• Home
 • »
 • News
 • »
 • career
 • »
 • Simplify Your Work: ಹೊಸ ವರ್ಷದಿಂದ ಈ 5 ಟಿಪ್ಸ್ ಪಾಲಿಸಿ, ಆಫೀಸ್ ಕೆಲಸ ಫಟಾಫಟ್ ಅಂತ ಮುಗಿಯುತ್ತೆ

Simplify Your Work: ಹೊಸ ವರ್ಷದಿಂದ ಈ 5 ಟಿಪ್ಸ್ ಪಾಲಿಸಿ, ಆಫೀಸ್ ಕೆಲಸ ಫಟಾಫಟ್ ಅಂತ ಮುಗಿಯುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳಿಗ್ಗೆ ಆಫೀಸಿಗೆ ಬಂದು ಇಂದು ಏನೆಲ್ಲಾ ಕೆಲಸಗಳನ್ನು ಮಾಡಬೇಕು ಅಂತ ತಲೆಕೆಡಿಸಿಕೊಂಡು 30-40 ನಿಮಿಷಗಳನ್ನು ವ್ಯರ್ಥ ಮಾಡುವ ಬದಲು ನಿಮ್ಮ ಡೆಸ್ಕ್ ನಲ್ಲಿ ನೀವು ಕಳೆಯುವ ಸಮಯವನ್ನು ಹೆಚ್ಚು ಸಮರ್ಥವಾಗಿ ಬಳಸಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

 • Trending Desk
 • 4-MIN READ
 • Last Updated :
 • Share this:

  ನಾವು ಮಾಡುವ ಉದ್ಯೋಗ (Job) ನಮ್ಮ ಜೀವನಕ್ಕೆ ಬಹು ಮುಖ್ಯವಾದ ಆಧಾರವಾಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.  ಆ ಉದ್ಯೋಗ (Work) ನಮ್ಮ ದೈನಂದಿನ ಬದುಕಿನಲ್ಲಿ ಬರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತದೆ ಅಂತ ಹೇಳಬಹುದು. ಆದರೆ ಈ ಕೆಲಸದ ಬಗ್ಗೆ ಕೆಲವರು ತುಂಬಾನೇ ತಲೆ ಕೆಡೆಸಿಕೊಂಡಿರುತ್ತಾರೆ. ಚಿಕ್ಕಪುಟ್ಟ ಕೆಲಸಗಳನ್ನು ಸಮಯಕ್ಕನುಗುಣವಾಗಿ ಹೇಗೆ ನಿಭಾಯಿಸುವುದು ಅಂತ ಸರಿಯಾಗಿ ತಿಳಿಯದೆ ತುಂಬಾನೇ ಗೊಂದಲಕ್ಕೀಡಾಗುತ್ತಾರೆ.


  ಬೆಳಿಗ್ಗೆ ಆಫೀಸಿಗೆ ಬಂದು ಇಂದು ಏನೆಲ್ಲಾ ಕೆಲಸಗಳನ್ನು ಮಾಡಬೇಕು ಅಂತ ತಲೆಕೆಡಿಸಿಕೊಂಡು 30-40 ನಿಮಿಷಗಳನ್ನು ವ್ಯರ್ಥ ಮಾಡುವ ಬದಲು ನಿಮ್ಮ ಡೆಸ್ಕ್ ನಲ್ಲಿ ನೀವು ಕಳೆಯುವ ಸಮಯವನ್ನು ಹೆಚ್ಚು ಸಮರ್ಥವಾಗಿ ಬಳಸಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ. ಇದರಿಂದ ನೀವು ಕಚೇರಿಯಲ್ಲಿ ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ಕುಳಿತು ಕೆಲಸ ಮಾಡುವ ಅವಶ್ಯಕತೆ ಇರುವುದಿಲ್ಲ.


  1. ನಿಮ್ಮ ಕೆಲಸ ಮಾಡುವ ಸ್ಥಳವನ್ನು ಸ್ವಚ್ಛ ಮಾಡಿಕೊಳ್ಳಿ: ಇದು ನಿಮಗೆ ಅಪ್ರಸ್ತುತವೆಂದು ಅನ್ನಿಸಬಹುದು, ಆದರೆ ನಿಮ್ಮ ಡೆಸ್ಕ್ ಕಾಗದಪತ್ರಗಳ ರಾಶಿಗಳಿಂದ ಕೂಡಿದ್ದರೆ, ಕೆಲಸಗಳನ್ನು ಜ್ಞಾಪಿಸುವ ಚಿಕ್ಕಪುಟ್ಟ ಟಿಪ್ಪಣಿಗಳಿದ್ದರೆ ಮತ್ತು ನಿಮಗೆ ಬೇಕಾದ ವಸ್ತು ಡೆಸ್ಕ್ ಮೇಲೆ ಬೇಗನೆ ಸಿಗುತ್ತಿಲ್ಲ ಎಂದರೆ ಇದು ಸ್ವಚ್ಛಗೊಳಿಸುವ ಸಮಯ ಅಂತ ತಿಳಿದುಕೊಳ್ಳಿರಿ.


  ಎಲ್ಲವನ್ನೂ ಸ್ವಚ್ಛ ಮಾಡಿದ ನಂತರ ನಿಮ್ಮ ಸ್ಥಳವನ್ನು ಚೆನ್ನಾಗಿ ಸಂಘಟಿಸಿಕೊಳ್ಳಿರಿ. ನೀವು ಪ್ರತಿದಿನ ಅಲ್ಲಿಂದ ಹೊರಡುವಾಗ ಸ್ಥಳವನ್ನು ಸ್ವಚ್ಛ ಮಾಡಿಕೊಳ್ಳಿರಿ. ಸ್ವಚ್ಛವಾದ ಡೆಸ್ಕ್ ನಲ್ಲಿ ಪ್ರತಿದಿನ ಬೆಳಿಗ್ಗೆ ನೀವು ಬಂದು ಕುಳಿತಾಗ ನಿಮಗೆ ತಾಜಾತನ ನೀಡುವಂತಿರಬೇಕು. ಹೀಗೆ ಚಿಕ್ಕಪುಟ್ಟ ವಸ್ತುಗಳನ್ನು ಹುಡುಕಲು ತೆಗೆದುಕೊಳ್ಳುವ ಸಮಯ ನಿಮಗೆ ಉಳಿತಾಯವಾಗುತ್ತದೆ.
  2. ಮಾಡಬೇಕಾದ ಕೆಲಸಗಳ ಚಿಕ್ಕ ಪಟ್ಟಿಯನ್ನು ರಚಿಸಿಕೊಳ್ಳಿ: ಮಾಡಬೇಕಾದ ಕೆಲಸಗಳ ಪಟ್ಟಿಗಳನ್ನು ರಚಿಸುವಾಗ, ತುಂಬಾ ಉದ್ದವಾಗಿ ಬರೆಯುವುದಕ್ಕೆ ಹೋಗಬೇಡಿ. ನಿಮ್ಮ ಎಲ್ಲಾ ಯೋಜನೆಗಳ ಮೇಲೆ ಮೇಲ್ವಿಚಾರಣೆ ಮಾಡುವುದು ತುಂಬಾ ಒಳ್ಳೆಯ ವಿಷಯವಾಗಿದ್ದರೂ, ನೀವು ಮಾಡಿಕೊಳ್ಳುವ ಪಟ್ಟಿ ತುಂಬಾನೇ ಚಿಕ್ಕದಾಗಿ ಮತ್ತು ಚೊಕ್ಕವಾಗಿರಲಿ.


  ವಿಶೇಷವಾಗಿ ತುಂಬಾ ಕೆಲಸವಿದ್ದಾಗ ಉದ್ದದ ಮಾಡಬೇಕಾದ ಕೆಲಸಗಳ ಪಟ್ಟಿ ತುಂಬಾನೇ ತಲೆ ಕೆಡಿಸುತ್ತದೆ. ಆ ದಿನ ನೀವು ಸಂಪೂರ್ಣವಾಗಿ ಮಾಡಿ ಮುಗಿಸಬೇಕಾದ ಕೆಲಸಗಳನ್ನು ಮಾತ್ರ ಪಟ್ಟಿ ಮಾಡಿಕೊಳ್ಳಿ. ದಿನದ ಕೊನೆಯಲ್ಲಿ, ನಾಳೆ ನೀವು ನಿಭಾಯಿಸಬೇಕಾದ ಕೆಲಸಗಳನ್ನು ಬರೆಯಿರಿ, ಇದರಿಂದ ನೀವು ಕಚೇರಿಗೆ ಬಂದ ತಕ್ಷಣವೇ ಕೆಲಸ ಶುರು ಮಾಡಬಹುದು.


  3. ನೀವು ಬರೆಯುವ ಇ-ಮೇಲ್ ಗಳು ಚಿಕ್ಕದಾಗಿರಲಿ: ಗ್ರಾಹಕರಿಗೆ, ನಿಮ್ಮ ಮ್ಯಾನೇಜರ್ ಗೆ ಅಥವಾ ನಿಮ್ಮ ತಂಡದ ಸದಸ್ಯರಿಗೆ ಇ-ಮೇಲ್ ಗಳನ್ನು ಬರೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ಕಂಡುಕೊಂಡರೆ, ಸಣ್ಣ ಇ-ಮೇಲ್ ಗಳನ್ನು ಬರೆಯುವ ಮೂಲಕ ಸಮಯವನ್ನು ಉಳಿಸಿಕೊಳ್ಳಬಹುದು.
  ನೀವು ಹೇಳಲು ಬಯಸುವ ವಿಷಯ ನೇರವಾಗಿರಲಿ ಮತ್ತು ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ, ಇದರಿಂದ ನೀವು ದೊಡ್ಡ ಪ್ಯಾರಾಗ್ರಾಫ್ ಗಳ ಬದಲು ಒಂದು ಅಥವಾ ಎರಡು ವಾಕ್ಯಗಳನ್ನು ಬರೆಯುತ್ತೀರಿ. ಇದು ನಿಮ್ಮ ಸಮಯವನ್ನು ಉಳಿಸುವುದು ಮಾತ್ರವಲ್ಲದೆ, ಇದು ಇತರರ ಸಮಯವನ್ನು ಸಹ ಉಳಿಸುತ್ತದೆ.


  4. ನಿಮ್ಮನ್ನು ವಿಚಲಿತಗೊಳಿಸುವ ವಿಷಯಗಳಿಂದ ದೂರವಿರಿ: ಸಾಮಾಜಿಕ ಮಾಧ್ಯಮ, ಗುಂಪಾಗಿ ಕುಳಿತು ಹರಟೆ ಹೊಡೆಯುವುದು ಅಥವಾ ಸುದ್ದಿ ಲೇಖನಗಳನ್ನು ಪರಿಶೀಲಿಸಲು ದಿನವಿಡೀ ನೀವು ಹೆಚ್ಚು ವಿರಾಮಗಳನ್ನು ತೆಗೆದುಕೊಳ್ಳುವುದನ್ನು ನೀವು ಕಂಡುಕೊಂಡರೆ, ಅದೆಲ್ಲವನ್ನು ಮಿತಿಗೊಳಿಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿ.


  ನಿಮ್ಮ ಮೊಬೈಲ್ ಗೆ ಬರುವ ಅಧಿಸೂಚನೆಗಳನ್ನು ಪರಿಶೀಲಿಸಲು ನಿರ್ದಿಷ್ಟವಾಗಿ ದಿನದಲ್ಲಿ ಒಂದು ಸಮಯವನ್ನು ಮೀಸಲಿಡಿ, ಆದರೆ ನೀವು ಆನ್ಲೈನ್ ನಲ್ಲಿ ಬ್ರೌಸ್ ಮಾಡುವ ಅಭ್ಯಾಸಕ್ಕೆ ಬಿದ್ದಿದ್ದರೆ, ವೆಬ್‌ಸೈಟ್ ಬ್ಲಾಕರ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿರಿ. ಕೆಲಸ ಮಾಡದ ವೆಬ್‌ಸೈಟ್ ಗಳನ್ನ ಪರಿಶೀಲಿಸುವ ನಿಮ್ಮ ಅಭ್ಯಾಸವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ, ಇದು ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ನಿಮಗೆ ಅನುವು ಮಾಡಿಕೊಡುತ್ತದೆ.


  5. ನಿರ್ದಿಷ್ಟ ಕೆಲಸದ ಸಮಯವನ್ನು ನಿಗದಿಪಡಿಸಿಕೊಳ್ಳಿ: ನಿಮ್ಮ ಕೆಲಸವನ್ನು ನಿಮ್ಮೊಂದಿಗೆ ಮನೆಗೆ ಕೊಂಡೊಯ್ಯುವುದು ತುಂಬಾನೇ ಸುಲಭ, ಆದರೆ ಅದು ಒಂದು ಆಯ್ಕೆ ಎಂದು ತಿಳಿದುಕೊಳ್ಳುವುದು ಮುಖ್ಯ. ಆದರೆ ಇದೊಂದು ನೆಪವಾಗಬಾರದು, ಆದ್ದರಿಂದ ಒಂದು ನಿರ್ದಿಷ್ಟವಾದ ಕೆಲಸದ ಸಮಯವನ್ನು ನಿಗದಿಪಡಿಸಿಕೊಳ್ಳಿರಿ.
  ನಿಮ್ಮ ಮನೆಗೆ ಹೋದ ನಂತರ ಹೆಚ್ಚು ಸಮಯವನ್ನು ನಿಮ್ಮ ಕುಟುಂಬದವರ ಜೊತೆ ಕಳೆಯಲು ಕಚೇರಿಯ ಕೆಲಸ ಅಲ್ಲಿಯೇ ಮುಗಿಸಲು ಪ್ರಯತ್ನಿಸಿ. ಕೆಲವೊಮ್ಮೆ ನಿಮ್ಮ ಕ್ಲೈಂಟ್ ಕಚೇರಿ ಅವಧಿಯ ನಂತರ ಯಾವುದೋ ತುರ್ತು ಕೆಲಸಕ್ಕೆ ಕರೆ ಮಾಡಬಹುದು. ಇಂತಹ ಸಮಯಗಳನ್ನು ಹೊರತುಪಡಿಸಿ ಸಾಧ್ಯವಾದಷ್ಟು ಮಟ್ಟಿಗೆ, ನಿಮ್ಮ ಕೆಲಸವನ್ನು ಕಚೇರಿಯಲ್ಲಿಯೇ ಇರಿಸಿಕೊಳ್ಳಿರಿ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು