• Home
  • »
  • News
  • »
  • career
  • »
  • Digital Skill: ಉದ್ಯೋಗಿಗಳಿಗೆ ಡಿಜಿಟಲ್ ಸ್ಕಿಲ್ ಕಡಿಮೆ ಎಂದ ಜಾಗತಿಕ ಸಮೀಕ್ಷೆ

Digital Skill: ಉದ್ಯೋಗಿಗಳಿಗೆ ಡಿಜಿಟಲ್ ಸ್ಕಿಲ್ ಕಡಿಮೆ ಎಂದ ಜಾಗತಿಕ ಸಮೀಕ್ಷೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Digital Skill: ಪ್ರಪಂಚದಾದ್ಯಂತ 33% ರಷ್ಟು ಟೆಕ್ನಿಕಲ್‌ ಜಾಬ್‌ಗಳು ಮಾತ್ರ ಅಗತ್ಯ ಡಿಜಿಟಲ್‌ ಸ್ಕಿಲ್ಸ್‌ ಹೊಂದಿರುವ ಉದ್ಯೋಗಿಗಳಿಂದ ತುಂಬಿವೆ. ಉಳಿದ ಉದ್ಯೋಗಿಗಳಿಗೆ ಅಗತ್ಯ ಕೌಶಲ್ಯವಿಲ್ಲ.

  • Share this:

ಜಗತ್ತಿನಲ್ಲಿ ಹೆಚ್ಚಿನ ವಿದ್ಯಾವಂತ ಯುವಕರು ಉದ್ಯೋಗ (Employment) ಮಾಡುವ ಸಾಮರ್ಥ್ಯ ಹೊಂದಿಲ್ಲ ಅಥವಾ ಉದ್ಯೋಗ ಪಡೆಯಲು ಬೇಕಾದ ಯಾವುದೇ ರೀತಿಯ ಪರೀಕ್ಷೆಯಲ್ಲಿ (Exam) ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ಸಮರ್ಥರಾಗಿಲ್ಲ ಎಂದು ದೊಡ್ಡ ದೊಡ್ಡ ತಂತ್ರಜ್ಞಾನ (Technology) ಸಂಸ್ಥೆಯ ಮುಖ್ಯಸ್ಥರು ಆಗಾಗ ಹೇಳುತ್ತಿರುವುದು ಈಗೀಗ ಸರ್ವೆಸಾಮಾನ್ಯವಾಗಿದೆ. ಈಗ ಏಕೆ ಈ ವಿಷಯ ಮಾತನಾಡುತ್ತಿದ್ದಾರೆ ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ಅದಕ್ಕೂ ಸೂಕ್ತ ಕಾರಣವಿದೆ (Reason). ಅದೇನು? ಎಂಬುದನ್ನು ಮುಂದೆ ತಿಳಿಯೋಣ ಬನ್ನಿ.


ಪ್ರಪಂಚದಾದ್ಯಂತ 33% ರಷ್ಟು ಟೆಕ್ನಿಕಲ್‌ ಜಾಬ್‌ಗಳು ಮಾತ್ರ ಅಗತ್ಯ ಡಿಜಿಟಲ್‌ ಸ್ಕಿಲ್ಸ್‌ ಹೊಂದಿರುವ ಉದ್ಯೋಗಿಗಳಿಂದ ತುಂಬಿವೆ. ಇತರ ಉದ್ಯೋಗಗಳಿಗೆ ಡಿಜಿಟಲ್‌ ಸ್ಕಿಲ್ಸ್‌ಗಳ ಅಗತ್ಯವಿಲ್ಲದಿದ್ದರೂ ಈ ಟೆಕ್ನಿಕಲ್‌ ಜಾಬ್‌ಗಳಿಗೆ ಇವುಗಳ ಅಗತ್ಯ ನೂರರಷ್ಟು ಇದೆ ಎಂದು ಜಾಗತಿಕ ವ್ಯಾಪಾರ ನಾಯಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.


ಸಮೀಕ್ಷೆಗಳು ಏನ್‌ ಹೇಳ್ತಿವೆ?


ಟೆಕ್ನಿಕಲ್‌ ಜಾಬ್‌ಗಳಲ್ಲಿ ಡಿಜಿಟಲ್‌ ಸ್ಕಿಲ್ಸ್‌ ಇರುವ ಉದ್ಯೋಗಿಗಳು ಕ್ರಮೇಣ ಕಡಿಮೆಯಾಗುತ್ತಿದ್ದಾರೆ ಎಂದು ಕೆಲವು ಸಮೀಕ್ಷೆಗಳು ವರದಿ ಮಾಡಿವೆ. ಅದರಲ್ಲಿ ಮುಖ್ಯವಾಗಿ Capgemini ಮತ್ತು LinkedIn ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ, ಸಮೀಕ್ಷೆಗೆ ಒಳಗಾದ ಅರ್ಧದಷ್ಟು ಸಂಸ್ಥೆಗಳಲ್ಲಿ ಡಿಜಿಟಲ್ ವಿಭಜನೆಯು ಹೆಚ್ಚಾಗುತ್ತಿದೆ ಮತ್ತು 54% ರಷ್ಟು ಉದ್ಯೋಗಗಳು ಸೂಕ್ತ ಉದ್ಯೋಗಿಗಳ ಕೊರತೆಯಿಂದಾಗಿ ಸ್ಪರ್ಧಾತ್ಮಕ ಪ್ರಯೋಜನವನ್ನು ಸಹ ಕಳೆದುಕೊಂಡಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ.


ವಿಶ್ವ ಆರ್ಥಿಕ ಪೋರಮ್‌ ಏನನ್ನು ಅಂದಾಜಿಸಿದೆ?


ಪ್ರಪಂಚದಲ್ಲಿ ಮುಂದಿನ ಐದು ವರ್ಷಗಳಲ್ಲಿ 150 ಮಿಲಿಯನ್ ಹೊಸ ತಂತ್ರಜ್ಞಾನ ಉದ್ಯೋಗಗಳು ಸೃಷ್ಟಿಯಾಗುತ್ತವೆ. 2030 ರ ವೇಳೆಗೆ, 77% ರಷ್ಟು ಉದ್ಯೋಗಗಳಿಗೆ ಡಿಜಿಟಲ್ ಕೌಶಲ್ಯಗಳು ಬೇಕಾಗುತ್ತವೆ ಎಂದು ವಿಶ್ವ ಆರ್ಥಿಕ ಪೋರಮ್‌ ಅಂದಾಜಿಸಿದೆ.


ಕೋವಿಡ್-19 ಸಾಂಕ್ರಾಮಿಕ ರೋಗವು ಉದ್ಯೋಗ ಕ್ಷೇತ್ರದಲ್ಲಿ ಅನೇಕ ದೋಷಗಳನ್ನು ಹುಟ್ಟು ಹಾಕಿದೆ. ಅವುಗಳನ್ನು ನಿವಾರಿಸಿ, ಉದ್ಯೋಗಗಳಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ತಂತ್ರಜ್ಞಾನವನ್ನು ನಿಯಂತ್ರಿಸುವ ಔಪಚಾರಿಕ ಉದ್ಯೋಗಗಳನ್ನು ರೂಪಿಸುವ ಅಗತ್ಯವು ಅತ್ಯಂತ ಸ್ಪಷ್ಟವಾಗಿದೆ.


ಭವಿಷ್ಯದ ಉದ್ಯೋಗಗಳಿಗೆ ತಯಾರಿ ಹೇಗಿರಬೇಕು?


ತಂತ್ರಜ್ಞಾನ ಉದ್ಯೋಗಗಳ ಬಗ್ಗೆ ಗ್ಲೋಬಲ್ ಆಪರ್ಚುನಿಟಿ ಯೂತ್ ನೆಟ್‌ವರ್ಕ್ (GOYN) ಉಪಕ್ರಮವು ಎಲ್ಲಾ ಡೇಟಾವನ್ನು ವಿಶ್ಲೇಷಿಸಿದೆ ಮತ್ತು ಈ ಮಿತಿಗಳ ಕುರಿತು ಸಮಗ್ರ ವರದಿಯನ್ನು ತಯಾರಿಸಿದೆ.


ಕೊಲಂಬಿಯಾದಲ್ಲಿ ದುಡಿಯುವ ಸುಮಾರು 11,447,212 ಮಿಲಿಯನ್ ಯುವಜನರು, ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸುವ ಪ್ರತಿ 100 ಯುವಕರಲ್ಲಿ, 48 ಮಂದಿ ಯುವಕರು ಉನ್ನತ ಶಿಕ್ಷಣವನ್ನು ಪಡೆಯುತ್ತಾರೆ. ಅವರಲ್ಲಿ ಕೇವಲ 24 ಮಂದಿ ಯುವಕರು ಮಾತ್ರ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ ಎಂದು ಡೇಟಾವು ಸೂಚಿಸುತ್ತದೆ.


ಇದನ್ನೂ ಓದಿ: 75 ಪ್ರಾಜೆಕ್ಟ್​ ಅಸಿಸ್ಟೆಂಟ್​ ಹುದ್ದೆಗೆ ನಾಳೆಯೇ ವಾಕ್​ ಇನ್​ ಇಂಟರ್​ವ್ಯೂ


ಬೊಗೋಟಾ ನಗರದಲ್ಲಿ ನಡೆದ GOYN ವಿಶ್ಲೇಷಣೆಯು, ಕೆಲಸ ಮಾಡುವ ಸುಮಾರು 1,798,362 ಮಿಲಿಯನ್ ಯುವಜನರಲ್ಲಿ, 37% ರಷ್ಟು ಡಿಜಿಟಲ್‌ ಸ್ಕಿಲ್ಸ್‌ಗಳು ಇರುವ ಉದ್ಯೋಗ ಅವಕಾಶಗಳಿಂದ ಹೊರಗಿಡಲಾಗಿದೆ ಎಂದು ತೋರಿಸುತ್ತದೆ.


ನಗರದಲ್ಲಿ ಉದ್ಯೋಗ ಮಾಡುವ ಸಾಮರ್ಥ್ಯವಿರುವ ಒಟ್ಟು ಯುವಕರಲ್ಲಿ ಶೇ.52 ರಷ್ಟು ಯುವತಿಯರನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಅದರಲ್ಲಿ ಅಧ್ಯಯನ ಮಾಡದ ಅಥವಾ ಕೆಲಸ ಮಾಡದವರ ಭಾಗವಹಿಸುವಿಕೆಯನ್ನು ಮಾತ್ರ ವಿಶ್ಲೇಷಿಸಿದಾಗ, ಆ ಅಂಕಿ ಅಂಶವು 58% ರಷ್ಟು ಹೆಚ್ಚಾಗುತ್ತದೆ. ಈ ಸಮಸ್ಯೆಗೆ ಲಿಂಗ ಆಧಾರಿತ ಅಂತರವೇ ಮುಖ್ಯ ಕಾರಣವೆಂದು ತಿಳಿದು ಬರುತ್ತದೆ.


ಇದನ್ನೂ ಓದಿ: 990 ಸೈಟಿಂಸ್ಟ್​ ಹುದ್ದೆ ನೇಮಕಾತಿ; ಬೇಗ ಅರ್ಜಿ ಸಲ್ಲಿಸಿ


ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವಂತೆ ಅಂತರವನ್ನು ವಿಸ್ತರಿಸುವ ರಚನಾತ್ಮಕ ಅಡೆತಡೆಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.


ಉದ್ಯೋಗ ಅವಕಾಶಗಳಿಗೆ ಪ್ರವೇಶವನ್ನು ಮಿತಿಗೊಳಿಸುವ ಅಂಶಗಳು ಇಂತಿವೆ:


ಕಲಿಕಾ ಸಾಮರ್ಥ್ಯದ ಕೊರತೆ


GOYN ವರದಿಯ ಪ್ರಕಾರ, ಕೆಲವು ಯುವಕರು ತಮ್ಮ ಪ್ರೌಢಶಾಲಾ ಶಿಕ್ಷಣದಲ್ಲಿ ಗಣಿತದಂತಹ ಮೂಲಭೂತ ವಿಷಯದಲ್ಲಿ ಫೇಲ್‌ ಆಗಿರುತ್ತಾರೆ. ಇನ್ನು ಕೆಲವರಿಗೆ ಇಂಗ್ಲೀಷ್‌ ಭಾಷೆಯನ್ನು ಯಾವುದೇ ತಪ್ಪಿಲ್ಲದೇ ಓದಲು ಸಾದ್ಯವಾಗುತ್ತಿಲ್ಲ. ಶಾಲೆ ಮುಗಿಸಿದ ಅನೇಕ ಯುವಕರ ಸಮಸ್ಯೆ ಇದಾಗಿದೆ. ಅವರು ಉತ್ತಮ ವೃತ್ತಿಜೀವನಕ್ಕಾಗಿ ಯಾವ ಆಯ್ಕೆಗಳನ್ನು ಮಾಡಬೇಕು ಎಂದು ತಿಳಿಸಲು ಶಿಕ್ಷಕರು ಮತ್ತು ಸಲಹೆಗಾರರ ​​ಅಗತ್ಯವಿದೆ.


ಇಂಟರ್‌ನೆಟ್‌ನ ಸರಿಯಾದ ಬಳಕೆಯಾಗುತ್ತಿಲ್ಲ


ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮನೆ ಮನೆಗಳಲ್ಲೂ ಈ ಇಂಟರ್‌ನೆಟ್‌ ಸ್ಥಾನ ಪಡೆದಿದೆ. ಕೊರೊನಾದ ನಂತರ ಇಂಟರ್‌ನೆಟ್‌ ಸೇವೆ ಹೆಚ್ಛಾಗಿದೆ ಎಂದು ಎಲ್ಲ ದೇಶಗಳು ಹೇಳುತ್ತಿದ್ದರೂ ಸಹ, ಇಂದಿಗೂ ಕೇವಲ 42% ರಷ್ಟು ಜನರು ಮಾತ್ರ ಇಂಟರ್‌ನೆಟ್‌ ಸಂಪರ್ಕವನ್ನು ಹೊಂದಿದ್ದಾರೆ ಮತ್ತು ಆದರೆ ಸುಮಾರು 57% ರಷ್ಟು ಯುವಕರು ತರಬೇತಿ, ಔಪಚಾರಿಕ ಉದ್ಯೋಗಗಳು, ಕಂಪ್ಯೂಟರ್‌ಗಳು ಮತ್ತು ಇಂಟರ್‌ನೆಟ್‌ ಅನ್ನು ಬಳಕೆ ಮಾಡುತ್ತಿಲ್ಲ. ಆಧುನಿಕ ಉಪಕರಣಗಳು ಇಲ್ಲದೇ, ಯುವಕರನ್ನು ಹೇಗೆ ಟೆಕ್ನಿಕಲ್‌ ಜಾಬ್‌ಗಳಿಗೆ ಸಿದ್ದಪಡಿಸುವುದು ಎಂಬುದು ತಜ್ಞರ ಪ್ರಶ್ನೆಯಾಗಿದೆ.


ಪರಿಸರ ಅಂಶಗಳ ಪ್ರಭಾವ


ಯುವಜನರ ಜೀವನ ಪಥವು ಅವರ ಸುತ್ತಮುತ್ತಲಿನ ಮತ್ತು ಮನೆಯ ಜೀವನದಿಂದ ಪ್ರಭಾವಿತವಾಗಿರುತ್ತದೆ. ಪೋಷಕರ ಬೆಂಬಲದ ಕೊರತೆ, ಮೌಲ್ಯೀಕರಣ ಮತ್ತು ಪ್ರೋತ್ಸಾಹಿಸುವ ಜನರ ಕೊರತೆ ಇರುತ್ತದೆ. ಅವರಿಗೆ ಸೂಕ್ತ ಆದರ್ಶ ವ್ಯಕ್ತಿಗಳ ಕೊರತೆಯು ಸಹ ಇರುತ್ತದೆ.


ಕೊನೆಯ ಮಾತು: ಶಾಲೆಯ ಶಿಕ್ಷಣ ಮುಗಿದ ನಂತರ ನಿಮ್ಮ ವೃತ್ತಿಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯು ವಿದ್ಯಾರ್ಥಿಗಳು ಪಡೆಯುವ ಮಾಹಿತಿ, ಮಾರ್ಗದರ್ಶನದಿಂದ ಬರುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನವಿಲ್ಲದೇ ಯಾವ ಕೆಲಸವನ್ನು ಮಾಡಬೇಡಿ.

First published: