• Home
  • »
  • News
  • »
  • career
  • »
  • Career Cushioning: ಏನಿದು ಕರಿಯರ್‌ ಕುಶನಿಂಗ್?‌ ಕೆಲಸ ಕಳೆದುಕೊಂಡರೂ ಚಿಂತಿಸಬೇಕಿಲ್ಲ

Career Cushioning: ಏನಿದು ಕರಿಯರ್‌ ಕುಶನಿಂಗ್?‌ ಕೆಲಸ ಕಳೆದುಕೊಂಡರೂ ಚಿಂತಿಸಬೇಕಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

What is Career Cushioning: ಕರಿಯರ್‌ ಕುಶನಿಂಗ್ ಎಂದರೇನು? ಮತ್ತು ಉದ್ಯೋಗ ನಷ್ಟಕ್ಕೆ ತಯಾರಿ ಮಾಡಲು ಅದು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ. 

  • Trending Desk
  • 3-MIN READ
  • Last Updated :
  • Share this:

ಈಗಾಗಲೇ ಜಾಗತಿಕ ಮಟ್ಟದಲ್ಲಿ ಹಣದುಬ್ಬರ (Inflation) , ಆರ್ಥಿಕ ಹಿಂಜರಿತ ಆರಂಭವಾಗಿದೆ. ಇದರ ಬಿಸಿ ಭಾರತಕ್ಕೆ (India) ತಲುಪಲು ಬಹಳ ದಿನ ಉಳಿದಿಲ್ಲ. ಹಾಗಾಗಿ ಹಲವರಿಗೆ ಈಗಾಗಲೇ ತಮ್ಮ ಕೆಲಸ ಕಳೆದುಕೊಳ್ಳುವ ಬಗ್ಗೆ ಭಯ ಶುರುವಾಗಿದೆ. ಆದ್ರೆ ಭಯ ಪಡುವುದರ ಬದಲು ಈಗಿನಿಂದಲೇ ಅದಕ್ಕೆ ಒಂದಿಷ್ಟು ತಯಾರಿ ಮಾಡಿಕೊಂಡರೆ ಉತ್ತಮ. ಕರಿಯರ್‌ ಕುಶನಿಂಗ್‌ (Career Cushioning) ಅನ್ನೋದನ್ನು ನೀವು ಕೇಳಿರಬಹುದು. ಇದು ಕ್ರಾಂತಿಕಾರಿ ಪರಿಕಲ್ಪನೆಯಲ್ಲದಿದ್ದರೂ ಕೆಲಸದಿಂದ ತೆಗೆದುಹಾಕಬಹುದಾದ ಸಂದರ್ಭಗಳಲ್ಲಿ ಉದ್ಯೋಗಿಗಳು ತಮ್ಮನ್ನು ತಾವು ಸಜ್ಜುಗೊಳಿಸುವುದನ್ನು ಇನ್ನಷ್ಟು ಉತ್ತಮವಾಗಿ ಹೇಳಲಾಗುತ್ತದೆ.


ಇತ್ತೀಚಿನ ಲಿಂಕ್ಡ್‌ಇನ್ ವರ್ಕ್‌ಫೋರ್ಸ್ ಕಾನ್ಫಿಡೆನ್ಸ್ ಇಂಡೆಕ್ಸ್‌ನ ಪ್ರಕಾರ, 85% ಅಮೆರಿಕ ಕಾರ್ಮಿಕರು ಹಣದುಬ್ಬರದ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ ಕೇವಲ 44% ಜನರು ಆರ್ಥಿಕ ಕುಸಿತಕ್ಕೆ ಸಿದ್ಧರಾಗಿದ್ದಾರೆ.


ಹಾಗಿದ್ರೆ ಕರಿಯರ್‌ ಕುಶನಿಂಗ್ ಎಂದರೇನು? ಮತ್ತು ಉದ್ಯೋಗ ನಷ್ಟಕ್ಕೆ ತಯಾರಿ ಮಾಡಲು ಅದು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.


ಏನಿದು ಕರಿಯರ್‌ ಕುಶನಿಂಗ್?‌


ಕರಿಯರ್‌ ಕುಶನಿಂಗ್ ಎನ್ನುವುದು ಡೇಟಿಂಗ್ ಪ್ರಪಂಚದಿಂದ ಪಡೆದ ಪದವಾಗಿದೆ. ಡೇಟಿಂಗ್‌ ಜಗತ್ತಿನಲ್ಲಿ ವ್ಯಕ್ತಿಗಳು ಒಂದು ಸಂಬಂಧದಲ್ಲಿರುವಾಗಲೇ ಇತರರೊಂದಿಗೆ ಡೇಟಿಂಗ್‌ ಬಯಸುತ್ತಾರೆ.


ಆದ್ರೆ ವೃತ್ತಿಪರ ಕ್ಷೇತ್ರದಲ್ಲಿ ಇದನ್ನು ನೋಡೋದಾದ್ರೆ ಇಲ್ಲಿ ನಿಮ್ಮ ಕೆಲಸದ ಜೊತೆಗೇ ಹೊಸ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಳ್ಳಬಹುದು. ಅನಿರೀಕ್ಷಿತವಾಗಿ ಏನಾದರೂ ಸಂಭವಿಸಿದಲ್ಲಿ ಈ ಆಯ್ಕೆಗಳನ್ನು ಬಳಸಿಕೊಳ್ಳಬಹುದಾಗಿದೆ.


ಉನ್ನತ ಮೌಲ್ಯಗಳನ್ನು ಗುರುತಿಸಿ


ಕೆಲವೊಮ್ಮೆ ಮೌಲ್ಯಗಳ ವಿಚಾರ ಬಂದಾಗ ಹಲವಾರು ಜನರು ತಮ್ಮ ಉದ್ಯೋಗದಲ್ಲಿ ತೃಪ್ತಿ ಹೊಂದಿರುವುದಿಲ್ಲ. ಹಾಗಾಗಿಯೇ ನಿಮ್ಮ ಉನ್ನತ ಮೌಲ್ಯಗಳನ್ನು ಪಟ್ಟಿ ಮಾಡುವುದು ಇದರ ಮೊದಲ ಹಂತವಾಗಿದೆ.


ಇದರಿಂದ ನೀವು ಸದ್ಯ ಇರುವ ಕೆಲಸದ ಹಾಗೂ ಮುಂದೆ ಹೋಗಬೇಕು ಅನ್ನುವ ಕಂಪನಿಯ ಮೌಲ್ಯಮಾಪನ ಮಾಡುವುದು ಉತ್ತಮ. ನಿಮ್ಮ ಅತ್ಯುನ್ನತ ಐದು ಅಥವಾ ಹತ್ತು ಕೆಲಸದ ಮೌಲ್ಯಗಳ ಪಟ್ಟಿ ಮಾಡಿ.


ಅವುಗಳನ್ನು ಆದ್ಯತೆಯ ಕ್ರಮದಲ್ಲಿ ಪೋಸ್ಟ್-ಇಟ್ ಟಿಪ್ಪಣಿಯಲ್ಲಿ ಬರೆಯಿರಿ. ನೀವು ಅದನ್ನು ಮುಂದಕ್ಕೆ ಚಲಿಸುವ ಮಾರ್ಗದರ್ಶಿಯಾಗಿ ಬಳಸಬಹುದು.


ಕೌಶಲ್ಯಗಳನ್ನು ಮಾರ್ಕೆಟಿಂಗ್‌ ಮಾಡಿ


ಕರಿಯರ್‌ ಕುಶನಿಂಗ್‌ ನಲ್ಲಿ ನಿಮ್ಮ ಕೌಶಲ್ಯಗಳನ್ನು ಗೌರವಿಸುವುದು ಬಹಳ ಮುಖ್ಯವಾಗಿದೆ. ನಿಮ್ಮ ಕೌಶಲ್ಯಗಳನ್ನು ಮಾರುಕಟ್ಟೆಗೆ ತರುವುದು ಸಹ ಅತ್ಯಗತ್ಯ. ಲಿಂಕ್ಡ್‌ಇನ್ ಪ್ರಕಾರ, ಜಾಗತಿಕವಾಗಿ 40% ಕ್ಕಿಂತ ಹೆಚ್ಚು ಕಂಪನಿಗಳು ಉದ್ಯೋಗ ಅಭ್ಯರ್ಥಿಗಳನ್ನು ಹುಡುಕಲು ಮತ್ತು ಗುರುತಿಸಲು ಕೌಶಲ್ಯಗಳನ್ನು ಅವಲಂಭಿಸಿವೆ.


ಹಾರ್ಡ್ ಸ್ಕಿಲ್‌ ಗಳು, ಸಾಫ್ಟ್‌ ಸ್ಕಿಲ್‌ ಗಳಿಗಿಂತ ಹೆಚ್ಚು ಮೌಲ್ಯಯುತವಾಗಿದ್ದರೂ, ಕಳೆದ ಹಲವಾರು ವರ್ಷಗಳಿಂದ ಅದು ಬದಲಾಗಿದೆ. ಈಗ ಸಾಫ್ಟ್ ಸ್ಕಿಲ್‌ಗಳು ಎಂದಿಗಿಂತಲೂ ಹೆಚ್ಚು ಬೇಡಿಕೆಯಲ್ಲಿವೆ.


ಇದನ್ನೂ ಓದಿ: ವಾಯುಪಡೆ ಅಡ್ಮಿಷನ್ ಟೆಸ್ಟ್ ಫಾರ್ಮ್ ಅನ್ನು ಹೇಗೆ ತುಂಬಬೇಕು? ಹಂತ ಹಂತದ ಮಾಹಿತಿ ಇಲ್ಲಿದೆ


ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ!


ಆರ್ಥಿಕ ಪರಿಸ್ಥಿತಿಗಳ ಹೊರತಾಗಿಯೂ, ಹೊಸ ಅವಕಾಶಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳುವುದು ಮುಖ್ಯ. ಉದ್ಯೋಗ ಹುಡುಕಾಟದ ಕ್ರಿಯೆಯು ನಿಮಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ.


ಬರೀ ಒಂದೇ ಕೆಲಸದಲ್ಲಿ ಅಥವಾ ಒಂದೇ ಕಂಪನಿಯಲ್ಲಿ ನೀವು ಸಿಲುಕಿಕೊಂಡಿಲ್ಲ ಅನ್ನೋದನ್ನು ಅದು ತೋರಿಸಿಕೊಡುತ್ತದೆ. ನಿಮ್ಮ ಉದ್ಯೋಗ ಬೇಟೆಯು ಸಂದರ್ಶನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.


ಇನ್ನು ನೀವು ಈಗ ಮಾಡುತ್ತಿರುವುದಕ್ಕಿಂತ ಹೆಚ್ಚು ಆಸಕ್ತಿದಾಯಕವಾದ ಕೆಲಸವನ್ನು ಕೂಡ ನೀವು ಆಯ್ಕೆ ಮಾಡಿಕೊಳ್ಳಬಹುದು.


ಸೈಡ್ ಹಸ್ಲ್ ಅನ್ನು ಪರಿಗಣಿಸಿ!


ಸೈಡ್ ಹಸ್ಲ್ ಅಥವಾ ಸೈಡ್ ಗಿಗ್ ಅನ್ನು ಮಾಡುವುದರಿಂದ ಜಾಬ್‌ ನ ಹೊರತಾಗಿಯೂ ನೀವು ಆದಾಯವನ್ನು ಗಳಿಸಬಹುದು. ಝಾಪಿಯರ್ ವರದಿಯ ಪ್ರಕಾರ, 40% ರಷ್ಟು ಅಮೆರಿಕನ್ನರು ಪ್ರಸ್ತುತ ಸೈಡ್ ಹಸ್ಲ್ ಅನ್ನು ಹೊಂದಿದ್ದಾರೆ.


ಇದು ಡಿಸೆಂಬರ್ 2020 ರಲ್ಲಿ 34% ರಿಂದ ಹೆಚ್ಚಾಗಿದೆ ಮತ್ತು ಆ ಸಂಖ್ಯೆಯು 2023 ರಲ್ಲಿ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಸೈಡ್‌ ಬ್ಯುಸಿನೆಸ್‌ ನಿಂದ ನಿಮಗೆ ಒಂದಿಷ್ಟು ಉತ್ಸಾಹ, ಲವಲವಿಕೆಯೂ ದೊರೆಯುತ್ತದೆ, ಅದರ ಜೊತೆಗೆ ಹೆಚ್ಚುವರಿ ಆದಾಯವೂ ಬರುತ್ತದೆ.


ಇದನ್ನೂ ಓದಿ: ನಿಮ್ಮ ವೇಳಾಪಟ್ಟಿಯನ್ನು ಹೀಗೆ ನೀವೇ ಸಿದ್ಧಪಡಿಸಿಕೊಳ್ಳಿ


ಆದ್ದರಿಂದ ನಿಮ್ಮನ್ನು ಕೆಲಸದಿಂದ ತೆಗೆದುಹಾಕಿದ ಮೇಲೆ ನೋಡೋಣ ಅಂತ ಕಾಯಬೇಡಿ. ನಿಮ್ಮ ಕೈಲಾಗುವ ಚಿಕ್ಕ ಚಿಕ್ಕ ಆದಾಯ ಬರುವಂತ ಸೈಡ್‌ ಗಿಗ್‌ ಗಳನ್ನು ಆರಂಭಿಸಿ. ಯಾರಿಗೆ ಗೊತ್ತು.. ಈ ನಿಮ್ಮ ಚಿಕ್ಕ ಪ್ರಯತ್ನವೇ ದೊಡ್ಡ ಯಶಸ್ಸಿಗೆ ಕಾರಣವಾಗಬಹುದು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು