• Home
  • »
  • News
  • »
  • career
  • »
  • Fresher vs Experienced: ಆಫೀಸ್​ನಲ್ಲಿ ಫ್ರೆಶರ್ಸ್ ಜಾಸ್ತಿ ಇರಬೇಕಾ, ಅನುಭವಿ ಉದ್ಯೋಗಿಗಳು ಹೆಚ್ಚಾಗಿರಬೇಕಾ?

Fresher vs Experienced: ಆಫೀಸ್​ನಲ್ಲಿ ಫ್ರೆಶರ್ಸ್ ಜಾಸ್ತಿ ಇರಬೇಕಾ, ಅನುಭವಿ ಉದ್ಯೋಗಿಗಳು ಹೆಚ್ಚಾಗಿರಬೇಕಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಸಬರಿಗೆ ಕೆಲಸ ಕಲಿಸಿ ಅವರಿಂದ ಒಳ್ಳೆಯ ಕೆಲಸ ತೆಗೆಯುವುದು ಎಷ್ಟು ಮುಖ್ಯವೋ, ಅನುಭವಿಗಳಿಂದ ಕೆಲಸ ಮಾಡಿಸುವುದು ಕೂಡ ಒಂದು ಕಲೆ. ಹೇಳಿದಂತೆ ಕೇಳುತ್ತಾರೆ ಎಂದು ಹೊಸ ಉದ್ಯೋಗಿಗಳಿಗಷ್ಟೇ ಟಾಸ್ಕ್​ಗಳನ್ನು ಕೊಟ್ಟರೆ, ಅನುಭವಿಗಳ ಮೇಲೆ ನಿಮಗೆ ಹಿಡಿತ ಇಲ್ಲ ಎಂಬಂತೆ ಆಗುತ್ತದೆ.

  • Share this:

ಹಳೆ ಬೇರು, ಹೊಸ ಚಿಗುರು (Old and New) ಸೇರಿದರಷ್ಟೇ ಮರವೊಂದು ಸಮೃದ್ಧವಾಗಿರುವುದು ಎಂದು ಹೇಳಲಾಗುತ್ತದೆ. ಹಳೆ-ಹೊಸದುಗಳ ಮಧ್ಯೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇನ್ನು ಆಫೀಸ್ (Office Work) ವಿಚಾರಕ್ಕೆ ಬಂದರೂ ಫ್ರೆಶರ್ಸ್​ (Fresher), ಅನುಭವಿ ಉದ್ಯೋಗಿಗಳ (Experienced Employees) ನಡುವೆ ಹೋಲಿಕೆ ಇದ್ದೇ ಇರುತ್ತೆ. ಇಂದಿನ ವಿಚಾರ ಕಚೇರಿ ಒಂದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫ್ರೆಶರ್ಸ್​ ಇರಬೇಕೇ ಇಲ್ಲ, ಅನುಭವಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿರಬೇಕೇ ಎಂಬುವುದಾಗಿದೆ. ಹೊಸಬರು, ಹಳಬರಲ್ಲಿ ಯಾರ ಸಂಖ್ಯೆ ಹೆಚ್ಚಿನದ್ದರೆ ಆಫೀಸ್​ ಕೆಲಸಗಳು ಚೆನ್ನಾಗಿ ನಡೆಯುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಹಳೆ ತಲೆಗಳೇ ಬೇಕೇ, ಹೊಸ ರಕ್ತದ ಯುವಜನತೆ ಸಾಕೇ ಎಂಬುವುದು ಚರ್ಚೆಯ ವಿಷಯವಾಗಿದೆ.


ಫ್ರೆಶರ್ಸ್​ ಏಕೆ ಬೇಕು?


ಆಗಷ್ಟೇ ಕಾಲೇಜು ಶಿಕ್ಷಣ ಮುಗಿಸಿರುವ ಯುವ ಜನರಲ್ಲಿ ಕೆಲಸ ಗಿಟ್ಟಿಸಬೇಕು, ಸಿಕ್ಕ ಕೆಲಸದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಕೆಲಸವನ್ನು ಬೇಗ ಕಲಿಯಬೇಕು. ತಾವು ಮಾಡುವ ಕೆಲಸದಲ್ಲಿ ಬೇಷ್ ಎನಿಸಿಕೊಳ್ಳಬೇಕು ಎಂಬ ಹಂಬಲ ಇರುತ್ತದೆ. ಜೊತೆಗೆ ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಎಲ್ಲವನ್ನು ಕಲಿಯಲೇ ಬೇಕು ಎಂಬ ಒತ್ತಡ ಇರುತ್ತದೆ. ಯಾವುದೇ ಸಣ್ಣಪುಟ್ಟ ಕೆಲಗಳನ್ನು ಮಾಡಲು ಇವರು ಹಿಂಜರಿಯುವುದಿಲ್ಲ. ಹೊಸ ಆಲೋಚನೆಗಳು, ಕೆಲಸವನ್ನು ಸುಲಭವಾಗಿ ಮಾಡುವ ಚಾಕಚಕ್ಯತೆ ಕೂಡ ಇರುತ್ತದೆ.




ಅನುಭವಿ ಉದ್ಯೋಗಿಗಳು ಏಕೆ ಬೇಕು?


ಯಾವುದೇ ಕ್ಷೇತ್ರದಲ್ಲಿ ಅನುಭವಿಗಳು ಕೆಲಸಕ್ಕೆ ಹೆಚ್ಚಿನ ಮೌಲ್ಯವನ್ನು ತಂದು ಕೊಡುತ್ತಾರೆ. ಈಗಾಗಲೇ ಹಲವು ತಪ್ಪುಗಳನ್ನು ಮಾಡಿ ತಿದ್ದಿಕೊಂಡಿರುತ್ತಾರೆ, ಜೊತೆಗೆ ಬೇರೆಯವರ ತಪ್ಪುಗಳನ್ನು ನೋಡಿ ತಿಳಿವಳಿಕೆ ಬಂದಿರುತ್ತದೆ. ಆಫೀಸ್​ನಲ್ಲಿ ಹೇಗಿರಬೇಕು, ಯಾವುದಕ್ಕೆ ಎಷ್ಟು ಮಹತ್ವ ನೀಡಿ ಕೆಲಸ ಮಾಡಬೇಕು ಎಂಬ ಅರಿವು ಇರುತ್ತದೆ. ಕಂಪನಿಯ ನಿಯಮಗಳ ಬಗ್ಗೆ ಸ್ಪಷ್ಟತೆ ಇರುತ್ತದೆ. ಮುಖ್ಯವಾಗಿ ಹೊಸಬರಿಗೆ ಕೆಲಸ ಹೇಳಿಕೊಡುವ ಸಾಮರ್ಥ್ಯ ಇರುತ್ತದೆ. ಇನ್ನು ಆಫೀಸ್​ ಲವ್, ಆಫೀಸ್​ ರಾಜಕೀಯ, ಗಾಸಿಪ್​ ಗಳ ಬಗ್ಗೆ ಏಕೆ ತಲೆಕೆಡಿಕೊಳ್ಳಬಾರದು ಎಂಬುವುದು ಅನುಭವದಿಂದಲೇ ಬರುವಂತದ್ದು.


ಯಾವುದು ಸಮಸ್ಯೆಯಾಗಬಹುದು?


1) ಸಂಬಳದ ವಿಚಾರವಾಗಿ ಕಡಿಮೆ ಸಂಬಳಕ್ಕೆ ಬರುವ ಫ್ರೆಶರ್ಸ್​​ಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳುವುದು.


2) ಕೇವಲ ಎಕ್ಸ್​​ಪಿರಿಯನ್ಸ್​ ಇರುವ ಉದ್ಯೋಗಿಗಳನ್ನಷ್ಟೇ ನೇಮಿಸಿಕೊಳ್ಳುವುದು ಕೂಡ ಒಳ್ಳೆಯದಲ್ಲ.


3) ಎಲ್ಲರೂ ಹೊಸಬರೇ ಆದರೆ ಅವರಿಗೆ ಕೆಲಸ ಹೇಳಿಕೊಡುವವರು ಯಾರು? ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸುವುದು ಸವಾಲಾಗುತ್ತದೆ.


4) ಹೊಸಬರನ್ನು ನೇಮಿಸಿಕೊಂಡು ಅನುಭವಿಗಳನ್ನು ಕಡೆಗಣಿಸುವುದು ಆಫೀಸ್​ ವಾತಾವರಣ, ಕಚೇರಿಯ ಹೆಸರನ್ನು ಹಾಳು ಮಾಡುತ್ತದೆ.


5) ಹೊಸಬರು ತಪ್ಪುಗಳನ್ನು ಮಾಡುತ್ತಾರೆ, ಅದರಿಂದಲೇ ಕಲಿಯುತ್ತಾರೆ. ತಪ್ಪು ಮಾಡಿದಾಗ ಆಗುವ ನಷ್ಟಕ್ಕೆ ಅವರನ್ನು ಹೊಣೆ ಮಾಡಲು ಸಾಧ್ಯವಿಲ್ಲ. ದೊಡ್ಡ ಕ್ರಮವನ್ನು ತೆಗೆದುಕೊಳ್ಳಲು ಆಗುವುದಿಲ್ಲ.




ಮ್ಯಾನೇಜರ್​/ ಟೀಂ ಲೀಡರ್​ ಕೆಲಸವೇನು?


ಕಚೇರಿ ಕೆಲಸಗಳ ಯಶಸ್ಸು ಎಂದಿಗೂ ನಾಯಕನ ಮೇಲೆ ಅವಲಂಬಿತವಾಗಿರುತ್ತದೆ. ಹೊಸಬರಿಗೆ ಕೆಲಸ ಕಲಿಸಿ ಅವರಿಂದ ಒಳ್ಳೆಯ ಕೆಲಸ ತೆಗೆಯುವುದು ಎಷ್ಟು ಮುಖ್ಯವೋ, ಅನುಭವಿಗಳಿಂದ ಕೆಲಸ ಮಾಡಿಸುವುದು ಕೂಡ ಒಂದು ಕಲೆ. ಹೇಳಿದಂತೆ ಕೇಳುತ್ತಾರೆ ಎಂದು ಹೊಸ ಉದ್ಯೋಗಿಗಳಿಗಷ್ಟೇ ಟಾಸ್ಕ್​ಗಳನ್ನು ಕೊಟ್ಟರೆ, ಅನುಭವಿಗಳ ಮೇಲೆ ನಿಮಗೆ ಹಿಡಿತ ಇಲ್ಲ ಎಂಬಂತೆ ಆಗುತ್ತದೆ. ಯಾವುದೇ ಪ್ರಾಜೆಕ್ಟ್​​ಗೆ ಹೆಚ್ಚಿನ ಮೌಲ್ಯ ತಂದು ಕೊಡುವಲ್ಲಿ ಅನುಭವಿ ಉದ್ಯೋಗಿಗಳ ಶ್ರಮ ತುಂಬಾನೇ ಮುಖ್ಯ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸುವುದು ನಾಯಕರಾದವರ ಜವಾಬ್ದಾರಿಯಾಗಿರುತ್ತದೆ.


ಇನ್ನು ಸಂಖ್ಯೆಯ ವಿಚಾರಕ್ಕೆ ಬಂದರೆ ಕಚೇರಿವೊಂದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫ್ರೆಶರ್ಸ್​​​​​​ ಇರಬಹುದು, ಆದರೆ ಶೇ.60ಕ್ಕಿಂತ ಹೆಚ್ಚು ಇರುವುದು ಸಮಸ್ಯೆಯನ್ನು ಸೃಷ್ಟಿಸಬಹುದು. ಅನುಭವಿ ಉದ್ಯೋಗಿಗಳ ಸಂಖ್ಯೆಗಿಂತ ಇರುವವರನ್ನು ಎಷ್ಟು ಸೂಕ್ತವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುವುದು ಮುಖ್ಯವಾಗುತ್ತದೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು