ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ (New Year- 2023) ಕಾಲಿಡಲಿದ್ದೇವೆ. 2023ನೇ ವರ್ಷ ನಿಜಕ್ಕೂ ಸವಾಲಿನದ್ದಾಗಲಿದೆ. ಏಕೆಂದರೆ ಈಗಾಗಲೇ ಆರ್ಥಿಕ ಹಿಂಜರಿತದ (Economic Recession) ಭಯದಿಂದ ವಿಶ್ವದ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ (Layoffs). ಆ ಮೂಲಕ ಮುಂಬರುವ ಆರ್ಥಿಕ ಹಿಂಜರಿತದ ಸಮಯವನ್ನು ನಿಭಾಯಿಸಲು ಹೋರಾಡುತ್ತಿವೆ. ಇನ್ನು ಉದ್ಯೋಗಿಗಳು ಲೇ ಆಫ್ ಭಯದಿಂದಲೇ ಆಫೀಸ್ಗೆ ಕಾಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಹಿಂಜರಿತದ ಬಿಸಿ ಎಲ್ಲಾ ವಲಯಗಳಿಗೂ ತಟ್ಟಲಿದೆ. ಇನ್ನು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಗೊಳಗಾಗುವುದು ಸಾಮಾನ್ಯ. ಆದರೆ ಕೆಲವೊಂದು ತಯಾರಿಗಳ ಮೂಲಕ ಉದ್ಯೋಗಿಗಳು ತಮ್ಮ ಕೆಲಸವನ್ನು ಉಳಿಸಿಕೊಳ್ಳಲು ಹಾಗೂ ಆರ್ಥಿಕ ಹಿಂಜರಿತ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಿದೆ.
ಬ್ರಿಟನ್ ಆರ್ಥಿಕ ಸಂಕಷ್ಟವನ್ನು ಘೋಷಿಸಿದೆ. ಇದಕ್ಕೆ ತಯಾರಿರುವಂತೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ತಮ್ಮ ಪ್ರಜೆಗಳಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ವೆಚ್ಚವನ್ನು ಸರಿದೂಗಿಸಲು ಕಂಪನಿಗಳು ನೌಕರರ ಸಂಖ್ಯೆಯನ್ನು ಕಡಿತಗೊಳಿಸುತ್ತಿದೆ.
ಈ ಎಲ್ಲಾ ಬೆಳವಣಿಗೆಯಿಂದ ಜನಸಾಮಾನ್ಯರು ಆತಂಕಕ್ಕೆ ಒಳಗಾಗುವುದು ಕಾಮನ್. ಆದರೆ ಒಂದು ವಿಷಯವನ್ನು ನಾವಿಲ್ಲಿ ಮರೆಯಬಾರದು. ವಿಶ್ವ ಈ ಹಿಂದೆಯೂ ಆರ್ಥಿಕ ಹಿಂಜರಿತಗಳನ್ನು ನೋಡಿದೆ, ಜೊತೆಗೆ ಅದರಿಂದ ಯಶಸ್ವಿಯಾಗಿ ಹೊರ ಬಂದಿದೆ. ಈ ಬಾರಿಯೂ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುವುದು, ಒಂದಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.
ಇದನ್ನೂ ಓದಿ: Savings Tips: ಇಬ್ಬರೂ ಸೇರಿ ಸೇವಿಂಗ್ಸ್ ಮಾಡ್ತಿರೋ ದಂಪತಿಗಳೇ ಹೆಚ್ಚು ಖುಷಿಯಾಗಿರೋದಂತೆ!
ಎಕನಾಮಿಕ್ ರಿಸೆಷನ್ಗೆ ತಯಾರಿ ಈ ರೀತಿ ಇರಲಿ
1) ಸಂಬಳ ಒಂದೇ ನಿಮ್ಮ ಆದಾಯದ ಮೂಲವಾಗಿದ್ದರೆ, ಬೇರೊಂದು ಮೂಲವನ್ನು ಹುಡುಕಿಕೊಳ್ಳಿ. ನಿಮ್ಮಲ್ಲಿರುವ ಪ್ರತಿಭೆ, ಕೌಶಲ್ಯದಿಂದ ಸಣ್ಣ ಪ್ರಮಾಣದ ಆದಾಯವಾದರೂ ಬರುವಂತೆ ಮಾಡಿಕೊಳ್ಳಿ.
2) ಇಷ್ಟು ದಿನಗಳ ಕಾಲ ನಿಮ್ಮ ವೇತನದಿಂದ ಉಳಿತಾಯ ಮಾಡಿದ್ದರೆ ಅಥವಾ ನೀವೇ ಯಾರಿಗಾದರು ಸಾಲವನ್ನು ಕೊಟ್ಟಿದ್ದರೆ ಆ ಹಣವನ್ನು ಪಡೆದುಕೊಳ್ಳಿ. ಕಷ್ಟ ಕಾಲದಲ್ಲಿ ಈ ಹಣ ನಿಮ್ಮ ಸಹಾಯಕ್ಕೆ ಬರಬಹುದು.
3) ಸದ್ಯದ ಪರಿಸ್ಥಿತಿಯಲ್ಲಿ ಮನೆಗೆ ದೊಡ್ಡ ಮೊತ್ತದ ವಸ್ತುಗಳನ್ನು ತರುವುದನ್ನು ಮುಂದೂಡಿ. ಕಾರು, ವಾಷಿಂಗ್ ಮಿಷನ್ ಖರೀದಿ, ಪ್ರವಾಸ ಹೋಗಲು ನಿರ್ಧರಿಸಿದ್ದರೆ ಅದನ್ನು ಸದ್ಯಕ್ಕೆ ನಿಲ್ಲಿಸಿ. ಇವುಗಳಲ್ಲಿ ಖರ್ಚಾಗುವ ಹಣ ನಿಮಗೆ ಮುಂದೆ ಬೇಕಾಗಬಹುದು.
4) ರಿಸೆಷನ್ ಇರಲಿ, ಇಲ್ಲದಿರಲಿ. ಪ್ರತಿ ತಿಂಗಳ ನಿಮ್ಮ ಹಣದ ಬಗ್ಗೆ ಪ್ಲ್ಯಾನ್ ಇರಬೇಕು. ಆಗ ಅನಗತ್ಯವಾಗಿ ಖರ್ಚು ಮಾಡುವುದನ್ನು ತಡೆಯಬಹುದು. ಸರಿಯಾದ ಕ್ರಮದಲ್ಲಿ ಉಳಿತಾಯ ಮಾಡಬಹುದು.
5) ಉದ್ಯೋಗಿಗಳೇ ನಿಂತ ನೀರಾಗಬೇಡಿ, ಹೊಸದನ್ನು ಕಲಿಯಿರಿ. ನೀವು ಕೆಲಸ ಮಾಡುವ ಸ್ಥಳದಲ್ಲಿ ಹೊಸದನ್ನು ಕಲಿಯಲು ಪ್ರಯತ್ನಿಸಿ. ಎರಡ್ಮೂರು ಕೆಲಸಗಳ ಬಗ್ಗೆ ನಿಮಗೆ ಜ್ಞಾನವಿದ್ದರೆ ಕಂಪನಿ ನಿಮ್ಮನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಮೇಲಿನ ಅಂಶಗಳತ್ತ ಗಮನ ಕೊಡುವುದು ತುಂಬಾ ಮಖ್ಯ. ಪರ್ಯಾಯ ಆದಾಯ ಮೂಲವನ್ನು ಹುಡುಕಿಕೊಳ್ಳುವುದು. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿವುದು, ಉಳಿತಾಯವನ್ನು ಸದುಪಯೋಗಪಡಿಸಿಕೊಳ್ಳುವುದು. ಕೆಲಸ ಕಳೆದುಕೊಳ್ಳದಂತೆ ಎಚ್ಚರವಹಿಸುವುದು. ಕೆಲಸ ಕಳೆದುಕೊಂಡರೂ ಮುಂದೆ ಸಾಗಲು ಬೇಕಾದ ಕೌಶಲ್ಯ ನಿಮ್ಮಲ್ಲಿರುವುದು ತುಂಬಾ ಮುಖ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ