನ್‌ಶಾಲಾ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.  ಇಂಟನ್‌ಶಿಪ್‌ ಪಡೆಯುವವರ ಸಂಖ್ಯೆ ಈಗ ಹೆಚ್ಚಿದೆ.  ಈ ಹಿಂದೆ ಇಂಟರ್ನ್‌ಶಿಪ್‌ ಎನ್ನುವುದು ಈಗಿನಷ್ಟು ಜನಪ್ರಿಯವಾಗಿರಲಿಲ್ಲ. ವ್ಯಾಸಂಗ ಮುಗಿಸಿ ನೇರವಾಗಿ ಉದ್ಯೋಗಕ್ಕೆ ನೇಮಕಗೊಳ್ಳುತ್ತಿದ್ದ ಕಾಲ ಅದಾಗಿತ್ತು. ಅದಾದನಂತರ ಇಂಟರ್ನ್‌ಶಿಪ್‌ ಎನ್ನುವುದು ಪ್ರಚಲಿತವಾಗತೊಡಗಿತು.


ಇಂಟರ್ನ್​ಶಿಪ್​ ಹೇಗೆ ಸಹಕಾರಿ ಗೊತ್ತಾ?
ಸದ್ಯ ಹಲವಾರು ಜನ ಇಂಟರ್ನ್​ಶಿಪ್​ ಮಾಡುತ್ತಿದ್ದಾರೆ. ಯಾವುದೇ ಕ್ಷೇತ್ರದ ಕಲಿಯೆ ಇರಲಿ ಅದಕ್ಕೆ ಪೂರಕವಾದ ಸಂಗತಿಗಳ ಪ್ರಾಯೋಗಿಕ ತರಬೇತಿಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುತ್ತಿದ್ದಾರೆ. ಇಂಟರ್ನ್‌ಶಿಪ್‌ ಎಂದರೆ ವ್ಯಾಸಂಗದ ನಡುವೆ ರಜಾ ಅವಧಿಯಲ್ಲಿ ತಾತ್ಕಾಲಿಕವಾಗಿ ಪ್ರಾಯೋಗಿಕ ತರಬೇತಿ ಪಡೆಯುವುದಾಗಿದೆ. ಈಗ ಕಂಪನಿಗಳು ಪದವಿ ಅಥವಾ ಡಿಪ್ಲೊಮಾ ಮುಗಿಸಿದ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಇಂಟರ್ನ್‌ಶಿಪ್​ಗಾಗಿ ನೇಮಕ ಮಾಡಿಕೊಳ್ಳುತ್ತಿವೆ.


ಇದನ್ನೂ ಓದಿ: ಬರೋಬ್ಬರಿ 11 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿದ ಮಾರ್ಕ್ ಜುಕರ್ ಬರ್ಗ್


ಕೌಶಲ್ಯಗಳ ಕಲಿಕೆ
ಇಂಟರ್ನ್‌ಶಿಪ್‌ ಅಥವಾ ತರಬೇತಿ ಅವಧಿಯಲ್ಲಿ ಪ್ರಸ್ತುತವಾದ ಕೌಶಲಗಳನ್ನು ಅನುಭವದ ಮೂಲಕ ಪಡೆದುಕೊಳ್ಳುವುದೇ ಇದರ ಉದ್ದೇಶ. ಈಗಾಗಲೇ ನೀವು ಯಾವುದಾದರೂ ಸಂಸ್ಥೆಯಲ್ಲಿಇಂಟರ್ನ್‌ಶಿಪ್‌ ಮಾಡಿರಬಹುದು. ಅಥವಾ ಇದೇ ಮೊದಲ ಬಾರಿಗೆ ಮಾಡುತ್ತಿದ್ದರೆ ತರಬೇತಿ ಅವಧಿಯಲ್ಲಿಯಾವ ಯಾವ ಕೌಶಲಗಳನ್ನು ಗಳಿಸಿಕೊಳ್ಳಬೇಕು ಎಂಬ ಬಗ್ಗೆ  ತಿಳಿದಿರಬೇಕು. ಒಂದು ರೀತಿಯಲ್ಲಿ ನೀವು ಸಾಕಷ್ಟು ತಾಂತ್ರಿಕ ಕೌಶಲಗಳನ್ನು ಹೊಂದಬೇಕೆನ್ನುವುದು ನಿಜ.


ಟೀಮ್​ ವರ್ಕ್​
ಒಬ್ಬ ವ್ಯಕ್ತಿಯಾಗಿ ನೀವು ಅದ್ಭುತ ವಾದ ಕೌಶಲಗಳನ್ನು ನಿಮ್ಮಲ್ಲಿಅಳವಡಿಸಿಕೊಂಡಿರಬಹುದು. ಆದರೆ ಒಬ್ಬ ವ್ಯಕ್ತಿಯ ಜೊತೆಗೂಡಿ ಕೆಲಸ ಮಾಡುವಾಗ ಅದು ನಿಮಗೆ ಕಿರಿಕಿರಿ ಉಂಟುಮಾಡಬಹುದು. ಅಂಥ ಸಂದರ್ಭದಲ್ಲಿ ಈ ಟೀಂ ವರ್ಕ್​ ಸಹಾಯವಾಗುತ್ತದೆ. ನೀವು ಕಲಿತ ವಿಷಯವೊಂದು ಪ್ರಾಯೋಗಿಕವಾಘಿ ಕೆಲಸ ಮಾಡುವ ಸ್ಥಳದಲ್ಲಿ ಇನ್ನೊಂದು ರೀತಿ ಇದ್ದಾಗ ನಿಮ್ಮ ಗೊಂದಲಗಳನ್ನು ಬಗೆ ಹರಿಸಲು ಇದು ಸಹಾಯ ಮಾಡುತ್ತದೆ. 


ಇದನ್ನೂ ಓದಿ: ಕನಸಿನ ಉದ್ಯೋಗ ಸಿಕ್ಕರೂ ಹತಾಶೆಯ ಜೀವನ: ಗಟ್ಟಿಗಿತ್ತಿಯ ಕಥೆ ಇದು


ಸಮಯದ ನಿರ್ವಹಣೆ ಕುರಿತು ಮಾಹಿತಿ
ಇನ್ನು ವಿದ್ಯಾರ್ಥಿಯಾಗಿದ್ದಾಗಲೇ ನೀವು ಸಮಯದ ನಿರ್ವಹಣೆಯನ್ನು ಕಲಿತಿದ್ದಿರಬಹುದು. ಆದರೆ ಇಲ್ಲಿ ಅದಕ್ಕೂ ಹೆಚ್ಚಿನ ಸಮಯ ನಿರ್ವಹಣೆ ಮತ್ತು ಕೆಲಸದ ಕೌಶಲಗಳನ್ನು ಕಲಿಯುತ್ತೀರಿ. ಕೆಲಸ ಮಾಡುವ ವೇಗ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.


ಪ್ರಮಾಣಪತ್ರ ಲಭ್ಯ
ನೀವು ಇಂಟರ್ನ್​ಶಿಪ್​ ಮುಗಿಸಿದ್ದರೆ ನಿಮಗೆ ನೀವು ಕೆಲಸ ಮಾಡಿದ ಕಂಪನಿ ಕಡೆಯಿಂದ ನೀವು ಕೆಲಸ ಮಾಡಿದ ಕುರಿತು ಒಂದು ಪ್ರಮಾಣ ಪತ್ರ ನೀಡಿರುತ್ತಾರೆ. ಅದು ನಿಮ್ಮ ಮುಂದಿನ ಕೆಲಸಗಳಿಗೆ ತುಂಬಾ ಸಹಕಾರಿಯಾಗುತ್ತದೆ. ಇಲ್ಲಿ ಕಲಿತ ಕೆಲಸದ ಅನುಭವದ ಆಧಾರದ ಮೇಲೆ ನಿಮಗೆ ಇನ್ನೂ ಹೆಚ್ಚಿನ ವೇತನದೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ನೀವೂ ಇಂಟರ್ನ್​ಶಿಪ್​ ಮಾಡುವುದು ಉತ್ತಮ.

First published: