Job Interview: ಜಾಬ್ ಇಂಟರ್​​ವ್ಯೂ​​ಗೆ ಹೋಗುವಾಗ ನೀವು ತೊಡುವ ಬಟ್ಟೆ ಹೀಗಿರಲಿ: ಇದರಲ್ಲಿ ಯಡವಟ್ಟು ಮಾಡ್ಕೋಬೇಡಿ

ಉದ್ಯೋಗವೊಂದರ ಸಂದರ್ಶನಕ್ಕೆ ಹೋದಾಗ ಕೇಳುವ ಪ್ರಶ್ನೆಗಳಿಗೆ ಹುಷಾರಾಗಿ ಉತ್ತರಿಸಬೇಕು. ಅದರ ಜೊತೆ ನೀವು ಧರಿಸುವ ಬಟ್ಟೆಯು ನಿಮ್ಮ ಸಂದರ್ಶನ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದಕ್ಕೆ ಯಾವ ರೀತಿಯ ಡ್ರೆಸ್‌ ಧರಿಸಬೇಕೆಂದು ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಲಿದ್ದೇವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಹಳೆ ಕಾಲದಲ್ಲಿ ಕೆಲಸಕ್ಕೆ (Job) ಸೇರಬೇಕೆಂದರೆ ಪರೀಕ್ಷೆ ಬರೆಯಬೇಕಿತ್ತು, ಅಂಕ ಬಂದು, ಅರ್ಹರಾದರೆ (Eligible) ಕೆಲಸ ಸಿಗುತ್ತಿತ್ತು. ಇದೀಗ ಪರೀಕ್ಷೆಯೂ (Exam) ಬರೆಯಬೇಕು. ಬುದ್ಧಿಮತ್ತೆಯೊಂದಿಗೆ ನಿಮ್ಮ ಆ್ಯಪ್ಟಿಟ್ಯೂಡ್ ಟೆಸ್ಟಲ್ಲೂ ಪಾಸ್ ಆಗಬೇಕು. ಜೊತೆಗೆ ವ್ಯಕ್ತಿತ್ವವನ್ನು ಸಂದರ್ಶನದಲ್ಲಿ (Interview) ಪರೀಕ್ಷಿಸಲಾಗುತ್ತದೆ. ನಿಮ್ಮ ಆತ್ಮ ವಿಶ್ವಾಸದ ಮಟ್ಟ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಹಾಗಾಗಿ ಉದ್ಯೋಗವೊಂದರ ಸಂದರ್ಶನಕ್ಕೆ ಹೋದಾಗ ಕೇಳುವ ಪ್ರಶ್ನೆಗಳಿಗೆ ಹುಷಾರಾಗಿ ಉತ್ತರಿಸಬೇಕು (Answer). ಅದರ ಜೊತೆ ನೀವು ಧರಿಸುವ ಬಟ್ಟೆಯು ನಿಮ್ಮ ಸಂದರ್ಶನ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದಕ್ಕೆ ಯಾವ ರೀತಿಯ ಡ್ರೆಸ್‌ ಧರಿಸಬೇಕೆಂದು (Dress Code) ಕೆಲವು ಟಿಪ್ಸ್‌ಗಳನ್ನು ಇಲ್ಲಿ ನೀಡಲಿದ್ದೇವೆ.

ಉದ್ಯೋಗ ಸಂದರ್ಶನದಲ್ಲಿ ಉದ್ಯೋಗದಾತರು ಮೊದಲು ನೀವು ಹೇಗೆ ಬಟ್ಟೆ ಧರಿಸಿದ್ದಿರಿ ಎಂದು ಗಮನಿಸುತ್ತಾರೆ. ಸಂದರ್ಶನಕ್ಕೆ ಹೋಗುವ ಮೊದಲು ನಿಮ್ಮ ಉಡುಪಿನ ಕಡೆ ಗಮನವಹಿಸುವುದು ತುಂಬಾ ಮುಖ್ಯ. ಉದ್ಯೋಗ ಸಂದರ್ಶನಗಳಿಗೆ ಡ್ರೆಸ್ಸಿಂಗ್ ಹಿಂದೆಂದಿಗಿಂತಲೂ ಹೆಚ್ಚು ಪ್ರಮುಖವಾಗಿದೆ.

ಸಂದರ್ಶನಕ್ಕೆ ಹೊರಟಿರುವಿರಾ? ಈ ಡ್ರೆಸ್‌ ಕೋಡ್‌ ಫಾಲೋ ಮಾಡಿ
ಕಾಲ ಬದಲಾದಂತೆ ಸಂದರ್ಶನಕ್ಕೆ ಧರಿಸುವ ಡ್ರೆಸ್ ಕೋಡ್‌ಗಳು ಕೂಡ ಬದಲಾಗುತ್ತಲೇ ಇರುತ್ತವೆ. ಉದಾಹರಣೆಗೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಟೆಕ್ ಸ್ಟಾರ್ಟ್-ಅಪ್ ಕಂಪನಿಗಳಲ್ಲಿ ಇರುವ ಉದ್ಯೋಗಸ್ಥರು ಧರಿಸುವ ಡ್ರೆಸ್‌ ನೋಡಿದರೆ ಎಲ್ಲರಿಗೂ ಕೋಪ ಬರುತ್ತದೆ. ಆದರೆ ಮ್ಯಾಡಿಸನ್ ಅವೆನ್ಯೂನಲ್ಲಿರುವ ಫಾರ್ಚೂನ್ 50 ಕಂಪನಿಗಳು ತಮ್ಮದೇ ಆದ ಡ್ರೆಸ್‌ ಕೋಡ್‌ ಅನ್ನು ಹೊಂದಿವೆ. ನೀವು ಈ ರೀತಿಯ ಕಾರ್ಪೋರೆಟ್‌ ಸಂಸ್ಥೆಗಳಲ್ಲಿ ಸಂದರ್ಶನಕ್ಕೆ ಹೋಗುವುದಾದರೆ, ಅಲ್ಲಿನ ಡ್ರೆಸ್‌ ಕೋಡ್‌ ಸಂಸ್ಕೃತಿಯನ್ನು ತಿಳಿದುಕೊಂಡು, ತದನಂತರ ಸಂದರ್ಶನಕ್ಕೆ ಹೋಗುವುದು ಒಳ್ಳೆಯದು.

ಯಾವುದೇ ಕಂಪನಿ ಇದ್ದರೂ ಅಲ್ಲಿ ಯಾವ ರೀತಿಯ ಡ್ರೆಸ್‌ ಧರಿಸುತ್ತಾರೆ ಎಂಬುದನ್ನು ಗಮನಿಸಿ. ನೀವು ಸಂದರ್ಶನಕ್ಕೆ ಹೊರಡುವ ಸಂದರ್ಭದಲ್ಲಿ ಅದೇ ರೀತಿಯ ಡ್ರೆಸ್‌ ಕೋಡ್‌ ಫಾಲೋ ಮಾಡಿ. ನೀವು ಸೂಟ್‌, ಟೈ ಇರುವ ಡ್ರೆಸ್‌ ಧರಿಸುವುದು ಒಳ್ಳೆಯದು. ಸಾಮಾನ್ಯವಾಗಿ ಧರಿಸುವ ಜೀನ್ಸ್‌ ಮತ್ತು ಟೀ- ಶರ್ಟ್‌ ಅನ್ನು ಧರಿಸಿ ಎಂದಿಗೂ ಸಂದರ್ಶನಕ್ಕೆ ಹೋಗಬೇಡಿ. ಇದು ಉದ್ಯೋಗದಾತರು ನಿಮ್ಮನ್ನು ನೋಡುವ ದೃಷ್ಟಿ ಬದಲಾಗುತ್ತದೆ.

ಕಾರ್ಪೊರೇಟ್ ಸಂಸ್ಥೆಯ ಸಂದರ್ಶನಕ್ಕೆ ಏನನ್ನು ಧರಿಸಬೇಕು?
ನೀವು ಹಣಕಾಸು, ಬ್ಯಾಂಕಿಂಗ್ ಅಥವಾ ವಿಮೆಯಂತಹ ಸಾಂಪ್ರದಾಯಿಕ ಉದ್ಯಮದ ಕಂಪನಿಗಳಿಗೆ ಉದ್ಯೋಗ ಸಂದರ್ಶನಕ್ಕೆ ಹೋಗುತ್ತಿದ್ದರೆ, ನೀವು ಹೆಚ್ಚು ಔಪಚಾರಿಕ ಕಾರ್ಪೊರೇಟ್ ಉಡುಪುಗಳನ್ನು ಧರಿಸಬೇಕಾಗುತ್ತದೆ. ಅದಕ್ಕೆ ಅಂತಹ ಕಾರ್ಪೋರೆಟ್‌ ಬಟ್ಟೆಗಳನ್ನು ಆಯ್ಕೆ ಮಾಡಿ. ಇದರಲ್ಲಿ ಪುರುಷರಿಗೆ ಸೂಟ್ ಮತ್ತು ಟೈ, ಮಹಿಳೆಯರಿಗೆ ಪ್ಯಾಂಟ್ ಶೂಟ್‌ ಅಥವಾ ಸ್ಕರ್ಟ್ ಮತ್ತು ಬ್ಲೌಸ್‌ ಅನ್ನು ನೀಟಾಗಿ ಧರಿಸಿ ಹೋಗಬೇಕಾಗುತ್ತದೆ. ಈ ಬಟ್ಟೆಗಳು ಗಾಢ ಬಣ್ಣದಲ್ಲಿ ಇರದೇ, ತಿಳಿ ಬಣ್ಣದವು ಆದರೆ ಇನ್ನೂ ಉತ್ತಮ.

ಇದನ್ನೂ ಓದಿ:  NDRI Recruitment: ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿದೆ ಕೆಲಸ; ಪಿಯುಸಿ ಆಗಿದ್ರೆ ಸಾಕು

ಪುರುಷರೇ, ನಿಮ್ಮ ಸಂದರ್ಶನದ ಉಡುಪು ಹೀಗಿರಲಿ:
ಕಾರ್ಪೊರೇಟ್ ಜಗತ್ತಿನಲ್ಲಿ ಪುರುಷರಿಗಾಗಿ ಉತ್ತಮ ಸಂದರ್ಶನದ ಬಟ್ಟೆಗಳು ಹೇರಳವಾಗಿ ಸಿಗುತ್ತವೆ. ಪುರುಷರು ಯಾವಾಗಲೂ ಸೂಟ್ ಧರಿಸಲು ಸಿದ್ಧವಾಗಿರಬೇಕು. ನಿಮಗೆ ಆ ಬಟ್ಟೆಗಳು ಒಪ್ಪುತ್ತವೆಯೋ ಇಲ್ಲವೋ ಎಂಬುದನ್ನು ಮೊದಲೇ ಧರಿಸಿ ಚೆಕ್‌ ಮಾಡಿಕೊಳ್ಳಿ. ಇದರಿಂದ ಕೊನೆ ಸಮಯದಲ್ಲಿ ಆಗುವ ಅನಾಹುತ ತಪ್ಪುತ್ತದೆ. ನೀವು ಧರಿಸುವ ಬಟ್ಟೆಗಳು ಕಲೆಗಳಿಂದ ಮುಕ್ತವಾಗಿರಬೇಕು.

ಕಾರ್ಪೊರೇಟ್ ಸಂಸ್ಥೆಗಳಲ್ಲಿ ಸಂದರ್ಶನಕ್ಕೆ ಹೊರಡುವ ಪುರುಷರಿಗಾಗಿ ಇಲ್ಲಿವೆ ಕೆಲವು ಮಾರ್ಗಸೂಚಿಗಳು :

 • ನೌಕಾಪಡೆಯವರು ಧರಿಸುವಂತ ಗಾಢ ಬಣ್ಣಗಳಾದ, ಕಪ್ಪು, ಗಾಢ ಬೂದು ಬಣ್ಣದಂತಹ ಸೂಟ್‌ ಹೆಚ್ಚು ಸೂಕ್ತವಾಗಿವೆ.

 • ಉದ್ದನೆಯ ತೋಳಿನ ಬಿಳಿ ಶರ್ಟ್ ಕಪ್ಪು ಅಥವಾ ಗಾಢ ಬಣ್ಣದ ಸೂಟ್‌ನೊಂದಿಗೆ ಹೆಚ್ಚು ಒಪ್ಪುತ್ತದೆ.

 • ಮೇಲಿನ ಡ್ರೆಸ್‌ಗಳಿಗೆ ಚರ್ಮದ ಬೆಲ್ಟ್ ಸೂಕ್ತ.

 • ಸಾಕ್ಸ್ ಮತ್ತು ಫಾರ್ಮಲ್‌ ಚರ್ಮದ ಬೂಟುಗಳು ನಿಮ್ಮ ಲುಕ್‌ ಅನ್ನೆ ಬದಲಿಸುತ್ತವೆ.

 • ಚಿಕ್ಕ ಚೊಕ್ಕದಾಗಿ ಧರಿಸುವ ಆಭರಣಗಳು ನಿಮ್ಮನ್ನು ಘನತೆಯ ವ್ಯಕ್ತಿಯನ್ನಾಗಿಸುತ್ತವೆ.

 • ವೃತ್ತಿಪರ ಕೇಶವಿನ್ಯಾಸದ ಜೊತೆ ನೀಟಾಗಿ ಮಾಡಿಸಿದ ಶೇವ್ ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತವೆ.

 • ನಿಮ್ಮ ಕೈ ಬೆರಳುಗಳ ಉಗುರಗಳನ್ನು ಟ್ರಿಮ್ ಮಾಡಿರಬೇಕಾಗಿರುವುದು ಅಗತ್ಯ.

 • ನಿಮ್ಮ ಜೊತೆಗೆ ಒಂದು ಚಿಕ್ಕ ಬ್ರೀಫ್ಕೇಸ್ ಇದ್ದರಂತೂ ನೀವು ಸಂದರ್ಶನಕ್ಕೆ ಫುಲ್‌ ರೆಡಿ ಇದ್ದ ಆಗೆ.


ಮಹಿಳೆಯರೇ ನಿಮ್ಮ ಸಂದರ್ಶನದ ಉಡುಪು ಹೀಗಿರಲಿ
ಸಾಮಾನ್ಯವಾಗಿ, ಕಾರ್ಪೊರೇಟ್ ಉದ್ಯೋಗಗಳಲ್ಲಿ ನಡೆಯುವ ಸಂದರ್ಶನಕ್ಕೆ ಪುರುಷರಿಗಿಂತ ಮಹಿಳೆಯರು ಸಜ್ಜಾಗುವಿಕೆಯಲ್ಲಿ ಹೆಚ್ಚು ಕಷ್ಟ ಪಡಬೇಕಾಗಬಹುದು. ಆದರೆ ವೈವಿಧ್ಯಮಯ ಡ್ರೆಸ್‌ಗಳು ಮಹಿಳೆಯರಿಗೆ ಲಭ್ಯವಿವೆ. ಮಹಿಳೆಯರಿಗೆ ಹೆಚ್ಚಿರುವ ಆಯ್ಕೆಗಳು ಸಂದರ್ಶನದ ಉಡುಪು ಯಾವುದನ್ನು ಧರಿಸಬೇಕು ಎಂಬುದು ಪುರುಷರಿಗಿಂತ ಮಹಿಳೆಯರಿಗೆ ಸ್ವಲ್ಪ ಹೆಚ್ಚು ಸವಾಲಿನ ಕೆಲಸ ಆಗಿದೆ.

ಇದನ್ನೂ ಓದಿ:  ITBP Recruitment: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್​ನಲ್ಲಿ 108 ಕಾನ್ಸ್​​ಟೇಬಲ್​ ಹುದ್ದೆಗೆ ಅರ್ಜಿ ಆಹ್ವಾನ

ಉದಾಹರಣೆಗೆ, ನೀವು ಶರ್ಟ್‌ ಅಥವಾ ಸ್ಕರ್ಟ್ ಅನ್ನು ಧರಿಸುತ್ತಿದ್ದರೆ, ನೀವು ಪ್ಯಾಂಟಿ ಹೌಸ್ ಅನ್ನು ಧರಿಸಬೇಕೆ ಅಥವಾ ಬೇರ್ ಡ್ರೆಸ್‌ಗಳನ್ನು ಧರಿಸುವುದು ಸೂಕ್ತವೇ ಎಂಬುದನ್ನು ಸ್ವತಃ ನೀವೇ ನಿರ್ಧರಿಸಬೇಕಾಗುತ್ತದೆ. ಮಹಿಳೆಯರು ಸಂದರ್ಶನಕ್ಕೆ ಹೊರಡುವ ಮೊದಲು ನಿಮಗೆ ಬೇಕಾಗುವ ಪರ್ಸ್‌, ಬ್ಯಾಗ್‌, ಆಭರಣಗಳು ಮತ್ತು ಡ್ರೆಸ್‌ ಮುಂತಾದವುಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಉತ್ತಮ ಸಂದರ್ಶನದ ಬ್ಯಾಗ್‌ಗಳು ವೃತ್ತಿಪರವಾಗಿರುತ್ತವೆ ಮತ್ತು ನಿಮ್ಮ ರೆಸ್ಯೂಮ್‌ಗೆ ಹೊಂದಿಕೊಳ್ಳುವಷ್ಟು ದೊಡ್ಡದಾಗಿರುತ್ತವೆ.

ವೃತ್ತಿಪರ ಸಂದರ್ಶನದಲ್ಲಿ ಮಹಿಳೆಯರು ಏನನ್ನು ಧರಿಸಬೇಕು ಎಂಬುದಕ್ಕೆ ಕೆಲವು ಸಲಹೆಗಳು ಇಲ್ಲಿವೆ:

 • ನೌಕಾಪಡೆಯವರು ಧರಿಸುವಂತ ಗಾಢ ಬಣ್ಣಗಳಾದ, ಕಪ್ಪು, ಗಾಢ ಬೂದು ಬಣ್ಣದಂತಹ ಸೂಟ್‌ ಹೆಚ್ಚು ಸೂಕ್ತವಾಗಿವೆ.

 • ಉದ್ದನೆಯ ತೋಳಿನ ಬಿಳಿ ಬ್ಲೌಸ್‌ ಜೊತೆ ಮೊಣಕಾಲಿನ ಕೆಳಗೆ ಅಥವಾ ಮೇಲಿರುವ ಸೂಟ್ ಉತ್ತಮ.

 • ಕನ್ಸರ್ವೇಟಿವ್ ಶೂಗಳು ಈ ಡ್ರೆಸ್‌ಕೋಡ್‌ ಗೆ ಒಪ್ಪುತ್ತವೆ.

 • ಸೀಮಿತ ಆಭರಣಗಳಾದ ಚಿಕ್ಕ ಕಿವಿಯೋಲೆ, ಜಾಸ್ತಿ ಬಳೆಗಳನ್ನು ಹಾಕಿಕೊಳ್ಳುವುದು ಈ ಡ್ರೆಸ್‌ಕೋಡ್‌ಗೆ ಹೊಂದುವುದಿಲ್ಲ.

 • ವೃತ್ತಿಪರ ಕೇಶವಿನ್ಯಾಸ ಇರುವುದು ಉತ್ತಮ.

 • ಲಘು ಮೇಕ್ಅಪ್ ಮತ್ತು ಅಷ್ಟೊಂದು ಗಾಢ ಸುಗಂಧವಿಲ್ಲದ ಪರ್‌ಪ್ಯೂಮ್‌ ಬಳಸುವುದು ಉತ್ತಮ.

 • ಟ್ರಿಮ್‌ ಮಾಡಿಕೊಂಡ ಉಗುರುಗಳು

 • ಇವೆಲ್ಲದರ ಜೊತೆ ಒಂದು ಪುಟ್ಟ ಬ್ರೀಫ್ಕೇಸ್ ಇರಲಿ.


ಸಾಮಾನ್ಯ ಸಂದರ್ಶನಕ್ಕಾಗಿ ನಿಮ್ಮ ಧಿರಿಸು ಹೀಗಿರಲಿ:
ನೀವು ಹೊರಡುವ ಸಂದರ್ಶನದ ಕೆಲಸದ ಸ್ಥಳ ಅಥವಾ ಕೆಲಸವು ಕಡಿಮೆ ಔಪಚಾರಿಕವಾಗಿದ್ದಾಗ, ಡ್ರೆಸ್ ಕೋಡ್ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಇದರ ಬಗ್ಗೆ ಏನು ಧರಿಸಬೇಕೆಂದು ನಿಮಗೆ ಖಚಿತವಿಲ್ಲದಿದ್ದರೆ, ಸಂದರ್ಶನವನ್ನು ನಿಗದಿಪಡಿಸುವ ವ್ಯಕ್ತಿಯೊಂದಿಗೆ ಪರಿಶೀಲಿಸುವುದು ಉತ್ತಮವಾಗಿದೆ. ಆದರೆ ದೊಗಲೆಯಂತಹ ಲೂಸ್‌ ಡ್ರೆಸ್‌ ಅನ್ನು ಯಾವುದೇ ಕಾರಣಕ್ಕೂ ಧರಿಸಭಾರದು.

ಕೆಲವು ಸಾಂದರ್ಭಿಕ ಆಯ್ಕೆಗಳ ಕುರಿತು ಮತ್ತಷ್ಟು ತಿಳಿಯೋಣ:

 • ಬ್ಯುಸಿನೆಸ್‌ ಸಾಮಾನ್ಯ ಸಂದರ್ಶನ: ನೀವು ಸೂಟ್ ಅನ್ನು‌ ಧರಿಸದೆ ಇದ್ದರೂ ಪರವಾಗಿಲ್ಲ. ಆದರೆ ಜೀನ್ಸ್‌ ಪ್ಯಾಂಟ್‌ ಅನ್ನು ಮಾತ್ರ ಧರಿಸಬೇಡಿ. ಕೇವಲ ಫಾರ್ಮಲ್‌ ಪ್ಯಾಂಟ್‌ ಮತ್ತು ಶರ್ಟ್‌ ಧರಿಸಿ, ಅದಕ್ಕೆ ಉತ್ತಮ ಬೆಲ್ಟ್‌ ಹಾಕಿ. ಅದು ನಿಮ್ಮನ್ನು ಮತ್ತಷ್ಟು ಕ್ಯಾಸುವಲ್‌ ಆಗಿ ಕಾಣುವಂತೆ ಮಾಡುತ್ತದೆ.

 • ಸ್ಟಾರ್ಟ್‌ಅಪ್ ಸಾಮಾನ್ಯ ಸಂದರ್ಶನಗಳು : ಸ್ಟಾರ್ಟ್‌ಅಪ್‌ನಲ್ಲಿ ಸಂದರ್ಶನಕ್ಕೆ ಜೀನ್ಸ್ ಸರಿಯಾದ ಆಯ್ಕೆ ಆಗಿರುತ್ತದೆ. ಆದರೆ ಅವು ಸ್ವಚ್ಛವಾಗಿರಬೇಕು. ಮತ್ತು ಈಗ ಬಂದಿರುವ ಫ್ಯಾಶನ್‌ ಜೀನ್ಸ್‌ಗಳು ಅರ್ಧ ಹರಿದ ಜೀನ್ಸ್‌ಗಳನ್ನು ಧರಿಸುವುದು ಸೂಕ್ತವಲ್ಲ. ನೀವು ಸ್ಟೈಲಿಶ್ ಆಗಿರಬೇಕೆ ಹೊರತು ಹೇಗೆಗೋ ಅಲ್ಲ ಎಂಬುದು ತಿಳಿಯಿರಿ.

 • ಯಾವುದೇ ಡ್ರೆಸ್ ಕೋಡ್ ಇಲ್ಲದಿದ್ದಾಗ ಏನನ್ನು ಧರಿಸಬೇಕು: ಸಂದರ್ಶನಕ್ಕೆ ಹೋಗುತ್ತಿದ್ದೆವೆ ಆದರೆ ಏನನ್ನು ಧರಿಸಬೇಕೆಂದು ಗೊತ್ತಿಲ್ಲವೇ? ಹಾಗಿದ್ರೆ ಯಾವುದೋ ಒಂದು ಡ್ರೆಸ್‌ ಹಾಕಿಕೊಂಡು ಹೊರಡಬೇಡಿ. ಅಂತಹ ಸಂದರ್ಭಗಳಲ್ಲಿ ನಿಮ್ಮ ಆಯ್ಕೆ ವೃತ್ತಿಪರ ಆಗಿರಲಿ.


ಅತ್ಯುತ್ತಮ ಸಂದರ್ಶನಕ್ಕೆ ಕೆಲವುಸಲಹೆಗಳು ಇಲ್ಲಿವೆ:
ನೀವು ಸಂದರ್ಶನಕ್ಕೆ ಹೋಗುತ್ತಿದ್ದಿರಿ ಎಂದರೆ ಉದ್ಯೋಗದಾತರನ್ನು ಹೇಗೆ ಇಂಪ್ರೆಸ್‌ ಮಾಡಬೇಕು ಎಂಬುದು ತಿಳಿದಿರಬೇಕು. ನಿಮ್ಮ ಸಂದರ್ಶನದ ಉಡುಪನ್ನು ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ.

ಇದನ್ನೂ ಓದಿ:  Sleeping Job: ನಿದ್ರಿಸುವುದೇ ಒಂದು ಕೆಲಸ, ಅದಕ್ಕೆ ತಕ್ಕ ಸಂಬಳ! ಅಪ್ಲಿಕೇಶನ್​ ಹಾಕಿ, ಉದ್ಯೋಗ ಸಿಗಬಹುದು ನೋಡಿ

 • ನಿಮ್ಮ ಸಂದರ್ಶನದ ಮುಂಚಿತವಾಗಿ, ನೀವು ಸೂಕ್ತವಾದ ಸಂದರ್ಶನದ ಉಡುಪನ್ನು ಹೊಂದಿರುವಿರಾ ಮತ್ತು ಎಲ್ಲವೂ ಸರಿಯಾಗಿ ಹೊಂದಿಕೊಳ್ಳುತ್ತದೆ ಎಂದು ಖಚಿತಪಡಿಸಿಕೊಳ್ಳಿ.

 • ಹಿಂದಿನ ರಾತ್ರಿ ನಿಮ್ಮ ಬಟ್ಟೆಗಳನ್ನು ಸಿದ್ಧಗೊಳಿಸಿ, ಆದ್ದರಿಂದ ಸಂದರ್ಶನದ ದಿನ ಅವುಗಳನ್ನು ಸಿದ್ಧಪಡಿಸಲು ನೀವು ಸಮಯವನ್ನು ವ್ಯಯಿಸಬೇಕಿಲ್ಲ.

 • ನಿಮ್ಮ ಬಟ್ಟೆಗಳು ಡ್ರೈ ಕ್ಲೀನ್ ಆಗಿದ್ದರೆ, ಸಂದರ್ಶನದ ನಂತರ ಅವುಗಳನ್ನು ಕ್ಲೀನರ್‌ಗಳ ಬಳಿಗೆ ತೆಗೆದುಕೊಂಡು ಹೋಗಿ, ಆದ್ದರಿಂದ ನೀವು ಮುಂದಿನ ಸಂದರ್ಶನಕ್ಕೆ ಸಿದ್ಧರಾಗುವಿರಿ.

 • ಹಿಂದಿನ ರಾತ್ರಿ ನಿಮ್ಮ ಬೂಟುಗಳನ್ನು ಪಾಲಿಶ್ ಮಾಡಲು ಮರೆಯದಿರಿ.

Published by:Ashwini Prabhu
First published: