• Home
  • »
  • News
  • »
  • career
  • »
  • Internship Tips: ಓದಿನ ಜೊತೆ ಇಂಟರ್ನ್​​ಶಿಪ್​​ ಮಾಡೋದು ಕಷ್ಟನಾ? ಸಿಂಪಲ್ ಟ್ರಿಕ್ಸ್ ಇಲ್ಲಿದೆ

Internship Tips: ಓದಿನ ಜೊತೆ ಇಂಟರ್ನ್​​ಶಿಪ್​​ ಮಾಡೋದು ಕಷ್ಟನಾ? ಸಿಂಪಲ್ ಟ್ರಿಕ್ಸ್ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಅಧ್ಯಯನದ ಜೊತೆಗೆ ಇಂಟರ್ನ್​​ಶಿಪ್ ಅನ್ನು ಸರಾಗವಾಗಿ ಮುಂದುವರಿಸಲು ನೀವು ಹೆಣಗಾಡುತ್ತಿದ್ದರೆ, ನಿಮ್ಮ ಜೀವನದಲ್ಲಿ ಎಲ್ಲವನ್ನೂ ಸಮತೋಲನಗೊಳಿಸಲು ಕೆಲವು ಸಲಹೆಗಳು ಇಲ್ಲಿವೆ. 

  • Share this:

    ಅನೇಕ ಯುವಜನರು (College Students) ಪ್ರತಿದಿನವೂ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದು ಎಂದರೆ ತಾವು ಮಾಡುತ್ತಿರುವ ಕೆಲಸ ಮತ್ತು ತಮ್ಮ ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು (Work and Personal Life Balance) ಸಾಧಿಸಲು ಹೆಣಗಾಡುತ್ತಿರುವುದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈ ಸಮತೋಲನವನ್ನು ಕಾಪಾಡಿಕೊಂಡು ಹೋಗುವುದು ತುಂಬಾನೇ ಮುಖ್ಯವಾಗಿದೆ. ಅದೇ ರೀತಿಯಲ್ಲಿ ಈ ವಿದ್ಯಾರ್ಥಿಗಳಿಗೆ ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿರುವಾಗ ಇಂಟರ್ನ್​​ಶಿಪ್​ ( Internships) ಅನ್ನು ಜೊತೆಯಲ್ಲಿಯೇ ಹೇಗೆ ಒಂದು ಸಮತೋಲನದಿಂದ ಮಾಡಿಕೊಂಡು ಹೋಗುವುದು ಅಂತ ಗೊತ್ತಾಗದೆ ತುಂಬಾನೇ ಒದ್ದಾಡಿ ಬಿಡುತ್ತಾರೆ ಅಂತ ಹೇಳಬಹುದು.


    ನಿಮ್ಮ ಅಧ್ಯಯನದ ಜೊತೆಗೆ ಇಂಟರ್ನ್​​ಶಿಪ್ ಅನ್ನು ಸರಾಗವಾಗಿ ಮುಂದುವರಿಸಲು ನೀವು ಹೆಣಗಾಡುತ್ತಿದ್ದರೆ, ನಿಮ್ಮ ಜೀವನದಲ್ಲಿ ಎಲ್ಲವನ್ನೂ ಸಮತೋಲನಗೊಳಿಸಲು ಕೆಲವು ಸಲಹೆಗಳು ಇಲ್ಲಿವೆ.


    1. ನಿಮ್ಮ ಆದ್ಯತೆಗಳ ಬಗ್ಗೆ ಸ್ಪಷ್ಟತೆ ಇರಲಿ: ನಿಮ್ಮ ಆದ್ಯತೆಗಳನ್ನು ತಿಳಿದುಕೊಳ್ಳುವುದು ನಿಮ್ಮ ಇಂಟರ್ನ್ಶಿಪ್ ನಲ್ಲಿ ಯಶಸ್ವಿಯಾಗಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ದಿನದ ಇಡೀ ಶೆಡ್ಯೂಲ್ ತುಂಬಾ ಕಾರ್ಯನಿರತವಾಗಿದ್ದರೆ, ನೀವು ನಿಮ್ಮ ಆದ್ಯತೆಗಳ ಬಗ್ಗೆ ಸ್ಪಷ್ಟತೆಯನ್ನು ಪಡೆದುಕೊಳ್ಳಬೇಕು. ನಿಮ್ಮ ಮುಂದಿರುವ ಆದ್ಯತೆಗಳನ್ನು ನಿರ್ಧರಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.


    Indian students most likely abroad to stay back in developed countries stg-asp
    ಸಾಂಕೇತಿಕ ಚಿತ್ರ


    ನೀವು ನಿಮ್ಮ ಆದ್ಯತೆಗಳನ್ನು ನಿಗದಿಪಡಿಸಿದಾಗ, ನಿಮ್ಮ ಇಂಟರ್ನ್ಶಿಪ್ ಗೆ ಎಷ್ಟು ಸಮಯ ನೀಡಬೇಕು ಮತ್ತು ಓದಿಗೆ ಎಷ್ಟು ಸಮಯ ನೀಡಬೇಕು ಎನ್ನುವುದನ್ನು ನಿಗದಿಪಡಿಸಿಕೊಳ್ಳಿರಿ. ನಿಮ್ಮ ಪದವಿಯು ಇಂಟರ್ನ್ಶಿಪ್ ನಿಂದ ತೊಂದರೆಗೆ ಒಳಗಾಗುತ್ತಿದ್ದರೆ, ಇಂಟರ್ನಿಂಗ್ ನಿಂದ ವಿರಾಮ ತೆಗೆದುಕೊಳ್ಳಲು ಹೆದರಬೇಡಿ. ಈ ಬಗ್ಗೆ ನಿಮ್ಮ ಮ್ಯಾನೇಜ್ಮೆಂಟ್ ಗೆ ತಿಳಿಸಿ ಮತ್ತು ನೀವು ಕಡಿಮೆ ದಿನಗಳು ಅಥವಾ ಗಂಟೆಗಳ ಕಾಲ ಕೆಲಸ ಮಾಡುವಂತೆ ಅಥವಾ ವಿರಾಮವನ್ನು ತೆಗೆದುಕೊಳ್ಳಲು ಕೇಳಿಕೊಳ್ಳಿ. ಓದು ಮುಗಿದ ನಂತರ ಇಂಟರ್ನ್ಶಿಪ್ ಅನ್ನು ಮತ್ತೆ ಪುನರಾರಂಭಿಸಿ.


    ಇದನ್ನೂ ಓದಿ: Study Guide: ನಿಮ್ಮ ಪರೀಕ್ಷೆಗೂ ಮುನ್ನ ಈ ರೀತಿ ತಯಾರಿ ನಡೆಸಿ, ಉತ್ತಮ ಅಂಕ ಬರುತ್ತೆ


    2. ಮುಂದಿನದನ್ನು ಪ್ಲ್ಯಾನ್ ಮಾಡಿ


    ಆತುರಾತುರವಾಗಿ ನೀವು ಇಂಟರ್ನ್ಶಿಪ್ ಅನ್ನು ಮಾಡಬೇಡಿ. ನೀವು ನಿಮ್ಮ ಓದಿಗೂ ಮತ್ತು ಇಂಟರ್ನ್ಶಿಪ್ ಎರಡಕ್ಕೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ ಮತ್ತು ಗಮನವನ್ನು ನೀಡಬೇಕು. ನಿಮ್ಮ ಮೇಲೆ ಒತ್ತಡ ಬರದಂತೆ ಮೊದಲೇ ಎರಡನ್ನೂ ಚೆನ್ನಾಗಿ ಪ್ಲ್ಯಾನ್ ಮಾಡಿಕೊಳ್ಳಿರಿ. ತರಗತಿಗಳ ವೇಳಾಪಟ್ಟಿ ಮತ್ತು ಗಡುವಿನ ಬಗ್ಗೆ ಗಮನ ಹರಿಸುವ ಮೂಲಕ ಇಂಟರ್ನ್ಶಿಪ್ ಅನ್ನು ಪ್ಲ್ಯಾನ್ ಮಾಡಿಕೊಳ್ಳಿ.


    ಪ್ರಾತಿನಿಧಿಕ ಚಿತ್ರ


    ನಿಮ್ಮ ಓದಿನಲ್ಲಿ ಡೆಡ್ಲೈನ್ ಗಳನ್ನು ಗುರುತಿಸುತ್ತಿದ್ದಂತೆ, ನಿಮ್ಮ ಕಾರ್ಯಗಳನ್ನು ಪ್ರಾಮುಖ್ಯತೆಯಿಂದ ಸಂಘಟಿಸಿಕೊಳ್ಳಿರಿ. ನಿಮ್ಮ ಓದಿಗೆ ಮತ್ತು ಇಂಟರ್ನ್ಶಿಪ್ ಗೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನೀವು ಮೊದಲೇ ನಿರ್ಧರಿಸಿಕೊಳ್ಳಿರಿ. ನಿಮ್ಮ ಅಧ್ಯಯನದ ವೇಳಾಪಟ್ಟಿಯ ಬಗ್ಗೆ ನಿಮಗೆ ಸ್ಪಷ್ಟವಾದ ತಿಳುವಳಿಕೆ ದೊರೆತ ನಂತರ, ನೀವು ಕೆಲಸದಲ್ಲಿ ನಿಮ್ಮ ಸಮಯವನ್ನು ವ್ಯವಸ್ಥಿತಗೊಳಿಸಬಹುದು ಮತ್ತು ಮನೆಯಲ್ಲಿ ಅಧ್ಯಯನ ಮಾಡಲು ಇನ್ನೂ ಸಾಕಷ್ಟು ಸಮಯವನ್ನು ಹೊಂದಬಹುದು.


    3. ನಿಮ್ಮ ಉದ್ಯೋಗದಾತರೊಂದಿಗೆ ಮಾತಾಡಿ


    ನಿಮ್ಮ ಇಂಟರ್ನ್ಶಿಪ್ ಮತ್ತು ಅಧ್ಯಯನ ವೇಳಾಪಟ್ಟಿಯ ನಡುವಿನ ಘರ್ಷಣೆಯಿಂದಾಗಿ ನಿಮ್ಮ ಕಾಲೇಜಿನ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನೀವು ಹೆಣಗಾಡಬಹುದು. ನಿಮ್ಮ ಮ್ಯಾನೇಜರ್ ನೊಂದಿಗೆ ಮುಂಚಿತವಾಗಿಯೇ ಇದೆಲ್ಲದರ ಬಗ್ಗೆ ಮಾತಾಡಿಕೊಳ್ಳಿರಿ. ನಿಮ್ಮ ಚಿಂತೆಗಳು ಮತ್ತು ನಿಮ್ಮ ಲಭ್ಯತೆ ಅಥವಾ ಕೊರತೆಯನ್ನು ಅವರೊಟ್ಟಿಗೆ ಮಾತಾಡಿ ಬಗೆಹರಿಸಿಕೊಳ್ಳಿ. ನಿರ್ದಿಷ್ಟಪಡಿಸಿದ ಗಡುವಿನೊಳಗೆ ನೀವು ಪೂರ್ಣಗೊಳಿಸಬಹುದಾದ ಕೆಲಸಗಳನ್ನು ಮಾತ್ರ ಸ್ವೀಕರಿಸುವ ಮೂಲಕ ನಿಮ್ಮ ಮಿತಿಗಳನ್ನು ಗುರುತಿಸಿಕೊಳ್ಳಿರಿ.




    ನೀವು ನಿಮ್ಮ ಮ್ಯಾನೇಜರ್ ಅವರಿಗೆ ಎಲ್ಲವನ್ನೂ ಹೇಳಿದರೆ, ನೀವು ಕೆಲಸದಲ್ಲಿನ ಕಠಿಣ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ನಿಮ್ಮ ಅಧ್ಯಯನಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.


    4. ನಿರ್ದಿಷ್ಟವಾದ ದಿನಚರಿಯನ್ನು ಹೊಂದಿರಿ


    ಇಂಟರ್ನ್ಶಿಪ್ ಮತ್ತು ಕಾಲೇಜಿನ ಕೆಲಸಗಳ ಬಗ್ಗೆ ನಿಯಮಿತ ವೇಳಾಪಟ್ಟಿಯನ್ನು ಅಭಿವೃದ್ಧಿಪಡಿಸುವುದು ದಿನದ ಮಾನಸಿಕ ಸಿದ್ಧತೆಗೆ ಸಹಾಯ ಮಾಡುವುದು ಮಾತ್ರವಲ್ಲದೆ, ನೀವು ಸಾಕಷ್ಟು ವಿಭಿನ್ನ ಕಾರ್ಯಗಳನ್ನು ಸಮತೋಲನಗೊಳಿಸುತ್ತಿರುವ ಸಮಯದಲ್ಲಿ ನಿಮ್ಮ ಜೀವನಕ್ಕೆ ಸ್ವಲ್ಪ ಸ್ಥಿರತೆಯನ್ನು ನೀಡುತ್ತದೆ. ನೀವು ಮೊದಲು ಏನು ಮಾಡಬೇಕು? ಅಧ್ಯಯನ ಮಾಡಬೇಕೆ ಅಥವಾ ಇಂಟರ್ನ್ಶಿಪ್ ಮಾಡಬೇಕೆ ಎನ್ನುವುದನ್ನು ಮೊದಲು ನಿರ್ಧರಿಸಿಕೊಳ್ಳಿರಿ. ನಿಮ್ಮ ತರಗತಿಗಳ ವೇಳಾಪಟ್ಟಿಯ ಮೇಲೆ ನಿಕಟ ನಿಗಾ ಇರಿಸಿ ಮತ್ತು ತರಗತಿಗಳು, ಮನೆಕೆಲಸ, ಇಂಟರ್ನ್ಶಿಪ್ ಮತ್ತು ವೈಯಕ್ತಿಕ ವಿಶ್ರಾಂತಿಗಾಗಿ ಸಮಯವನ್ನು ಒಳಗೊಂಡಿರುವ ವೇಳಾಪಟ್ಟಿಯನ್ನು ರಚಿಸಿಕೊಳ್ಳಿರಿ.


    Dalit students enrolling more in Oxford Harvard What are the reasons for the changes stg asp
    ಸಾಂಕೇತಿಕ ಚಿತ್ರ


    5. ನಿಮ್ಮ ಸಮಯವನ್ನು ಸಮತೋಲನಗೊಳಿಸಿ


    ನೀವು ಅಧ್ಯಯನ ಮತ್ತು ಇಂಟರ್ನ್ಶಿಪ್ ಗಳನ್ನು ಎರಡನ್ನೂ ಸಮತೋಲನಗೊಳಿಸಲು ಬಯಸಿದರೆ, ನೀವು ಅಧ್ಯಯನದಲ್ಲಿ ಕಳೆಯುವ ಸಮಯವು ಉತ್ತಮವಾಗಿ ಕಳೆಯುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಏಕಾಗ್ರತೆಯಿಂದಿರಲು ಮತ್ತು ಮುಂದೂಡುವಿಕೆಯನ್ನು ತಪ್ಪಿಸಲು, ನಡುವೆ ಸಂಕ್ಷಿಪ್ತ ವಿರಾಮಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಅಧ್ಯಯನ ಸೆಷನ್ ಗಳನ್ನು ವಿಭಜಿಸಿ. ಇದು ನಿಮ್ಮ ಮನಸ್ಸು ಮತ್ತು ಕಣ್ಣುಗಳಿಗೆ ಹೆಚ್ಚು ಅಗತ್ಯವಾದ ವಿಶ್ರಾಂತಿಯನ್ನು ನೀಡುತ್ತದೆ, ನೀವು ಹೆಚ್ಚು ಪರಿಣಾಮಕಾರಿಯಾಗಿ ಅಧ್ಯಯನ ಮಾಡಬಹುದು ಎಂದು ಖಚಿತಪಡಿಸುತ್ತದೆ.


    ಅಂತಿಮವಾಗಿ, ಇದರರ್ಥ ನೀವು ಕೆಲಸ ಮತ್ತು ಅಧ್ಯಯನಗಳನ್ನು ಉತ್ತಮವಾಗಿ ಸಮತೋಲನಗೊಳಿಸಲು ಸಾಧ್ಯವಾಗುತ್ತದೆ. ಅಲ್ಲದೆ, ವಿಶ್ರಾಂತಿ ಮತ್ತು ನಿದ್ರೆಗಾಗಿ ಸರಿಯಾದ ಸಮಯವನ್ನು ನಿಗದಿಪಡಿಸಲು ಮರೆಯದಿರಿ.

    Published by:Kavya V
    First published: