Anxiety and Depression: ಇಂಡಿಯಾ ಇಂಕ್‌ನಲ್ಲಿ ಕೆಲಸ ಮಾಡುವ 10ರಲ್ಲಿ ನಾಲ್ವರು ಖಿನ್ನತೆಯಿಂದ ಬಳಲುತ್ತಿದ್ದಾರಂತೆ!

ಇತ್ತೀಚಿನ ಒಂದು ವರದಿ ಹೇಳಿರುವ ಪ್ರಕಾರ ಭಾರತದಲ್ಲಿನ ಹಲವಾರು ಕಂಪನಿಗಳ ಉದ್ಯೋಗಿಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ. ಎಷ್ಟರ ಮಟ್ಟಿಗೆ ಅಂದರೆ ಹತ್ತರಲ್ಲಿ ನಾಲ್ವರು ಉದ್ಯೋಗಿಗಳ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಿನ ಜೀವನ ಶೈಲಿ ಪ್ರತಿಯೊಬ್ಬರಲ್ಲೂ ದುಗುಡ, ಒತ್ತಡ, ಆತಂಕ, ಖಿನ್ನತೆಯನ್ನು ಉಂಟು ಮಾಡುತ್ತಿದೆ. ತರಾತುರಿಯ ಜೀವನ, ಕಚೇರಿಯ ಒತ್ತಡದ ಕೆಲಸ (Stressful work) ಹೀಗೆ ಪ್ರತಿಯೊಂದಕ್ಕೂ ಒತ್ತಡಕ್ಕೆ ಒಳಗಾಗುವ ನಾವು ಜೊತೆಜೊತೆಗೆ ಇನ್ನಿಲ್ಲದ ಮಾನಸಿಕ ಅನಾರೋಗ್ಯ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಮುಖ್ಯವಾಗಿ ಹಲವಾರಿಗೆ ಕಚೇರಿಯ ಕೆಲಸ (Office work) ಸಾಕಷ್ಟು ಒತ್ತಡ ನೀಡುತ್ತಿದೆ. ಅದರಲ್ಲೂ ಕೆಲ ದೊಡ್ಡ-ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಮಾನಸಿಕವಾಗಿ ದುರ್ಬಲರಾಗಿದ್ದು, ಒಂದು ರೀತಿಯ ಯಾಂತ್ರಿಕ ಬದುಕು ನಡೆಸುತ್ತಾರೆ ಎಂದರೂ ತಪ್ಪಿಲ್ಲ. ಹಲವು ಕಂಪನಿಗಳು (Company) ತನ್ನ ಉದ್ಯೋಗಿಗಳಿಗೆ (Employees) ಮಾನಸಿಕವಾಗಿ ಯಾವುದೇ ಒತ್ತಡ ಹೇರಬಾರದು ಎಂದು ವಾರಕ್ಕೊಮ್ಮೆ ಅವರನ್ನು ಕೆಲಸದ ಗೋಜಿನಿಂದ ಹೊರತರಲು ಕೆಲವು ಚಟುವಟಿಕೆಗಳನ್ನು ಸಹ ಮಾಡಿಸುತ್ತಾರೆ.

ಆದಾಗ್ಯೂ ಹಲವು ಕಂಪನಿಗಳ ಉದ್ಯೋಗಿಗಳು ಈ ರೀತಿಯ ಸಮಸ್ಯೆಯಲ್ಲಿ ಸಿಲುಕಿ ಕೊಂಡಿರುತ್ತಾರೆ. ಕೋವಿಡ್‌ ನಂತರ ಒತ್ತಡ, ಆತಂಕ, ಖಿನ್ನತೆಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದು ತಜ್ಞರು ಕೂಡ ಎಚ್ಚರಿಸುತ್ತಿದ್ದಾರೆ. ಇತ್ತೀಚಿನ ಒಂದು ವರದಿ ಹೇಳಿರುವ ಪ್ರಕಾರ ಭಾರತದಲ್ಲಿನ ಹಲವಾರು ಕಂಪನಿಗಳ ಉದ್ಯೋಗಿಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ. ಎಷ್ಟರ ಮಟ್ಟಿಗೆ ಅಂದರೆ ಹತ್ತರಲ್ಲಿ ನಾಲ್ವರು ಉದ್ಯೋಗಿಗಳ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಹತ್ತರಲ್ಲಿ ನಾಲ್ವರು ಖಿನ್ನತೆ, ಒತ್ತಡ, ಆತಂಕಗಳಿಂದ ಬಳಲುತ್ತಿದ್ದಾರೆ
ಹೌದು, ಜಾಗತಿಕ ಸಲಹಾ ಸಂಸ್ಥೆ ಮೆಕಿನ್ಸೆ ನಡೆಸಿದ ಅಧ್ಯಯನದ ಪ್ರಕಾರ ಇಂಡಿಯಾ ಇಂಕ್‌ನಲ್ಲಿ ಕೆಲಸ ಮಾಡುವ ಪ್ರತಿ 10 ಜನರಲ್ಲಿ ನಾಲ್ವರು ಹೆಚ್ಚಿನ ಮಟ್ಟದ ದಣಿವು, ಯಾತನೆ, ಆತಂಕ ಮತ್ತು ಖಿನ್ನತೆಯನ್ನು ತೋರಿಸುತ್ತಿದ್ದಾರೆ. ಯಾಕೆ ಹೀಗೆ ಎಂಬುವುದಕ್ಕೆ ಮೆಕಿನ್ಸೆ ಕಾರಣ ಕೂಡ ಬಹಿರಂಗ ಮಾಡಿದೆ. ಭಾರತದಲ್ಲಿ ಕಂಪನಿಯಲ್ಲಿ ಕೆಲಸ ಮಾಡುವ 10 ರಲ್ಲಿ ನಾಲ್ವರು ಈ ರೀತಿಯಾದ ಹೆಚ್ಚಿನ ಮಟ್ಟದ ಆತಂಕ, ಖಿನ್ನತೆಯನ್ನು ಅನುಭವಿಸಲು ಕಾರಣ ಕೆಲಸದ ಸ್ಥಳ ಎಂಬ ಆತಂಕಕಾರಿ ವಿಚಾರವನ್ನು ಬಯಲು ಮಾಡಿದೆ.

ಜಾಗತಿಕ ಸಲಹಾ ಸಂಸ್ಥೆ ಮೆಕಿನ್ಸೆ ವರದಿ ಏನು ಹೇಳಿದೆ?
ಜಾಗತಿಕ ಸಲಹಾ ಸಂಸ್ಥೆ ಮೆಕಿನ್ಸೆ ವರದಿಯ ಹೇಳಿಕೆಯ ಪ್ರಕಾರ "ಭಾರತೀಯ ಪ್ರತಿಸ್ಪಂದಕರು ಒತ್ತಡ, ಒಂದು ರೀತಿಯ ಯಾತನೆ, ಆತಂಕ ಮತ್ತು ಖಿನ್ನತೆಯಂತಹ ಪ್ರತಿ ಫಲಿತಾಂಶದ ಉನ್ನತ ದರಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರತಿ ಫಲಿತಾಂಶದ ಅಂಶಕ್ಕೆ, ಪ್ರತಿ ಹತ್ತರಲ್ಲಿ ನಾಲ್ವರು ಈ ರೀತಿಯಾದ ಸ್ಥಿತಿಯನ್ನು ವರದಿ ಮಾಡಿದ್ದಾರೆ" ಎಂದು ವರದಿ ಹೇಳಿದೆ. ತಂಡವು ನಡೆಸಿದ ಅಧ್ಯಯನವು ಭಾರತದಲ್ಲಿ ಕಾರ್ಯಸ್ಥಳದ ಕಾರಣದಿಂದಾಗಿ ಉಂಟಾಗಿದೆ ಎಂಬುದನ್ನು ವರದಿ ಮಾಡಿದೆ.

ಇದನ್ನೂ ಓದಿ: Millionaires: 2030ರಲ್ಲಿ ಶ್ರೀಮಂತ ರಾಷ್ಟ್ರವಾಗಲಿದ್ಯಾ ಭಾರತ? ಮಿಲಿಯನೇರ್‌ಗಳ ಸಂಖ್ಯೆ ಹೆಚ್ಚಾಗಲಿದೆ ಅಂತಿದೆ ಈ ರಿಪೋರ್ಟ್!

"ಇಂತಹ ನಡವಳಿಕೆಯು 90% ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಹೊರಹೋಗುವ ಉದ್ದೇಶವನ್ನು ಸೂಚಿಸುತ್ತದೆ, ಉದ್ಯೋಗಿಗಳು ಜಾಗತಿಕ ಸರಾಸರಿಗಿಂತ ಸುಮಾರು 60% ರಷ್ಟು ಹೆಚ್ಚಿನ ಮಟ್ಟದಲ್ಲಿ ತಮ್ಮ ಕೆಲಸವನ್ನು ತೊರೆಯುವ ಬಯಕೆಯನ್ನು ವರದಿ ಮಾಡುತ್ತಾರೆ" ಎಂದು ಮೆಕಿನ್ಸೆ ವರದಿ ಹೇಳಿದೆ.

ಸಮೀಕ್ಷೆ ನಡೆದಿದ್ದು ಹೇಗೆ?
ಮೆಕಿನ್ಸೆ ಹೆಲ್ತ್ ಇನ್ಸ್ಟಿಟ್ಯೂಟ್ ಫೆಬ್ರವರಿಯಿಂದ ಏಪ್ರಿಲ್ 2022 ರವರೆಗೆ ಈ ಅಧ್ಯಯನವನ್ನು ನಡೆಸಿತು. ಅವರು 15 ದೇಶಗಳಲ್ಲಿ 15,000 ಉದ್ಯೋಗಿಗಳು ಮತ್ತು 1,000 ಕಂಪನಿಯ ಹೆಚ್‌ ಆರ್‌ ಗಳನ್ನು ಸಮೀಕ್ಷೆ ಮಾಡಿದರು, ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ಚೀನಾ ಏಷ್ಯಾದ ಭಾಗಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಇವರ ಸಮೀಕ್ಷೆಯ ಆಧಾರದ ಮೇಲೆ ಭಾರತೀಯ ಕಂಪನಿಗಳಲ್ಲಿ ಕೆಲಸ ಮಾಡುವ ಹತ್ತರಲ್ಲಿ ನಾಲ್ವರು ಆತಂಕ, ಖಿನ್ನತೆ, ಒತ್ತಡದಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿರುವುದನ್ನು ವರದಿ ಮಾಡಿದೆ.

ಇದನ್ನೂ ಓದಿ:  Anand Mahindra: ಮತ್ತೊಬ್ಬರ ಕಲೆ ಗುರುತಿಸುವುದು ನಿಜವಾದ ಟ್ಯಾಲೆಂಟ್​! ಅದ್ರಲ್ಲಿ ಬೆಸ್ಟ್​ ಆನಂದ್ ಮಹೀಂದ್ರಾ, ಏನ್​ ಮಾಡಿದ್ದಾರೆ ನೋಡಿ

ಕೆಲ ತಿಂಗಳ ಹಿಂದೆ ಕೂಡ ಅಧ್ಯಯನವೊಂದು ಕೋವಿಡ್‌ ನಂತರದ ದಿನಗಳಲ್ಲಿ ಭಾರತೀಯ ಕಂಪನಿಗಳಲ್ಲಿ ಕೆಲಸ ಮಾಡುವವರ ಮಾನಸಿಕ ಸ್ಥಿತಿ ಬದಲಾಗಿದೆ ಎಂದು ತಿಳಿಸಿತ್ತು. ಸೈಕಲಾಜಿಕಲ್ ಹೆಲ್ತ್ ಪ್ಲಾಟ್‌ಫಾರ್ಮ್ ಇನ್ನರ್‌ಹೌರ್‌ನ ಡೇಟಾವು ಅದರ ಸಹಾಯವಾಣಿಗಳಲ್ಲಿ ಕೌನ್ಸೆಲಿಂಗ್ ಬೆಂಬಲವನ್ನು ಕೋರಿ ಕರೆ ಮಾಡುವವರ ಪ್ರಮಾಣವು ಸಾಂಕ್ರಾಮಿಕ ಪೂರ್ವದ ಸಮಯದಲ್ಲಿದ್ದಕ್ಕಿಂತ 6-7 ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.
Published by:Ashwini Prabhu
First published: