• Home
  • »
  • News
  • »
  • career
  • »
  • Government Job: 7 ವರ್ಷಗಳಿಂದ ಆರೋಗ್ಯ ನಿರೀಕ್ಷಕರ ಹುದ್ದೆ ನಡೆದಿಲ್ಲ ನೇಮಕಾತಿ! ಸರ್ಕಾರಿ ಹುದ್ದೆಗೆ ಕಾದು ಕುಳಿತ ಆಕಾಂಕ್ಷಿಗಳು

Government Job: 7 ವರ್ಷಗಳಿಂದ ಆರೋಗ್ಯ ನಿರೀಕ್ಷಕರ ಹುದ್ದೆ ನಡೆದಿಲ್ಲ ನೇಮಕಾತಿ! ಸರ್ಕಾರಿ ಹುದ್ದೆಗೆ ಕಾದು ಕುಳಿತ ಆಕಾಂಕ್ಷಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಿಪ್ಲೋಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್ ಕೋರ್ಸ್ ಗೆ ದಾಖಲಾದ 3,000 ಕ್ಕೂ ಹೆಚ್ಚು ಯುವಕರನ್ನು ರಾಜ್ಯ ಆರೋಗ್ಯ ಇಲಾಖೆ ಇನ್ನೂ ನೇಮಕ ಮಾಡಿಕೊಂಡಿಲ್ಲ.

  • Share this:

ಈಗಂತೂ ಅನೇಕರು ಈ ಖಾಸಗಿ ಕಂಪನಿಗಳಲ್ಲಿ (Private Company) ಕೆಲಸ ಮಾಡುವುದಕ್ಕಿಂತಲೂ ಹೆಚ್ಚಾಗಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಸಿಕ್ಕಿದರೆ ಸಾಕು ಅಂತ ಹೇಳುವುದನ್ನು ನಾವೆಲ್ಲಾ ಕೇಳಿರುತ್ತೇವೆ. ಖಾಸಗಿ ಕಂಪನಿಗಳಲ್ಲಿ ಎರಡೂವರೆ ವರ್ಷದಿಂದ ಕೋವಿಡ್-19 ಸಾಂಕ್ರಾಮಿಕ ರೋಗದ  ಹಾವಳಿಂದಾಗಿ ಅನೇಕರು ಕೆಲಸ (Work) ಕಳೆದುಕೊಂಡಿರುವುದನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಇಲ್ಲಿ ಸರ್ಕಾರಿ ಕೆಲಸಗಳು ಸಹ ಸುಲಭವಾಗಿ ಏನೂ ಸಿಗುತ್ತಿಲ್ಲ ನೋಡಿ. ಹೌದು ಡಿಪ್ಲೋಮಾ (Diploma) ಇನ್ ಹೆಲ್ತ್ ಇನ್ಸ್ಪೆಕ್ಟರ್ (DHI) ಕೋರ್ಸ್ ಗೆ ದಾಖಲಾದ 3,000 ಕ್ಕೂ ಹೆಚ್ಚು ಯುವಕರನ್ನು ರಾಜ್ಯ ಆರೋಗ್ಯ ಇಲಾಖೆ ಇನ್ನೂ ನೇಮಕ ಮಾಡಿಕೊಂಡಿಲ್ಲ.


ಸರ್ಕಾರಿ ಉದ್ಯೋಗದ ಭರವಸೆಯಲ್ಲಿರುವ ಉದ್ಯೋಗಾಂಕ್ಷಿಗಳು


ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಭರವಸೆಯಲ್ಲಿ ಅನೇಕರು ರಾಜ್ಯ ಸರ್ಕಾರ ಅನುಮೋದಿಸಿದ ಕೋರ್ಸ್ ಗೆ ದಾಖಲಾಗುತ್ತಾರೆ. ಕಳೆದ ಏಳು ವರ್ಷಗಳಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಖಾಲಿ ಇರುವ 2,692 ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. "ನಮ್ಮಲ್ಲಿ ಅನೇಕರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದವರು ಮತ್ತು ಇದು ಉದ್ಯೋಗ ಆಧಾರಿತವಾಗಿರುವುದರಿಂದ ಈ ಕೋರ್ಸ್ ಅನ್ನು ಮುಂದುವರಿಸಿದ್ದೇವೆ" ಎಂದು ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಕ ಉದ್ಯೋಗಾಕಾಂಕ್ಷಿಗಳ ಸಂಘದ ಅಧ್ಯಕ್ಷ ಶರತ್ ಎನ್ ಅವರು ಸುದ್ದಿ ಮಾಧ್ಯಮಕ್ಕೆ ಹೇಳಿದರು. ಡಿಪ್ಲೊಮಾ ಹೊಂದಿರುವವರು ಖಾಸಗಿ ವಲಯದಲ್ಲಿ ಯಾವುದೇ ಉದ್ಯೋಗ ಅವಕಾಶಗಳನ್ನು ಹೊಂದಿಲ್ಲ ಮತ್ತು ಸರ್ಕಾರಿ ವಲಯದ ಉದ್ಯೋಗಗಳನ್ನು ಮಾತ್ರ ಅವಲಂಬಿಸಿದ್ದಾರೆ ಎಂದು ಅವರು ಹೇಳಿದರು.


ಇದನ್ನೂ ಓದಿ: ನೋಟಿಸ್ ಪಿರಿಯಡ್ ಈಗ 3 ತಿಂಗಳಂತೆ! ಶುರುವಾಗಿದೆ ಉದ್ಯೋಗಿಗಳ ಚರ್ಚೆ


ಆರೋಗ್ಯ ಪರಿವೀಕ್ಷಕರು ಈ ರೋಗವಾಹಕ-ಜನ್ಯ ರೋಗಗಳನ್ನು ನಿಯಂತ್ರಿಸಲು ಸ್ಥಳದಲ್ಲಿ ಏನೆಲ್ಲಾ ನಡೀತಾ ಇದೆ ಅಂತ ತಿಳಿದುಕೊಳ್ಳುವಲ್ಲಿ ಕೆಲಸ ಮಾಡುತ್ತಾರೆ. ಹಿರಿಯ ಆರೋಗ್ಯ ಅಧಿಕಾರಿಗಳು ಖಾಲಿ ಇರುವ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಬೇಕು ಎಂದು ಹೇಳಿದರು.


ಸ್ಥಳಿಯವಾಗಿ ಕೆಲಸ ಮಾಡುವವರ ಅಗತ್ಯ ತುಂಬಾನೇ ಇದೆ


"ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಕೋವಿಡ್ -19 ಸಾಂಕ್ರಾಮಿಕವು ಸಾರ್ವಜನಿಕ ವಲಯಕ್ಕೆ ತೀವ್ರ ಹೊಡೆತ ನೀಡಿದೆ. ಆದ್ದರಿಂದ, ಸಾಂಕ್ರಾಮಿಕ ರೋಗಗಳನ್ನು ತಡೆಯಲು ನಮಗೆ ಸ್ಥಳಿಯವಾಗಿ ಕೆಲಸ ಮಾಡುವ ಜನರು ಬೇಕು" ಎಂದು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಹಾಯಕ ಕೀಟಶಾಸ್ತ್ರಜ್ಞರೊಬ್ಬರು ಹೇಳಿದರು. "ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ನಾವು ಕ್ರಿಯಾ ಯೋಜನೆಗಳನ್ನು ರೂಪಿಸುತ್ತಿದ್ದರೂ, ಅವುಗಳನ್ನು ಸ್ಥಳಿಯವಾಗಿ ಕಾರ್ಯಗತಗೊಳಿಸಲು ನಮಗೆ ಆರೋಗ್ಯ ಪರಿವೀಕ್ಷಕರು ಮತ್ತು ಸಹಾಯಕ ನರ್ಸ್ ಗಳು ಎಂದರೆ ಶುಶ್ರೂಷಕಿಯರು ಸಹ ಅಗತ್ಯವಿದೆ" ಎಂದು ತಿಳಿಸಿದರು.


ಇದನ್ನೂ ಓದಿ: ಡಾಟಾ ಎಂಟ್ರಿ ಆಪರೇಟರ್​ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು


ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೂ ಸಹ ಬೇಡಿಕೆ ಹೆಚ್ಚಿರುತ್ತದೆ


ನಾವು 2,692 ಹುದ್ದೆಗಳನ್ನು ಭರ್ತಿ ಮಾಡಿದರೂ, ಬೇಡಿಕೆ ಹೆಚ್ಚಿರುತ್ತದೆ ಎಂದು ಅವರು ಹೇಳಿದರು. ಈ ಬಗ್ಗೆ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ರಾಜ್ಯ ಆರೋಗ್ಯ ಆಯುಕ್ತ ರಂದೀಪ್ ಡಿ ತಿಳಿಸಿದ್ದಾರೆ. "ನಾವು ಅನುಮೋದನೆಗಾಗಿ ಕಾಯುತ್ತಿದ್ದೇವೆ. ಅನುಮೋದನೆ ಪಡೆದ ನಂತರ ನಾವು ನೇಮಕಾತಿಯನ್ನು ಪ್ರಾರಂಭಿಸುತ್ತೇವೆ. ವಿವಿಧ ವರ್ಗದ ಆರೋಗ್ಯ ಕಾರ್ಯಕರ್ತರನ್ನು ಸ್ಥಳಿಯವಾಗಿ ನಿಯೋಜಿಸಿರುವುದರಿಂದ, ನಾವು ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಉತ್ತಮಗೊಳಿಸಬೇಕಾಗಿದೆ" ಎಂದು ಅವರು ಹೇಳಿದರು.


ಕೋರ್ಸ್ ಗಳು ಹೀಗೆ ಮುಂದುವರಿಯುತ್ತವೆ..


ಏಳು ವರ್ಷಗಳ ಖಾಲಿಯಿದ್ದರೂ, ಸರ್ಕಾರ ಅನುಮೋದಿತ ಸಂಸ್ಥೆಗಳು ಡಿಎಚ್‌ಐ ಕೋರ್ಸ್ ಅನ್ನು ನೀಡುವುದನ್ನು ಮುಂದುವರಿಸಿವೆ. ಆಕಾಂಕ್ಷಿಗಳು ಕೋರ್ಸ್ ಗೆ ಹೆಚ್ಚು ಜನರು ದಾಖಲಾಗುವುದನ್ನು ನಿಲ್ಲಿಸುವಂತೆ ಸರ್ಕಾರವನ್ನು ಕೇಳುತ್ತಾರೆ.


"ನೇಮಕಾತಿಯ ಕೊರತೆಯ ಹೊರತಾಗಿಯೂ, ಪ್ರತಿ ವರ್ಷ ಸುಮಾರು 500 ರಿಂದ 600 ಜನರು ಕೋರ್ಸ್ ಅನ್ನು ಪೂರ್ಣಗೊಳಿಸುತ್ತಾರೆ. ಉದ್ಯೋಗ ಒದಗಿಸಲು ಸಾಧ್ಯವಾಗದಿದ್ದರೆ ಸರ್ಕಾರ ಈ ಕೋರ್ಸ್ ಅನ್ನು ನಿಲ್ಲಿಸಬೇಕು" ಎಂದು ಶರತ್ ಹೇಳಿದರು.


ನಕಲಿ ಪ್ರಮಾಣಪತ್ರಗಳು


ನಕಲಿ ಪ್ರಮಾಣಪತ್ರಗಳು ಸಮಸ್ಯೆಯಾಗಿಯೇ ಉಳಿದಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. "2000 ರ ದಶಕದಿಂದ ಹಠಾತ್ತನೆಯಾಗಿ ಬೆಳೆದ ಕಾಲೇಜುಗಳು ಈ ಕೋರ್ಸ್ ಅನ್ನು ನೀಡುತ್ತವೆ. ಅವರಲ್ಲಿ ಅನೇಕರಿಗೆ ಕಾರ್ಯನಿರ್ವಹಿಸಲು ಪರವಾನಗಿ ಸಹ ಇಲ್ಲ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

First published: