• Home
  • »
  • News
  • »
  • career
  • »
  • Career Tips: ವೃತ್ತಿ ಹುಡುಕಾಟದಲ್ಲಿರುವವರಿಗೆ ಕನ್ಸ್ಯೂಮರ್ ಸರ್ವೀಸ್ ಬೆಸ್ಟ್ ಆಯ್ಕೆ; ಏನಿದು? ಇಲ್ಲಿದೆ ಸಂಪೂರ್ಣ ಮಾಹಿತಿ

Career Tips: ವೃತ್ತಿ ಹುಡುಕಾಟದಲ್ಲಿರುವವರಿಗೆ ಕನ್ಸ್ಯೂಮರ್ ಸರ್ವೀಸ್ ಬೆಸ್ಟ್ ಆಯ್ಕೆ; ಏನಿದು? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗ್ರಾಹಕ ಸೇವೆಗಳ ಉದ್ಯೋಗಗಳನ್ನು ಒದಗಿಸುವ ಕೆಲವು ಪ್ರಸಿದ್ಧ ಕಂಪನಿಗಳು ಅಕಾರ್ನ್ಸ್, ಬೆಸ್ಟ್‌ಬೈ, ವಾಲ್ಮಾರ್ಟ್, ಮೆಕ್ಡೊನಾಲ್ಡ್ಸ್, ಆಪಲ್, ಅಮೆಜಾನ್, ಸ್ಟಾರ್‌ಬಕ್ಸ್, ಟಾಕ್‌ಡೆಸ್ಕ್, ಹೋಮ್ ಡಿಪೋ ಮುಂತಾದವಾಗಿವೆ. ಇದರ ಹೊರತುಪಡಿಸಿಯೂ ಸಾಕಷ್ಟು ಕಂಪನಿಗಳು ನಿಮಗೆ ಈ ಉದ್ಯೋಗಾವಕಾಶ ನೀಡುತ್ತವೆ.

ಮುಂದೆ ಓದಿ ...
  • Share this:

ನೀವು ವೃತ್ತಿ(Career) ಹುಡುಕಾಟದಲ್ಲಿದ್ದರೆ ಔದ್ಯೋಗಿಕ ಕ್ಷೇತ್ರದಲ್ಲಿ ನಿಮಗೆ ಸಾಕಷ್ಟು ಆಯ್ಕೆಗಳಿವೆ. ಆದ್ರೆ ನೀವು ನಿಮಗಿರುವ ಕೌಶಲ್ಯ(Skill) ಹಾಗೂ ಪರಿಣಿತಿಯಿಯನ್ನು ಅಲವಂಬಿಸಿ ವೃತ್ತಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ, ನೀವು ಆರಿಸುವ ಕೆಲಸ ನಿಮ್ಮ ಉತ್ಸಾಹದೊಂದಿಗೆ ಸಿಂಕ್ ಆಗಿದೆಯೇ ಅನ್ನೋದನ್ನು ನೀವು ನೋಡಿಕೊಳ್ಳಬೇಕಾಗುತ್ತದೆ. ಏಕೆಂದರೆ ನೀವು ಮಾಡುವ ಕೆಲಸವನ್ನು ನೀವು ಇಷ್ಟಪಟ್ಟರೆ ಮಾತ್ರ ವೃತ್ತಿಯಲ್ಲಿ ಅಭಿವೃದ್ಧಿ(Progress) ಕಾಣಬಹುದು.


ಪ್ರಸ್ತುತ ಗ್ರಾಹಕ ಸೇವೆ ಅಥವಾ ಕನ್ಸ್ಯೂಮರ್‌ ಸರ್ವೀಸ್‌ ಸಾಕಷ್ಟು ಟ್ರೆಂಡಿಂಗ್‌ ನಲ್ಲಿರುವ ಹಾಗೂ ಗಮನ ಸೆಳೆಯುವ ವೃತ್ತಿಯಾಗಿದೆ. ವಿಶ್ವ ಆರ್ಥಿಕತೆಯಲ್ಲಿ ಹೆಚ್ಚು ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದು ಗ್ರಾಹಕ ಸೇವೆಗಳೂ ಒಂದು. ಅಂದಹಾಗೆ ನೀವು ಗ್ರಾಹಕ ಸೇವೆಯಲ್ಲಿ ವೃತ್ತಿ ಆರಂಭಿಸಬೇಕೆಂದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಯಾವುದು ಗ್ರಾಹಕ ಸೇವೆ?


ಗ್ರಾಹಕ ಸೇವೆಗಳೆಂದರೆ ಪಾನೀಯಗಳು, ಗಿಡಮೂಲಿಕೆಗಳು, ಆಹಾರ, ಸೌಂದರ್ಯವರ್ಧಕಗಳು, ಔಷಧಗಳು, ವಿಟಮಿನ್‌ಗಳು, ಖನಿಜಗಳು, ಮೇಣಗಳು ಮತ್ತು ಇತರ ಗ್ರಾಹಕ ಉತ್ಪನ್ನಗಳ ಬಗ್ಗೆ ತಾಂತ್ರಿಕ ಸಲಹೆ ನೀಡುವುದಾಗಿದೆ.


ಇನ್ನೂ ಸರಳವಾಗಿ ಹೇಳಬೇಕೆಂದರೆ ಇದು ಗ್ರಾಹಕರಿಗೆ ಅವರ ಸಂಶಯಗಳನ್ನು ಬಗೆಹರಿಸಿಕೊಳ್ಳಲು ಒದಗಿಸಿರುವಂಥ ಸೇವೆಗಳಾಗಿವೆ. ನಾವು ಹಲವು ವಿಧದ ಗ್ರಾಹಕ ಸೇವೆಗಳನ್ನು ನೋಡಬಹುದಾಗಿದೆ. ಅವುಗಳಲ್ಲಿ ಮುಖ್ಯವಾಗಿ,


1 - ಫೋನ್ ಮತ್ತು ಇಮೇಲ್ ಸಪೋರ್ಟ್:‌ ಈ ಗ್ರಾಹಕ ಸೇವೆಯಲ್ಲಿ ಗ್ರಾಹಕರರ ಪ್ರಶ್ನೆಗಳಿಗೆ ಇಮೇಲ್ ಮತ್ತು ಫೋನ್ ಮೂಲಕ ಉತ್ತರವನ್ನು ನೀಡಲಾಗುತ್ತದೆ. ಗ್ರಾಹಕರು ಫೋನ್‌ ಕಾಲ್‌ ಅಥವಾ ಇಮೇಲ್‌ ಮೂಲಕ ಉತ್ಪನ್ನಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಅಥವಾ ಮಾಹಿತಿಗಳನ್ನು ಕೇಳಿದಾಗ ಆ ಬಗ್ಗೆ ವಿವರಿಸುವುದಾಗಿದೆ.


2 - ವಾಕ್-ಇನ್ ಸೇವಾ ಇಲಾಖೆಗಳು: ನಿಮ್ಮ ವ್ಯಾಪಾರವು ಆನ್‌ಲೈನ್‌ನಲ್ಲಿರುವಾಗ, ನಿಮ್ಮ ಕಂಪನಿಯಲ್ಲಿ ಸೇವಾ ವಿಭಾಗಗಳನ್ನು ಮಾಡುವ ಅಗತ್ಯ ಇರುವುದಿಲ್ಲ. ನಿಮ್ಮ ಗ್ರಾಹಕರನ್ನು ನೋಡಿಕೊಳ್ಳಲು ನೀವು ಮುಖತಃ ಅಥವಾ ವರ್ಚುವಲ್ ಗ್ರಾಹಕ ಸೇವಾ ತಂಡವನ್ನು ಮಾತ್ರ ರಚಿಸಬೇಕಾಗಿದೆ.


ಈ ರೀತಿಯ ವಿಧಾನದಲ್ಲಿ ನೀವು ಹಣ ಮತ್ತು ಸಮಯವನ್ನು ಉಳಿಸಬಹುದಾಗಿದೆ. ಇಂದಿನ ದಿನಗಳಲ್ಲಿ ಗ್ರಾಹಕರಿಗೆ ಸಹಾಯ ಮಾಡಲು ವಾಕ್-ಇನ್ ಸೇವೆಯು ಅತ್ಯಂತ ಅನುಕೂಲಕರವಾಗಿದೆ. ನೀವು ಗ್ರಾಹಕ ಸೇವಾ ಪೂರೈಕೆದಾರರಾಗಲು ಬಯಸಿದರೆ ವಾಕ್-ಇನ್ ಸೇವಾ ವಿಭಾಗಕ್ಕೆ ಸೇರುವುದು ಅತ್ಯುತ್ತಮ ಆಯ್ಕೆಯಾಗಿದೆ.


3 - ಸ್ವ-ಸೇವಾ ವಿಷಯ: ಈ ಗ್ರಾಹಕ ಸೇವೆಯಲ್ಲಿ, ಗ್ರಾಹಕರು ಸ್ವತಃ ಸಹಾಯ ಮಾಡುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಇದರಿಂದ ಸೇವೆಯನ್ನು ಪಡೆಯಲು ಗ್ರಾಹಕರು ನೀಡಬೇಕಾದ ವೆಚ್ಚ ಉಳಿತಾಯವಾಗುತ್ತದೆ. ಇಲ್ಲಿ ವಿಷಯವು ಸರಳವಾಗಿರುವುದರಿಂದ ಗ್ರಾಹಕರಿಗೆ ಯಾವುದೇ ಸಹಾಯದ ಅಗತ್ಯ ಇರುವುದಿಲ್ಲ.


4 - ಲೈವ್ ಚಾಟ್: ಲೈವ್ ಚಾಟ್ ಮೂಲಕ ಗ್ರಾಹಕರ ಸೇವೆಯು 24/7 ಸಕ್ರಿಯವಾಗಿರುತ್ತದೆ. ಗ್ರಾಹಕರಿಗೆ ಯಾವುದೇ ಸಮಸ್ಯೆ ಎದುರಾದಾಗ, ಅವರು ಲೈವ್ ಚಾಟ್ ಸೇವೆಯ ಮೂಲಕ ಕಂಪನಿಯನ್ನು ಸಂಪರ್ಕಿಸಿ ಪರಿಹಾರ ಸೂಚಿಸುತ್ತಾರೆ.


5 - ಸಮುದಾಯಗಳು ಮತ್ತು ವೇದಿಕೆಗಳು: ಈ ವಿಧಾನದ ಗ್ರಾಹಕ ಸೇವೆಯು ಕಂಪನಿಯ ಪ್ರತಿಕ್ರಿಯೆ ಪುಟದ ಮೂಲಕ ಪ್ರಶ್ನೆಗಳನ್ನು ಕೇಳುವುದು, ಸಲಹೆಗಳನ್ನು ಪಡೆಯುವುದು ಮತ್ತು ಅನುಭವಗಳನ್ನು ಪಡೆಯುವುದಾಗಿದೆ. ಈ ವೇದಿಕೆಯ ಮುಖಾಂತರ ಇತರ ಗ್ರಾಹಕರೊಂದಿಗೆ ಸಂಪರ್ಕ ಕೂಡ ಸಾಧಿಸಬಹುದು.


ಇದನ್ನೂ ಓದಿ: Career Tips: ಎಕ್ಸಾಂ ಮಾರ್ಕ್ಸೇ ಎಲ್ಲಾ ಅಲ್ಲ, ಕಡಿಮೆ ಅಂಕ ಗಳಿಸಿದವರಿಗೂ ಇದೆ ಒಳ್ಳೆಯ ಕರಿಯರ್


ಶಿಕ್ಷಣದ ಅವಶ್ಯಕತೆ


ಗ್ರಾಹಕ ಸೇವೆಗಳಿಗೆ ಸೇರಲು ಯಾವುದೇ ನಿರ್ದಿಷ್ಟ ಪದವಿ ಅಥವಾ ಡಿಪ್ಲೊಮಾ ಅಗತ್ಯವಿಲ್ಲ. ಆದರೆ ಇನ್ನೂ, ಹೆಚ್ಚಿನ ಕಂಪನಿಗಳು ಕನಿಷ್ಠ ಹೈಸ್ಕೂಲ್ ಅಥವಾ ಡಿಪ್ಲೊಮಾ ಹೊಂದಿರುವ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತವೆ.


ಆದ್ರೆ ಗ್ರಾಹಕ ಸೇವೆಗಳಲ್ಲಿ ಕೆಲವದಕ್ಕೆ ಮೂಲಭೂತ ಶೈಕ್ಷಣಿಕ ಕೌಶಲ್ಯಗಳು ಬೇಕಾಗಬಹುದು. ಇನ್ನು ಈ ಕೋರ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಕಲಿಸುವ ಸಾಕಷ್ಟು ವೇದಿಕೆಗಗಳಿವೆ. ಅದನ್ನೂ ನೀವು ಬಳಸಿಕೊಳ್ಳಬಹುದು.


ಯಾವ ಕಂಪನಿಗಳು ಗ್ರಾಹಕ ಸೇವೆಗಳ ಉದ್ಯೋಗಗಳನ್ನು ನೀಡುತ್ತವೆ?


ಪ್ರಪಂಚದಾದ್ಯಂತದ ಅನೇಕ ಕಂಪನಿಗಳಿಗೆ ಗ್ರಾಹಕ ಸೇವೆಗಳ ಅಗತ್ಯವಿದೆ. ಗ್ರಾಹಕ ಸೇವೆಗಳ ಉದ್ಯೋಗಗಳನ್ನು ಒದಗಿಸುವ ಕೆಲವು ಪ್ರಸಿದ್ಧ ಕಂಪನಿಗಳು ಅಕಾರ್ನ್ಸ್, ಬೆಸ್ಟ್‌ಬೈ, ವಾಲ್ಮಾರ್ಟ್, ಮೆಕ್ಡೊನಾಲ್ಡ್ಸ್, ಆಪಲ್, ಅಮೆಜಾನ್, ಸ್ಟಾರ್‌ಬಕ್ಸ್, ಟಾಕ್‌ಡೆಸ್ಕ್, ಹೋಮ್ ಡಿಪೋ ಮುಂತಾದವಾಗಿವೆ. ಇದರ ಹೊರತುಪಡಿಸಿಯೂ ಸಾಕಷ್ಟು ಕಂಪನಿಗಳು ನಿಮಗೆ ಈ ಉದ್ಯೋಗಾವಕಾಶ ನೀಡುತ್ತವೆ.


ಗ್ರಾಹಕ ಸೇವೆ ವೃತ್ತಿಯಲ್ಲಿ ಸಾಕಷ್ಟು ಅಂಶಗಳು ಪ್ರಮುಖವಾಗಿರುತ್ತವೆ. ಅವು ನಿಮಗೆ ಲಾಭದಾಯಕವೂ ಆಗಬಹುದು.


1 - ಅನುಭವದ ಅಗತ್ಯವಿಲ್ಲ: ಅನುಭವದ ಕೊರತೆಯಿರುವ ಮತ್ತು ತಮ್ಮ ಮೊದಲ ಕೆಲಸವನ್ನು ಪ್ರಾರಂಭಿಸಲು ಬಯಸುವ ವ್ಯಕ್ತಿಗಳು ಗ್ರಾಹಕ ಸೇವೆ ವೃತ್ತಿ ಆರಂಭಿಸಬಹುದು. ಇದರಲ್ಲಿ ಯಾವುದೇ ಅನುಭವದ ಅಥವಾ ತರಬೇತಿಯ ಅಗತ್ಯ ಇರುವುದಿಲ್ಲ.


2- ಕಡಿಮೆ ಶಿಕ್ಷಣ ಪಡೆದಿದ್ದರೂ ಸಾಕು: ನಿಮ್ಮ ವೃತ್ತಿಯಾಗಿ ಗ್ರಾಹಕ ಸೇವೆಗೆ ಸೇರಲು ಹೆಚ್ಚಿನ ಶಿಕ್ಷಣದ ಅವಶ್ಯಕತೆ ಇಲ್ಲ. ಹೈಸ್ಕೂಲ್ ಅಥವಾ ಡಿಪ್ಲೊಮಾ ಮಾಡಿದ್ದರೂ ಸಾಕು.


3- ಸಂಸ್ಥೆಯ ನೆಟ್‌ವರ್ಕ್‌ನಿಂದ ಕಲಿಯುವ ಅವಕಾಶ: ನೀವು ಗ್ರಾಹಕ ಸೇವಾ ಪೂರೈಕೆದಾರರಾಗಿ ಕಂಪನಿಯನ್ನು ಸೇರಿದಾಗ, ನೀವು ಎಲ್ಲಾ ರೀತಿಯ ಉದ್ಯೋಗಿಗಳನ್ನು ನೋಡುತ್ತೀರಿ. ಸಂಸ್ಥೆಯ ನೆಟ್‌ವರ್ಕ್‌ನಿಂದ ನೀವು ವಿವಿಧ ಕೌಶಲ್ಯಗಳು ಮತ್ತು ವಿಧಾನಗಳನ್ನು ಕಲಿಯಬಹುದಾಗಿದೆ.


4- ಹೆಚ್ಚಿನ ಕೌಶಲ್ಯಗಳಲ್ಲಿ ಪರಿಣಿತಿ ಹೊಂದಬಹುದು: ಗ್ರಾಹಕ ಸೇವೆಗಳಲ್ಲಿ, ನೀವು ಅನೇಕ ವೃತ್ತಿಗಳಲ್ಲಿ ಹಲವಾರು ಮೌಲ್ಯಯುತ ಕೌಶಲ್ಯಗಳನ್ನು ಕಲಿಯುತ್ತೀರಿ. ಆದ್ದರಿಂದ, ನೀವು ಇನ್ನೊಂದು ವೃತ್ತಿಗೆ ಹೋಗುವವರಾಗಿದ್ದರೆ ಅಥವಾ ಅದೇ ಗ್ರಾಹಕ ಸೇವಾ ವೃತ್ತಿಯಲ್ಲಿ ಮುಂದುವರಿದರೂ ಅಂಥ ಕೌಶಲ್ಯಗಳು ನಿಮಗೆ ನೆರವಾಗುತ್ತವೆ.


5 -ಸಮಸ್ಯೆಗಳನ್ನು ಪರಿಹರಿಸುವುದು: ಸಮಸ್ಯೆಗಳನ್ನು ಪರಿಹರಿಸುವುದು ಸಾಮಾನ್ಯ ಮತ್ತು ಬೇಡಿಕೆಯಲ್ಲಿರುವ ಕೌಶಲ್ಯಗಳಲ್ಲಿ ಒಂದಾಗಿದೆ. ಗ್ರಾಹಕ ಸೇವಾ ವೃತ್ತಿಜೀವನದಲ್ಲಿ, ನೀವು ಸಮಸ್ಯೆಯನ್ನು ಪರಿಹರಿಸುವುದನ್ನು ಕಲಿಯುವಿರಿ.


6 - ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ: ವಿಭಿನ್ನ ಜನರೊಂದಿಗೆ ವ್ಯವಹರಿಸುವುದರಿಂದ ಮಾತ್ರ ಭಾವನಾತ್ಮಕ ಬುದ್ಧಿವಂತಿಕೆ ಹೆಚ್ಚಾಗುತ್ತದೆ. ಗ್ರಾಹಕ ಸೇವೆಯಲ್ಲಿ ಮುಖ್ಯವಾಗಿರುವುದೆಂದರೆ ಮಾತನಾಡುವುದು.


ನೀವು ಗ್ರಾಹಕರೊಂದಿಗೆ ಹೆಚ್ಚು ಮಾತನಾಡುವುದರಿಂದ ನಿಮ್ಮ ಮುಂದಿರುವ ವ್ಯಕ್ತಿಯ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ವ್ಯವಹರಿಸುವುದನ್ನು ಕಲಿಯುತ್ತೀರಿ.


7- ಪ್ರಗತಿಯ ಅವಕಾಶಗಳು: ಗ್ರಾಹಕ ಸೇವೆಗಳಲ್ಲಿ ತಮ್ಮ ಅನುಭವವನ್ನು ಹೆಚ್ಚಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ಇಲ್ಲಿ ಬಹಳಷ್ಟು ಪ್ರಯೋಜನ ಪಡೆಯಬಹುದು. ವೃತ್ತಿಜೀವನವನ್ನು ಮುನ್ನಡೆಸುವಲ್ಲಿ, ಗ್ರಾಹಕ ಸೇವೆಗಳು ಸಹಾಯಕವಾಗಿವೆ. ನೀವು ಸಂಬಂಧಿತ ಅನುಭವ, ಕೌಶಲ್ಯ ಮತ್ತು ಗ್ರಾಹಕ ಸೇವೆಗಳ ಅನುಭವದಿಂದ ಮೇಲಿನ ಸ್ಥಾನಗಳಿಗೇರಬಹುದು.


ಇನ್ನು ಗ್ರಾಹಕ ಸೇವೆಗಳು ಹಲವು ಋಣಾತ್ಮಕ ಅಂಶಗಳನ್ನೂ ಹೊಂದಿವೆ. ಅವುಗಳು ಯಾವವು ಅನ್ನೋದು ನೋಡೋದಾದ್ರೆ,


1-ಕಡಿಮೆ ಸಂಬಳ: ಇತರ ವೃತ್ತಿಗಳಿಗೆ ಹೋಲಿಸಿದರೆ ಗ್ರಾಹಕ ಸೇವಾ ಕ್ಷೇತ್ರದಲ್ಲಿ ವೇತನ ಕಡಿಮೆ ಎಂದೇ ಹೇಳಬಹುದು. ಹೆಚ್ಚಿನ ಜನರು ತಮ್ಮ ಪ್ರಾರಂಭಿಕ ವೃತ್ತಿಯಾಗಿ ಇದಕ್ಕೆ ಸೇರಿಕೊಂಡರೆ ಅಂಥವರ ವೇತನ ಇನ್ನೂ ಕಡಿಮೆಯಾಗಿರುತ್ತದೆ.


2- ಒತ್ತಡ ಮತ್ತು ಆತಂಕ: ಗ್ರಾಹಕರೊಂದಿಗೆ ನಿರಂತರವಾಗಿ ವ್ಯವಹರಿಸುವುದು, ಅವರ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಏಕಕಾಲದಲ್ಲಿ ಇಂಥ ಪರಿಸ್ಥಿತಿಯನ್ನು ನಿಭಾಯಿಸುವುದು ನಿಮಗೆ ಒತ್ತಡವನ್ನು ಉಂಟುಮಾಡಬಹುದು.


3 -ಬೇರೆ ಬೇರೆ ಶಿಫ್ಟ್‌ ಗಳಲ್ಲಿ ಕೆಲಸ ಮಾಡಬೇಕಾಗಬಹುದು: ಸಾಮಾನ್ಯವಾಗಿ ಗ್ರಾಹಕ ಸೇವೆಯಲ್ಲಿ 9 ರಿಂದ 5 ರಂತಹ ನಿರ್ದಿಷ್ಟ ಶಿಫ್ಟ್‌ ಗಳು ಇರೋದಿಲ್ಲ. ಗ್ರಾಹಕ ಸೇವೆಯಲ್ಲಿ, ಸಮಯದ ಬದಲಾವಣೆಯು ಆಗಾಗ್ಗೆ ಆಗುತ್ತಿರುತ್ತದೆ.


4- ಆಗಾಗ್ಗೆ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ: ಈ ವೃತ್ತಿಯಲ್ಲಿ ಒಂದಲ್ಲ ಹಲವು ಬಾರಿ ಹೊಸ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಕಾರ್ಯವಿಧಾನಗಳು, ನೀತಿಗಳು, ವಿಭಾಗಗಳು, ಉತ್ಪನ್ನಗಳು, ಬೇಡಿಕೆಗಳು ಮತ್ತು ಸೇವೆಗಳಂತಹ ವಿಭಾಗದಲ್ಲಿ ಬದಲಾವಣೆ ಆಗುತ್ತಿರುತ್ತವೆ. ಆದ್ದರಿಂದ ಗ್ರಾಹಕ ಸೇವಾ ಉದ್ಯೋಗಗಳು ಕೆಲವು ವ್ಯಕ್ತಿಗಳಿಗೆ ಇಷ್ಟವಾಗುವುದಿಲ್ಲ.


5 -ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ವಾತಂತ್ರ್ಯದ ಕೊರತೆ: ಗ್ರಾಹಕ ಸೇವಾ ಉದ್ಯೋಗಗಳಲ್ಲಿ ನೀವು ಎದುರಿಸಬಹುದಾದ ಬಹುಮುಖ್ಯ ಸಮಸ್ಯೆ ಎಂದರೆ ಸ್ವಾತಂತ್ರ್ಯದ ಕೊರತೆ. ಇಲ್ಲಿ ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ಸ್ವಾತಂತ್ರ್ಯವನ್ನು ಹೊಂದಿಲ್ಲ. ಸಂಸ್ಥೆಯ ಆದೇಶಗಳ ಪ್ರಕಾರ ಮಾತ್ರ ನೀವು ಕೆಲಸ ಮಾಡಬೇಕಾಗುತ್ತದೆ.


ಒಟ್ಟಾರೆ, ಗ್ರಾಹಕ ಸೇವಾ ವಲಯದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಜೊತೆಗೆ ಈ ಕ್ಷೇತ್ರದಲ್ಲಿ ದೊಡ್ಡ ಸ್ಪರ್ಧೆಯೂ ಇರುತ್ತದೆ. ಆದ್ರೆ ನೀವು ಇದರಿಂದ ಸಾಕಷ್ಟು ಕೌಶಲ್ಯಗಳನ್ನು ಹಾಗೂ ಅನುಭವಗಳನ್ನು ಪಡೆಯುವುದು ಮಾತ್ರ ಖಂಡಿತ. ಆದ್ದರಿಂದ ಗ್ರಾಹಕ ವೃತ್ತಿ ನಿಮಗೆ ಉತ್ತಮ ಎನ್ನಿಸಿದರೆ ಖಂಡಿತಾ ನೀವು ಮುಂದುವರಿಯುವ ನಿರ್ಧಾರ ಮಾಡಬಹುದು.

Published by:Latha CG
First published: