• ಹೋಂ
 • »
 • ನ್ಯೂಸ್
 • »
 • ವೃತ್ತಿ
 • »
 • Tech Jobs: ಟೆಕ್ ಕಂಪನಿಗಳಲ್ಲಿ ಕೆಲಸ ಇಲ್ಲ: ಮಂಕಾದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳ ವೃತ್ತಿ ಭವಿಷ್ಯ

Tech Jobs: ಟೆಕ್ ಕಂಪನಿಗಳಲ್ಲಿ ಕೆಲಸ ಇಲ್ಲ: ಮಂಕಾದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳ ವೃತ್ತಿ ಭವಿಷ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡೇಟಾ ಸೈನ್ಸ್ ವಿಭಾಗದಲ್ಲಿ ತಮ್ಮ ಭವಿಷ್ಯ ಅಡಗಿದೆ ಎಂದೇ ನಂಬಿಕೊಂಡಿದ್ದ  ವಿದ್ಯಾರ್ಥಿಗಳಲ್ಲಿ ತಲ್ಲಣ ಶುರುವಾಗಿದೆ. ಟೆಕ್ ಕ್ಷೇತ್ರದಲ್ಲಿ ನಡೆಯುತ್ತಿರುವ ಉದ್ಯೋಗಿಗಳ ವಜಾಗೊಳಿಸುವಿಕೆ ಪ್ರಕ್ರಿಯೆಗಳಿಂದ ಕಂಪ್ಯೂಟರ್ ಹಾಗೂ ಡೇಟಾ ಸೈನ್ಸ್ ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ.

 • Trending Desk
 • 2-MIN READ
 • Last Updated :
 • Share this:

  ಫೇಸ್‌ಬುಕ್ (Facebook), ಗೂಗಲ್ (Google) ಹಾಗೂ ಮೈಕ್ರೋಸಾಫ್ಟ್‌ನಂತಹ (Microsoft) ಟೆಕ್ ಕಂಪನಿಗಳು (Tech Companies) ಕಂಪ್ಯೂಟಿಂಗ್ ಶಿಕ್ಷಣದ ಮಹತ್ವವನ್ನು ಶೈಕ್ಷಣಿಕ ನೆಲೆಯಲ್ಲಿ ಉತ್ತೇಜಿಸಿದ್ದು ಮಾತ್ರವಲ್ಲದೆ ಸಾಫ್ಟ್‌ವೇರ್ ಉದ್ಯೋಗವೆಂಬುದು ಲಾಭದಾಯಕ ವೃತ್ತಿಜೀವನದ ಮಾರ್ಗ ಎಂಬುದಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದವು ಹಾಗೂ ವಿಶ್ವವನ್ನೇ ಬದಲಾಯಿಸುವ ಶಕ್ತಿಯಾಗಿ ಮಾರ್ಪಡಿಸಿದವು. ಪ್ರಮುಖ ಟೆಕ್ ಕಂಪನಿಗಳಿಗೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವ ಗುರಿಯನ್ನಿಟ್ಟುಕೊಂಡು ವಿಶ್ವದಾದ್ಯಂತ ಹಲವಾರು ವಿದ್ಯಾರ್ಥಿಗಳು ಇದಕ್ಕೆ ತಕ್ಕುದಾದ ಪದವಿ ಹಾಗೂ ಕೋರ್ಸ್‌ಗಳನ್ನು ಮಾಡಿದರು.  ಅಂತೆಯೇ ಖ್ಯಾತ ಕಂಪನಿಗಳು ತಮ್ಮನ್ನು ನೇಮಿಸಿಕೊಳ್ಳಬೇಕು ಎಂದಾದಲ್ಲಿ ತಾವು ಶೈಕ್ಷಣಿಕ ನೆಲೆಯಲ್ಲಿ ಸಾಮರ್ಥ್ಯವುಳ್ಳವರಾಗಿರಬೇಕು ಎಂಬ ದಿಸೆಯಲ್ಲಿ ತಮ್ಮ ರೆಸ್ಯೂಮೆಗಳನ್ನು ಅದಕ್ಕೆ ತಕ್ಕುದಾದಂತೆ ಮಾರ್ಪಡಿಸಿಕೊಂಡರು. ಈಗ ಇಂತಹ ಟೆಕ್ ಕಂಪನಿಗಳೇ ನಿರ್ದಾಕ್ಷಿಣ್ಯವಾಗಿ ಉದ್ಯೋಗಿ ವಜಾದಂತಹ ಕಠಿಣ ಪ್ರಕ್ರಿಯೆಯತ್ತ ಮುಖ ಮಾಡಿವೆ. 


  ದಿಕ್ಕು ತೋಚದಂತಿರುವ ವಿದ್ಯಾರ್ಥಿಗಳು


  ಇದೀಗ ಬೆನ್ನು ಬೆನ್ನಿಗೆ ಮಾಡುತ್ತಿರುವ ಲೇ ಆಫ್‌ಗಳು ಅನೇಕ ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಣ್ಣೀರು ಸುರಿದಿದೆ. ಅದೆಷ್ಟೋ ವೃತ್ತಿನಿರತ ಕೋರ್ಸ್‌ಗಳನ್ನು ಮಾಡಿ ಪರಿಶ್ರಮಪಟ್ಟು ದೊಡ್ಡ ಸಾಫ್ಟ್‌ವೇರ್ ಕಂಪನಿಯಲ್ಲಿ ಉತ್ತಮ ಸಂಪಾದನೆಯ ಕನಸು ಕಂಡವರು ಇಂದು ದಿಕ್ಕುತೋಚದಂತಹ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.


  ಆರು ಅಂಕಿಯ ಆರಂಭಿಕ ಸಂಬಳ, ಉಚಿತ ಆಹಾರದಂತಹ ಪ್ರಯೋಜನಗಳು ಹಾಗೂ ಶತಕೋಟಿ ಜನರು ಬಳಸುವ ಆ್ಯಪ್‌ಗಳಲ್ಲಿ ಕೆಲಸ ಮಾಡುವ ಅವಕಾಶಗಳು ಹೆಚ್ಚಿನ ಯುವಜನರನ್ನು ಕಂಪ್ಯೂಟರ್‌ ಕ್ಷೇತ್ರದತ್ತ ಮುನ್ನುಗ್ಗುವಂತೆ ಮಾಡಿತು. ಸುಮಾರು 200 ವಿಶ್ವವಿದ್ಯಾನಿಲಯಗಳಲ್ಲಿ ಕಂಪ್ಯೂಟಿಂಗ್ ಪದವಿಗಳನ್ನು ಟ್ರ್ಯಾಕ್ ಮಾಡುವ ಕಂಪ್ಯೂಟಿಂಗ್ ರಿಸರ್ಚ್ ಅಸೋಸಿಯೇಷನ್‌ನ ಪ್ರಕಾರ ಕಂಪ್ಯೂಟರ್ ಕ್ಷೇತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈ ವಿಷಯವನ್ನೇ ಪ್ರಮುಖವಾಗಿ ಅಧ್ಯಯನ ನಡೆಸುತ್ತಿರುವ ಪದವಿಪೂರ್ವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 136,000 ವಿದ್ಯಾರ್ಥಿಗಳಿಗೆ ತಲುಪಿದ್ದು ಮೂರು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.


  here is the tips for mba students
  ಸಾಂದರ್ಭಿಕ ಚಿತ್ರ


  ಡೇಟಾ ಸೈನ್ಸ್ ಹಾಗೂ ಕಂಪ್ಯೂಟಿಂಗ್ ವಿಭಾಗದಲ್ಲಿ ಭವಿಷ್ಯವಿಲ್ಲ


  ಆದರೆ ಡೇಟಾ ಸೈನ್ಸ್ ವಿಭಾಗದಲ್ಲಿ ತಮ್ಮ ಭವಿಷ್ಯ ಅಡಗಿದೆ ಎಂದೇ ನಂಬಿಕೊಂಡಿದ್ದ  ವಿದ್ಯಾರ್ಥಿಗಳಲ್ಲಿ ತಲ್ಲಣ ಶುರುವಾಗಿದೆ. ಟೆಕ್ ಕ್ಷೇತ್ರದಲ್ಲಿ ನಡೆಯುತ್ತಿರುವ ಉದ್ಯೋಗಿಗಳ ವಜಾಗೊಳಿಸುವಿಕೆ ಪ್ರಕ್ರಿಯೆಗಳಿಂದ ಕಂಪ್ಯೂಟರ್ ಹಾಗೂ ಡೇಟಾ ಸೈನ್ಸ್ ವಿದ್ಯಾರ್ಥಿಗಳು ಭಾರೀ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಕೋರ್ಸ್‌ಗಳನ್ನು ಮುಂದುವರಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿ ದಿನದೂಡುತ್ತಿದ್ದಾರೆ. ತಾಂತ್ರಿಕ ನಿರ್ವಾಹಕರು ತಾವು ತೆಗೆದುಕೊಂಡಿರುವ ನಿರ್ಧಾರಗಳಿಗೆ ಆರ್ಥಿಕ ಹಿಂಜರಿತವೇ ಹೊಣೆ ಎಂದು ದೂರುತ್ತಿದ್ದಾರೆ. ಉದ್ಯೋಗಿ ವಜಾಗೊಳಿಸುವಿಕೆಯಿಂದ ಪದವೀಧರರು ಹೊಸ ಉದ್ಯೋಗಗಳನ್ನು ಹುಡುಕಲು ಪರದಾಡುವಂತೆ ಮಾಡಿದೆ ಜೊತೆಗೆ ದೊಡ್ಡ ಟೆಕ್ ಕಂಪನಿಗಳಲ್ಲಿ ಹೆಚ್ಚಿನ ಸಂಬಳದ ಬೇಸಿಗೆ ಇಂಟರ್ನ್‌ಶಿಪ್‌ಗಳನ್ನು ಬಯಸುವ ಕಾಲೇಜು ವಿದ್ಯಾರ್ಥಿಗಳಿಗೆ ಅನಿಶ್ಚಿತತೆಯನ್ನು ಸೃಷ್ಟಿಸಿದೆ.


  ಇದನ್ನೂ ಓದಿ: Lecturer vs Professor: ಲೆಕ್ಚರರ್ ಹಾಗೂ ಪ್ರೊಫೆಸರ್ ವೃತ್ತಿ ಒಂದೇ ಅಲ್ಲ, ಇದರಲ್ಲಿ ಯಾವುದು ಬೆಸ್ಟ್?


  ಇಂಟರ್ನ್‌ಶಿಪ್ ಪ್ರೊಗ್ರಾಮ್‌ಗಳನ್ನು ರದ್ದುಗೊಳಿಸುತ್ತಿರುವ ಉನ್ನತ ಕಂಪನಿಗಳು


  ಟೆಕ್ ಕಂಪನಿಗಳು ಈ ಹಿಂದೆ ಇಂಟರ್ನ್‌ಶಿಪ್‌ಗಳ ಮೂಲಕ ಭರವಸೆಯ ಉದ್ಯೋಗ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದವು. ಈ ಕೊಡುಗೆಯ ಪ್ರಯೋಜನ ಪಡೆದುಕೊಳ್ಳುವ ಹೆಚ್ಚಿನ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಿರುವ ಸಂಸ್ಥೆಗಳಲ್ಲಿಯೇ ಪೂರ್ಣ ಪಾವತಿಯ ಉದ್ಯೋಗಿಗಳಾಗಿ ತಮ್ಮ ವೃತ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ ಆದರೆ ಈ ವರ್ಷದಲ್ಲಿ ಇಂತಹ ಅವಕಾಶಗಳು ಕುಗ್ಗುತ್ತಿವೆ ಎಂದೇ ಹೇಳಬಹುದು.


  ಅಮೆಜಾನ್‌ನಂತಹ ದೈತ್ಯ ಟೆಕ್ ಕಂಪನಿ ಸುಮಾರು 18,000 ಇಂಟರ್ನ್‌ಗಳನ್ನು ನೇಮಿಸಿಕೊಂಡಿದೆ ಎಂದು ವರದಿಯಾಗಿದ್ದು ಕೆಲವು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಬೇಸಿಗೆಯಲ್ಲಿ ಸುಮಾರು $30,000 ಪಾವತಿಸುತ್ತದೆ ಆದರೆ ಇದು ವಸತಿ ಸ್ಟ್ರೈಫಂಡ್‌ಗಳನ್ನು ಒಳಗೊಂಡಿಲ್ಲ ಇನ್ನು ಕಂಪನಿಯು 2023 ರಲ್ಲಿ ಇಂಟರ್ನ್‌ಗಳ ಸಂಖ್ಯೆಯನ್ನು ಅರ್ಧಕ್ಕಿಂತ ಕಡಿಮೆ ಮಾಡುವ ಇರಾದೆ ಹೊಂದಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  ಸಣ್ಣ ಟೆಕ್ ಕಂಪನಿಗಳಲ್ಲಿ ಉದ್ಯೋಗಿಗಳಿಗಿದೆ ವಿಫುಲ ಉದ್ಯೋಗವಕಾಶ


  ಅಮೆಜಾನ್ ವಕ್ತಾರರಾದ ಬ್ರಾಡ್ ಗ್ಲಾಸರ್, ಕಂಪನಿಯು ತನ್ನ ಇಂಟರ್ನ್‌ಶಿಪ್ ಪ್ರೋಗ್ರಾಂ ಮತ್ತು ಅದು ಒದಗಿಸಿದ ನೈಜ-ಪ್ರಪಂಚದ ಅನುಭವಕ್ಕೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಇನ್ನ ಸಣ್ಣ ಟೆಕ್ ಕಂಪನಿಗಳಲ್ಲಿ ನೇಮಕಾತಿ ಯೋಜನೆಗಳು ಬದಲಾಗುತ್ತಿವೆ. ಜನಪ್ರಿಯ ಗೇಮಿಂಗ್ ಪ್ಲ್ಯಾಟ್‌ಫಾರ್ಮ್ ರೋಬ್ಲಾಕ್ಸ್, ಮುಂದಿನ ಬೇಸಿಗೆಯಲ್ಲಿ 300 ಇಂಟರ್ನ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ ಇದು ಈ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಎಂಬುದಾಗಿ ತಿಳಿದುಬಂದಿದ್ದು ಮತ್ತು ಗೇಮಿಂಗ್ ಕ್ಷೇತ್ರಗಳಿಗೆ 50,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ನಿರೀಕ್ಷಿಸುತ್ತಿದೆ. ಈ ಬೇಸಿಗೆಯಲ್ಲಿ 38 ಇಂಟರ್ನ್‌ಗಳನ್ನು ನೇಮಿಸಿಕೊಂಡಿರುವ ರೆಡ್‌ಫಿನ್, ಮುಂದಿನ ವರ್ಷಕ್ಕೆ ಇಂಟರ್ನ್‌ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಹೇಳಿದೆ. ಅದಾಗ್ಯೂ ಕಂಪ್ಯೂಟಿಂಗ್ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅವಕಾಶಗಳು ಬೆಳೆಯುತ್ತಿವೆ. ಅತ್ಯುತ್ತಮ ವೃತ್ತಿ ರಂಗಗಳು ವಿದ್ಯಾರ್ಥಿಗಳಿಗೆ ತೆರೆದುಕೊಳ್ಳುತ್ತಿವೆ. 2021 ಮತ್ತು 2031 ರ ನಡುವೆ, ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್‌ನ ಪ್ರಕ್ಷೇಪಗಳ ಪ್ರಕಾರ, ಸಾಫ್ಟ್‌ವೇರ್ ಡೆವಲಪರ್‌ಗಳು ಮತ್ತು ಪರೀಕ್ಷಕರ ಉದ್ಯೋಗವು 25% ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದ್ದು ಇದು 411,000 ಕ್ಕಿಂತ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಊಹಿಸಲಾಗಿದೆ. ಆದರೆ ಈ ಉದ್ಯೋಗಗಳು ಹಣಕಾಸು ಮತ್ತು ವಾಹನ ಉದ್ಯಮದಂತಹ ಕ್ಷೇತ್ರಕ್ಕೆ ಸಂಬಂಧಿಸಿದೆ.


  ಸಣ್ಣ ಟೆಕ್ ಕಂಪನಿಗಳಿಂದ ಉದ್ಯೋಗದ ಆಫರ್‌ಗಳು


  ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಬ್ರೆಂಟ್ ವಿಂಕೆಲ್‌ಮನ್ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ವಿಫುಲ ಅವಕಾಶಗಳ ಬಗ್ಗೆ ತಿಳಿಸಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಕೊಡುಗೆಗಳು ಇದ್ದು ಅವರಿಗಾಗಿ ಕಾಯುತ್ತಿವೆ ಎಂದು ತಿಳಿಸಿದ್ದಾರೆ. ದೊಡ್ಡ ಟೆಕ್ ಕಂಪನಿಗಳಿಂದ ಉದ್ಯೋಗವಕಾಶಗಳು ಬಾರದೇ ಇದ್ದರೂ ಸಣ್ಣ ಟೆಕ್ ಕಂಪನಿಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಗಳು ದೊರೆಯಲಿವೆ ಎಂದು ತಿಳಿಸಿದ್ದಾರೆ.


  ಪರ್ಯಾಯ ಕ್ಷೇತ್ರಗಳಲ್ಲಿ ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳು


  ಟೆಕ್ ಕ್ಷೇತ್ರದಲ್ಲಿ ನಡೆಯುತ್ತಿರುವ ಅತಂತ್ರ ಸ್ಥಿತಿಯಿಂದಾಗಿ ಕಾಲೇಜಿನ ವೃತ್ತಿ ಕೇಂದ್ರಗಳು ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಭರವಸೆಯನ್ನು ನೀಡುತ್ತಿವೆ. ವೃತ್ತಿ ಸಲಹೆಗಾರ ಕಚೇರಿಗಳಲ್ಲಿ ಪರ್ಯಾಯ ಉದ್ಯೋಗಗಳಿಗೂ ಹುಡುಕಾಟಗಳು ನಡೆಯುತ್ತಿವೆ. ಕೆಲವು ವಿದ್ಯಾರ್ಥಿಗಳು ಕಡಿಮೆ ಪ್ರಸಿದ್ಧಿಯನ್ನು ಹೊಂದಿರುವ ಟೆಕ್ ಕಂಪನಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನು ಕೆಲವುರು ಉದ್ಯಮದ ಹೊರಗಿನ ಟೆಕ್ ವಲಯಗಳಲ್ಲಿ ಉದ್ಯೋಗಗಳನ್ನು ಅರಸುತ್ತಿದ್ದಾರೆ. ರಿಟೇಲ್ ತಾಣಗಳಾದ ವಾಲ್‌ಮಾರ್ಟ್, ಸರಕಾರಿ ಏಜೆನ್ಸಿಗಳು ಹಾಗೂ ಲಾಭರಹಿತ ಸಂಸ್ಥೆಗಳತ್ತ ವಿದ್ಯಾರ್ಥಿಗಳು ಮುಖಮಾಡುತ್ತಿದ್ದಾರೆ. ಪದವಿ ಶಾಲೆ ಕೂಡ ಉದ್ಯೋಗ ಆಯ್ಕೆಯ ಸ್ಥಳವಾಗಿ ಮಾರ್ಪಟ್ಟಿದೆ.
  ಮೆಟಾದಲ್ಲಿ ಉದ್ಯೋಗ ದೊರಕಿದ್ದರೂ ಅಡ್ಡಿಯಾಯ್ತು ಲೇ ಆಫ್


  21 ರ ಹರೆಯದ ವಿದ್ಯಾರ್ಥಿನಿ ಹೆಲೆನ್ ಡಾಂಗ್, ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಉನ್ನತ ಮೇಜರ್ ಪದವಿ ಪಡೆದುಕೊಂಡಿದ್ದು ಮೆಟಾದಲ್ಲಿ ಎರಡು ಬಾರಿ ತರಬೇತಿ ಪಡೆದುಕೊಂಡಿದ್ದಾರೆ. ಈ ಬೇಸಿಗೆಯ ಕೊನೆಯಲ್ಲಿ ಮೆಟಾದಿಂದ ಅವರಿಗೆ ಉದ್ಯೋಗ ಪ್ರಸ್ತಾಪ ಬಾರದೇ ಇದ್ದಾಗ ಹೆಲೆನ್ ಆಶ್ಚರ್ಯಚಕಿತರಾಗಿದ್ದರು. ಮೆಟಾದ ವಜಾಗೊಳಿಸುವಿಕೆಯ ಸುದ್ದಿ ತಿಳಿದು ಬಂದ ನಂತರ ಆಕೆ ಆಟೋಮೋಟಿವ್ ಮತ್ತು ಹಣಕಾಸು ಕಂಪನಿಗಳಲ್ಲಿ ಅರ್ಜಿ ಸಲ್ಲಿಸತೊಡಗಿದ್ದಾರೆ. ಇನ್ನು ತಮ್ಮಂತೆಯೇ ದೊಡ್ಟ ಕಂಪನಿಗಳಲ್ಲಿ ಉದ್ಯೋಗ ಆಕಾಂಕ್ಷೆ ಹೊಂದಿರುವ ಅನೇಕ ಅಭ್ಯರ್ಥಿಗಳನ್ನು ನಿರಾಶೆಯಿಂದ ಹೊರತರಲು ಹಾಗೂ ಅವರಿಗೆ ಸ್ಫೂರ್ತಿಯನ್ನು ನೀಡಲು ಸಲಹೆ ಒದಗಿಸುವ ವಿಡಿಯೋಗಳನ್ನು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಿರೀಕ್ಷೆಗಳನ್ನು ಆದಷ್ಟು ಕಡಿಮೆಯಾಗಿರಿಸಿಕೊಳ್ಳಿ ಎಂದು ತಿಳಿಸಿರುವ ಡಾಂಗ್ ಇರುವ ಅವಕಾಶಗಳನ್ನು ಬಳಸಿಕೊಂಡು ಮುನ್ನುಗ್ಗಿ ಎಂದು ಕಿವಿಮಾತು ಹೇಳಿದ್ದಾರೆ.


  ವಜಾಗೊಂಡ ಉದ್ಯೋಗಿಗಳ ಹೇಳತೀರದ ಬವಣೆ


  ಇತ್ತೀಚೆಗೆ ವಜಾಗೊಂಡಿರುವ ಹಲವಾರು ಟೆಕ್ ಉದ್ಯೋಗಿಗಳು ತಮ್ಮ ದುಸ್ಥಿತಿಯ ಕುರಿತು ಲಿಂಕ್ಡ್‌ಇನ್‌ಗಳಲ್ಲಿ ಬರೆದುಕೊಂಡಿದ್ದಾರೆ. ನೇಮಕಾತಿದಾರರಿಗೆ ತಾವು ಉದ್ಯೋಗ ಹುಡುಕಾಟದಲ್ಲಿರುವುದನ್ನು ಸೂಚಿಸಲು ತಾಣಗಳಲ್ಲಿ ಓಪನ್ ಟು ವರ್ಕ್ ಎಂಬ ಹ್ಯಾಶ್‌ಟ್ಯಾಗ್ ಅನ್ನು ಸೇರಿಸಿದ್ದಾರೆ. ಕೆಲವು ಇತ್ತೀಚಿನ ಪದವೀಧರರು ತಮ್ಮ ಹೊಸ ಟೆಕ್ ಉದ್ಯೋಗಗಳನ್ನು ಪ್ರಾರಂಭಿಸಲು ಅವಕಾಶವನ್ನು ಪಡೆಯಲಿಲ್ಲ. 22 ರ ಹರೆಯದ ಕ್ಯಾಸ್ಟೆಲಿನೊ ಕಂಪನಿಗಳ ತಾಂತ್ರಿಕ ಸಂದರ್ಶನಗಳಿಗೆ ತಯಾರಿ ನಡೆಸಲು ಹೆಚ್ಚಿನ ಪರಿಶ್ರಮಪಟ್ಟಿರುವುದಾಗಿ ತಿಳಿಸಿದ್ದಾರೆ. ಸಂದರ್ಶನಗಳಲ್ಲಿ ಪ್ರೊಗ್ರಾಮಿಂಗ್ ಸಮಸ್ಯೆಗಳನ್ನು ಪರಿಹರಿಸುವ ಪ್ರಕ್ರಿಯೆ ಇರುತ್ತದೆ ಇದಕ್ಕಾಗಿ ತಮ್ಮ ಉದ್ಯೋಗ ಬೇಟೆಗೆ ಅನುಗುಣವಾಗಿರುವಂತೆ ಕೋಡಿಂಗ್ ಮೌಲ್ಯಮಾಪನಗಳಿಗೆ ತಯಾರಿ ನಡೆಸಿದರು ಎಂದು ಹೇಳಿಕೊಂಡಿದ್ದಾರೆ. ಅದಾಗ್ಯೂ ಸಂದರ್ಶನ ಅತ್ಯಂತ ಕಠಿಣವಾಗಿತ್ತು ಕೊನೆಗೂ ನವೆಂಬರ್ 2021 ರಲ್ಲಿ ಮೆಟಾ ಅವರಿಗೆ ಡಿಸೆಂಬರ್ 2022 ರಿಂದ ಡೇಟಾ ವಿಜ್ಞಾನಿಯಾಗಿ ಉದ್ಯೋಗವನ್ನು ನೀಡಿತು ಆದರೆ ಕಳೆದ ತಿಂಗಳು ಮೆಟಾ ಉದ್ಯೋಗವನ್ನು ರದ್ದುಗೊಳಿಸಿತು ಎಂದು ಕ್ಯಾಸ್ಟಲಿನೊ ತಿಳಿಸಿದ್ದಾರೆ. ಮೆಟಾದ ಸಂದರ್ಶನಗಳಿಗಾಗಿ ಸಕಲ ಸಿದ್ಧತೆಗಳನ್ನು ನಡೆಸಿರುವುದಾಗಿ ತಿಳಿಸಿದ್ದ ಕ್ಯಾಸ್ಟಲಿನೊ ಈ ಉದ್ಯೋಗದ ಮೇಲೆ ತುಂಬಾ ಭರವಸೆಯನ್ನಿಟ್ಟುಕೊಂಡಿದ್ದರು ಎಂದು ತಿಳಿಸಿದ್ದಾರೆ. ನಾನು ಈ ಉದ್ಯೋಗದಿಂದ ತುಂಬಾ ಬಯಸಿದ್ದೆ ಎಂದು ಮನದ ನೋವನ್ನು ತೋಡಿಕೊಂಡಿದ್ದಾರೆ.

  Published by:Kavya V
  First published: