• Home
 • »
 • News
 • »
 • career
 • »
 • Inspirational Story: ಕನಸಿನ ಉದ್ಯೋಗ ಸಿಕ್ಕರೂ ಹತಾಶೆಯ ಜೀವನ: ಗಟ್ಟಿಗಿತ್ತಿಯ ಕಥೆ ಇದು

Inspirational Story: ಕನಸಿನ ಉದ್ಯೋಗ ಸಿಕ್ಕರೂ ಹತಾಶೆಯ ಜೀವನ: ಗಟ್ಟಿಗಿತ್ತಿಯ ಕಥೆ ಇದು

ಮಿಶೆಲ್ ಮೀಯರ್ ಶಿಪ್

ಮಿಶೆಲ್ ಮೀಯರ್ ಶಿಪ್

Michele C. Meyer: ಡ್ರೆಸ್ ಫಾರ್ ಸಕ್ಸಸ್ ಎಂಬ ಸಂಸ್ಥೆಯಿಂದ ಸಿಇಒ ಸ್ಥಾನಕ್ಕಾಗಿ ಕರೆ ಬಂದಿತು. ಈ ಸಂಸ್ಥೆಯು ಮಹಿಳೆಯರಿಗೆ ಉದ್ಯೋಗ ಹುಡುಕಲು ಹಾಗೂ ಅವರ ಸಂದರ್ಶನಕ್ಕಾಗಿ ತಯಾರಿ ನಡೆಸಲು ಸಹಾಯ ಮಾಡುವ ಲಾಭರಹಿತ ಸಂಸ್ಥೆಯಾಗಿದ್ದು, ಇದರಲ್ಲಿ ಶಿಪ್ ಅವರಿಗೆ ಒಳ್ಳೆಯ ಸಂಬಳವನ್ನೇ ನೀಡಲಾಯಿತು.

ಮುಂದೆ ಓದಿ ...
 • Share this:

  ಸಿಎನ್‍ಬಿಸಿ ಮಾಧ್ಯಮವು (CNBC Media) ತನ್ನ ಹಲವು ಕಾರ್ಯಕ್ರಮಗಳಲ್ಲಿ ಮೇಕ್ ಇಟ್ ( Make It) ಎಂಬ ಕಾರ್ಯಕ್ರಮವನ್ನೂ ಸಹ ನಡೆಸುತ್ತದೆ. ಈ ಕಾರ್ಯಕ್ರಮವು ವಾಸ್ತವದಲ್ಲಿ ಹಲವು ಪರಿಶ್ರಮಗಳಿಂದ ಜೀವನದಲ್ಲಿ ಬರುವ ಎಲ್ಲ ಅಡೆ-ತಡೆಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸಿನ ಪಥವನ್ನು ಕಂಡುಕೊಂಡಂತಹ ವ್ಯಕ್ತಿಗಳ ಜೊತೆ ಅವರು ನಡೆದು ಬಂದ ಹಾದಿ ಹಾಗೂ ದಿನಚರಿಯ ಬಗ್ಗೆ ಸಂವಾದ ನಡೆಸುತ್ತದೆ. ಇತ್ತೀಚಿಗಷ್ಟೇ ಅದು ಕಪ್ಪು ವರ್ಣದವರಾಗಿಯೂ ಸಮರ್ಥವಾಗಿ ತಮ್ಮ ಕನಸಿನ ಉದ್ಯೋಗ ಕಂಡುಕೊಂಡ, ಹತಾಶೆ ಅನುಭವಿಸಿದರೂ ಮತ್ತೆ ಎದೆಗುಂದದೆ ಮುಂದೆ ಸಾಗುತ್ತಿರುವ ಮಿಶೆಲ್ ಮೀಯರ್ ಶಿಪ್ ( Michele C. Meyer) ಅವರ ಸಂದರ್ಶನ ನಡೆಸಿದೆ. ಅದರ ಕೆಲ ಆಯ್ದ ಮುಖ್ಯಾಂಶಗಳನ್ನು ಇಲ್ಲಿ ತಿಳಿಸಲಾಗಿದೆ.


  ಮಿಶೆಲ್ ಶಿಪ್


  ಆಗಸ್ಟ್ 2020 ರಂದು ಮಿಶೆಲ್ ಶಿಪ್ ಅವರಿಗೆ ಅದೃಷ್ಟದ ವರ್ಷವಾಗಿತ್ತು. ಏಕೆಂದರೆ ಅವರಿಗೆ ತಮ್ಮ ಕನಸಿನ ಉದ್ಯೋಗ ದೊರೆತಿತ್ತು. ಅವರು ಮೇಜರ್ ಲೀಗ್ ಬೇಸ್ ಬಾಲ್ (ಎಂಎಲ್‍ಬಿ) ಸಂಸ್ಥೆಯ ಪ್ರಥಮ ಕಪ್ಪು ವರ್ಣದ ಮಹಿಳೆಯಾಗಿ ಚೀಫ್ ಪೀಪಲ್ ಆಂಡ್ ಕಲ್ಚರಲ್ ಆಫೀಸರ್ ಆಗಿ ನೇಮಕಗೊಂಡಿದ್ದರು.


  ಆದರೆ, ಈ ಉದ್ಯೋಗ ಹೆಚ್ಚು ಕಾಲ ಉಳಿಯಲಿಲ್ಲ. ಕೇವಲ ಒಂದು ವರ್ಷದ ನಂತರ ಅವರು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದರು. ಇದಕ್ಕೆ ಕಾರಣ ಅವರು ನಿರ್ವಹಿಸುತ್ತಿದ್ದ ಕೆಲಸದ ಅತಿಶಯವಾದ ಒತ್ತಡ. ಏಕೆಂದರೆ, ಕೋವಿಡ್ ಪರಿಸ್ಥಿತಿಯ ಸಮಯ ಅದಾಗಿತ್ತು. ಒಂದು ಜವಾಬ್ದಾರಿಯ ಸ್ಥಾನದಲ್ಲಿದ್ದ ಅವರು ನಿತ್ಯ ವೈವಿಧ್ಯಮಯ ಹಾಗೂ ಪೂರ್ಣವಾಗಿ ಒತ್ತಡಗಳಿಂದ ತುಂಬಿದ ಸಾಕಷ್ಟು ಕಾರ್ಯಚಟುವಟಿಕೆಗಳನ್ನು ಮಾಡಬೇಕಾಗಿತ್ತು.


  ಇದನ್ನೂ ಓದಿ: Elon Musk: ವಿಶ್ವಕ್ಕೇ ಶ್ರೀಮಂತನಾದರೂ ನಿದ್ದೆಗೆಟ್ಟು ವಾರಕ್ಕೆ 120 ಗಂಟೆ ಕೆಲಸ ಮಾಡ್ತಾರೆ ಮಸ್ಕ್


  ಶಿಪ್ ಅವರು ಹೇಳುವಂತೆ ಆ ಸಮಯ ತುಂಬಾನೇ ಕಷ್ಟಕರವಾಗಿತ್ತು, ಒಂದೆಡೆ ಕೋವಿಡ್ ಪರಿಸ್ಥಿತಿ ಹಾಗೂ ವಿಪರೀತ ಒತ್ತಡ ಇದ್ದರೆ ಇನ್ನೊಂದೆಡೆ ಕಪ್ಪು ವರ್ಣೀಯರಾದಂತಹ ಜಾರ್ಜ್ ಫ್ಲಾಯ್ಡ್, ಬ್ರಿಯೊನ್ನಾ ಟೈಲರ್ ಅವರಂತಹ ವ್ಯಕ್ತಿಗಳ ಪೊಲೀಸರಿಂದಲೇ ಹತ್ಯೆ, ಶಿಪ್ ಅವರು ಸಾಕಷ್ಟು ಆತಂಕ ಹಾಗೂ ಹತಾಶೆ ಪಡುವಂತೆ ಮಾಡಿತ್ತು.


  ಮಾಧ್ಯಮ ಸಂದರ್ಶನದಲ್ಲಿ ಈ ಬಗ್ಗೆ ವಿವರಿಸಿದ ಅವರು, "ನಾನು ಒಬ್ಬ ಸ್ವತಃ ಕಪ್ಪು ವರ್ಣೀಯಳಾಗಿದ್ದೇನೆ. ನನಗೆ ನನ್ನ ಮಕ್ಕಳ ಹಾಗೂ ಸ್ವತಃ ನನ್ನ ಸುರಕ್ಷತೆಯ ಬಗ್ಗೆ ಅತೀವ ಚಿಂತೆ ಕಾಡತೊಡಗಿತ್ತು, ನಾನು ಎಲ್ಲೋ ಕಳೆದುಕೊಂಡಿದ್ದೇನೆ ಎಂಬ ಹತಾಶೆಯ ಮನೋಭಾವ ಮೂಡಿತ್ತು" ಎಂದು ಹೇಳಿದ್ದರು.


  ಹೊಸ ಕರೆ


  ಹೀಗೆ ಸಾಕಷ್ಟು ಕಂಗೆಟ್ಟಿದ್ದ ಶಿಪ್ ಅವರು ಎಂಎಲ್‍ಬಿ ತೊರೆದು ಕೆಲ ತಿಂಗಳುಗಳಷ್ಟೇ ಆಗಿತ್ತು. ಒಂದೊಮ್ಮೆ ಅವರಿಗೆ ಡ್ರೆಸ್ ಫಾರ್ ಸಕ್ಸಸ್ ಎಂಬ ಸಂಸ್ಥೆಯಿಂದ ಸಿಇಒ ಸ್ಥಾನಕ್ಕಾಗಿ ಕರೆ ಬಂದಿತು. ಈ ಸಂಸ್ಥೆಯು ಮಹಿಳೆಯರಿಗೆ ಉದ್ಯೋಗ ಹುಡುಕಲು ಹಾಗೂ ಅವರ ಸಂದರ್ಶನಕ್ಕಾಗಿ ತಯಾರಿ ನಡೆಸಲು ಸಹಾಯ ಮಾಡುವ ಲಾಭರಹಿತ ಸಂಸ್ಥೆಯಾಗಿದ್ದು, ಇದರಲ್ಲಿ ಶಿಪ್ ಅವರಿಗೆ ಒಳ್ಳೆಯ ಸಂಬಳವನ್ನೇ ನೀಡಲಾಯಿತು.


  ಈ ಸಂದರ್ಭದಲ್ಲೂ ಶಿಪ್ ಅವರು ತಮಗಾದ ಅಹಿತಕರ ಅನುಭವದಿಂದ ಇನ್ನೂ ಹೊರಬಂದಿರಲಿಲ್ಲ. ಆದಾಗ್ಯೂ ಹೊಸ ಸಂಸ್ಥೆಯ ಧ್ಯೇಯೋದ್ದೇಶ ಶಿಪ್ ಅವರನ್ನು ಸಾಕಷ್ಟು ಆಕರ್ಷಿಸಿತ್ತು. ಏಕೆಂದರೆ ಕೋವಿಡ್ ಸಮಯದಲ್ಲಿ ಪುರುಷರಿಗಿಂತಲೂ ಹೆಚ್ಚು ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದರು ಹಾಗೂ ಮತ್ತೆ ಅವರನ್ನು ಆಯ್ಕೆ ಮಾಡಿದಾಗ ಅತಿ ಕಡಿಮೆ ಸಂಬಳ ನೀಡಲಾಗಿತ್ತು. ಹಾಗಾಗಿ ಈ ಸಂಸ್ಥೆಯ ಮೂಲಕ ಮಹಿಳೆಯರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಈ ವರ್ಷದ ಜನವರಿಯಿಂದಲೇ ಶಿಪ್ ತಮ್ಮ ಹೊಸ ಕೆಲಸ ಪ್ರಾರಂಭಿಸಿದರು.


  ಗತ ಅನುಭವ


  ಇನ್ನು, ತಮಗಾದ ಅನುಭವಕ್ಕೆ ಸಂಬಂಧಿಸಿದಂತೆ ಶಿಪ್ ಅವರು ಮಾಧ್ಯಮಕ್ಕೆ ಈ ರೀತಿ ವಿವರಿಸುತ್ತಾರೆ. "ಪ್ಯಾಂಡೇಮಿಕ್ ಸಮಯದಲ್ಲಿ ಒಂದೊಮ್ಮೆ ನಾನು ರಾತ್ರಿ ವಿಳಂಬವಾಗಿ ಮನೆ ಪ್ರವೇಶಿಸಿದೆ, ನನ್ನ ಮಕ್ಕಳು ನನ್ನನ್ನು ನೋಡುತ್ತ, ಅಮ್ಮ ನಿಮಗೇನಾಗಿದೆ, ನೀವು ತುಂಬಾ ಆಯಾಸಗೊಂಡಂತೆ ಕಾಣುತ್ತಿರುವಿರಿ, ನಿಮ್ಮ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಸಹ ಕಾಣುತ್ತಿದೆ ಎಂದು ಹೇಳಿದಾಗ ನನಗೆ ನಿಜವಾಗಿಯೂ ಅಚ್ಚರಿ ಹಾಗೂ ಹತಾಶೆ ಎರಡೂ ಆಗಿತ್ತು.


  ಪ್ರತಿನಿತ್ಯ ನಾನು ತುಂಬಾನೇ ಕಷ್ಟಪಡಬೇಕಾಗಿತ್ತು, ಇದರಿಂದ ನನ್ನ ಆರೋಗ್ಯ ಹದಗೆಡಲು ಪ್ರಾರಂಭಿಸಿತು, ನಾನು ಸರಿಯಾಗಿ ನಿದ್ರೆ ಮಾಡಲು ಆಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ನನ್ನ ಸಹುದ್ಯೋಗಿಗಳು ನನ್ನನ್ನು ಕುರಿತು "ಶಿಪ್ ನೀವು ನಿಮ್ಮನ್ನೆ ಸರಿಯಾದ ರೀತಿಯಲ್ಲಿ ನಿರ್ವಹಿಸಲು ಕಷ್ಟಪಡುತ್ತಿದ್ದರೆ ನಮ್ಮ ಜೊತೆ ಹೇಗೆ ಸರಿಯಾಗಿರುವಿರಿ" ಎಂದು ಪ್ರಶ್ನಿಸಿದ್ದರಂತೆ. ಆಗ ಇದೇ ಸರಿಯಾದ ಸಮಯ ಎಂದು ನನಗನಿಸಿತು ಹಾಗೂ ಅಲ್ಲಿಂದ ನಾನು ಹೊರನಡೆದೆ. ಆಗಲೇ ನನಗೆ ಗೊತ್ತಾಗಿದ್ದು ನಾನು ಏನೆಲ್ಲ ಕಳೆದುಕೊಂಡಿದ್ದೆ ಎಂಬುದರ ಬಗ್ಗೆ ಶಿಪ್ ನುಡಿಯುತ್ತಾರೆ.


  ವೃತ್ತಿಯಲ್ಲಿ ಮುಂದುವರೆಯುವ ಕುರಿತು ಶಿಪ್ ಅನಿಸಿಕೆಗಳು


  ಶಿಪ್ ಹೇಳುವಂತೆ ಅವರ ಕುಟುಂಬದಲ್ಲಿ ಅವರೇ ಕಾನೂನು ಪದವಿ ಪಡೆದವರು. ಹಾಗಾಗಿ ಅವರ ಪೋಷಕರಿಗೆ ಶಿಪ್ ಬಗ್ಗೆ ಅಪಾರ ಹೆಮ್ಮೆಯಿತ್ತು. ಅವರ ಪೋಷಕರು ಶಿಪ್ ಮುಂದೆ ಯಾವುದಾದರೂ ಕಾನೂನು ಸಂಸ್ಥೆಯನ್ನು ಪ್ರಾರಂಭಿಸಬಹುದು ಅಥವಾ ದೊಡ್ಡ ಸಂಸ್ಥೆಯಲ್ಲಿ ಪಾಲುದಾರರಾಗಬಹುದು ಎಂದು ಅಂದುಕೊಂಡಿದ್ದರಂತೆ. ಈ ಬಗ್ಗೆ ಹೇಳಿದ ಶಿಪ್ ಅವರು ತಮ್ಮ ಜೀವನದಲ್ಲಿ ತೆಗೆದುಕೊಂಡ ದೊಡ್ಡ ರಿಸ್ಕ್ ಎಂದರೆ ಕಾನೂನು ಉದ್ಯೊಗವನ್ನು ತೊರೆದಿದ್ದು. ಅವರು ಈ ವೃತ್ತಿಯಲ್ಲಿ ಹತ್ತು ವರ್ಷಗಳ ಅನುಭವ ಹೊಂದಿದ್ದರು.


  ಇದನ್ನೂ ಓದಿ: Success Story: ಡಿಗ್ರಿಯಲ್ಲಿ ಅನೇಕ ಸಬ್ಜೆಕ್ಟ್ ಫೇಲ್ ಆಗಿದ್ದ ಹುಡ್ಗ IAS ಆದ ಸ್ಟೋರಿ ಇಲ್ಲಿದೆ


  ಅವರು ಸ್ವತಃ ಹೇಳುವಂತೆ, ಶಿಪ್ ಅವರಿಗೆ ಕಾನೂನಿನ ಲಿಟಿಗೇಶನ್ ಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ನೈಜವಾಗಿಯೂ ಆಸಕ್ತಿ ಇಲ್ಲ ಎಂಬುದನ್ನು ಗುರುತಿಸಿಕೊಂಡರಂತೆ. ಆದಾಗ್ಯೂ ಅವರು ಸಲಹೆ ನೀಡುವ, ಕೌನ್ಸೆಲ್ ಮಾಡುವ ಪ್ರಕ್ರಿಯೆಗಳನ್ನು ನಿಭಾಯಿಸಲು ಉತ್ಸುಕತೆ ಹೊಂದಿದ್ದರಂತೆ.


  ಹಾಗಾಗಿ ಅವರು ತಮ್ಮ ಕಾನೂನು ಉದ್ಯೋಗ ತೊರೆದು ಹೊಸ ಕ್ಷೇತ್ರಕ್ಕೆ ಕಾಲಿಟ್ಟಾಗ ಅವರಲ್ಲಿ ತಾನು ಏನಾದರೂ ತಪ್ಪು ಮಾಡುತ್ತಿದ್ದೇನೆಯೇ ಇದರಿಂದ ನನ್ನ ಕುಟುಂಬಕ್ಕೆ ಅವಮಾನವಾಗಬಹುದೆ ಎಂಬೆಲ್ಲ ವಿಚಾರಧಾರೆಗಳು ಬಂದರೂ ಅವರು ಅವನ್ನೆಲ್ಲ ಲೆಕ್ಕಿಸದೆ ತಮ್ಮ ಕೌಶಲ್ಯಗಳ ಮೇಲೆ ಗಮನ ನೀಡುತ್ತ ಮುಂದುವರೆದಿದ್ದಾಗಿ ಹೇಳುತ್ತಾರೆ.


  ಮಹಿಳೆಯರ ವೇತನ ಅಸಮಾನತೆಯ ಬಗ್ಗೆ


  ಇಂದಿಗೂ ನಾವು ನೋಡಿದರೆ ಪುರುಷರಿಗಿಂತ ಮಹಿಳೆಯರಿಗೆ ವೇತನದಲ್ಲಿ ತಾರತಮ್ಯತೆ ಮಾಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ಶಿಪ್ ಅವರನ್ನು ಸಂದರ್ಶನದಲ್ಲಿ ಕೇಳಿದಾಗ, ಅದಕ್ಕವರು, "ನನಗೆ ಗೊತ್ತಿದೆ ಈ ಒಂದು ವೇತನ ಅಸಮಾನತೆಯ ಸಮಸ್ಯೆ ನಿಜಕ್ಕೂ ಇದೆ. ನಾನು ನಿಮಗೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಸಮಸ್ಯೆ ನನ್ನ ಜೀವಮಾನದಲ್ಲೇ ಇತ್ಯರ್ಥವಾಗುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ಈ ಬಗ್ಗೆಯೇ ನಾನು ಯೋಚಿಸಲು ಪ್ರಾರಂಭಿಸಿದರೆ ನಾನು ಪ್ರತಿನಿತ್ಯ ಖಿನ್ನತೆಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ನಾನು ಮಹಿಳೆಯರಿಗೆ ಹೇಳುವುದಿಷ್ಟೇ..ನಿಮ್ಮ ಅತ್ಯುತ್ತಮ ಪ್ರದರ್ಶನವನ್ನು ಸಂದರ್ಶನದಲ್ಲಿ ನೀಡಿ, ಉತ್ತಮ ವೇತನಕ್ಕಾಗಿ ಸರಿಯಾದ ರೀತಿಯಲ್ಲಿ ಮಾತನಾಡಿ" ಎಂದು ವಿವರಿಸುತ್ತಾರೆ.

  Published by:Kavya V
  First published: